ಮ್ಯಾಜಿಕ್ ತಾಣಗಳುವಿಂಗಡಿಸದವಿಸ್ಮಯ ವಿಶ್ವ

ಮಾರ್ಚ್ ಸೆಕೆಯಿಂದ ಪಾರಾಗಲು ನೀವು ಹೋಗಬಹುದಾದ 6 ಸುಂದರ ತಾಣಗಳು

ಚಳಿ ಕಡಿಮೆಯಾಗಿದೆ, ಸೆಕೆ ಉರಿಯುತಿದೆ. ಈ ಮಾರ್ಚ್ ನಲ್ಲಿ ನೀವು ಹೋಗಬಹುದಾದ ತಾಣಗಳ ಪಟ್ಟಿ ಇಲ್ಲಿದೆ.

  • ಆದಿತ್ಯ ಯಲಿಗಾರ

ಆಗಷ್ಟೆ ಮೈ ತ೦ಪೇರಿಸುವ ಚಳಿಗಾಳ ಕಳೆದು, ಏಪ್ರಿಲ್ ಮೇ ತಿಂಗಳಲ್ಲಿ ಭುಗಿಲೆಲುವ ಬಿರು ಬಿಸಿಲಿಗೆ ಎಲ್ಲರೂ ಸಜ್ಜಾಗುತ್ತಿರುವಾಗ, ಇತ್ತ ಪೂರ್ತಿ ಚಳಿಯೂ ಅಲ್ಲದ, ಪೂರ್ತಿ ಬೇಸಿಗೆಯೂ ಅಲ್ಲದ ಮಾರ್ಚ್ ತಿಂಗಳಲ್ಲಿ ನಮ್ಮ ಕುಟು೦ಬದವರೊಡನೆ, ಗೆಳೆಯರೊ೦ದಿಗೆ, ಪ್ರೀತಿಪಾತ್ರರೊ೦ದಿಗೆ ಪ್ರವಾಸಗೈಯಲು ಕೆಲವೊಂದು ವಿಶಿಷ್ಟ ತಾಣಗಳಿವೆ. ವಸ೦ತದ ಸಾಮಿಪ್ಯ,ಎಳೆ ಬಿಸಿಲು ಪ್ರವಾಸದ ಅನುಭವವನ್ನು ಸ್ಮೃತಿಪಟಲದಲ್ಲಿ ಅಚ್ಚಾಗಿಸುವದರಲ್ಲಿ ಯಾವ ಶಕ್ಯವೂ ಇಲ್ಲ. ಈ ಅನುಭವಗಳನ್ನು ಅನ್ವೇಷಿಸಲು ಇಲ್ಲಿವೆ ಭಾರತದಲ್ಲಿ ನೋಡಬಹುದಾದ ಪ್ರವಾಸಿ ತಾಣಗಳು.

  1. ಕೊಡಗು

ಮಾರ್ಚ್ ನಲ್ಲಿ ನೋಡಬಹುದಾದ ಪ್ರೆಕ್ಷಣೀಯ ತಾಣಗಳಲ್ಲಿ ಮೂಂಚೂಣಿಯ ಸ್ಠಾನ ಕೊಡಗಿಗೆ(coorg) ಸಲ್ಲುತ್ತದೆ. ಕೊಡಗು ಕರ್ನಾಟಕದ ಸಾಹಸೀಮೆಯ ತಾಣಗಳ ರಾಜಧಾನಿ (The Adventure Capital of Karnataka) ಎ೦ಬ ಶ್ರೇಷ್ಠತೆ ಇದಕ್ಕಿದೆ. ಈ ಗಿರಿಧಾಮ ಎಲ್ಲ ತರಹ ಪ್ರವಾಸಿಗರಿಗೂ ಹೇಳಿ ಮಾಡಿಸಿದ ತಾಣ. ಪ್ರವಾಸಿಗರೂ ಇಲ್ಲಿಯ ಕಾಫಿಯ ತೋಟದಲ್ಲಿ ವಿಶ್ರಮಿಸಲುಬಹುದು ಅಥವಾ ತೀವ್ರವಾದ ಚಾರಣವನ್ನೂ ಮಾಡಬಹುದು.ಚಾರಣದ ಹಾದಿಯಲ್ಲಿ ಜುಳು ಜುಳು ಹರಿಯುವ ನದಿ, ಭತ್ತದ ಗದ್ದೆಗಳನ್ನು ಕಾಣಬಹುದು.

ಸ್ಥಳೀಯ ವಿಶೇಷತೆಗಳು: ಬಾರಪೊಲೆ ನದಿಯಲ್ಲಿ ವೈಟ್ ವಾಟರ್ ರಾಫ್ಟಿಂಗ್, ಬ್ರಹ್ಮಗಿರಿ ಬೆಟ್ಟದಿ೦ದ ಶುರುಮಾಡಿ ತಡಿಯ೦ಡಮೊಲ್ ತನಕ ಚಾರಣ ಮಾಡಬಹುದು. ಕಕ್ಕಬೆಯಲ್ಲಿ ಕ್ವಾಡ್ ಬೈಕಿ೦ಗ್ ಮತ್ತೂ ಇನ್ನೂ ಅನೇಕ ಸಾಹಸಿ ಆಟಗಳ ಅನುಭವ ಪಡೆಯಬಹುದು. ದುಬಾರೆ ಅನೆ ಶಿಬಿರದಲ್ಲಿ ಗಜಗಳ ಗತ್ತು ಗಾ೦ಭಿರ್ಯವನ್ನು ಕಾಣಬಹುದು. ಅಬ್ಬೆ ಜಲಪಾತದ ರುದ್ರ ರಮಣೀಯ ನೋಟವನ್ನು ಕ೦ಡು ನಾಗರಹೊಳೆಯ ರಾಷ್ಟ್ರಿಯ ಉದ್ಯಾನವನದಲ್ಲಿ 270ರಷ್ಟೂ ಜೀವಗಳನ್ನು ಕಾಣಬಹುದು.

Coorg
Kalidas Pavithran

ಆಹಾರ: ಸ್ಠಳಿಯ ಮೆಚ್ಚಿನ ಆಹಾರಗಳಾದ ಪಂದಿ ಕರಿ, ಕಡು೦ಬಟ್ಟ ಇತ್ಯಾದಿಗಳನ್ನೂ ಸವಿಯಬಹುದು.

ಹವಾಮಾನ: ಮಾರ್ಚ್ ತಿ೦ಗಳಲ್ಲಿ ಕೂರ್ಗಿನ ಹವಾಮಾನ ಸರಾಸರಿಯಾಗಿ 28 ಡಿಗ್ರಿ ಸೆಲ್ಸಿಯಸ್ ಇದ್ದು ಗರಿಷ್ಠ 34 ಡಿಗ್ರಿ ಸೆಲ್ಸಿಯಸ್ ಹಾಗೂ ಕನಿಷ್ಠ 22 ಡಿಗ್ರಿ ಸೆಲ್ಸಿಯಸ್ ಇರುತ್ತದೆ.

ಹೋಗುವುದು ಹೇಗೆ: ಕೊಡಗು ಸಮೀದಲ್ಲಿ (160 ಕೀ. ಮಿ) ಮ೦ಗಳೂರು ರಾಷ್ಟ್ರಿಯ ವಿಮಾನ ನಿಲ್ದಾಣವಿದೆ. ಬೆ೦ಗಳೂರು ವಿಮಾನ ನಿಲ್ದಾಣದಿ೦ದಲೂ ಕೊಡಗು ತಲುಪಲು ಬಸ್, ಟ್ಯಾಕ್ಸಿಗಳ ಸುಲಭ ಸಾಧ್ಯತೆಗಳಿವೆ.

ನೀವು ಇದನ್ನು ಇಷ್ಟಪಡಬಹುದು: ಬಸವ ಕಲ್ಯಾಣದ ಶರಣರಿಗೆ ನಮಸ್ಕಾರ; ಬೀದರ್ ಕಡೆ ಹೋದರೆ ಈ 13 ಶರಣ ಸ್ಮಾರಕಗಳನ್ನು ನೋಡಿ ಬನ್ನಿ

  1. ಮುನ್ನಾರ್

ಕಾಫಿ ತೋಟಗಳು ಬರೀ ದಕ್ಷಿಣ ಭಾರತದಲ್ಲಿ ಅಷ್ಟೇ ಇವೆ ಎಂಬ ಅಂದಾಜು ನಿಮ್ಮದಾಗಿದ್ದರೆ ನೀವು ಮುನ್ನಾರದ ವಿಸ್ತಾರವಾಗಿ ಬೆಳೆದು ನಿಂತ ಚಹಾ ತೊಟಗಳನ್ನೊಮ್ಮೆ ನೋಡಬೇಕು. ಮೋಡಗಳ ಮಧ್ಯೆ ನಿಂತ ಈ ಬೆಟ್ಟದಲ್ಲಿ ಆಹ್ಲಾದಕರ ಪ್ರವಾಸವನ್ನು ಅನುಭವಿಸಬಹುದು. ಕೇರಳ ರಾಜ್ಯದ ಮುನ್ನಾರ್(munnar) ಮಾರ್ಚ್ ನಲ್ಲಿ ನೋಡಬಹುದಾದ ಮತ್ತೊಂದು ಮುಖ್ಯ ಸ್ಥಳ.

ಸ್ಥಳೀಯ ವಿಶೇಷತೆಗಳು: ಜಗತ್ ಪ್ರಸಿದ್ದ ಮುನ್ನಾರ್ ಟೀ ತೋಟಗಳಿಗೆ ಭೇಟಿ ಮತ್ತು ಸಸ್ಯಗಳ ಪರಿಚಯ, ಪಶ್ಚಿಮ ಘಟ್ಟಗಳಿಂದ ಸುತ್ತೂವರಿದ ಭವ್ಯ ಜಲಪಾತಗಳ ವೀಕ್ಷಣೆ, ಟ್ರೌಟ್ ಜಾತಿಯ ಮೀನುಗಳನ್ನು ಹಿಡಿಯಬಹುದು, ಮುನ್ನಾರಿನ ರಾಜಮಾಲ ಬೆಟ್ಟದಲ್ಲಿ ವಿಶಿಷ್ಟ ಪ್ರಾಣಿಯಾದ ಪರ್ವತ ಆಡುಗಳನ್ನು ಕಾಣಬಹುದು.

Munnar Emon's photography
Emon’s photography

ಆಹಾರ: ಕೇರಳ ಶೈಲಿಯ ಮಲಬಾರ ಪರೋಟ ಮೀನು ಮತ್ತಿತರ ಮಾಂಸಾಹಾರ ಸವಿಯಬಹುದು.

ಹವಾಮಾನ: ಮುನ್ನಾರಿನಲ್ಲಿ ಮಾರ್ಚ ತಿಂಗಳ ಹವಾಮಾನ ಸರಾಸರಿಯಾಗಿ 28 ಡಿಗ್ರಿ ಸೆಲ್ಸಿಯಸ್ ತಾಪಮಾನ ಇದ್ದು ಗರಿಷ್ಠ 35 ಡಿಗ್ರಿ ಸೆಲ್ಸಿಯಸ್ ಹಾಗೂ ಕನಿಷ್ಠ 19ಡಿಗ್ರಿ ಸೆಲ್ಸಿಯಸ್ ತಾಪಮಾನ ಇರುತ್ತದೆ.

ಹೋಗುವುದು ಹೇಗೆ: ಮುನ್ನಾರಿಗೆ ಸಮೀಪವಾಗುವ ಹತ್ತಿರದ ವಿಮಾನ ನಿಲ್ದಾಣ ಕೊಚ್ಚಿನ್ ಲ್ಲಿ ಇದೆ(110 ಕೀ. ಮಿ). ಅಲ್ಲಿಂದ ಟ್ಯಾಕ್ಸಿ ಹಾಗೂ ಬಸ್ ಹಿಡಿದು ಮುನ್ನಾರಿಗೆ ಹೋಗಬಹುದು.

  1. ಕೊಡೈಕೆನಾಲ್

ಕೊಡೈಕೆನಾಲ್ ನಲ್ಲಿ(kodaikanal) ಕಳೆದ ಒಂದು ದಶಕದಿಂದ ಪ್ರವಾಸಿಗರ ಒಳಹರಿವು ಹೆಚ್ಚಾದರೂ ಅದು ಕೊಡೈ ಎಂಬ ಭಾರಿ ಕೆರೆಯ ತಟದಲ್ಲಿ ತಪ್ತವಾಗಿ ಕುಳಿತು ಬಿಟ್ಟಿದೆ ಮತ್ತು ಸಾಕಷ್ಟು ಪ್ರವಾಸಿಗರ ಜನಸಂದಣಿಯಲ್ಲಿಯೂ ಈ ತಪ್ತತೆಯೇ ಅದನ್ನು ಇನ್ನಷ್ಟೂ ಮನಮೋಹಕವಾಗಿಸಿದೆ. ಅಲ್ಲಿ ಸಿಗುವ ಮಶ್ರೂಮ್ ಎಂಬ ಮಾದಕ ವಸ್ತುವಿನಿಂದ ಕುಖ್ಯಾತಿ ಪಡೆದರೂ ಅದನ್ನು ಹೊರತುಪಡಿಸಿ ಕೊಡೈಕೆನಾಲ್ ರಸವತ್ತಾದ ಜಾಗಗಳಿಂದ, ಮುಗಿಯದ ಚಾರಣಗಳಿಂದ ಮಾರ್ಚ್ ತಿಂಗಳ ಪ್ರವಾಸಕ್ಕೆ ಬಹುಮುಖ್ಯ ಸ್ಥಳವಾಗಿದೆ.

ಸ್ಥಳೀಯ ವಿಶೇಷತೆಗಳು: ಸ್ಥಳೀಯವಾಗಿ ಸೂಸೈಡ್ ಪಾಯಿಂಟ್ ಎಂದು ಕರೆಯಲ್ಪಡುವ ಗ್ರೀನ್ ವ್ಯಾಲಿಯ ತನಕ ಚಾರಣ, ಕೊಡೈಕೆನಾಲ್ ಇಂದ 8 ಕೀ. ಮೀ ದೂರ ಇರುವ ಪಿಲ್ಲರ್ ರಾಕ್ ನಲ್ಲಿ ಪಿಕ್ನಿಕ್, ಬೇರ್ ಶೋಲಾ ಫಾಲ್ಸ್ ನ ವಿಹಂಗಮ ದೃಶ್ಯವನ್ನು ಆಸ್ವಾದಿಸಬಹುದು.

Kodaikanal cprogrammer

ಆಹಾರ: ಇಲ್ಲಿ ಸಮೃದ್ಧಿಯಾಗಿ ಕಾಣಸಿಗುವ ಕೆಫೆಗಳ ಕಾರಣದಿಂದ ಇಲ್ಲಿ ದೊರೆಯುವ ಆಹಾರ ಸಾಮಾನ್ಯವಾಗಿ ಪಾಶ್ಚಾತ್ಯವಾಗಿದ್ದು ಅವುಗಳನ್ನು ಸವಿಯಬಹುದು.

ಹವಾಮಾನ: ಕೊಡೈಕೆನಾಲ್ ನಲ್ಲಿ ಹವಾಮಾನ ಸರಾಸರಿಯಾಗಿ 27 ಡಿಗ್ರಿ ಸೆಲ್ಸಿಯಸ್ ಇದ್ದು ಗರಿಷ್ಠ 36 ಹಾಗೂ ಕನಿಷ್ಠ 20 ಡಿಗ್ರಿ ಸೆಲ್ಸಿಯಸ್ ತಾಪಮಾನ ಇರುತ್ತದೆ.

ಹೋಗುವುದು ಹೇಗೆ: ಕೊಯಂಬತ್ತೂರು ತನಕ ವಿಮಾನದಲ್ಲಿ ಹೋಗಿ ಅಲ್ಲಿಂದ ಟ್ಯಾಕ್ಸಿಯಲ್ಲಿ ಐದು ಗಂಟೆಯ ಪ್ರಯಾಣ ಮಾಡಿದರೆ ಕೊಡೈಕೆನಾಲ್ ತಲುಪಬಹುದು.

  1. ಲೇಹ್

ಲೇಹ್!!(leh) ಉತ್ತರ ಭಾರತದ ಪರ್ವತ ಶಿಖರಗಳ ರಮಣೀಯತೆಯನ್ನ, ಇಕ್ಕಟ್ಟಾದ ದಾರಿಗಳ ರೌದ್ರತೆಯನ್ನ ತನ್ನಲ್ಲಿ ಅಡಗಿಸಿಟ್ಟುಕೊಂಡ ತಾಣ. ಅಲ್ಲಿ ಪ್ರವಾಸಿಗರಿಗೆ ಆತಿಥ್ಯ ನೀಡುವ ಆಲ್ಲಿಯ ಜನರ ಮುಗ್ಧತೆ ಲೇಹ್ ಪಟ್ಟಣವನ್ನು ಇನ್ನೂ ಚೆಂದಗೊಳಿಸಿದೆ. ಲೇಹನ ಮಠಗಳು ಮತ್ತು ಸ್ತೂಪಗಳು ಆಪ್ತವಾದ ಪ್ರಶಾಂತತೆಯನ್ನೂ ಒದಗಿಸುತ್ತವೆ. ಲೇಹ್ ಜಿಲ್ಲೆ ಕಿರಿದಾದುದರಿಂದ ಮತ್ತು ಹನ್ನೊಂದು ಸಾವಿರ ಅಡಿಯ ಮೇಲಿರುವದರಿಂದ ಮುಂಚಿತವಾದ ತಯಾರಿಯನ್ನು ಬಯಸುತ್ತದೆ.

ಸ್ಥಳೀಯ ವಿಶೇಷತೆಗಳು: ಅಲ್ಲಿನ ತಿಕ್ಸೇ ಹಾಗೂ ಸ್ಪಿತುಕ್ ಮಠಗಳ ವೀಕ್ಷಣೆ, ಪಾಂಗೊಂಗ್ ಸರೋವರದ ಅದ್ಭುತ ನೋಟವನ್ನ ಆಸ್ವಾದಿಸಬಹುದು, ಗುರುದ್ವಾರ ಪಠಾರ ಸಾಹಿಬ್ ಅಲ್ಲಿ ಪ್ರಾರ್ಥನೆಯನ್ನು ಸಲ್ಲಿಸಬಹುದು.

Leh roman korzh
roman korzh

ಆಹಾರ: ಅಲ್ಲಿನ ಸ್ಥಳೀಯ ಖಾದ್ಯವಾದ ಟೀಮೋವನ್ನು ಸವಿಯಬಹುದು.

ಹವಾಮಾನ: ಲೇಹ್ ಹಿಮಪರ್ವತದಲ್ಲಿರುವದರಿಂದ ಅಲ್ಲಿನ ಸರಾಸರಿ ಹವಾಮಾನ 0 ಡಿಗ್ರಿ ಸೆಲ್ಸಿಯಸ್ ಇದ್ದು ಗರಿಷ್ಠ 6 ಹಾಗೂ ಕನಿಷ್ಠ -6 ಡಿಗ್ರಿ ಸೆಲ್ಸಿಯಸ್ ತಾಪಮಾನ ಇರುತ್ತದೆ.

ಹೋಗುವುದು ಹೇಗೆ: ಎಲ್ಲ ಮುಖ್ಯ ವಿಮಾನ ನಿಲ್ದಾಣದಿಂದ ಲೇಹಗೆ ಹೋಗಲು ವಿಮಾನಗಳಿವೆ.

  1. ಶಿಲ್ಲಾಂಗ್

ಈಶಾನ್ಯ ಭಾರತದ ಪುಟ್ಟ ರಾಜ್ಯವಾದ ಮೇಘಾಲಯದ ರಾಜಧಾನಿ ಶಿಲ್ಲಾಂಗ್(shillong) ಪ್ರವಾಸಿಗರಿಗೆ ಒಂದು ಬೇರೆಯದೇ ಜಗತ್ತು. ವರ್ಷ ಪೂರ್ತಿ ಬಿಟ್ಟು ಬಿಡದೆ ಮಳೆ ಸುರಿದರೂ ಮಾರ್ಚ್ ತಿಂಗಳು ಅಲ್ಲಿನ ಮಳೆರಾಯ ವಿಶ್ರಾಂತಿ ಬಯಸುವ ಸಮಯ. ನೋಡಲು ವಿಶಿಷ್ಟವಾದ ಆಧುನಿಕ ಶಹರದಂತೆ ಕಂಡರೂ ಸಹಿತ ಅದರೆಲ್ಲ ಜೀವಾಳ ವಸಾಹತುಶಾಹಿ ಕಾಲದ ವಾಸ್ತಶಿಲ್ಪದಲ್ಲೆ ಕಾಣಬಹುದಾಗಿದೆ. ಅದು ಈಗಲೂ ಕೆಲ ಜಾಗಗಳಲ್ಲಿ ಪ್ರಚಲಿತವಾಗಿದೆ. ಶಿಲ್ಲಾಂಗ್ ಮಾರ್ಚ್ ನಲ್ಲಿ ಖಂಡಿತವಾಗಿಯೂ ನೋಡಬಹುದಾದ ಒಂದು ವಿಶಿಷ್ಠ ಸ್ಥಳ.

Shillong swarnendu biswas

ಸ್ಥಳೀಯ ವಿಶೇಷತೆಗಳು: ಶಿಲ್ಲಾಂಗ್ ಶಿಖರದಲ್ಲಿ ಗೆಳೆಯರೊಡನೆ ಪಿಕ್ನಿಕ್, ಶಿಲ್ಲಾಂಗ್ ನಿಂದ 17 ಕಿ.ಮೀ ದೂರದಲ್ಲಿರುವ ಬರಪಾನಿ ಸರೋವರದಲ್ಲಿ ರಾಫ್ಟಿಂಗ್, ಉಮಿಯಮ್ ಸರೋವರದಲ್ಲಿ ಕ್ಯಾಟ್ ಫಿಶ್ ಮತ್ತು ಗೋಲ್ಡನ್ ಕಾರ್ಪ್ ಮೀನುಗಳನ್ನು ಹಿಡಿಯಬಹುದು, ಶಿಲ್ಲಾಂಗ್ ಇಂದ 10 ಕೀ. ಮೀ ದೂರದಲ್ಲಿರುವ ಬೆಟ್ಟಕ್ಕೆ ಚಾರಣ ಹೋಗಿ ಅಲ್ಲಿಂದ ಶಿಲ್ಲಾಂಗ್ ನಗರವನ್ನು ಗಮನಿಸಬಹುದು. ಸ್ಥಳೀಯ ಸಂಸ್ಕತಿ ಮತ್ತು ಸಂಪ್ರದಾಯಗಳನ್ನ ಡಾನ್ ಬಾಸ್ಕೋ ಸ್ಥಳೀಯ ಸಂಸ್ಕೃತಿ ಕೇಂದ್ರ ದಲ್ಲಿ ಅನ್ವೇಷಿಸಬಹುದು.

ಆಹಾರ: ಮೇಘಾಲಯ ಮಂಗೋಲಾಯ್ಡ್ ಬುಡಕಟ್ಟು ಜನರ ಮನೆಯಾದರಿಂದ ಇಲ್ಲಿನ ಖಾದ್ಯ ಉಳಿದ ಈಶಾನ್ಯ ಭಾರತದ ರಾಜ್ಯಗಳಿಗೆ ಹೋಲಿಸಿದರೆ ಸ್ವಲ್ಪ ಭಿನ್ನ. ಇಲ್ಲಿ ಮಸಾಲೆಭರಿತ ಮಾಂಸ ಹಾಗು ಮೀನುಗಳಿಗೆ ಹೆಚ್ಚಿನ ಪ್ರಾಮುಖ್ಯತೆ.

ಹವಾಮಾನ: ಶಿಲ್ಲಾಂಗ್ ನಲ್ಲಿ ಸರಾಸರಿಯಾಗಿ 18 ಡಿಗ್ರಿ ಸೆಲ್ಸಿಯಸ್ ತಾಪಮಾನ ಇದ್ದು ಗರಿಷ್ಠ 26 ಡಿಗ್ರಿ ಸೆಲ್ಸಿಯಸ್ ಹಾಗೂ ಕನಿಷ್ಠ 10 ಡಿಗ್ರಿ ಸೆಲ್ಸಿಯಸ್ ತಾಪಮಾನ ಇರುತ್ತದೆ.

ಹೋಗುವುದು ಹೇಗೆ: ಶಿಲ್ಲಾಂಗ್ ಹತ್ತಿರದ ವಿಮಾನ ನಿಲ್ದಾಣ ಅಲ್ಲಿಂದ 40 ಕೀ. ಮೀ ದೂರ ಇರುವ ಉಮ್ರಾಯ್ ಪಟ್ಟಣದಲ್ಲಿದೆ.

ಇಲ್ಲಿಗೆ ದಿಲ್ಲಿ, ಅಹಮದಾಬಾದ್, ಬೆಂಗಳೂರು ಮತ್ತು ಐಜಾಲ್ ನಗರಗಳಿಂದ ನೇರವಾಗಿ ನಿಯಮಿತ ವಿಮಾನಗಳಿವೆ

  1. ಹ್ಯಾವ್ಲಾಕ್ ಐಲ್ಯಾಂಡ್

ಪ್ರಾಚೀನ ಕಡಲ ತೀರಗಳಿಗೆ ಹೆಸರುವಾಸಿಯಾದ ಹ್ಯಾವ್ಲಾಕ್ ದ್ವೀಪ(havelock island) ಒಂದು ಉನ್ನತ ಸಮುದ್ರ ತೀರದ ಅನುಭವವನ್ನು ಒದಗಿಸುತ್ತದೆ. ಕಡಲ ಅಲೆಗಳನ್ನ ವೀಕ್ಷಿಸುತ್ತಾ ದಿನ ನಿತ್ಯದ ಜಂಜಾಟವನ್ನು ಮರೆತು ತುಸು ಆರಾಮಿಸಬಹುದು.

ಸ್ಥಳೀಯ ವಿಶೇಷತೆಗಳು: ನೀಲ್ಸ ಕೊವ್ ಕಡಲ ತೀರದಲ್ಲಿ ಸ್ಕೂಬಾ ಡೈವಿಂಗ್ ಮಾಡಬಹುದು ಮತ್ತು ಅಲ್ಲಿಯ ಸಮುದ್ರದೊಳಗಿನ ವಿಶೇಷ ಮತ್ಸ್ಯ ಜಗತ್ತನ್ನು ಅನ್ವೇಷಿಸಬಹುದು.ಜಪನೀಸ್ ಬೆಟ್ಟವನ್ನು ಹತ್ತಿ ಚಾರಣ ಹೋಗಬಹುದು. ಅಲ್ಲಿನ ಎಲಿಫೆಂಟ್ ಬೀಚಲ್ಲಿ ಸ್ನೋರ್ಕೆಲ್ ಅನುಭವವನ್ನ ಪಡೆಯಬಹುದು.

Havelock Island swarnendu biswas

ಆಹಾರ: ಅಲ್ಲಿನ ಕಡಲ ತಿನಿಸುಗಳನ್ನ ಸವಿಯಬಹುದು ಮುಖ್ಯವಾಗಿ ಸೀಗಡಿ ಹಾಗೂ ವಿಶಿಷ್ಟ ವುಡ್ ಫೈರೆಡ್ ಪಿಜ್ಜಾವನ್ನ ಸವಿಯಬಹುದು.

ಹವಾಮಾನ: ಇಲ್ಲಿಯ ಹವಾಮಾನ ಸರಾಸರಿಯಾಗಿ 26 ಡಿಗ್ರಿ ಸೆಲ್ಸಿಯಸ್ ಇದ್ದು ಗರಿಷ್ಠ 31 ಡಿಗ್ರಿ ಸೆಲ್ಸಿಯಸ್ ಹಾಗೂ ಕನಿಷ್ಠ 22 ಡಿಗ್ರಿ ಸೆಲ್ಸಿಯಸ್ ತಾಪಮಾನ ಇರುತ್ತದೆ.ಹೋಗುವುದು ಹೇಗೆ: ಹ್ಯಾವ್ಲಾಕ್ ದ್ವೀಪಕ್ಕೆ ಬರೀ ವಿಮಾನ ಯಾನದಿಂದ ಅಷ್ಟೇ ಹೋಗಲು ಸಾಧ್ಯ. ಅಂಡಮಾನ್ ನಲ್ಲಿರುವ ಪೋರ್ಟ್ ಬ್ಲೇರ್ ವಿಮಾನ ನಿಲ್ದಾಣದಿಂದ ಫೆರಿಯ ಮೂಲಕ ಹ್ಯಾವ್ಲಾಕ್ ತಲುಪಬಹುದು.

ನಾವೂ ಟೆಲಿಗ್ರಾಮ್ ನಲ್ಲೂ ಇದ್ದೀವಿ! ಕನ್ನಡ.ಟೆಲಿಗ್ರಾಮ್ ಗ್ರೂಪ್ ಜಾಯಿನ್ ಆಗಿ. 

ನೀವು ಪ್ರವಾಸ ಹೋಗುವ ತಾಣದ ಮಾಹಿತಿ, ಕನ್ನಡ.ಟ್ರಾವೆಲ್ (Kannada.Travel) ಜಾಲತಾಣದಲ್ಲಿ ಪ್ರಕಟವಾಗುವ ಬರಹಗಳ ವಿವರ, ಅಪರೂಪದ ಟ್ರಾವೆಲರ್ ಗಳ ಪರಿಚಯ, ಪ್ರವಾಸಿ ತಾಣಗಳ ಕುತೂಹಲಕರ ಚಿತ್ರ, ಬರಹ ಎಲ್ಲವೂ ಇಲ್ಲಿ ನಿಮಗೆ ಸಿಗುತ್ತದೆ. ಬನ್ನಿ ಜೊತೆಯಾಗಿ

Related Articles

Leave a Reply

Your email address will not be published. Required fields are marked *

Back to top button