ಇವರ ದಾರಿಯೇ ಡಿಫರೆಂಟುಬೆರಗಿನ ಪಯಣಿಗರುವಿಂಗಡಿಸದಸ್ಫೂರ್ತಿ ಗಾಥೆ

ಹುಡುಗಿಯರು ಒಂಟಿಯಾಗಿ ಪ್ರವಾಸ ಹೋಗುವುದು ಹೇಗೆ: ಮಾದರಿ ಸೋಲೋ ಟ್ರಾವೆಲರ್ ಮೈಸೂರಿನ ಉಷಾ ಎನ್ ಸಂದರ್ಶನ

#ಮಹಿಳಾ ದಿನ ವಿಶೇಷ

ಬಹುತೇಕ ಹುಡುಗಿಯರಿಗೆ ಸೋಲೋ ಟ್ರಾವೆಲ್ ಮಾಡಬೇಕು ಅನ್ನುವ ಆಸೆ ಇರುತ್ತದೆ. ಆದರೆ ಅದು ಸಾಧ್ಯವಾಗಿರುವುದಿಲ್ಲ. ಕಸ್ತೂರಬಾ ವೈದ್ಯಕೀಯ ಕಾಲೇಜಿನಲ್ಲಿ ರಿಸರ್ಚ್ ಅಸಿಸ್ಟೆಂಟ್ ಆಗಿ ಕೆಲಸ ಮಾಡುವ ಮೈಸೂರಿನ ಉಷಾ ಅವರು ಪ್ರತೀ ವಾರಾಂತ್ಯ ಸೋಲೋ ಟ್ರಾವೆಲ್ ಮಾಡುತ್ತಾರೆ. ಹುಮ್ಮಸ್ಸು ಮತ್ತು ಧೈರ್ಯದ ಪ್ರತೀಕದಂತಿರುವ ಉಷಾ ಅವರು ಹುಡುಗಿಯರು ಸೋಲೋ ಟ್ರಾವೆಲ್ ಹೇಗೆ ಮಾಡಬಹುದು ಅಂತ ತಿಳಿಸಿಕೊಟ್ಟ ಸಂದರ್ಶನ.

  • ಪದ್ಮರೇಖಾ ಭಟ್

ಮೊದಲಿಂದಲೂ ನಮ್ಮ ದೇಶದಲ್ಲಿ ಮನೆಯಿಂದ ಹೊರಗೆ ಹೊರಡುವ ವಿಚಾರದಲ್ಲಿ ಹುಡುಗರಿಗೆ ಇರುವಷ್ಟು ಸ್ವಾತಂತ್ರ್ಯ ಹುಡುಗರಿಗೆ ಇಲ್ಲ ಎನ್ನುವ ದೂರು ಇದೆ. ಆದರೆ ಇಲ್ಲೊಬ್ಬ ಸಾಧಕಿಯ ಟ್ರಾವೆಲಿಂಗ್ ಕ್ರೇಜ್ ಹುಡುಗರಿಗೆ ಹೊರತಾಗಿಲ್ಲ ಎನ್ನುವುದನ್ನು ಸಮಾಜಕ್ಕೆ ತೊರಿಸಿ ಕೊಟ್ಟಿದೆ. ಈ ಸಾಧಕಿಯ ಹೆಸರು ಉಷಾ ಎನ್. 

ಮೈಸೂರಿನವರಾದ ಉಷಾ ಪ್ರಸ್ತುತ ಕಸ್ತೂರಬಾ ವೈದ್ಯಕೀಯ ಕಾಲೇಜಿನಲ್ಲಿ ರಿಸರ್ಚ್ ಅಸಿಸ್ಟೆಂಟ್ ಆಗಿಯೂ ಹಾಗೂ ಟ್ರಾವೆಲ್ ಗೈಡ್ ಕೂಡ ಆಗಿದ್ದಾರೆ. ಮನಸ್ಸಿನ ಮೂಲೆಯಲ್ಲಿ ಅಡಗಿದ್ದ ಟ್ರಾವೆಲಿಂಗ್ ಎನ್ನುವ ಆಸೆಗೆ ಪೋಷಕರಿಂದ ಪ್ರೋತ್ಸಾಹ ಸಿಕ್ಕಾಗ ಬಹಳ ಚಾಕಚಕ್ಯತೆಯಿಂದ ವಿದ್ಯಾಭ್ಯಾಸದ ಜೊತೆಗೆ ಸಿಕ್ಕ ಪ್ರತಿಯೊಂದು ಅವಕಾಶವನ್ನು ಬಳಸಿಕೊಂಡು ಈ ಹವ್ಯಾಸವನ್ನ ಬೆಳೆಸಿಕೊಂಡಿದ್ದಾರೆ. ಪ್ರತಿ ವಾರಾಂತ್ಯ ಒಂದಾದರೂ  ಸೋಲೋ ಟ್ರೆಕ್ಕಿಂಗ್ ಅಥವಾ ಟ್ರಿಪ್ ಅನ್ನು ಕೈಗೊಳ್ಳುವ ಈ ದಿಟ್ಟ ಮಹಿಳೆ ಎದುರಿಸಿದ ಸಮಸ್ಯೆಗಳು ಹಲವಾರು. ಆದರೆ ದೇಶ ಸುತ್ತು ವ ಆಸೆ ಹಾಗೂ ಸಮಸ್ಯೆಗಳನ್ನು ಎದುರಿಸುವ ಧೈರ್ಯ ಇವತ್ತು ಇವರನ್ನು ಸೋಲೋ ಲೇಡಿ ಟ್ರಾವೆಲರ್ ಮತ್ತು ಟ್ರೆಕ್ಕರ್ ಆಗಿ ಜನಪ್ರಿಯವಾಗಿಸಿದೆ.

ನೀವು ಇದನ್ನು ಇಷ್ಟಪಡಬಹುದು: ಮಾನಸ ಸರೋವರ, ಕಿಲಿಮಂಜಾರೋ ಏರಿದ ಸಾಹಸಿ ಗೃಹಿಣಿ ಬೆಂಗಳೂರಿನ ವಾರುಣಿ

“ಲೈಫ್ ಇಸ್ ಫುಲ್ ಆಫ್ ಆಪಾರ್ಚುನಿಟಿ” ಎಂದು ನಂಬಿರುವ ಉಷಾ, ಸೋಲೋ ಟ್ರಾವೆಲಿಂಗ್ ಕನಸು ಇದ್ದರೂ ಭಯಪಡುವ ಹೆಣ್ಣು ಮಕ್ಕಳಿಗೆ ಸ್ಫೂರ್ತಿಯಾಗಿದ್ದಾರೆ. ಮಹಿಳಾ ದಿನಕ್ಕೆ ಉಷಾ ಅವರನ್ನು ಸಂದರ್ಶಿಸಿದಾಗ ಸೋಲೋ ಟ್ರಾವೆಲರ್ಸ್ ಗಳಿಗೆ ಸಾಕಷ್ಟು ಸಲಹೆಗಳನ್ನು ಇವರು ನೀಡಿದ್ದಾರೆ.

1.    ಸೋಲೋ ಟ್ರಾವೆಲಿಂಗ್ ಮಾಡುವ ಮೊದಲಿನ ತಯಾರಿ ಹೇಗಿರಬೇಕು?

ಸೋಲೋ ಟ್ರಾವೆಲರ್ಸ್ ಗೆ ಮೊದಲು ಬೇಕಾಗುವುದು ಮೋಟಿವೇಶನ್ ಹಾಗು ಧೈರ್ಯ. ಇದರ ಜೊತೆಗೆ ಹೋಗುತ್ತಿರುವ ಜಾಗದ ಬಗ್ಗೆ ಸಾಧ್ಯವಾದಷ್ಟು ಮಾಹಿತಿಗಳನ್ನು ಬೇರೆ ಬೇರೆ ರೀತಿಯಲ್ಲಿ ಕಲೆಹಾಕ ಬೇಕಾಗುತ್ತದೆ. ಸೆಲ್ಫ್ ಡೌವ್ಟ್ ಅನ್ನುವುದು ಸೋಲೋ ಟ್ರಾವೆಲರ್ಸ್ ಗಳಲ್ಲಿ ಇರಬಾರದು.

2.    ಸೋಲೋ ಟ್ರಾವೆಲಿಂಗ್ ಮಾಡುವ ಮೊದಲು ತೆಗೆದುಕೊಳ್ಳಬೇಕಾದ ಮುನ್ನೆಚ್ಚರಿಕೆ ಕ್ರಮಗಳು!

ಟ್ರಾವೆಲಿಂಗ್ ಮಾಡುವ ಮೊದಲು ಹೋಟೆಲ್ ಅಥವಾ ಉಳಿಯುವ ವ್ಯವಸ್ಥೆಯನ್ನು ಆದಷ್ಟು ಮೊದಲೆ ಪ್ಲಾನ್ ಮಾಡಿಕೊಳ್ಳಿ. ಹುಡುಗಿಯರು ತಮ್ಮ ರಕ್ಷಣೆಗೆ ಚಾಕು ಅಥವಾ ಪೆಪ್ಪರ್ ಸ್ಪ್ರೇಯನ್ನು ಇಟ್ಟುಕೊಳ್ಳಿ. ಬಹಳ ಅವಶ್ಯ ಇರುವ ಔಷಧಿಗಳನ್ನು ಇಟ್ಟುಕೊಳ್ಳಿ. ಆದಷ್ಟು ಕಡಿಮೆ ಬಟ್ಟೆ ಹಾಗೂ ವಸ್ತುಗಳಲ್ಲಿ ನಿಮ್ಮ ಪ್ರವಾಸವನ್ನು ನಿಭಾಯಿಸಿ. ನಿಮ್ಮ ಆಹಾರ ಕ್ರಮವನ್ನು ಆದಷ್ಟು ಆರೋಗ್ಯ ಕಾಪಾಡಿಕೊಳ್ಳುವ ರೀತಿಯಲ್ಲಿ ರೂಢಿ ಮಾಡಿಕೊಳ್ಳಿ.

3.    ಪ್ರವಾಸ ಮಾಡುವಾಗ ಆದಷ್ಟು ಕಡಿಮೆ ಪ್ಲಾಸ್ಟಿಕ್ ಬಳಕೆ ಸಾಧ್ಯವೇ?

ಖಂಡಿತವಾಗಿಯೂ ಸಾಧ್ಯ. ಆದಷ್ಟು ವಸ್ತುಗಳನ್ನು ಮಾರುಕಟ್ಟೆಯಲ್ಲಿ ಸಿಗುವ ಆರ್ಗನೈಜರ್ಸ್ ಗಳನ್ನು ಬಳಸಿ ಕೊಂಡೊಯ್ಯಬೇಕು. ಆದಷ್ಟು ಪ್ಲಾಸ್ಟಿಕ್ ಬಾಟಲಿ ಹಾಗೂ ಕವರ್ಗಳನ್ನು ಬಳಸದೆ, ನಿಮ್ಮದೆ ಬಾಟಲಿಗಳನ್ನು ಹಾಗೂ ಬಟ್ಟೆ ಬ್ಯಾಗ್ ಅನ್ನು ಬಳಸಿ.

4.    ಸೋಲೋ ಟ್ರಾವೆಲಿಂಗ್ ಸಮಯದಲ್ಲಿ ಮಹಿಳೆಯರ ಆರೋಗ್ಯ ಹಾಗೂ ನೈರ್ಮಲ್ಯ (hygiene) ಹೇಗೆ ಕಾಪಾಡಿಕೊಳ್ಳಬೇಕು?

ಮಹಿಳೆಯರು ಎಂದಮೇಲೆ ಋತುಸ್ರಾವ ಹಾಗೂ ಇತರ ಸಮಸ್ಯೆಗಳು ಎದುರಾಗುತ್ತವೆ. ಹಾಗಾಗಿ ಸ್ಯಾನಿಟರಿ ಕಿಟ್ ಎಂದರೆ ಮೆನ್ ಸ್ಟ್ರುವಲ್ ಕಪ್, ಪ್ಯಾಂಟಿ ಲೈನರ್ಸ್, ಹಾಗೂ ಸ್ಯಾನಿಟರಿ ಪ್ಯಾಡ್ ಗಳನ್ನು ಇಟ್ಟುಕೊಳ್ಳುವುದು ಒಳ್ಳೆಯದು. ಇದರ ಜೊತೆಗೆ ಡೆಟಾಲ್ ಮತ್ತು ಅಗತ್ಯ ಔಷಧಿಗಳನ್ನು ಒಯ್ಯುವುದು.

5.    ಸೋಲೋ ಟ್ರಾವೆಲಿಂಗ್ ಎನ್ನುವ ಕನಸನ್ನು ಕಾಣುತ್ತಾ ಯಾವುದೋ ಅಂಜಿಕೆ ಇಂದ ಹಿಂದೆ ಸರಿಯುವ ಮಹಿಳೆಯರಿಗೆ ನಿಮ್ಮ ಸಂದೇಶ ಏನು?

ಹೆದರಿಕೆ, ಸೋಲು ಪ್ರತಿಯೊಬ್ಬರಿಗೂ ಹೆಣ್ಣಿಗೂ ಸಹಜ ಆದರೆ ಅವಕಾಶಗಳು  ಸಿಕ್ಕಾಗ ಅವುಗಳನ್ನು ಉಪಯೋಗಿಸಿಕೊಳ್ಳಬೇಕು. ಸ್ಥೈರ್ಯ ಹಾಗೂ ಮನಸ್ಸೊಂದಿದ್ದರೆ ಯಾರು ಬೇಕಾದರೂ ಸೋಲೋ ಟ್ರಾವೆಲಿಂಗ್ ಮಾಡಬಹುದು. ಲಿಂಗ ಎನ್ನುವ ಭೇದವಿಲ್ಲದೆ ಗುರಿಯನ್ನು ತಲುಪುವ ಕಡೆಗೆ ನಮ್ಮ ಗಮನ ಇರಬೇಕು.

6.    ಮಹಿಳಾ ದಿನಾಚರಣೆಯ ಪ್ರಯುಕ್ತ ಎಲ್ಲರಿಗೂ ನೀವು ಏನನ್ನು ತಿಳಿಸಲು ಬಯಸುತ್ತೀರಿ?

ಜೀವನ ಎನ್ನುವುದು ಅನುಭವಗಳ ಸಾಗರ. ಪ್ರತಿಯೊಂದು ಅನುಭವಗಳು ಒಂದೊಂದು ಪಾಠವನ್ನು ಕಲಿಸುತ್ತದೆ. ಟ್ರಾವೆಲಿಂಗ್ ಎನ್ನುವುದು ಜೀವನದಲ್ಲಿ ದೈಹಿಕವಾಗಿ ಹಾಗೂ ಮಾನಸಿಕವಾಗಿ ಸಂಕೀರ್ಣವಾಗಲು ಸಿಗುವ ಅವಕಾಶ. ಈ ಅನುಭವದಲ್ಲಿ ಆಡಂಬರವನ್ನು (luxury) ಬಯಸದೆ, ಸಂದರ್ಭಕ್ಕೆ ಹೊಂದಿಕೊಳ್ಳುವ ಸಾಮರ್ಥ್ಯವನ್ನು ಬೆಳೆಸಿಕೊಳ್ಳಿ. ಆದಷ್ಟು ಭಾಷೆಗಳನ್ನು ಕಲಿಯಿರಿ, ಭಿನ್ನವಾದ ಸಂಸ್ಕೃತಿ, ಜನಾಂಗ ಹಾಗೂ ಪರಿಸರದ ಬಗ್ಗೆ ಅರಿಯಲು ಹಾಗೂ ಆತ್ಮಸ್ಥೈರ್ಯವನ್ನು ಹೆಚ್ಚಿಸಿಕೊಳ್ಳಲು ಸೋಲೋ ಟ್ರಾವೆಲಿಂಗ್ ಹಾಗೂ ಟ್ರಾವೆಲಿಂಗ್ ಸಹಾಯಕವಾಗಿದೆ.

ನಾವೂ ಟೆಲಿಗ್ರಾಮ್ ನಲ್ಲೂ ಇದ್ದೀವಿ! ಕನ್ನಡ.ಟೆಲಿಗ್ರಾಮ್ ಗ್ರೂಪ್ ಜಾಯಿನ್ ಆಗಿ. 

ನೀವು ಪ್ರವಾಸ ಹೋಗುವ ತಾಣದ ಮಾಹಿತಿ, ಕನ್ನಡ.ಟ್ರಾವೆಲ್ (Kannada.Travel) ಜಾಲತಾಣದಲ್ಲಿ ಪ್ರಕಟವಾಗುವ ಬರಹಗಳ ವಿವರ, ಅಪರೂಪದ ಟ್ರಾವೆಲರ್ ಗಳ ಪರಿಚಯ, ಪ್ರವಾಸಿ ತಾಣಗಳ ಕುತೂಹಲಕರ ಚಿತ್ರ, ಬರಹ ಎಲ್ಲವೂ ಇಲ್ಲಿ ನಿಮಗೆ ಸಿಗುತ್ತದೆ. ಬನ್ನಿ ಜೊತೆಯಾಗಿ

Related Articles

Leave a Reply

Your email address will not be published. Required fields are marked *

Back to top button