ಕಾರು ಟೂರುದೂರ ತೀರ ಯಾನಮ್ಯಾಜಿಕ್ ತಾಣಗಳುವಂಡರ್ ಬಾಕ್ಸ್ವಿಂಗಡಿಸದ

ಭಾರತದ ಈ ಜಾಗಗಳಿಗೆ ನೀವು ಮಳೆಗಾಲದಲ್ಲಿ ಪ್ರವಾಸ ಹೋಗದಿರುವುದು ಒಳಿತು.

ಮಳೆ ಅಂದರೆ ಪ್ರತಿಯೊಬ್ಬರಿಗೂ ಹುಮ್ಮಸ್ಸು. ಈ ಸಮಯದಲ್ಲಿ ಹೊಸ ಜಾಗಕ್ಕೆ ಪ್ರವಾಸ ಹೊರಡಲು ಕೆಲವರು ಸಿದ್ದರಾಗುತ್ತಾರೆ. ನಿಮ್ಮ ಸುರಕ್ಷತೆಯ ದೃಷ್ಟಿಯಿಂದ ಈ ಜಾಗಗಳಿಗೆ ನೀವು ಮಳೆಗಾಲದಲ್ಲಿ ಪ್ರವಾಸ ಹೋಗುವುದನ್ನು ಕೊಂಚ ಮುಂದೂಡುವುದು ಒಳಿತು.

  • ನವ್ಯಶ್ರೀ ಶೆಟ್ಟಿ

ಮಳೆಗಾಲ, ಬಹುತೇಕರ ಕಾಯುವಿಕೆಯ ಋತುಮಾನಗಳಲ್ಲಿ ಒಂದು. ಅದೆಷ್ಟೋ ಜನರು ಮಳೆಗಾಲದ ಸಮಯದಲ್ಲಿ ಪ್ರವಾಸ ಹೊರಡಲು ಸಿದ್ಧರಾಗಿದ್ದಾರೆ. ಆದರೆ ಸುರಕ್ಷಿತ ದೃಷ್ಟಿಯಿಂದ ಭಾರತದ ಈ ಕೆಲವೊಂದು ಸ್ಥಳಗಳಿಗೆ ನೀವು ಪ್ರವಾಸ ಹೊರಡದೇ ಇರುವುದು ಒಳ್ಳೆಯದು. ಕಾರಣ ಈ ಕೆಳಗಿನ ಈ ಜಾಗಗಳಲ್ಲಿ ಮಾನ್ಸೂನ್ ಸಮಯದಲ್ಲಿ ಭೂಕುಸಿತ ಜಲಾವೃತ ಸೇರಿದಂತೆ ಒಂದಷ್ಟು ತೊಂದರೆಗಳು ಸಂಭವಿಸುತ್ತದೆ ಇದರಿಂದಾಗಿ ಪ್ರವಾಸಗಳಿಗೆ ಹೋಗುವ ಯೋಚನೆ ನಿಮ್ಮಲ್ಲಿದ್ದರೆ ಮುಂದೂಡುವುದು ಒಳಿತು.

ಉತ್ತರಾಖಂಡ್

ಉತ್ತರಾಖಂಡ್ ರಾಜ್ಯ ಅದೆಷ್ಟು ಪ್ರವಾಸಿಗರನ್ನು ತನ್ನತ್ತ ಆಕರ್ಷಿಸುವ ಸುಂದರ ತಾಣಗಳಲ್ಲಿ ಒಂದು. ಆದರೆ ಉತ್ತರಾಖಂಡ್ ರಾಜ್ಯದ ಕೆಲವೊಂದು ತಾಣಗಳಿಗೆ ನೀವು ಮಳೆಗಾಲದಲ್ಲಿ ಹೋಗದಿರುವುದೇ ಒಳಿತು. ವರ್ಷವಿಡೀ ಪ್ರವಾಸಿಗರಿಂದ ಕಿಕ್ಕಿರಿದು ತುಂಬಿಕೊಳ್ಳುವ ಉತ್ತರಾಖಂಡ್ ಪ್ರವಾಸಿ ತಾಣಗಳು ಮಳೆಗಾಲದಲ್ಲಿ ಅತಿಯಾದ ಮಳೆಯಿಂದ ನೀವು ಅಲ್ಲಿಗೆ ಹೋಗದಿದ್ದರೆ ಒಳ್ಳೆಯದು. ಮಳೆಗಾಲದಲ್ಲಿ ನೀವು ಹೋಗುವುದಾದರೂ ಎಚ್ಚರವಾಗಿರಿ .

Uttarakhand Northern India Rishikesh Monsoon Travelling

ಉತ್ತರಾಖಂಡ್ ರಾಜ್ಯದಲ್ಲಿ ಹೆಚ್ಚಾಗಿ ಮಳೆ ಸುರಿಯುವುದರಿಂದ ಅಲ್ಲಿನ ಪರ್ವತಗಳಲ್ಲಿ ಭೂ ಕುಸಿತ ಪ್ರವಾಹ ,ಮೇಘ ಸ್ಪೋಟ ಉಂಟಾಗುವ ಸಾಧ್ಯತೆಗಳು ಇರುತ್ತದೆ. ಹಾಗಾಗಿ ನೀವು ಮಳೆಗಾಲದಲ್ಲಿ ಉತ್ತರಾಖಂಡ್ ಪ್ರವಾಸ ಹೋಗುವುದನ್ನು ಕೊಂಚ ತಪ್ಪಿಸುವುದು ಒಳಿತು.

ಸಿಕ್ಕಿಂ

ಸಿಕ್ಕಿಂ ಅಸಂಖ್ಯಾತ ನೈಸರ್ಗಿಕ ಸೌಂದರ್ಯ ಹೊಂದಿರುವ ಒಂದು ತಾಣ. ಏಕಾಂತ ಬಯಸುವವರಿಗೆ ಈ ಸ್ಥಳ ಉತ್ತಮ ಜಾಗ ಕೂಡ ಹೌದು. ಅದೆಷ್ಟೋ ಪ್ರವಾಸಿಗರು ರಜಾ ದಿನಗಳನ್ನು ಕಳೆಯಲು ಸಿಕ್ಕಿಂ ಪ್ರವಾಸ ಹೊರಡುತ್ತಾರೆ. ಮಳೆಗಾಲದ ಸಮಯದಲ್ಲಿ ಅಲ್ಲಿನ ಗುಡ್ಡ ಪ್ರದೇಶ ಕುಸಿಯುವ, ರಸ್ತೆಗಳು ಹಾಳಾಗುವ ಸಂಭವ ಇರುವುದರಿಂದ ಮಳೆಗಾಲದಲ್ಲಿ ಸಿಕ್ಕಿಂ ಪ್ರವಾಸ ಮುಂದೂಡುವುದೇ ಒಳಿತು.

 Sikkim Northeastern India Himalayas Monsoon Travelling

ಮುಂಬೈ

ಭಾರತದಲ್ಲಿ ಹೆಚ್ಚು ಜನರ ಓಡಾಟವಿರುವ ತಾಣಗಳಲ್ಲಿ ಮುಂಬೈ ಕೂಡ ಒಂದು. ಮಳೆ ಮುಂಬೈ ಸೌಂದರ್ಯ ಹೆಚ್ಚಿಸುತ್ತದೆ. ಆದರೆ ಆ ಮಳೆ ಅತಿಯಾದರೆ ಮುಂಬೈ ನಗರದ ಸೌಂದರ್ಯ ಕೂಡ ಹಾಳು ಮಾಡುತ್ತದೆ. ಅತಿಯಾದ ಮಳೆ ಕೆಲವೊಮ್ಮೆ ಮುಂಬೈ ನಗರದ ಜೀವ ನಾಡಿಯಂತಿರುವ ರೈಲುಗಳ ಸಂಪರ್ಕ ಕೂಡ ಕೆಲವೊಮ್ಮೆ ಸ್ಥಗಿತಗೊಳ್ಳುತ್ತದೆ. ಗಗನಚುಂಬಿ ಕಟ್ಟಡಗಳಿಂದ ತುಂಬಿರುವ ಮುಂಬೈ ನಗರದಲ್ಲಿ ಮಳೆಯಾದರೆ ಜಲಾವೃತ ಆಗುವ ಸಂಭವ ಕೂಡ ಇರುತ್ತದೆ.

ನೀವು ಇದನ್ನು ಇಷ್ಟಪಡಬಹುದು: ನಮಗ್ಯಾರಿಗೂ ಪ್ರವೇಶವಿಲ್ಲದ ಜಗತ್ತಿನ ೫ ನಿಷೇಧಿತ ತಾಣಗಳು.

Mumbai West Coast of India Bombay Monsoon Travelling

ಹಿಮಾಚಲ ಪ್ರದೇಶ

ಹಿಮಾಚಲ ಪ್ರದೇಶ ಸದಾ ಪ್ರವಾಸಿಗರನ್ನು ಬೆರಗು ಗೊಳಿಸುವ ತಾಣ. ಆದರೆ ಹಲವು ಬಾರಿ ವರುಣರಾಯನ ಮುನಿಸಿಗೂ ಕಾರಣವಾಗಿ ಬಿಡುತ್ತದೆ. ಅದಕ್ಕೆ ಸಾಕ್ಷಿ ಇತ್ತೀಚಿಗಷ್ಟೇ ಧರ್ಮಶಾಲದಲ್ಲಿ ಅತಿಯಾದ ಮಳೆಯಿಂದಾದ ತೊಂದರೆಗಳು. ಅತಿಯಾದ ನೆರೆ,ಭೂ ಕುಸಿತ , ಮಣ್ಣಿನ ಸವೆತಗಳಿಗೆ ಕೆಲವೊಮ್ಮೆ ಹಿಮಾಚಲ ಪ್ರದೇಶ ಸಾಕ್ಷಿಯಾಗುತ್ತದೆ.

Himachal Pradesh Northern India Buddhist Monasteries Monsoon Travelling

ನೀವು ವರ್ಷದ ಯಾವ ಋತುಮಾನದಲ್ಲಿಯಾದರೂ ಹಿಮಾಚಲ ಪ್ರದೇಶಕ್ಕೆ ಭೇಟಿ ನೀಡಬಹುದು. ಆದರೆ ಮಳೆಗಾಲದ ಸಮಯದಲ್ಲಿ ಸುರಕ್ಷತಾ ದೃಷ್ಟಿಯಿಂದ ಹಿಮಾಚಲ ಪ್ರದೇಶ ಪ್ರವಾಸವನ್ನು ಕೊಂಚ ಮುಂದಕ್ಕೆ ಹಾಕುವುದು ಒಳಿತು .

ನಾವೂ ಟೆಲಿಗ್ರಾಮ್ ನಲ್ಲೂ ಇದ್ದೀವಿ! ಕನ್ನಡ.ಟೆಲಿಗ್ರಾಮ್ ಗ್ರೂಪ್ ಜಾಯಿನ್ ಆಗಿ. 

ನೀವು ಪ್ರವಾಸ ಹೋಗುವ ತಾಣದ ಮಾಹಿತಿ, ಕನ್ನಡ.ಟ್ರಾವೆಲ್ (Kannada.Travel) ಜಾಲತಾಣದಲ್ಲಿ ಪ್ರಕಟವಾಗುವ ಬರಹಗಳ ವಿವರ, ಅಪರೂಪದ ಟ್ರಾವೆಲರ್ ಗಳ ಪರಿಚಯ, ಪ್ರವಾಸಿ ತಾಣಗಳ ಕುತೂಹಲಕರ ಚಿತ್ರ, ಬರಹ ಎಲ್ಲವೂ ಇಲ್ಲಿ ನಿಮಗೆ ಸಿಗುತ್ತದೆ. ಬನ್ನಿ ಜೊತೆಯಾಗಿ.

Related Articles

Leave a Reply

Your email address will not be published. Required fields are marked *

Back to top button