ಮ್ಯಾಜಿಕ್ ತಾಣಗಳುವಿಂಗಡಿಸದಸ್ಮರಣೀಯ ಜಾಗ

ಗಣರಾಜ್ಯೋತ್ಸವದ ಫಲಪುಷ್ಪ ಪ್ರದರ್ಶನಕ್ಕೆ ಸಜ್ಜಾಗುತ್ತಿದೆ ಸಸ್ಯಕಾಶಿ ಲಾಲ್ ಬಾಗ್; ಇಲ್ಲಿದೆ ಮಾಹಿತಿ

ಬೆಂಗಳೂರಿನ ಸಸ್ಯಕಾಶಿ ಲಾಲ್ ಬಾಗ್ ನಲ್ಲಿ ಪ್ರತಿವರ್ಷದಂತೆ ಈ ವರ್ಷವೂ ಗಣರಾಜ್ಯೋತ್ಸವದ (Republic Day 2024) ಅಂಗವಾಗಿ ಫಲಪುಷ್ಪ ಪ್ರದರ್ಶನ ಆಯೋಜಿಸಲಾಗಿದೆ. ಫಲಪುಷ್ಪ ಪ್ರದರ್ಶನದ ಆರಂಭದ ದಿನಾಂಕ, ಥೀಮ್ ಕುರಿತಾದ ವಿವರ ಇಲ್ಲಿದೆ.

ಈ ಬಾರಿಯ ಫ್ಲವರ್ ಶೋ ಅನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಉದ್ಘಾಟಿಸಲಿದ್ದಾರೆ. 11 ದಿನಗಳ ಕಾಲ ಈ ಪ್ರದರ್ಶನವು ನಡೆಯಲಿದೆ. ಜನವರಿ 18 ರಿಂದ ಆರಂಭವಾಗುವ ಈ ಫ್ಲವರ್ ಶೋ ಜನವರಿ 28 ರಂದು ಕೊನೆಗೊಳ್ಳುತ್ತದೆ.

ಈ ವರ್ಷದ ಫಲಪುಷ್ಪ ಪ್ರದರ್ಶನವನ್ನು ಜಗಜ್ಯೋತಿ ಬಸವಣ್ಣನವರಿಗೆ (Jagajyothi Basveshwara) ಸಮರ್ಪಿತವಾಗಲಿದೆ. ಈ ವರ್ಷ ಪ್ರದರ್ಶನದಲ್ಲಿ ಬಸವಣ್ಣನವರ ಹೂವಿನ ಪ್ರತಿಕೃತಿ ಪ್ರಮುಖ ಆಕರ್ಷಣೆಯಾಗಲಿದೆ.

ತೋಟಗಾರಿಕಾ ಸಚಿವರಾದ ಎಸ್‌.ಎಸ್ ಮಲ್ಲಿಕಾರ್ಜುನ್ ಮತ್ತು ಲಾಲ್‌ಬಾಗ್ ನಿರ್ದೇಶಕ ಡಿ. ಎಸ್ ರಮೇಶ್ ಅವರ ನೇತೃತ್ವದಲ್ಲಿ ನಡೆದ ಸಭೆಯಲ್ಲಿ ಈ ನಿರ್ಧಾರಗಳನ್ನು ತೆಗೆದುಗೊಳ್ಳಲಾಗಿದೆ.

ಈ ವರ್ಷದ ಫ್ಲವರ್ ಶೋನ (Lalbagh Flower Show 2024) ವೆಚ್ಚ 2.75 ಕೋಟಿಯಾಗಿದ್ದು, ಈ ಬಾರಿ 11 ಲಕ್ಷ ಮಂದಿ ಫ್ಲವರ್ ಶೋಗೆ ಬರುವ ಬಗ್ಗೆ ನಿರೀಕ್ಷಿಸಲಾಗಿದೆ. ಪ್ಲವರ್ ಶೋಗೆ (Flower Show) ಬರುವವರಿಗೆ ಟಿಕೆಟ್ ದರ ಇನ್ನೂ ನಿರ್ಧಿರಿಸಬೇಕಾಗಿದ್ದು, ಶಾಲಾ‌ಮಕ್ಕಳಿಗೆ ಉಚಿತ ಪ್ರವೇಶ ಇರಲಿದೆ.

ಈ ಬಾರಿ ಫಲಪುಷ್ಪ ಪ್ರದರ್ಶನಕ್ಕೆ ವಾರ್ಷಿಕವಾಗಿ ಬೆಳೆಯುವ ಹೂಗಳಿಗೆ ಹೆಚ್ಚಿನ ಪ್ರಾಮುಖ್ಯತೆಯನ್ನು ನೀಡಲಾಗುತ್ತಿದ್ದು, 12 ರಿಂದ ದ 15 ಲಕ್ಷದಷ್ಟು ಹೂಗಳನ್ನ ಬಳಸುವ ಸಾಧ್ಯತೆ ಇದೆ.‌

ಅದರಲ್ಲಿ 8 ಲಕ್ಷ ಹೂಗಳನ್ನು ಹೊರ ರಾಜ್ಯದಿಂದ ತರಲಾಗುತ್ತಿದೆ. ಮುಖ್ಯವಾಗಿ ಊಟಿ, ತಮಿಳುನಾಡು, ಕೇರಳ, ಆಂಧ್ರಪ್ರದೇಶದಿಂದ ತರಿಸಲಾಗುತ್ತಿದೆ. ಇನ್ನುಳಿದ ಹೂಗಳನ್ನು ಲಾಲ್ ಬಾಗ್ ಉದ್ಯಾನದಲ್ಲೇ ಬೆಳೆಸಲಾಗುತ್ತಿದ್ದು, 200 ತಳಿ ಮತ್ತು 25 ಬಗೆಯ ವರ್ಣರಂಜಿತ ಹೂಗಳು ಪ್ರದರ್ಶನದಲ್ಲಿ ಇರಲಿವೆ.

ಫಲಪುಷ್ಪ ಪ್ರದರ್ಶನದ ವೇಳೆ ಸ್ವಚ್ಛತೆಗೆ ಆದ್ಯತೆ ನೀಡುವ ಕುರಿತು ಮುಂದಿನ ಮೂರು ದಿನಗಳಲ್ಲಿ ಉನ್ನತ ಅಧಿಕಾರಿಗಳು, ಪರಿಸರ ತಜ್ಞರು, ಬಿಬಿಎಂಪಿ ಅಧಿಕಾರಿಗಳು ಮತ್ತು ಸಂಚಾರಿ ಪೊಲೀಸರೊಂದಿಗೆ ಸಭೆ ನಡೆಸಿ ಕ್ರಮ ಕೈಗೊಳ್ಳಲಾಗುವುದು ಎಂದು ಜಗದೀಶ್ ತಿಳಿಸಿದರು.

ಪ್ರದರ್ಶನದ ಪ್ರಮುಖ ಆಕರ್ಷಣೆಗಳು:

ಗಾಜಿನ ಮನೆಯಲ್ಲಿ ಬಸವಣ್ಣನವರ ವಚನಗಳ ಮತ್ತು ಅವರ ಜೀವನ ಚರಿತ್ರೆಯ ಕುರಿತಾದ 30 ಫಲಕಗಳನ್ನು ಪ್ರದರ್ಶಿಸಲಾಗುವುದು.

ಬಸವಣ್ಣ, ಅಕ್ಕಮಹಾದೇವಿ ಮತ್ತು ಅಲ್ಲಮಪ್ರಭು ಸೇರಿದಂತೆ 12 ನೇ ಶತಮಾನದ ಸುಮಾರು 8-10 ಇತರ ವಚನ ಕವಿಗಳ ಹೂವಿನ ಪ್ರತಿಮೆಗಳನ್ನು ಮತ್ತು 30×30 ಅಡಿಯ ಅನುಭವ ಮಂಟಪದ ಮೋಡಿಮಾಡುವ ಹೂವಿನ ಮಾದರಿಯನ್ನು ಸ್ಥಾಪಿಸಲಾಗುವುದು.

ನಾವೂ ಇನ್ ಸ್ಟಾಗ್ರಾಮ್ ನಲ್ಲೂ ಇದ್ದೀವಿ! ನಮ್ಮ ಗ್ರೂಪ್ ಜಾಯಿನ್ ಆಗಿ.

ನೀವು ಪ್ರವಾಸ ಹೋಗುವ ತಾಣದ ಮಾಹಿತಿ, ಕನ್ನಡ.ಟ್ರಾವೆಲ್ (Kannada.Travel) ಜಾಲತಾಣದಲ್ಲಿ ಪ್ರಕಟವಾಗುವ ಬರಹಗಳ ವಿವರ, ಅಪರೂಪದ ಟ್ರಾವೆಲರ್ ಗಳ ಪರಿಚಯ, ಪ್ರವಾಸಿ ತಾಣಗಳ ಕುತೂಹಲಕರ ಚಿತ್ರ ಬರಹ ಎಲ್ಲವೂ ಇಲ್ಲಿ ನಿಮಗೆ ಸಿಗುತ್ತದೆ. ಬನ್ನಿ ಜೊತೆಯಾಗಿ.

Related Articles

Leave a Reply

Your email address will not be published. Required fields are marked *

Back to top button