ಮ್ಯಾಜಿಕ್ ತಾಣಗಳುವಿಂಗಡಿಸದವಿಸ್ಮಯ ವಿಶ್ವ

ಜಗತ್ತಿನ ಅತ್ಯಂತ ವಿಲಕ್ಷಣ, ವಿಷಾದ ತುಂಬಿಕೊಂಡಿರುವ ಊರು ಚರ್ನೋಬಿಲ್ ಕಡೆ ಹೋಗಿ ಬರ್ತೀರಾ?

ಯಾರಿಗಾದರೂ ಈ ಸ್ಥಳದ ಬಗ್ಗೆ ಮತ್ತು ಇಲ್ಲಿ ನಡೆದ ದುರಂತದ ಬಗ್ಗೆ ತುಸು ಮಾಹಿತಿ ಇದ್ದರೆ, ಈ ಸ್ಥಳಕ್ಕೆ ಪ್ರವಾಸ ಹೋಗುವುದು ಎಂಬ ವಿಷಯವೇ ವಿಲಕ್ಷಣವಾಗಿ ಕಾಣಬಹುದು. ಕೆಲವೇ ದಿನಗಳಲ್ಲಿ ಶಾಶ್ವತವಾಗಿ ಮುಚ್ಚಲ್ಪಡುವ ಆ ಊರಿನ ಕುರಿತ ವಿಶೇಷ ಬರಹ.

  • ಆದಿತ್ಯ ಯಲಿಗಾರ 

ಚರ್ನೋಬಿಲ್(Chernobyl), ಉಕ್ರೇನ್(Ukraine) ದೇಶದ ಪ್ರಿಪ್ಯಾತ್ ಶಹರದ ಒಂದು ಪ್ರದೇಶ. ಇದು ಪರಮಾಣು ವಿದ್ಯುತ್ ಸ್ಥಾವರದ ದುರಂತ ಅನುಭವಿಸಿ ನೊಂದ ಊರು. ಹಿರೋಷಿಮಾಕ್ಕಿಂತ 400 ಪಟ್ಟು ಹೆಚ್ಚು ವಿಕಿರಣಶೀಲ ಅಂಶಗಳನ್ನು ಗಾಳಿಯಲ್ಲಿ ಹೊರಸೂಸಿದ ದುರಂತಕ್ಕೆ ಸಾಕ್ಷಿಯಾದ ನಗರ. 

ಅನಧಿಕೃತವಾಗಿ ನಡೆದ ರಿಯಾಕ್ಟರ್ ಪರೀಕ್ಷೆಯಿಂದ ಮತ್ತು ಅಲ್ಲಿಯ ಒಂದು ಬಹುದೊಡ್ಡ ರಿಯಾಕ್ಟರ್ ಒತ್ತಡವನ್ನು ತಾಳಲಾರದೆ ಈ ದುರ್ಘಟನೆ ಸಂಭವಿಸಿತ್ತು. ಬೆಳಗಾಗುವುದರೊಳಗೆ ಸಮಸ್ತ ಶಹರವೆ ರಾಕ್ಷಸಿ ಹೊಗೆಯೊಳಗೆ ಕರಗಿ ಹೋಗಿತ್ತು. ಅಂದಿನಿಂದ ಈಗಿನವರೆಗೂ ಸುತ್ತಮುತ್ತಲಿನ ಪ್ರದೇಶಗಳಲ್ಲಿ ವಿಕಾರಗೊಂಡ ಎಳೆ ಕಂದಮ್ಮಗಳು ಮತ್ತು ಪಾರ್ಶ್ವವಾಯು ತಗುಲಿದ ಫ್ರೌಢರು ಈ ದುರಂತದ ದುಷ್ಪರಿಣಾಮಗಳನ್ನು ಅನುಭವಿಸುತ್ತಿದ್ದಾರೆ. 

ಆ ಕಾಲದಿಂದ ಹಿಡಿದು ಪ್ರಸ್ತುತ ಸಮಯದವರೆಗೂ ಈ ಸ್ಥಳವನ್ನು ಬಹಿಷ್ಕರಣ ವಲಯ ಎಂದು ಬಿಂಬಿಸಲಾಗಿದೆ ಮತ್ತು ಇಲ್ಲಿಗೆ ತೆರಳಲು ವಿಶೇಷ ಅನುಮತಿ ಹಾಗೂ ವಿಶೇಷ ಸೂಟ್ ಗಳ ಅವಶ್ಯಕತೆ ಇದೆ. ದಟ್ಟವಾದ ಹೊಗೆ ಸೋವಿಯತ್ ಒಕ್ಕೂಟ, ಯುರೋಪ್ ಅಷ್ಟೇ ಅಲ್ಲದೆ ಅಮೆರಿಕಾದ ಸಂಯುಕ್ತ ಸಂಸ್ಥಾನ ಮತ್ತು ಕೆನಡಾವನ್ನೂ ತಬ್ಬಿ ನಿಂತಿತ್ತು. ಚರ್ನೋಬಿಲ್ ಜಾಗದ ಪ್ರತಿ ಮೂಲೆ ಮೂಲೆಗಳಲ್ಲೂ ವಿಚಿತ್ರ ನಿಶ್ಯಬ್ಧತೆ ಮತ್ತು ದುರಂತ ಘಟನೆಯ ಕಥನಗಳು ಮಾರ್ದನಿಸುತ್ತವೆ. ಮಾನವಿತೆಯ ಎಲ್ಲ ಎಲ್ಲೆಗಳನ್ನು ಮೀರಿ ಪ್ರಕೃತಿ ಹೇಗೆ ಈ ಸ್ಥಳವನ್ನು ಕಸಿದುಕೊಂಡಿದೆ ಎಂಬುದನ್ನು ನಾವು ಗಮನಿಸಬೇಕಾದ ಸಂಗತಿ.

chernobyl

ಇಂತಹ ಸ್ಥಳವನ್ನು ಅನ್ವೇಷಿಸುವ ಧೈರ್ಯ ಮತ್ತು ಸಾಹಸಿ ಮನೋವೃತ್ತಿ ನಿಮ್ಮಲ್ಲಿದ್ದರೆ ಈ ಬರಹ ನಿಮಗಾಗಿ.

ಹೋಗುವುದು ಹೇಗೆ?

ಕೈವ್ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ

ರಾಜಧಾನಿ ದೆಹಲಿಯಿಂದ ಕೈವಾ ವಿಮಾಣ(Kiev Airport) ನಿಲ್ದಾಣಕ್ಕೆ ತೆರಳಲು ವಿಮಾನಗಳ ವ್ಯವಸ್ಥೆಯಿದೆ. ಸುಮಾರು 8 ಗಂಟೆಗಳ ಪ್ರಯಾಣ.

ಮೂವತ್ತರಿಂದ ನಲವತ್ತು ಸಾವಿರದ ತನಕ ಖರ್ಚು ವೆಚ್ಚ ಬರಬಹುದು. ಇನ್ನೊಂದು ಖುಷಿಯ ಸಂಗತಿಯೆಂದರೆ ಭಾರತೀಯರಿಗೆ ವೀಸಾ ಒನ್ ಅರೈವಲ್ ಸೌಲಭ್ಯವಿದೆ.

ಇದಕ್ಕಾಗಿ ಪ್ರಯಾಣಿಕರು ಉಕ್ರೇನ್ ವೆಬ್‌ಸೈಟ್‌ನಲ್ಲಿ ಆನ್‌ಲೈನ್ ಫಾರ್ಮ್ ಅನ್ನು ಭರ್ತಿ ಮಾಡಿ ವಿಒಎ ಕೌಂಟರ್‌ಗೆ ಸಲ್ಲಿಸಬೇಕು ಆದರೆ ಈ ಸರ್ಕಾರಿ ವೆಬ್‌ಸೈಟ್ ಯಾವಾಗಲೂ ಏನಾದರೂ ಒಂದು ಸಮಸ್ಯೆ ಬರಬಹುದು. ಆದ್ದರಿಂದ, ವಿಮಾನ ನಿಲ್ದಾಣದಲ್ಲಿ ಫಾರ್ಮ್ (4-5 ಪುಟಗಳು) ಭರ್ತಿ ಮಾಡಲು ಸಿದ್ಧಗೊಳ್ಳಬೇಕು. ತದನಂತರ ವಿಚಾರಣೆ ಮತ್ತು ವೀಸಾ ಅನುಮೋದನೆಯಾಗುತ್ತದೆ. ಇದೆಲ್ಲವೂ ಮುಗಿದ ನಂತರ, ಕ್ಯಾಬ್‌ಗಳು ಲಭ್ಯವಿದ್ದು, ಮುಂದಿನ ದಿನದ ಈವೆಂಟ್‌ಗಾಗಿ ತಯಾರಾಗಲು ನಿಮ್ಮ ಹೋಟೆಲ್‌ಗೆ ತೆರಳಬಹುದು.

Chernobyl
C

ನೀವು ಇದನ್ನು ಇಷ್ಟಪಡಬಹುದು: ಟೆಕ್ಕಿಯಾಗಿದ್ದ ಹುಡುಗ ಈಗ ವೈಲ್ಡ್ ಲೈಫ್ ಫೋಟೋಗ್ರಾಫರ್: ಮೂಡಿಗೆರೆಯ ಸುನೀಲ್ ಸಚಿಯವರ ಕುತೂಹಲಕರ ಕತೆ

ಪ್ರವಾಸ ಬುಕ್ ಮಾಡುವ ವಿಧಾನ

ಚರ್ನೋಬಿಲ್ ಪ್ರವಾಸದ ಪ್ಯಾಕೇಜ್ ಬುಕ್ ಮಾಡಲು ಅನುಕೂಲಕರ ಮಾರ್ಗವೆಂದರೆ chernobylwel.com ಮತ್ತು tourkiev.com ಜಾಲತಾಣಗಳು. ಈ ಜಾಲತಾಣದಲ್ಲಿ ನಿಮಗೆ ಬೇಕಾದ ಅನುಭವ, ಖರ್ಚು ವೆಚ್ಚ ತಕ್ಕಂತೆ ಪ್ಯಾಕೇಜ್ ಗಳು ದೊರೆಯುತ್ತವೆ.

ಚೆರ್ನೋಬಿಲ್ NPP ರಿಯಾಕ್ಟರ್

chernobyl

ಚೆರ್ನೋಬಿಲ್ ವಿನಾಶದ ಮೂಲ ತಾಣವಾದ ಪರಮಾಣು ರಿಯಾಕ್ಟರ್ ನಿಂದ ಪ್ರಯಾಣ ಪ್ರಾರಂಭವಾಗುತ್ತದೆ. ಇದು ನೋಡಲು ಲೋಹ ಮತ್ತು ಕಚ್ಚಾ ಕಬ್ಬಿಣದಿಂದ ತಯಾರಾದ ದೈತ್ಯ ಅಸ್ಥಿಪಂಜರದಂತೆ ಕಾಣುತ್ತದೆ. ಈ ದೊಡ್ಡ ರಚನೆಯನ್ನು ನವೀಕರಿಸಲು ಮತ್ತು ಪರಮಾಣು ತ್ಯಾಜ್ಯವನ್ನು ಕಿತ್ತೆಸೆಯಲು ಇಲ್ಲಿನ ಸರ್ಕಾರ ಶ್ರಮಿಸುತ್ತಿದೆ.

Chernobyl NPP Reactor

ಇಲ್ಲಿನ ಪ್ರದೇಶಗಳನ್ನು ಪ್ರವೇಶಿಸಲು ಸುಲಭ ಸಾಧ್ಯತೆಗಳು ಇದ್ದರೂ ಕೂಡ ರೆಡ್ ಫಾರೆಸ್ಟ್ (Red Forset) ವೆಹಿಕಲ್ ಸ್ಕ್ರ್ಯಾಪ್ ಯಾರ್ಡ್‌ನಂತಹ (Vehicle Scrap Yard) ಕೆಲವು ಸ್ಥಳಗಳು ಈಗಲೂ ಅಪಾಯಕಾರಿ ಮಟ್ಟದ ವಿಕಿರಣವನ್ನು ಹೊರಸೂಸುತ್ತವೆ ಮತ್ತು ಇಲ್ಲಿಗೆ ಭೇಟಿ ನೀಡುವ ಮೊದಲು ವಿಶೇಷ ಗಮನ ಹರಿಸುವುದು ಅತಿ ಅವಶ್ಯಕ.

ರೆಡ್ ಫಾರೆಸ್ಟ್ (Red Forest)

Red Forest

ಚೆರ್ನೋಬಿಲ್ ಪ್ರಯಾಣದ ಮುಂದಿನ ನಿಲ್ದಾಣ ರೆಡ್ ಫಾರೆಸ್ಟ್ ನ ನಿರ್ಬಂಧಿತ ವಲಯ.ಈ ಸ್ಥಳದ ಪಕ್ಕದಲ್ಲಿರುವ ಪೈನ್ ಕಾಡು, ಹೆಚ್ಚಿನ ವಿಕಿರಣಗಳನ್ನು ಹೀರಿಕೊಳ್ಳುತ್ತದೆ ಮತ್ತು ಹೆಚ್ಚಿನ ಮರಗಳು ಸತ್ತು ಕೆಂಪು ಬಣ್ಣಕ್ಕೆ ಬದಲಾಗಿದ್ದಾವೆ ಆದ್ದರಿಂದ ಈ ಪ್ರದೇಶಕ್ಕೆ ರೆಡ್ ಫಾರೆಸ್ಟ್ ಹೆಸರು ಬಂದಿದೆ. ಇಲ್ಲಿ ನಡೆಯಲು ನಿಮ್ಮನ್ನು ನಿಷೇಧಿಸಲಾಗುವುದು ಆದರೆ ಇಲ್ಲಿ ಬೀಸಿ ಬರುವ ಅತೀಂದ್ರಿಯ ಗಾಳಿ ಮೈ ಮೇಲೆ ಹರಿಯುವ ಅನುಭವ ನಿಮ್ಮದಾಗುತ್ತದೆ .

 ವೆಹಿಕಲ್ ಸ್ಕ್ರಾಪ್ ಯಾರ್ಡ್ (Vehicle Scrap Yard)

ಚರ್ನೋಬಿಲ್ ದುರಂತ ಘಟನೆಯ ತುರ್ತು ಸಂದರ್ಭದಲ್ಲಿ ಬಳಿಕೆಯಾದ ಆಂಬ್ಯುಲೆನ್ಸ್‌ಗಳು, ಫೈರ್‌ಟ್ರಕ್‌ಗಳು, ಕಾರುಗಳು ಮತ್ತು ಹೆಲಿಕಾಪ್ಟರ್‌ಗಳ ರುದ್ರಭೂಮಿ ಈ ವೆಹಿಕಲ್ ಸ್ಕ್ರಾಪ್ ಯಾರ್ಡ್. ವಾಹನಗಳ ಲೋಹ ಈಗಲೂ ಹೆಚ್ಚಿನ ಮಟ್ಟದ ವಿಕಿರಣಶೀಲ ವಸ್ತುಗಳಿಂದ ಕಲುಷಿತಗೊಂಡಿರುವುದರಿಂದ ನಿಮಗೆ ವಾಹನಗಳೊಳಗೆ ಪ್ರವೇಶಿಸಲು ಅನುಮತಿವಿರುವುದಿಲ್ಲ. ನೀವು ಹತ್ತಿರದ ನೌಕಾಂಗಣಕ್ಕೆ (Shipyard) ಭೇಟಿಕೊಟ್ಟು ಅದ್ಭುತ ಚಿತ್ರಗಳನ್ನು ಕ್ಲಿಕ್ಕಿಸಬಹುದು.

Vehicle Scrap Yard

ಇವುಗಳೆಲ್ಲದರ ಪಕ್ಕದಲ್ಲಿ ಟ್ರಾಲಿ ಬಸ್ಸುಗಳು, ಸಂಗೀತ ಶಾಲೆಗಳು, ಒಳಾಂಗಣಗಳನ್ನು ಹೊಂದಿರುವ ಅಂಗಡಿಗಳು, ಕಾಲದ ಹೊಡೆತಕ್ಕೆ ಸಿಕ್ಕು ಕಂಗೆಟ್ಟು ಹೋದರು ಈಗಲೂ ಆ ಗತಕಾಲದ ಕಥೆಗಳನ್ನು ಜೀವಂತವಾಗಿ ಪೋಷಿಸಿವೆ. ದುರಂತ ಘಟನೆಯಿಂದ ಜರುಗಿದ ತರಾತುರಿ ನಿರ್ಗಮನದ ಪ್ರತಿಯೊಂದು ಕುರುಹು ನಮಗೆ ಅಲ್ಲಿ ಕಾಣಸಿಗುವ ಪುಸ್ತಕಗಳಿಂದ, ಪೀಠೋಪಕರಣಗಳಿಂದ ಮತ್ತೆ ಅದೇ ಜಾಗದಲ್ಲಿ ಬಿಟ್ಟು ಹೋದ ಈಗಲೂ ಅಲ್ಲೇ ಇರುವ ಆಟಿಕೆಗಳಿಂದ ತಿಳಿಯುತ್ತದೆ. ಇಲ್ಲಿ ಎಲ್ಲ ಕಡೆಯೂ ನಾವು ಗ್ಯಾಸ್ ಮಾಸ್ಕ್ ಗಳನ್ನ ಕಾಣಬಹುದು.

Vehicle Scrap Yard

ಸುರಕ್ಷತೆ ಮರೆಯದಿರಿ

ನೀವೆಷ್ಟೇ ಸಾಹಸ ಪ್ರಿಯರಾದರೂ ಜೀವವನ್ನು ಪಣಕ್ಕಿಡಲು ಯಾರೂ ಬಯಸುವುದಿಲ್ಲ. ಇಲ್ಲಿನ ಯಾವುದೇ ಸ್ಥಳದ ಪ್ರವಾಸವು ನಿಮ್ಮನ್ನು ಗಂಟೆಗೆ 15 ರಿಂದ ಹೆಚ್ಚು ರೋಂಟ್‌ಜೆನ್‌ಗಳಿಗೆ ಒಡ್ಡಬಹುದು. ಇದು ತೀವ್ರವಾದ ಸಮಸ್ಯೆಯಲ್ಲದ ಕಾರಣ ಅದರಿಂದ ಪಾರಾಗಬಹುದು. ಆದರೆ ಮುಖ್ಯ ಕಾಳಜಿ ನಿಮ್ಮ ಬಟ್ಟೆಗಳಿಗೆ ಅಂಟಿಕೊಳ್ಳುವ ವಿಕಿರಣಶೀಲ ವಸ್ತುಗಳು, ಕಾರಣ ನೀವು ಅಂತಿಮವಾಗಿ ಅವುಗಳನ್ನು ಮನೆಗೆ ಹಿಂತಿರುಗಿಸುತ್ತೀರಿ.

ಆದಷ್ಟೂ ನಡೆ ರಸ್ತೆಯ ಮೇಲಿರಲಿ, ಮತ್ತು ಪೊದೆಗಳ ಸಂಪರ್ಕವನ್ನು ತಪ್ಪಿಸಿ. ಏಕೆಂದರೆ ಅವುಗಳು ಸೋಂಕಿತ ವಿಕಿರಣಶೀಲ ವಸ್ತುಗಳನ್ನು ಹೊಂದಿರುತ್ತವೆ.

CHERNOBYL

ಶೀಘ್ರದಲ್ಲೇ ಚೆರ್ನೋಬಿಲ್ ಭೇಟಿಯನ್ನು ನಿಯೋಜಿಸಿ. ಕಾರಣ ಅಲ್ಲಿನ ಹೆಚ್ಚಿನ ಕಟ್ಟಡಗಳು ಕುಸಿದಿವೆ ಮತ್ತು ಪ್ರಿಪ್ಯಾತ್ ಶಹರ ಪ್ರವಾಸಿಗರಿಗೆ ಶಾಶ್ವತವಾಗಿ ಮುಚ್ಚಲ್ಪಡುತ್ತದೆ.

ನಾವೂ ಟೆಲಿಗ್ರಾಮ್ ನಲ್ಲೂ ಇದ್ದೀವಿ! ಕನ್ನಡ.ಟೆಲಿಗ್ರಾಮ್ ಗ್ರೂಪ್ ಜಾಯಿನ್ ಆಗಿ. 

ನೀವು ಪ್ರವಾಸ ಹೋಗುವ ತಾಣದ ಮಾಹಿತಿ, ಕನ್ನಡ.ಟ್ರಾವೆಲ್ (Kannada.Travel) ಜಾಲತಾಣದಲ್ಲಿ ಪ್ರಕಟವಾಗುವ ಬರಹಗಳ ವಿವರ, ಅಪರೂಪದ ಟ್ರಾವೆಲರ್ ಗಳ ಪರಿಚಯ, ಪ್ರವಾಸಿ ತಾಣಗಳ ಕುತೂಹಲಕರ ಚಿತ್ರ, ಬರಹ ಎಲ್ಲವೂ ಇಲ್ಲಿ ನಿಮಗೆ ಸಿಗುತ್ತದೆ. ಬನ್ನಿ ಜೊತೆಯಾಗಿ

Related Articles

Leave a Reply

Your email address will not be published. Required fields are marked *

Back to top button