ಇವರ ದಾರಿಯೇ ಡಿಫರೆಂಟುಬೆರಗಿನ ಪಯಣಿಗರುವಿಂಗಡಿಸದಸ್ಫೂರ್ತಿ ಗಾಥೆ

ಮಾನಸ ಸರೋವರ, ಕಿಲಿಮಂಜಾರೋ ಏರಿದ ಸಾಹಸಿ ಗೃಹಿಣಿ ಬೆಂಗಳೂರಿನ ವಾರುಣಿ

#ಮಹಿಳಾ ದಿನ ವಿಶೇಷ

ಮನಸ್ಸು ಮಾಡಿದರೆ ಆಗದೇ ಇರುವುದು ಯಾವುದೂ ಇಲ್ಲ. ಬೆಂಗಳೂರಿನ ಗೃಹಿಣಿ ವಾರುಣಿ ಮಾನಸ ಸರೋವರ ಯಾತ್ರೆ ಮಾಡಿ ಬಂದವರು, ದಕ್ಷಿಣ ಆಫ್ರಿಕಾದ ಕಿಲಿಮಂಜಾರೋ ಪರ್ವತವನ್ನು ಕೇವಲ 11 ಗಂಟೆಯಲ್ಲಿ ಏರಿದವರು. ಧೈರ್ಯ, ಮನಸ್ಸು ಮಾಡಿದರೆ ಏನು ಬೇಕಾದರೂ ಸಾಧಿಸಬಹುದು ಎಂದು ತೋರಿಸಿದ ವಾರುಣಿಯವರ ಸ್ಫೂರ್ತಿಕತೆ.

  • ನವ್ಯಶ್ರೀ ಶೆಟ್ಟಿ 

ಸಾಮಾನ್ಯವಾಗಿ ಬಹುತೇಕರು ಮದುವೆಯಾದರೆ ಜೀವನ ಮುಗಿಯಿತು ಎನ್ನುತ್ತಾರೆ. ಗಂಡ ಮಕ್ಕಳು ಎನುತ್ತಾ ಜೀವನ ಸಾಗಿಸುತ್ತಾರೆ. ಹಾಗಾಗಿಯೇ ಹೊರಗಿನ ಜಗತ್ತು ಕೆಲವು ಹೆಣ್ಣು ಮಕ್ಕಳ ಪಾಲಿಗೆ ಅಪರೂಪವಾಗಿ ತೆರೆದುಕೊಳ್ಳುವ ಬಾಗಿಲಿದ್ದಂತೆ ಎನ್ನುವ ಮಾತಿದೆ. ಇದನ್ನು ಸುಳ್ಳಾಗಿಸಿ ಹಲವು ಮಹಿಳೆಯರು ಸಾಧಿಸಿ ತೋರಿಸಿದ್ದಾರೆ. ಇಲ್ಲೊಬ್ಬ ಕನ್ನಡತಿ ತಮಗೆ ಮೂವರು ಮಕ್ಕಳಾದ ಮೇಲೆ ಕೂಡ ಪತಿಯ ಬೆಂಬಲದಿಂದ ಅತಿ ಎತ್ತರದ, ಕ್ಲಿಷ್ಟಕರ ಶಿಖರಗಳನ್ನು ಏರಿ ಮಹಿಳೆಯಿಂದ ಅಸಾಧ್ಯವಾದುದು ಯಾವುದು ಇಲ್ಲ ಎಂದು ತೋರಿಸಿ ಕೊಟ್ಟಿದ್ದಾರೆ. ಮಹಿಳೆಯ ದಿನಾಚರಣೆಯ ವಿಶೇಷವಾಗಿ ನಾವಿಂದು ಒಬ್ಬ ಮಹಿಳಾ ಸಾಧಕಿಯನ್ನು ಪರಿಚಯಿಸುತ್ತಿದ್ದೇವೆ. 

 ಆ ಮಹಿಳಾ ಸಾಧಕಿಯ ಹೆಸರು ವಾರುಣಿ ನರೇಂದ್ರ ಎಸ್. ಅಪ್ಪಟ ಕನ್ನಡತಿ. ಮೂಲತಃ ತೀರ್ಥಹಳ್ಳಿಯವರು. ಪ್ರಸ್ತುತ ಬೆಂಗಳೂರು ನಿವಾಸಿ. ಟ್ರಕ್ಕಿಂಗ್ ಮೇಲೆ ಆಸಕ್ತಿ. ಪತಿಯ ಸಹಕಾರ ಶಿಖರ ಏರಲು ಸ್ಫೂರ್ತಿ. ವಾರುಣಿ ಅವರ ಪತಿ ನರೇಂದ್ರ ಅವರಿಗೆ ಟ್ರೆಕ್ಕಿಂಗ್ ಎಂದರೆ ಬಹು ಇಷ್ಟ. ಟ್ರೆಕ್ಕಿಂಗ್ ಮಾಡಲು ವಾರುಣಿ ಅವರನ್ನು ಪ್ರೇರೇಪಿಸಿ ಅವರಲ್ಲಿ ಹೊಸ ಹುಮ್ಮಸ್ಸು ಮೂಡಿಸಿದರು. 

ಇವರು ಟ್ರೆಕ್ಕಿಂಗ್, ಪರ್ವತಾರೋಹಣ ಆರಂಭಿಸಿ ಸುಮಾರು 7-8 ವರ್ಷಗಳು ಕಳೆದಿವೆ. ಮಾನಸ ಸರೋವರ ಹತ್ತಿದ ಬಳಿಕ ಇವರಿಗೆ ಪರ್ವತಗಳ ಮೇಲೆ ಪ್ರೀತಿ ಮತ್ತಷ್ಟು ಜಾಸ್ತಿಯಾಗಿದ್ದು, ಎಲ್ಲಾ ಪ್ರವಾಸಗಳಿಗಿಂತ ಮಾನಸ ಸರೋವರವೇ ಇವರ ಅಚ್ಚು ಮೆಚ್ಚು. ಮಾನಸ ಸರೋವರದ ಪ್ರತಿ ಹೆಜ್ಜೆಗಳು ಹೊಸ ಪ್ರಕೃತಿ ಪ್ರಪಂಚದ ಪರಿಚಯ ಆಗುತ್ತದೆ. 

ಹಿಮಾಲಯದ ಹೊರತು ಪಡಿಸಿ ಮೊದಲು ಹತ್ತಿದ್ದು ದಕ್ಷಿಣ ಆಫ್ರಿಕಾದ  ಕಿಲಿಮಂಜಾರೋ ಪರ್ವತ. ಸುಮಾರು 11 ಗಂಟೆಯ ಅವಧಿಯಲ್ಲಿ ಕಿಲಿಮಂಜಾರೋದ ತುದಿ ತಲುಪಿದ್ದರು ವಾರುಣಿ. 

ಸಿಲಿಕಾನ್ ಸಿಟಿಯ ಹವಾಮಾನಕ್ಕೆ ,ಶಿಖರಗಳ ಹವಾಮಾನಕ್ಕೆ ಸಾಕಷ್ಟು ವ್ಯತ್ಯಾಸವಿದೆ. ಶಿಖರಗಳಲ್ಲಿ ಚಳಿ ತುಂಬಾನೇ ಜಾಸ್ತಿ.  ಆ ಕಾರಣಕ್ಕಾಗಿ ದಪ್ಪ ಹೊದಿಕೆಯ ಬಟ್ಟೆ, ಗ್ಲೌಸ್ ಬಹುಮುಖ್ಯ. ಶಿಖರ ಹತ್ತುವ ಹಾದಿಯಲ್ಲಿ ಒಬ್ಬ ಗೈಡ್ ಅಗತ್ಯ. ಗೈಡ್  ಮಾರ್ಗದರ್ಶನ ವೇ ಶಿಖರದ ತುದಿ ಮುಟ್ಟಲು ಸಹಕಾರಿ. ವಾರುಣಿ ಯಾವುದೇ ತರಬೇತಿ ಪಡೆದುಕೊಂಡು ಶಿಖರ ಹತ್ತಿದವರಲ್ಲ. ಸದಾ ಕ್ರಿಯಾಶೀಲವಾಗಿರುವ ಇವರ ಗುಣವೇ ಪರ್ವತಾರೋಹಣಕ್ಕೆ ಇವರಿಗೆ ಪ್ಲಸ್ ಪಾಯಿಂಟ್. ಟ್ರಕ್ಕಿಂಗ್  ಹೋಗಲು ಕೆಲವು ದಿನಗಳು ಬಾಕಿ ಇರುವಾಗ ವಾಕಿಂಗ್ ಕೊಂಚ ಜಾಸ್ತಿ ಮಾಡುತ್ತಾರೆ. ವಾಕಿಂಗ್ ವೇಳೆ ಟ್ರೆಕ್ಕಿಂಗ್ ಮಾಡುವ ವೇಳೆ ಬಳಸುವ ಸಾಮಗ್ರಿ(back pack) ಜೊತೆಗೆ ವಾಕಿಂಗ್ ಮಾಡುತ್ತಾರೆ. ಇದು ಟ್ರೆಕ್ಕಿಂಗ್ ವೇಳೆ ಬ್ಯಾಕ್ ಪ್ಯಾಕ್ ಜೊತೆ ಸಾಗಲು ಸುಲಭ ಮಾಡುತ್ತದೆ.

ಟ್ರಕ್ಕಿಂಗ್ ಮಾಡಲು ಯಾವುದೇ ವಯಸ್ಸಿನ ಮಿತಿಯಿಲ್ಲ. ಟ್ರೆಕ್ಕಿಂಗ್ ರೇಸ್ ಅಲ್ಲ. ನಿಧಾನವಾಗಿಯಾದರೂ ಹೋಗಿ ತುದಿ ತಲುಪಬಹುದು. ದೈಹಿಕ ಮತ್ತು ಮಾನಸಿಕ ಸಾಮರ್ಥ್ಯ ಮುಖ್ಯ. ಪರ್ವತಾರೋಹಣ ಮಾಡುವ ಸಮಯದಲ್ಲಿ ಋತುಮಾನದ ಸರಿಯಾದ ಸಮಯ ನೋಡಿಕೊಂಡು ಮಾಡಬೇಕು. ಕೆಲವು ಶಿಖರಗಳಲ್ಲಿ ಹೋಂ ಸ್ಟೇ ಇರುತ್ತದೇ. ಇನ್ನೂ ಕೆಲವೊಮ್ಮೆ ನಮ್ಮ ಆಹಾರಗಳನ್ನ ನಾವೇ ತಯಾರು ಮಾಡಿಕೊಳ್ಳಬೇಕು ಎನ್ನುತ್ತಾರೆ ವಾರುಣಿ. 

ನೀವು ಇದನ್ನು ಇಷ್ಟಪಡಬಹುದು: ಆಫ್ರಿಕಾದ ಅತಿ ಎತ್ತರದ ಪರ್ವತ ಕಿಲಿಮಂಜಾರೋ ಏರಿ ದಾಖಲೆ ಬರೆದ 9 ವರ್ಷದ ಆಂಧ್ರ ಹುಡುಗಿ ರಿತ್ವಿಕಾಶ್ರೀ

ಇಲ್ಲಿಯ ತನಕ ಇವರು ದಕ್ಷಿಣ ಆಫ್ರಿಕಾದ ಕಿಲಿಮಂಜಾರೋ ಸೇರಿದಂತೆ  ಎವರೆಸ್ಟ್ ಬೇಸ್ ಕ್ಯಾಂಪ್ ಅಥವಾ ಮಾನಸ ಸರೋವರ  (everset base camp), ಅನ್ನ ಪೂರ್ಣ ಬೇಸ್ ಕ್ಯಾಂಪ್ (annapurna base camp), ಅನ್ನಪೂರ್ಣ ಸರ್ಕ್ಯೂಟ್ ಟ್ರೆಕ್, (annapurna circut trek) ಗಂಗೋತ್ರಿಯ ತಪೋವನ ಶಿಖರ ಹತ್ತಿದ್ದಾರೆ. ಮುಂದೆ ಕೂಡ ಬೇರೆ ಬೇರೆ ಶಿಖರ ಏರುವ ಕನಸು ಕಂಡಿದ್ದಾರೆ. 

ಪತಿ ಪತ್ನಿ ಒಟ್ಟಿಗೆ ಟ್ರೆಕ್ಕಿಂಗ್ ಹೋಗುವುದಿಲ್ಲ. ವಾರುಣಿ ಅವರು ಟ್ರೆಕ್ಕಿಂಗ್ ಹೋದ ಸಮಯದಲ್ಲಿ ಪತಿ ಮನೆ, ಮಕ್ಕಳನ್ನು ನೋಡಿಕೊಳ್ಳುತ್ತಾರೆ. ಬೇರೆಯವರು ಏನಾದರೂ ನಿಂದಿಸಿದಾಗ ಸಾಮಾನ್ಯವಾಗಿ ವಾರುಣಿ ಅವರು ತಲೆ ಕೆಡಿಸಿಕೊಳ್ಳುವುದಿಲ್ಲ. ಪತಿಯು ಕೂಡ ಪತ್ನಿಗೆ ಸಾಥ್ ನೀಡುತ್ತಾರೆ. 

ಗಾಲ್ಫ್ ಆಟ ಇವರ ಹವ್ಯಾಸ. ಯೋಗ, ಜಿಮ್, ವಾಕಿಂಗ್ ನಿತ್ಯದ ರೂಢಿ. ಟ್ರೆಕ್ಕಿಂಗ್ ಮೊದಲು ಆರಂಭಿಸಿದಾಗ ಕೊಂಚ ಕಷ್ಟವಾಗಿತ್ತು. ಆದರೆ ಪತಿಯೇ ಧೈರ್ಯ ತುಂಬಿ ಪ್ರೋತ್ಸಾಹ ನೀಡಿದ್ದು. ಶಿಖರದ ತುದಿ ತಲುಪಿದ ಮೇಲೆ ವಿಮಾನ, ಕುದುರೆಗಳ ಸಹಾಯ ತೆಗೆದುಕೊಳ್ಳಬಹುದು. ಆದರೆ ಒಮ್ಮೆ ತುದಿ ತಲುಪಿದವರಿಗೆ ನಡೆದುಕೊಂಡೇ ಬರಬೇಕು ಎಂದೆನಿಸುತ್ತದೆ.  ಒಮ್ಮೆ ಪರ್ವತಾರೋಹಣ ಮಾಡಿದವರಿಗೆ ಮತ್ತೆ ಮತ್ತೆ ಪರ್ವತಾರೋಹಣ ಮಾಡಬೇಕು ಎಂದೆನಿಸುವಷ್ಟು ಖುಷಿ ನೀಡುತ್ತದೆ. ಕೆಲವೊಂದು ಹೆಣ್ಣು ಮಕ್ಕಳಿಗೆ ಟ್ರೆಕಿಂಗ್ ಮಾಡಬೇಕು, ಪ್ರವಾಸ ಮಾಡಬೇಕು ಎನ್ನುವ ಆಸೆ ಇರುತ್ತದೆ. ಆದರೆ ನಾನಾ ಕಾರಣಗಳಿಂದ ಅದು ಸಾಧ್ಯವಾಗಲ್ಲ. ಅಂತಹ ಆಸೆಗಳಿರುವ ಹೆಣ್ಣು ಮಕ್ಕಳಿಗೆ ಕುಟುಂಬದ ಸಹಕಾರ ತುಂಬಾ ಮುಖ್ಯ. ಅಂತಹ ವಿಷಯದಲ್ಲಿ ನಾನು ಅದೃಷ್ಟವಂತೆ ಎನ್ನುತ್ತಾರೆ ವಾರುಣಿ. 

ವೃತ್ತಿ ಬದುಕು ಮತ್ತು ವೈಯುಕ್ತಿಕ ಬದುಕನ್ನು ಸರಿದೂಗಿಸಿಕೊಂಡು ಹೋಗುವುದು ಸವಾಲಿನ ಕೆಲಸ. ಉದ್ಯೋಗಸ್ಥ ಮಹಿಳೆಯರಿಗೆ ಫಿಟ್ನೆಸ್ ಬಗ್ಗೆ ಜಾಸ್ತಿ ಅರಿವು ಮೂಡಿಸುವ ಕೆಲಸ ಮಾಡಬೇಕು. ಹೆಣ್ಣು ಮಕ್ಕಳಿಗೆ ಅಸಾಧ್ಯವಾದುದು ಯಾವುದು ಇಲ್ಲ. ಏನನ್ನು ಬೇಕಾದರೂ ಸಾಧಿಸುವ ಛಲ, ಕುಟುಂಬದ ಸಹಕಾರ, ಮಾನಸಿಕ ದೃಢತೆ ಬಹುಮುಖ್ಯ ಎನ್ನುವುದು ವಾರುಣಿ ಅವರ ಮಾತು. 

ತನ್ನವರ ಸಹಕಾರ ಇದ್ದರೆ ಹೆಣ್ಣು ಏನು ಬೇಕಾದರೂ ಸಾಧಿಸಬಲ್ಲಳು ಎನ್ನುವುದಕ್ಕೆ ಇವರು ಉತ್ತಮ ನಿದರ್ಶನ. ತನ್ನ ಮಕ್ಕಳನ್ನು ನೋಡಿಕೊಳ್ಳುವುದರ ಜೊತೆಗೆ ಟ್ರೆಕ್ಕಿಂಗ್ ಹವ್ಯಾಸವನ್ನು ಮುಂದುವರೆಸಿಕೊಂಡು ಹೋಗುತ್ತಿರುವ, ಶಿಖರ ಏರುವ ಕನಸಿನ ಜೊತೆ ಸಾಗುತ್ತಿರುವ ಇವರು ಕನಸುಗಳೆಲ್ಲಾ ಈಡೇರಲಿ. ವಾರುಣಿ ಎಲ್ಲಾ ಹೆಣ್ಣು ಮಕ್ಕಳಿಗೂ ಸ್ಫೂರ್ತಿಯಾಗಲಿ. 

ನಾವೂ ಟೆಲಿಗ್ರಾಮ್ ನಲ್ಲೂ ಇದ್ದೀವಿ! ಕನ್ನಡ.ಟೆಲಿಗ್ರಾಮ್ ಗ್ರೂಪ್ ಜಾಯಿನ್ ಆಗಿ. 

ನೀವು ಪ್ರವಾಸ ಹೋಗುವ ತಾಣದ ಮಾಹಿತಿ, ಕನ್ನಡ.ಟ್ರಾವೆಲ್ (Kannada.Travel) ಜಾಲತಾಣದಲ್ಲಿ ಪ್ರಕಟವಾಗುವ ಬರಹಗಳ ವಿವರ, ಅಪರೂಪದ ಟ್ರಾವೆಲರ್ ಗಳ ಪರಿಚಯ, ಪ್ರವಾಸಿ ತಾಣಗಳ ಕುತೂಹಲಕರ ಚಿತ್ರ, ಬರಹ ಎಲ್ಲವೂ ಇಲ್ಲಿ ನಿಮಗೆ ಸಿಗುತ್ತದೆ. ಬನ್ನಿ ಜೊತೆಯಾಗಿ

Related Articles

Leave a Reply

Your email address will not be published. Required fields are marked *

Back to top button