ಮ್ಯಾಜಿಕ್ ತಾಣಗಳುವಂಡರ್ ಬಾಕ್ಸ್ವಿಂಗಡಿಸದವಿಸ್ಮಯ ವಿಶ್ವ

ನಮಗ್ಯಾರಿಗೂ ಪ್ರವೇಶವಿಲ್ಲದ ಜಗತ್ತಿನ ೫ ನಿಷೇಧಿತ ತಾಣಗಳು.

ಜಗತ್ತಿನಲ್ಲಿ ಈ ಸ್ಥಳಗಳಿಗೆ ಎಲ್ಲರಿಗೂ ಪ್ರವೇಶ ನಿಷೇಧ. ಇದು ಅಚ್ಚರಿ ಎನಿಸಿದರೂ ನಿಜ. ಜಗತ್ತಿನ ಈ ೫ ಭಯಾನಕ ತಾಣಗಳಿಗೆ ಎಲ್ಲರೂ ಹೋಗುವಂತಿಲ್ಲ. ಹೊರಗಿನ ಜನರಿಗೆ ಸುಲಭವಾಗಿ ಪ್ರವೇಶವಿರದ ಈ ೫ ತಾಣಗಳು ರಹಸ್ಯವಾಗಿ ಮುಚ್ಚಿ ಹೋಗಿದೆ. ವಿಚಿತ್ರ ಹಾಗೂ ಅಚ್ಚರಿ ಎಂದೆನಿಸುವ ಆ ತಾಣಗಳ ಮಾಹಿತಿ ನಿಮ್ಮ ಕುತೂಹಲಕ್ಕಾಗಿ.

  • ನವ್ಯಶ್ರೀ ಶೆಟ್ಟಿ

ಪ್ರತಿ ತಾಣಗಳಲ್ಲೂ ಒಂದು ಕಥೆಯಿರುತ್ತದೆ. ಅಲ್ಲಿ ಜನಗಳ ಓಡಾಟ ಸರ್ವೇ ಸಾಮಾನ್ಯ . ಆದರೆ ಜಗತ್ತಿನ ಈ ೫ ತಾಣಗಳಿಗೆ ಅನ್ಯ ಜನರು ಸುಲಭವಾಗಿ ಪ್ರವೇಶವಿಲ್ಲ. ಅಚ್ಚರಿ ಜೊತೆಗೆ ಕುತೂಹಲ ಕೂಡ ಹೌದು. ಜಗತ್ತಿನ ಈ ೫ ತಾಣಗಳಿಗೆ ಹೊರಗಡೆಯ ಜನರ ಪ್ರವೇಶವಿರದೇ ರಹಸ್ಯವಾಗಿ ಮುಚ್ಚಿದೆ.

ಉತ್ತರ ಸೆಂಟಿನಲ್ ದ್ವೀಪ (north sentinel island), ಭಾರತ (India)

ಭಾರತದ ಅಂಡಮಾನ್ ನ ಉತ್ತರ ಸೆಂಟಿನಲ್ ದ್ವೀಪವು , ಸೆಂಟಿನೇಲಿಸ್ ಬುಡಕಟ್ಟು (sentinelse tribes) ಜನರ ವಾಸ ಸ್ಥಳ. ಇದು ಜಗತ್ತಿನ ಭಯಾನಕ ದ್ವೀಪಗಳಲ್ಲಿ ಒಂದು.
ಈ ದ್ವೀಪದಲ್ಲಿರುವ ಬುಡಕಟ್ಟು ಜನಾಂಗದ ಜನ ಇಂದಿಗೂ ಹೊರ ಜಗತ್ತಿನಿಂದ ದೂರವೇ ಉಳಿದಿದ್ದಾರೆ. ಹೊರ ಜಗತ್ತಿನ ಯಾವುದೇ ವಿದ್ಯಮಾನಗಳ ಅರಿವು ಅವರಿಗಿಲ್ಲ.

ಒಂದು ವೇಳೆ ಯಾರಾದರೂ ಹೊರಗಿನ ಜನ ಅವರ ದ್ವೀಪದ ಒಳಗೆ ಹೋಗಲು ಯತ್ನಿಸಿದರೆ, ಅಲ್ಲಿನ ಜನ ತಾಳ್ಮೆ ಕಳೆದುಕೊಂಡು ಆಕ್ರಮಣಕ್ಕೆ ಮುಂದಾಗುತ್ತಾರೆ. ಒಂದು ವರದಿಯ ಪ್ರಕಾರ ಈ ದ್ವೀಪದಲ್ಲಿ ಸೇಂಟಿನೇಲಿಸ್ ಬುಡಕಟ್ಟು ಜನರು ವಾಸಿಸಲು ಆರಂಭಿಸಿ ಸಾವಿರಾರು ವರ್ಷಗಳೇ ಕಳೆದಿದೆ. ಇಲ್ಲಿನ ಜನರಿಗೆ ಸರಕಾರದ ರಕ್ಷಣೆ ಇದೆ. ಆದರೆ ಜನರ ಪ್ರವೇಶ ನಿಷಿದ್ಧ.

North Sentinel Island India Sentinelse tribes Forbidden Island of India

ಐಸೆ ಭವ್ಯ ದೇಗುಲ (Ise grand shrine), ಜಪಾನ್ (japan )

ಜಪಾನ್ ದೇಗುಲಗಳ ಸಂಸ್ಕೃತಿಗೆ ಹೆಸರುವಾಸಿಯಾಗಿದೆ. ಜಪಾನ್ ಎನ್ನುವ ಪುಟ್ಟ ದೇಶ ೮೦೦೦ ದೇಗುಲಗಳ ನೆಲೆಯನ್ನು ಹೊಂದಿದೆ . ಇದರಲ್ಲಿ ಐಸೆಯ ಈ ಭವ್ಯ ದೇಗುಲ ಕೂಡ ಒಂದು. ಈ ದೇವಾಲಯ ಅತ್ಯಂತ ಕುತೂಹಲಕಾರಿ ಹಾಗೂ ದುಬಾರಿ ಕೂಡ ಹೌದು. ಪ್ರತಿ 20 ವರ್ಷಕೊಮ್ಮೆ ಈ ದೇವಾಲಯವನ್ನು ಶಿಂಟೋ (shinto) ಸಂಸ್ಕೃತಿಯಂತೆ ಪ್ರತಿ ಪುನರ್ ನಿರ್ಮಾಣ ಮಾಡಲಾಗುತ್ತದೆ. ಈ ದೇವಾಲಯಕ್ಕೆ ರಾಜಮನೆತನದವರಿಗೆ ಮಾತ್ರ ಪ್ರವೇಶ. ನೀವು ರಾಜಮನೆತನದವರು ಅಲ್ಲದಿದ್ದಲ್ಲಿ ನಿಮಗೆ ಈ ದೇವಾಲಯಕ್ಕೆ ಪ್ರವೇಶವಿಲ್ಲ.

ನೀವುಇದನ್ನುಇಷ್ಟಪಡಬಹುದು: ಜಗತ್ತಿನ ಅತ್ಯಂತ ವಿಲಕ್ಷಣ, ವಿಷಾದ ತುಂಬಿಕೊಂಡಿರುವ ಊರು ಚರ್ನೋಬಿಲ್ ಕಡೆ ಹೋಗಿ ಬರ್ತೀರಾ?

Ise grand shrine Japan Shinto culture Forbidden shrine of Japan

ಹಾವು ದ್ವೀಪ (snake iseland), ಬ್ರೆಜಿಲ್ (brazil)

ಹೆಸರಿಗೆ ತಕ್ಕಂತೆ ಬ್ರೆಜಿಲ್ ರಾಷ್ಟ್ರದ ಈ ದ್ವೀಪ ,ಜಗತ್ತಿನ ಭಯಾನಕ ಸ್ಥಳ. ಈ ದ್ವೀಪ, ಸಾವಿರ ಹಾವುಗಳು ಮುತ್ತಿಕೊಂಡಿರುವ ಅಪಾಯಕಾರಿ , ಭಯಾನಕ ಜಾಗ. ಬ್ರೆಜಿಲ್ ರಾಷ್ಟ್ರ ಈ ದ್ವೀಪಕ್ಕೆ ಜನರ ಭೇಟಿಯನ್ನು ಕಾನೂನು ಬಾಹಿರವೆಂದು ಘೋಷಿಸಿದೆ. ನೀವು ಈ ತಾಣದ ಅಪಾಯವನ್ನು ಊಹಿಸುವುದು ಅಸಾಧ್ಯ. ಈ ಡೆಡ್ಲಿ ಹಾವಿನ ದ್ವೀಪದಲ್ಲಿ ಸುಮಾರು ೪೦೦೦ golden lanceheads ನೆಲೆಯಾಗಿದೆ. ಇಲ್ಲಿರುವ ಹಾವುಗಳ ಜಗತ್ತಿನ ಅತ್ಯಂತ ಮಾರಕ ಎಂದೆನಿಸಿರುವ ಹಾವುಗಳು.

Snake island Brazil Golden lanceheads snakes Deadly snakes

ಕಿನ್ ಶಿ ಹುವಾಂಗ್ ಸಮಾಧಿ (thomb of qin shi huanga), ಚೀನಾ (china)

ಕಿನ್ ಶಿ ಹುವಾಂಗ್ ಚೀನಾದ ಮೊದಲ ಚಕ್ರವರ್ತಿ. ಈ ಚಕ್ರವರ್ತಿಯ ಸಮಾಧಿಯೇ ಕಿನ್ ಶಿ ಹುವಾಂಗ ಸಮಾಧಿ. ಇಲ್ಲಿ ೨೦೦೦ ವರ್ಷಗಳ ಹಿಂದೇನೆ ಪಿರಮಿಡ್ ನನ್ನು ಆಳವಾಗಿ ಹೂಳಲಾಗಿದೆ. ಇದು ಅತ್ಯಂತ ಸುಂದರ ಆವಿಷ್ಕಾರಗಳಲ್ಲಿ ಒಂದು. ಆದರೆ ಇಂದಿಗೂ ಈ ತಾಣ ಪುರಾತತ್ವ ತಜ್ಞರು, ಇತಿಹಾಸಕಾರರಿಗೆ ರಹಸ್ಯವಾಗಿ ಉಳಿದು ಹೋಗಿದೆ. ಚೀನಾ ದೇಶ ಈ ಸ್ಥಳದಲ್ಲಿ ಉತ್ಖನ್ನಗಳನ್ನು ನಿಷೇಧಿಸಿದೆ. ಈ ಜಾಗ ಇಂದಿಗೂ ಜನರ ಓಡಾಟದಿಂದ ದೂರ ಉಳಿದಿರುವ ಜಾಗ. ಒಂದು ಮೊಹರು ಆಗಿ ಉಳಿದು ಬಿಟ್ಟಿದೆ. ಜಗತ್ತಿನ ನಿಷೇಧಿತ ಪ್ರದೇಶಗಳಲ್ಲಿ ಚೀನಾದ ಈ ಸ್ಥಳ ಕೂಡ ಒಂದು.

Thomb of qin shi huanga China The Grave of king Qin Shi Huanga Forbidden place of China

ನೀಹವ್ ದ್ವೀಪ (niihaoo island), ಯು. ಎಸ್. ಎ (U.S.A)

ನೀಹವ್ ದ್ವೀಪಕ್ಕೆ ಸಾರ್ವಜನಿಕರಿಗೆ ಪ್ರವೇಶವಿಲ್ಲ. ಇದು ೧೬೦ ನಿವಾಸಿಗಳು ವಾಸಿಸುವ ಸುಂದರ ತಾಣ. ಇಲ್ಲಿಗೆ ಈ ದ್ವೀಪದಲ್ಲಿ ವಾಸಿಸುವ ಜನರ ಸಂಬಂಧಿಕರು, ಅಮೇರಿಕಾ ನೌಕಾ ಪಡೆ ಮಾತ್ರ ದ್ವೀಪಕ್ಕೆ ಭೇಟಿ ನೀಡಬಹುದು. ಈ ಸುಂದರ ಸ್ಥಳದ ವಾತಾವರಣ ಹಾಗೂ ಕಾಡಿನ ಸಂರಕ್ಷಣೆಯ ಉದ್ದೇಶಕ್ಕಾಗಿ ಅಮೇರಿಕಾ ಸರಕಾರ ಕೂಡ ಇಲ್ಲಿನ ಜನರಿಗೆ ಪ್ರವೇಶವನ್ನು ನಿರ್ಬಂಧಿಸಿದೆ. ನೀಹವ್ ದ್ವೀಪ ರಮಣೀಯ ತಾಣ. ಆದರೂ ಇಲ್ಲಿ ಹೊರಗಿನ ಜನರಿಗೆ ಪ್ರವೇಶ ನಿಷಿದ್ಧ.

Niihaoo Island USA United States Navy Forbidden Island of USA

ಇವು ಜಗತ್ತಿನಲ್ಲಿ ನಾವು ಹೋಗಲು ಅಸಾಧ್ಯವಾದ ತಾಣಗಳು. ಈ ಜಾಗಗಳು ಸುಂದರವಾಗಿದ್ದರೂ ಹೊರಗಿನ ಜನರಿಗೆ ಸುಲಭವಾಗಿ ಪ್ರವೇಶವಿಲ್ಲ.

ನಾವೂ ಟೆಲಿಗ್ರಾಮ್ ನಲ್ಲೂ ಇದ್ದೀವಿ! ಕನ್ನಡ.ಟೆಲಿಗ್ರಾಮ್ ಗ್ರೂಪ್ ಜಾಯಿನ್ ಆಗಿ. 

ನೀವು ಪ್ರವಾಸ ಹೋಗುವ ತಾಣದ ಮಾಹಿತಿ, ಕನ್ನಡ.ಟ್ರಾವೆಲ್ (Kannada.Travel) ಜಾಲತಾಣದಲ್ಲಿ ಪ್ರಕಟವಾಗುವ ಬರಹಗಳ ವಿವರ, ಅಪರೂಪದ ಟ್ರಾವೆಲರ್ ಗಳ ಪರಿಚಯ, ಪ್ರವಾಸಿ ತಾಣಗಳ ಕುತೂಹಲಕರ ಚಿತ್ರ, ಬರಹ ಎಲ್ಲವೂ ಇಲ್ಲಿ ನಿಮಗೆ ಸಿಗುತ್ತದೆ. ಬನ್ನಿ ಜೊತೆಯಾಗಿ

Related Articles

Leave a Reply

Your email address will not be published. Required fields are marked *

Back to top button