ಇವರ ದಾರಿಯೇ ಡಿಫರೆಂಟುಬೆರಗಿನ ಪಯಣಿಗರುವಿಂಗಡಿಸದಸೂಪರ್ ಗ್ಯಾಂಗು

ಕಾರು, ಒಡವೆ ನೀಡದ ಖುಷಿ ಪ್ರವಾಸ ಕೊಡುತ್ತದೆ: 14 ದೇಶಗಳನ್ನು ಸುತ್ತಿರುವ ಸಾಹಸಿ ಆರ್ ಜೆ ಸ್ಮಿತಾ

14 ದೇಶಗಳನ್ನು ಸುತ್ತಿರುವ, ವಾರಾಂತ್ಯ ಬೆಂಗಳೂರಿನ ಆಸುಪಾಸಿನ ಬೆಟ್ಟ ಗುಡ್ಡ ಹತ್ತಿ ಸೂರ್ಯನಿಗೆ ಕಾಯುವ, ಅತಿ ಕಷ್ಟಕರ ಚಾರಣಗಳನ್ನೂ ಇಷ್ಟಪಡುವ ಹುಮ್ಮಸ್ಸಿನ ಹುಡುಗಿ ಆರ್ ಜೆ ಸ್ಮಿತಾ. ರೇಡಿಯೋ ಮಿರ್ಚಿ ಎಫ್ ಎಮ್ ಕೇಳುಗರ ಪ್ರೀತಿ ದಕ್ಕಿಸಿಕೊಂಡಿರುವ ಈ ಸಾಹಸಿಯ ಕುರಿತ ಬರಹ.

  • ಸಿಂಧೂ ಪ್ರದೀಪ್

ಎಲ್ಲರೂ ಎಫ್ಎಮ್ ರೇಡಿಯೋ ಕಾರ್ಯಕ್ರಮಗಳನ್ನು ಕೇಳೇ ಕೇಳಿರುತ್ತೀವಿ. ಅದರಲ್ಲೂ ಬೆಂಗಳೂರಿನ ಜನತೆಗೆ ಈ ಎಫ್ಎಮ್ ಅನ್ನೋದು ದಿನ ನಿತ್ಯದ ಅವಿಭಾಜ್ಯ ಅಂಗವಾಗಿದೆ. ಹೀಗೆ ರೇಡಿಯೋ ಮಿರ್ಚಿ(Radio mirchi) ಎಂಬ ಎಫ್ ಎಮ್ ಚಾನೆಲ್ ನಲ್ಲಿ ಪದೇ ಪದೇ ಕೇಳುವ ಕಾರ್ಯಕ್ರಮದ ಜಾಹೀರಾತು ಒಂದಿದೆ. ಅದೇ “ವಿಷ್ಯ ಗೊತ್ತಾ ಗೊತ್ತಾ, ಬರ್ತಾಳೆ ಸ್ಮಿತಾ ಸ್ಮಿತಾ” ಅಂತ, ಈಗ ನಿಮಗೆ ಈ ಬರಹ ಯಾರ ಬಗ್ಗೆ ಎಂದು ಗೊತ್ತಾಗಿರುತ್ತದೆ ಅಲ್ಲವೇ??

ನಾವು ಇವತ್ತು ನಿಮಗೆಲ್ಲರಿಗೂ ರೇಡಿಯೋ ಜಾಕಿ ಸ್ಮಿತಾ ದೀಕ್ಷಿತ್(Smitha Dixith) ಅವರ ಪ್ರವಾಸದ ಅನುಭವವನ್ನು ಪರಿಚಯಿಸುತ್ತಿದ್ದೇವೆ.

RJ Smitha Radio Mirchi
Jammu and Kashmir tourism

ಬೆಂಗಳೂರಿನಲ್ಲೇ ಹುಟ್ಟಿ ಬೆಳೆದು ವ್ಯಾಸಂಗ ಮುಗಿಸಿ, ಅಮೇರಿಕಾದಲ್ಲಿ ಉದ್ಯೋಗ ನಿಮಿತ್ತ ಎರಡು ವರ್ಷಗಳ ಕಾಲ ನೆಲೆಸಿ, ಈಗ ಕೆಲವು ವರ್ಷಗಳಿಂದ ರೇಡಿಯೋ ಜಾಕಿ ಆಗಿ ಕಾರ್ಯನಿರ್ವಹಿಸುತ್ತಿರುವ ಸ್ಮಿತಾ ಅವರಿಗೆ ಪ್ರವಾಸ ಎಂದರೆ ಬಹಳ ಇಷ್ಟ. ಇವರ ತಂದೆ ತಾಯಿ ಕೂಡ ಪ್ರವಾಸ ಪ್ರಿಯರೇ. ಇದರಿಂದಲೇ ಚಿಕ್ಕದರಿಂದಲೂ ಪ್ರವಾಸದ ಬಗ್ಗೆ ಆಸಕ್ತಿ ಹುಟ್ಟಿಕೊಂಡಿದೆ ಎಂದರೆ ತಪ್ಪಾಗುವುದಿಲ್ಲ.

ಹೊಸ ಜಾಗಗಳನ್ನು ನೋಡುವುದು, ಹೊಸ ಅನುಭವವನ್ನು ಪಡೆಯುವುದು, ಪ್ರವಾಸಿ ಸ್ಥಳಗಳಿಗಿಂತ ಅನ್ವೇಷಿಸದ ಸ್ಥಳಗಳಿಗೆ ಭೇಟಿ ನೀಡುವುದರಲ್ಲಿ ಇವರಿಗೆ ಆಸಕ್ತಿ ಹೆಚ್ಚು, ಇದುವರೆಗೂ ಹಲವಾರು ರಾಜ್ಯಗಳು ಹಾಗೂ ಸುಮಾರು 14 ದೇಶಗಳನ್ನು ಸುತ್ತಿದ್ದಾರೆ.

ಸ್ನೇಹಿತರೊಂದಿಗೆ ಪ್ರವಾಸ ಮಾಡುವುದನ್ನು ಇಷ್ಟಪಡುವ ಸ್ಮಿತಾಗೆ ಟ್ರೆಕ್ಕಿಂಗ್ ಎಂದರೆ ಬಹಳ ಅಚ್ಚುಮೆಚ್ಚು. ಬೆಂಗಳೂರಿನ ಸುತ್ತ ಹಾಗೂ ಕರ್ನಾಟಕದಲ್ಲಿರುವ ಹಲವಾರು ಚಾರಣ ತಾಣಗಳಿಗೆ ಈಗಾಗಲೇ ಭೇಟಿ ನೀಡಿದ್ದಾರೆ.

ಗ್ರೇಟ್ ಲೇಕ್ಸ್ ಆಫ್ ಕಾಶ್ಮೀರ್

ಕಷ್ಟಕರ ಅನ್ನುವುದಕ್ಕಿಂತ ಹಲವು ಬಗೆಯಲ್ಲಿ ತನ್ನನ್ನು ತಾನು ಕಂಡುಕೊಂಡಂತಹ ಒಂದು ಅದ್ಭುತ ಚಾರಣದ ಕಥೆಯನ್ನು ನಮ್ಮೊಂದಿಗೆ ಹಂಚಿಕೊಂಡಿದ್ದಾರೆ.

ಯಾವಾಗಲೂ ಹೊಸ ಅನುಭವಗಳನ್ನು ಹುಡುಕುವ ಇವರು ಇದುವರೆಗೂ ಒಂದು ದಿನಕಷ್ಟೇ ಮೀಸಲಿರುತಿದ್ದ ಇವರ ಚಾರಣ ಕೆಲವು ದಿನಗಳಿಗೆ ವಿಸ್ತರಿಸಿ ಸ್ವಲ್ಪ ಕಷ್ಟಕರವಾದ ಸ್ಥಳಕ್ಕೆ ಚಾರಣ ಮಾಡಬೇಕೆಂದು ನಿರ್ಧರಿಸಿ ಇವರು ಆಯ್ಕೆ ಮಾಡಿಕೊಂಡಿದ್ದು ಕಾಶ್ಮೀರ.

RJ Smitha Radio Mirchi
Great lakes of Kashmir
Jammu and Kashmir tourism

ಇಲ್ಲಿರುವ ಹಲವು ಬಗೆಯ ಚರಣಗಳಲ್ಲಿ ಬಹಳ ಸುಂದರವಾಗಿರುವುದು “ಗ್ರೇಟ್ ಲೇಕ್ಸ್ ಆಫ್ ಕಾಶ್ಮೀರ್ “.(Great lakes of Kashmir) ಈ ಅದ್ಭುತ ಚಾರಣ ಮುಗಿಸಲು ಏಳರಿಂದ ಎಂಟು ದಿನಗಳು ಬೇಕು. ಹಲವು ಬಗೆಯ ಬೇರೆ ಬೇರೆ ಸರೋವರಗಳನ್ನು ಚಾರಣದ ಉದ್ದಕ್ಕೂ ನೋಡಬಹುದು. ಯಾವಾಗಲೂ ಆರಾಮಾಗಿ ಪ್ರವಾಸ ಮಾಡುತ್ತಿದ್ದ ಇವರಿಗೆ ಅಲ್ಲಿನ ವಾತಾವರಣ, ಸ್ಥಳಗಳು ಹೇಗೆ ಇರುತ್ತದೆ ಎನ್ನುವ ಕಲ್ಪನೆಯು ಇಲ್ಲದೇ ಪ್ರಯಾಣ ಬೆಳೆಸಿ ಒಂದುವಾರಗಳ ಕಾಲ ನೆಟ್ವರ್ಕ್ ಇಲ್ಲದ ಸ್ಥಳಗಲ್ಲಿ ಟೆಂಟ್ ನಲ್ಲಿ ಉಳಿದು ತಮ್ಮ ಆಹಾರವನ್ನು ತಾವೇ ತಯಾರಿಸಿಕೊಂಡು, ಬಹಳಷ್ಟು ಜನರ ಒಡನಾಟ ಹೊಂದಿದ್ದ ಈ ಅದ್ಭುತ ದಿನಗಳು ಸ್ಮಿತಾ ಅವರಿಗೆ ಅಚ್ಚಳಿಯದ ನೆನಪಿನ ದಿನಗಳು ಎಂದು ಹೇಳಬಹುದು.

ನೀವು ಇದನ್ನು ಇಷ್ಟಪಡಬಹುದು: ದಾಲ್ ಸರೋವರದ ಬೋಟ್ ಹೌಸಿನಲ್ಲಿ ನಾವು: ಸಿಂಧುಚಂದ್ರ ಹೆಗಡೆ ಬರೆಯುವ ಸಿಂಪ್ಲೀ ಕಾಶ್ಮೀರ ಸರಣಿ ಭಾಗ 1

ನೆನಪಲ್ಲುಳಿದ ಚಾರಣ

ಒಟ್ಟು 72 ಕಿಮೀ ಇರುವ ಈ ಚಾರಣದಲ್ಲಿ ಮೊದಲ ದಿನ ಬಹಳ ಉತ್ಸಾಹದಿಂದ ಚಾರಣ ಆರಂಭಿಸಿ ದಿನ ಕಳೆಯುತ್ತಾ ಕಷ್ಟವಾಗ ತೊಡಗಿತು. ಈ ಸ್ಥಳಗಳು ದೈಹಿಕ ಸಾಮರ್ಥ್ಯದ ಹೊರತಾಗಿ ಮಾನಸಿಕ ಸಾಮರ್ಥ್ಯವನ್ನು ಪರೀಕ್ಷಿಸುತ್ತಿರುವಂತೆ ಅನ್ನಿಸುತ್ತಿತ್ತು, ಎಂಟು ದಿನಗಳಲ್ಲಿ ಒಂದೊಂದು ದಿನವೂ ಒಂದೊಂದು ಭೂ ಪ್ರದೇಶದ ಅದ್ಭುತ ದೃಶ್ಯ ಆಕರ್ಷಿಸುತ್ತಿತ್ತು.

RJ Smitha Radio Mirchi
Jammu and Kashmir tourism

ಒಂದು ದಿನ ಹೂಗಳಿಂದ ತುಂಬಿದ ಕಣಿವೆ, ಮತ್ತೊಂದು ದಿನ ಹತ್ತಲು ಹಿಂಜರಿಯುವಂತೆ ಇದ್ದ ದೊಡ್ಡ ಬೆಟ್ಟಗಳು, ಇನ್ನೊಂದು ದಿನ ಮಳೆ, ಹಿಮ ಹೀಗೆ ಹಲವು ಬಗೆಯ ಪ್ರದೇಶಗಳು, ಹಲವು ಸರೋವರಗಳನ್ನು ದಾಟಿ ತುತ್ತ ತುದಿ ತಳುಪುತ್ತಿದ್ದಂತೆ ಬೆಟ್ಟದ ಮೇಲೊಂದು ಸರೋವರ ಆ ಅದ್ಭುತ ದೃಶ್ಯ ಅನುಭವಿಸಿದವರಿಗೇ ಗೊತ್ತು.

ಚಾರಣದ ಕೊನೆಯ ದಿನ ಎಲ್ಲರಿಗೂ ಅನಿಸಿಕೆ ಕೇಳಿದಾಗ ಸ್ಮಿತಾ ಬಹಳ ಭಾವುಕರಾದರಂತೆ. ಈ ಸ್ಥಳ ನನ್ನ ಮಾನಸಿಕ ಹಾಗೂ ದೈಹಿಕ ಸಮರ್ಥ್ಯವನ್ನು ಪರೀಕ್ಷಿಸಿದ್ದಲ್ಲದೆ ನನ್ನನ್ನು ನಾನು ಕಂಡುಕೊಳ್ಳಲು ಸಹಾಯ ಮಾಡಿತು. ಇಂಥಾ ಒಂದು ಅದ್ಭುತ ಸ್ಥಳದ ಅನುಭವ ಪಡೆದು ನನಗೆ ಹೆಮ್ಮೆ ಅನ್ನಿಸುತ್ತಿದೆ ಹಾಗೂ ನಿಮಗೂ ಸಾಧ್ಯವಾದಲ್ಲಿ ಈ ಸ್ಥಳವನ್ನು ಒಮ್ಮೆ ಭೇಟಿ ನೀಡಿ ಎಂದು ಹೇಳುತ್ತಾರೆ.

RJ Smitha Radio Mirchi
Jammu and Kashmir tourism

ವಾರಾಂತ್ಯ ಸೂರ್ಯನ ಕಾಯುವಿಕೆ

ಪ್ರಕೃತಿಯ ಮಧ್ಯ ಕಳೆದ ಈ ಅದ್ಭುತ ದಿನಗಳನ್ನು ಸ್ಮಿತಾ ಅವರು ಜೀವನಕ್ಕೆ ಹೋಲಿಸುತ್ತಾರೆ. ಎಲ್ಲರ ಜೀವನದಲ್ಲೂ ಇದೇ ರೀತಿ ಒಂದು ದಿನ ಕಷ್ಟ, ಇನ್ನೊಂದು ದಿನ ಖುಷಿ, ಮತ್ತೊಂದು ದಿನ ಪ್ರಶಾಂತತೆ, ಹೀಗೆ ಹಲವು ಏರುಪೇರುಗಳನ್ನು ದಾಟಿ ತುತ್ತ ತುದಿ ತಲುಪಿದಾಗ ಏನೋ ಸಾಧಿಸಿದ ಸಾರ್ಥಕ ಮನೋಭಾವ. ಎಂಥಾ ಅದ್ಭುತ ಹೋಲಿಕೆ ಅಲ್ಲವೇ?

ಆರ್ ಜೆ ಆಗಿರುವುದರಿಂದ ಪ್ರವಾಸ ಮಾಡುವುದು ಸ್ವಲ್ಪ ಕಷ್ಟ, ಎಲ್ಲೇ ಹೋಗಬೇಕೆಂದರೂ ಕೆಲವು ತಿಂಗಳ ಮುಂಚೆ ಯೋಚಿಸಿ ತಮ್ಮ ಕಾರ್ಯಕ್ರಮದ ಸಮಯಕ್ಕೆ ಬೇರೆ ಆರ್ ಜೆಯನ್ನು ನೇಮಿಸಿ ಎಲ್ಲವೂ ಸರಿ ಹೊಂದಿದ ನಂತರ ಕೆಲವು ದಿನಗಳು ರಜೆ ಪಡೆದು ಪ್ರವಾಸ ಮಾಡುತ್ತಾರೆ.

RJ Smitha Radio Mirchi
Jammu and Kashmir tourism

ತಮ್ಮನ್ನು ಆದಷ್ಟೂ ಪ್ರಕೃತಿಯೊಂದಿಗೆ ಬೆರೆಯಲು, ತೊಡಗಿಸಿಕೊಳ್ಳಲು ವಾರಾಂತ್ಯದಲ್ಲಿ ಬೆಂಗಳೂರಿನ ಸುತ್ತಮುತ್ತಲು ಇರುವ ಹಲವು ಸ್ಥಳಗಳಿಗೆ ಭೇಟಿ ನೀಡಲು ಮೀಸಲಿಡುತ್ತಾರೆ. ಹಲವು ಬೆಟ್ಟ ಗುಡ್ಡಗಳನ್ನು ಹುಡುಕಿ ಹೊಸ ಅನುಭವ ಪಡೆಯುತ್ತಾರೆ. ಅದಕೆಂದೇ ಒಂದು ಶೀರ್ಷಿಕೆಯನ್ನು ಕೊಟ್ಟಿದ್ದಾರೆ ಸೂರ್ಯನನ್ನು ಬೆನ್ನಟ್ಟುವ ಭಾನುವಾರ (Sun Chasing Sundays) ಎಂದು. ಸೂರ್ಯ ಹುಟ್ಟುವ ಮುಂಚೆಯೇ ಹೋಗಿ ಸೂರ್ಯನನ್ನು ಕಾಯುವುದು ಎನ್ನುವ ಇವರ ಕಲ್ಪನೆ ನಿಜಕ್ಕೂ ಅವರ್ಣನೀಯ.

ಕೆಲವು ಕಿವಿಮಾತುಗಳು

ಸ್ಮಿತಾ ಪ್ರವಾಸ ಪ್ರೀತಿ ಇರುವ ನಮಗೆಲ್ಲರಿಗೂ ಕೆಲವು ಕಿವಿಮಾತನ್ನು ಹೇಳಿದ್ದಾರೆ..

  1. ಎಲ್ಲರ ಪ್ರವಾಸದಲ್ಲೂ ಕೆಲವು ಆತಂಕಕಾರಿ ಘಟನೆಗಳು ನಡೆಯುತ್ತದೆ. ಉದಾಹರಣೆಗೆ ದಾರಿ ತಪ್ಪಿ ಬೇರೆ ಸ್ಥಳಕ್ಕೆ ಹೋಗುವುದು, ಗೂಗಲ್ ಮ್ಯಾಪ್ ಕಾರ್ಯನಿರ್ವಹಿಸದೇ ಇರುವುದು. ಇಂತಹ ಸಂದರ್ಭದಲ್ಲಿ ಭಯಪಡದೇ ಅದೇ ಅನುಭವವನ್ನು ಖುಷಿಯಿಂದ ಸ್ವೀಕರಿಸಬೇಕು. ಒಬ್ಬರೇ ಇದ್ದಾಗ ಭಯಪಡುವ ಅಗತ್ಯವಿದೆ. ಆದರೆ ಗೆಳೆಯರ ಗುಂಪಿನಲ್ಲಿ ಇದ್ದಾಗ ಭಯಪಡುವ ಅವಶ್ಯಕತೆ ಇಲ್ಲ. ಅದನ್ನೇ ಒಂದು ಪಾಠ ಎಂದು ಸ್ವೀಕರಿಸಿ, ಮುಂದೆ ಒಂದು ದಿನ ಈ ಅನುಭವಗಳೇ ಸುಂದರ ನೆನಪಿನ ಪಟ್ಟಿಗೆ ಸೇರುತ್ತದೆ.
  2. ಯಾವುದೇ ಸ್ಥಳಗಳಲ್ಲಿ ಸ್ಥಳೀಯರು ಎಚ್ಚರಿಕೆ ಕೊಟ್ಟರೆ ಚಾಚೂ ತಪ್ಪದೇ ಪಾಲಿಸಿ, ಭಂಡ ಧೈರ್ಯ ಮಾಡಬೇಡಿ.
  3. ಒಂಟಿಯಾಗಿ ಪ್ರಯಾಣಿಸುವ ಹೆಣ್ಣು ಮಕ್ಕಳು ಆದಷ್ಟೂ ಎಚ್ಚರಿಕೆ ವಹಿಸಿ. ಹಾಗೆಂದು ಹೋದಲ್ಲೆಲ್ಲಾ ಭಯಪಡುವ ಅಗತ್ಯವಿಲ್ಲ. ಜಾಗರೂಕತೆಯಿಂದ ಪ್ರವಾಸದ ಖುಷಿ ಅನುಭವಿಸಿ.
RJ Smitha Radio Mirchi
Jammu and Kashmir tourism

ಕೊನೆಯ ಹಾಗೂ ಬಹುಮುಖ್ಯ ಅಂಶ, ಎಲ್ಲಿ ಹೋದಾಗಲೂ, ಎಲ್ಲರ ಬಳಿಯಲ್ಲೂ ಸ್ಮಿತಾ ಹೇಳುವ ಒಂದು ಮಾತಿದೆ ಅದು ಏನೆಂದರೆ ..

“ನೀವು ದುಡಿಯುವ ಹಣದಲ್ಲಿ ಮನೆ, ಕಾರು, ಒಡವೆ ಎಂದು ಹೂಡಿಕೆ ಮಾಡುವಾಗ ಪ್ರವಾಸಕೆಂದು ಸ್ವಲ್ಪ ಹಣವನ್ನು ಉಳಿಸಿಕೊಳ್ಳಿ. ಈ ಕಾರು, ಒಡವೆ ಕೊಡದ ತೃಪ್ತಿ ಪ್ರವಾಸದಲ್ಲಿ ಸಿಗುತ್ತದೆ ಹಾಗೂ ಇದರಿಂದ ಯಾವತ್ತೂ ನಿಮಗೆ ನಷ್ಟವಾಗುವುದಿಲ್ಲ, ಎಲ್ಲವೂ ಜೀವನದ ಉದ್ದಕ್ಕೂ ನೆನಪಿನಲ್ಲಿ ಉಳಿಯುತ್ತದೆ”.

ನಾವೂ ಟೆಲಿಗ್ರಾಮ್ ನಲ್ಲೂ ಇದ್ದೀವಿ! ಕನ್ನಡ.ಟೆಲಿಗ್ರಾಮ್ ಗ್ರೂಪ್ ಜಾಯಿನ್ ಆಗಿ. 

ನೀವು ಪ್ರವಾಸ ಹೋಗುವ ತಾಣದ ಮಾಹಿತಿ, ಕನ್ನಡ.ಟ್ರಾವೆಲ್ (Kannada.Travel) ಜಾಲತಾಣದಲ್ಲಿ ಪ್ರಕಟವಾಗುವ ಬರಹಗಳ ವಿವರ, ಅಪರೂಪದ ಟ್ರಾವೆಲರ್ ಗಳ ಪರಿಚಯ, ಪ್ರವಾಸಿ ತಾಣಗಳ ಕುತೂಹಲಕರ ಚಿತ್ರ, ಬರಹ ಎಲ್ಲವೂ ಇಲ್ಲಿ ನಿಮಗೆ ಸಿಗುತ್ತದೆ. ಬನ್ನಿ ಜೊತೆಯಾಗಿ

Related Articles

Leave a Reply

Your email address will not be published. Required fields are marked *

Back to top button