ನಡಿಗೆ ನಮ್ಮ ಖುಷಿಗೆವಿಂಗಡಿಸದಸೂಪರ್ ಗ್ಯಾಂಗು

ಕಾಸರಗೋಡಿನ ಪೊಸಡಿ ಗುಂಪೆ ಬಗ್ಗೆ ಗೊತ್ತಾ: ಎಸ್ ಡಿಎಂ ಕಾಲೇಜಿನ ಆಕರ್ಷ ಆರಿಗ ಬರೆದ ಲವಲವಿಕೆಯ ಚಾರಣ ಕತೆ

ಉಜಿರೆ ಎಸ್ ಡಿ ಎಂ ಕಾಲೇಜಿನ ಸ್ನಾತಕೋತ್ತರ ವಿಭಾಗದ ಆಕರ್ಷ ಆರ್ ಅರಿಗ ತಮ್ಮ ಫ್ರೆಂಡ್ಸ್ ಜೊತೆ ಪೊಸಡಿ ಗುಂಪೆ ಎಂಬ ಚಂದದ ಜಾಗಕ್ಕೆ ಹೋದ ಕತೆಯನ್ನು ಹೇಳಿದ್ದಾರೆ. 

ಅಂತೂ ಇಂತೂ ಕಾಲೇಜುನ ಐದನೇ ಸೆಮಿಸ್ಟರ್ ಎಕ್ಸಾಂ ಕೂಡ ಮುಗೀತು. ಇನ್ನೂ ಇರುವುದು ಒಂದೇ ಸೆಮಿಸ್ಟರ್. ಕಾಲೇಜು ಲೈಫ್ ಅಂತ ಹೇಳಿದ ಮೇಲೆ ಮಜಾ ಮಾಡಲೇಬೇಕು. ಕಾಲೇಜು ಲೈಫಲ್ಲಿ ಟ್ರಿಪ್ ಹೋಗುವ ಕನಸು ಎಲ್ಲರಿಗೂ ಇರುತ್ತದೆ. ಆದರೇ ಹಲವು ಕಾರಣಗಳೊಂದಿಗೆ ಪ್ರತಿ ಬಾರಿಯೂ ಅವಕಾಶ ತಪ್ಪಿ ಹೋಗಿತ್ತು. ಆದರೆ ಈ ಬಾರಿ ಅಚಾನಕ್ಕಾಗಿ ಗೆಳತಿಯರು ಟ್ರಿಪ್‌ ಪ್ಲಾನ್ ಮಾಡಿಬಿಟ್ಟಿದ್ದರು. ಇನ್ನೇನು ಹೋಗುವುದು ಮಾತ್ರ ಉಳಿದಿತ್ತು. ಹಾಗಾಗಿ ಈ ಬಾರಿಯಂತೂ ಟ್ರಿಪ್ ಪ್ಲಾನ್ ಸಕ್ಸೆಸ್ ಆಗುತ್ತುದೆ ಅಂತ ಖಚಿತವಾಗಿತ್ತು. ಪ್ಲಾನ್ ಹಾಕಿದ್ದು ಮಾತ್ರ ಮಂಗಳೂರು ಸುತ್ತಾಟಕ್ಕೆ. ಆದರೆ ಹೊಗಿದ್ದು ಮಾತ್ರ ಕಾಸರಗೋಡಿನ(kasargod) ಪೊಸಡಿ ಗುಂಪೆಗೆ.(posadi gumpe)

Posadi Gumpe Hill Station Kasaragod
Manvith Rai

ಟ್ರಿಪ್‌ನ ಹಿಂದಿನ ದಿನ ಗೆಳತಿಯ ಮನೆಗೆ ಹೋಗಿ ಅಲ್ಲಿ ಅವರಿಂದ ಆತಿಥ್ಯವನ್ನು ಸ್ವೀಕರಿಸಿಕೊಂಡಿದ್ದೆವು. ಅವರ ಮನೆ ಹಳೆಯದಾದರು ತುಂಬಾ ದೊಡ್ಡದಾಗಿತ್ತು. ಏಳು ಜನರ ತಂಡ ಇದಾಗಿತ್ತು. ಗೆಳೆಯ-ಗೆಳತಿಯರೆಲ್ಲ ಸೇರಿದಾಗ ಸದ್ದು ಗದ್ದಲಗಳೆಲ್ಲಾ ಮಾಮೂಲಿ. ಆ ದಿನ ಬೇರೆಯವರ ಮನೆಯಲ್ಲಿದ್ದೇವೆ ಅಂತ ಕೊಂಚವು ಅನಿಸಲಿಲ್ಲಾ. ಆ ಮನೆಯವರು ಅಷ್ಟು ಹತ್ತಿರವಾಗಿದ್ದರು. ಹಲವು ರೀತಿಯ ತಿಂಡಿ ಪಾಕಗಳನ್ನು ಮಾಡಿ ನಮಗೆ ತಿನ್ನಲು ನೀಡಿದರು. ಅವರ ಮನೆಯಲ್ಲಿ ಕಳೆದ ಒಂದು ದಿನ ಸ್ವಂತ ಮನೆಯಲ್ಲಿ ಇದ್ದ ಹಾಗೆ ಅನಿಸಿತ್ತು. 

ಚಾರಣ ಶುರು

ಮರುದಿನ ಬೆಳಗೆ ಫ್ರೆಶ್ ಅಪ್ ಆಗಿ ಚಾರಣಕ್ಕೆ ಹೊರಟುನಿಂತಿದ್ದೆವು. ಹೊರಟ ನಮಗೆ ಬಿಸಿ ಬಿಸಿ ಚಾಹಾದ ಜೊತೆಗೆ ಇಡ್ಲಿಯನ್ನು ಸವಿದೆವು. ಚಹಾ(tea) ತಿಂಡಿ ಸವಿದ ನಂತರ 8.30ರ ಹೊತ್ತಿಗೆ ನಮ್ಮ ಪಯಣ ಆರಂಭವಾಗಿತ್ತು. ಗೆಳತಿಯ ಮನೆಯಿಂದ 3 ಕಿ.ಮೀ ದೂರದಲ್ಲಿ ಗುಂಪೇ ಗುಡ್ಡ ಎಂಬ ನಿಸರ್ಗ ನಿರ್ಮಿತವಾದ ಪ್ರೇಕ್ಷಣೀಯ ಸ್ಥಳವಿತ್ತು. ಬೆಳಗಿನ ಜಾವ ಮುಂಜಾನೆಯ ವಾತಾವರಣದಲ್ಲಿ ಮಂಜಿನ ಹನಿಗಳಗೆ ಮೈಯ್ಯೊಡ್ಡಿ, ಸೂರ್ಯ ಉದಯವಾಗುತ್ತಿದ್ದ ವೇಳೆಯಲ್ಲಿ ನಾವೆಲ್ಲಾ ಗುಂಪೇ ಗುಡ್ಡದ ದಾರಿ ಹಿಡಿದೆವು.

Posadi Gumpe Hill Station Kasaragod

ನೀವು ಇದನ್ನು ಇಷ್ಟಪಡಬಹುದು: ಮಾರ್ಚ್ ಸೆಕೆಯಿಂದ ಪಾರಾಗಲು ನೀವು ಹೋಗಬಹುದಾದ 6 ಸುಂದರ ತಾಣಗಳು

ಬೆಟ್ಟವನ್ನು ಹತ್ತುತ್ತಿದ್ದಂತೆ ತಂಪಾದ ಗಾಳಿ ನಮ್ಮೆಡೆಗೆ ಬೀಸಿ ಬರುತ್ತಿತ್ತು. ಹೀಗಾಗಿ ನಮಗೆ ಆಯಾಸ ಆಗುತ್ತಿದ್ದದ್ದು ಗೊತ್ತಾಗುತ್ತಿರಲಿಲ್ಲ. ಹೀಗಾಗಿ ಗುಂಪೇ ಗುಡ್ಡದಲ್ಲಿ ಬರುತ್ತಿದ್ದ ತಂಪಾದ ಗಾಳಿಯನ್ನು ಅನುಭವಿಸಲು ಮುಂದಾದೆವು.

ಸ್ವಲ್ಪ ಹೊತ್ತು ವಿಶ್ರಮಿಸಿದೆವು. ದಣಿವೆಲ್ಲ ಆರಿದ ನಂತರ ಮತ್ತೆ ಆರಂಭವಾಯಿತು. ಮೋಜು ಮಸ್ತಿನ ಡ್ಯಾನ್ಸ್ ಗಳು. ಗುಂಪೆಯ ಗುಡ್ಡದಲ್ಲಿ ನಮ್ಮ ಹುಚ್ಚಾಟಗಳಿಗೆ ಜೊತೆಯಾಗಿದ್ದು ಮೊಬೈಲ್ ಪ್ಲೇ ಲಿಸ್ಟ್ ನಲ್ಲಿದ್ದ ಹಾಡುಗಳು. ಕುಣಿದದ್ದೇ ಕುಣಿದದ್ದು. ಕುಣಿದಾಗ ಆನಂದವೇನೋ ಆಯಿತು. ಆದರೇ ಬೆಟ್ಟ ಇಳಿದು ಕೆಳಗೆ ಬಂದಾಗ ಅದರ ಫಲ ಸಿಕ್ಕಿತ್ತು. ಕೈ ಕಾಲುಗಳೆಲ್ಲಾ ನೋಯಲು ಆರಂಭಿಸಿತ್ತು. ಇದೇ ನಮ್ಮ ಡ್ಯಾನ್ಸ್ ಗೆ ಬಹುಮಾನವೇನೋ ಅಂತ ಬಿದ್ದು ಬಿದ್ದು ನಗಲಾರಂಭಿಸಿದೆವು.

Posadi Gumpe Hill Station Kasaragod

ಟ್ರಿಪ್ ಅಂದ ಮೇಲೆ ಕ್ಯಾಮರ ಅನ್ನೊ ಸಹಪಾಠಿ ನಮ್ಮ ಜೊತೆಗೆ ಇದ್ದೇ ಇರುತ್ತದೆ. ಒಬ್ಬ ಫೋಟೊಗ್ರಾಫರ್ ಪ್ರತಿಯೊಂದು ಗುಂಪಿನಲ್ಲಿಯೂ ಇರುತ್ತಾನೆ. ನಮ್ಮೆಲ್ಲರ ಫೋಟೋವನ್ನು ಬಹಳ ಅಂದವಾಗಿ ತೆಗೆದು ಕೊನೆಗೆ ತನ್ನ ಫೋಟೋ ತೆಗೆಯಲು ಯಾರೂ ಇಲ್ಲ ಅಂತ ನಿರಾಸೆಗೊಳ್ಳುವವರು. ಆದರೇ ಅಂತ ಘಟನೇ ನಮ್ಮಲ್ಲಿ ನಡೆಯಲಿಲ್ಲ. ಪತ್ರಿಯೊಬ್ಬರೂ ಫೋಟೋ ತೆಗೆಯುವುದರಲ್ಲಿ ನಿಸ್ಸೀಮರಾಗಿದ್ದರು. ಇದು ಕ್ಯಾಮರ ತಂದವನ ಕಣ್ಣಲ್ಲಿ ಖುಷಿ ತಂದಿತ್ತು. 

ಮಧ್ಯಾಹ್ನದ ಊಟದ ಸಮಯಕ್ಕೆ ಸರಿಯಾಗಿ ಮನೆಯಲ್ಲಿ ಮತ್ತೆ ಹಾಜರಿದ್ದೆವು. ದಣಿದಿದ್ದ ದೇಹಕ್ಕೆ ವಿಶ್ರಾಂತಿ ಸಿಗುವುದಕ್ಕಾಗಿ ಕೊಂಚ ಹೊತ್ತು ನಿದ್ರಾ ದೇವಿಯನ್ನು ಆಹ್ವಾನಿಸಿದೆವು. ಸಂಜೆಯ ಹೊತ್ತು ಗೆಳತಿಯ ಮನೆಯ ಹತ್ತಿರವಿದ್ದ ಬೀಚಿನತ್ತ ತೆರಳಿದೆವು. ಚಿಕ್ಕ ಮಕ್ಕಳಂತೆ ನೀರಿನಲ್ಲಿ ಆಟ ಆಡಿ ಸಂಜೆಯನ್ನು ಬಹು ಸುಂದರವಾಗಿ ಕಳೆದೆವು. ಆ ಒಂದು  ದಿನ ನಮ್ಮೆಲ್ಲರ ಜೀವನದಲ್ಲಿ ನೆನಪಿನ ಬುತ್ತಿಯಲ್ಲಿ ಭದ್ರವಾಗಿರುತ್ತದೆ. ಕೊನೆಗೂ ಕಾಲೇಜು ಜೀವನದಲ್ಲಿ ಟ್ರಿಪ್‌ಗೆ ಹೋಗಿ ಬಂದೆವು ಅನ್ನುವ ಖುಷಿ ನಮಗಾಗಿದೆ.

ಹೇಗೆ ಹೋಗುವುದು:

ಸಮುದ್ರ ಮಟ್ಟಕ್ಕಿಂತ 1060 ಅಡಿ ಎತ್ತರವಿರುವ ಪೊಸಡಿ ಗುಂಪೆ ಇರುವುದು ಕಾಸರಗೋಡಿನಲ್ಲಿ. ಬೇಕಲ್ ಗಿಂತ 15 ಕಿಮೀ ದೂರದಲ್ಲಿ. ಮಂಗಳೂರಿನಿಂದ ಕಾಸರಗೋಡಿಗೆ(mangalore to kasargod) ಹೋಗಿ ಅಲ್ಲಿಂದ ಈ ಪೊಸಡಿ ಗುಂಪೆಗೆ ಹೋಗಬಹುದು.

ನಾವೂ ಟೆಲಿಗ್ರಾಮ್ ನಲ್ಲೂ ಇದ್ದೀವಿ! ಕನ್ನಡ.ಟೆಲಿಗ್ರಾಮ್ ಗ್ರೂಪ್ ಜಾಯಿನ್ ಆಗಿ. 

ನೀವು ಪ್ರವಾಸ ಹೋಗುವ ತಾಣದ ಮಾಹಿತಿ, ಕನ್ನಡ.ಟ್ರಾವೆಲ್ (Kannada.Travel) ಜಾಲತಾಣದಲ್ಲಿ ಪ್ರಕಟವಾಗುವ ಬರಹಗಳ ವಿವರ, ಅಪರೂಪದ ಟ್ರಾವೆಲರ್ ಗಳ ಪರಿಚಯ, ಪ್ರವಾಸಿ ತಾಣಗಳ ಕುತೂಹಲಕರ ಚಿತ್ರ, ಬರಹ ಎಲ್ಲವೂ ಇಲ್ಲಿ ನಿಮಗೆ ಸಿಗುತ್ತದೆ. ಬನ್ನಿ ಜೊತೆಯಾಗಿ

Related Articles

Leave a Reply

Your email address will not be published. Required fields are marked *

Back to top button