ದೂರ ತೀರ ಯಾನಮ್ಯಾಜಿಕ್ ತಾಣಗಳುವಂಡರ್ ಬಾಕ್ಸ್ವಿಂಗಡಿಸದ

ಭಾರತದ ಚೆಂದದ ದ್ವೀಪಗಳಿವು. ಒಮ್ಮೆ ಹೋಗಿ ಬನ್ನಿ

ಭಾರತ ಅಂದ್ರೇನೆ ಹಾಗೆ ಸಾಗರ , ಪರ್ವತಗಳ ಶಿಖರಗಳನ್ನು ಹೊಂದಿರುವ ಚೆಂದದ ನೆಲೆ. ನಮ್ಮ ದೇಶದ ಯಾವುದೇ ಮೂಲೆಗಳಿಗೆ ಹೋದರು ಅಲ್ಲೊಂದು ವಿಶೇಷತೆ ಇರುತ್ತದೆ. ಪ್ರತಿ ತಾಣದಲ್ಲೂ ಜನರನ್ನು ಸೆಳೆಯುವ ಆಕರ್ಷಕ ಗುಣ ಇರುತ್ತದೆ. ಭಾರತದಲ್ಲಿ ಪ್ರವಾಸಿಗರನ್ನು ಐತಿಹಾಸಿಕ ಸ್ಮಾರಕಗಳು, ಗಿರಿ ,ಶಿಖರಗಳು ,ಕಡಲ ತೀರಗಳು ಜೊತೆಗೆ ದ್ವೀಪಗಳು ಕೂಡ ಜನರನ್ನ ತನ್ನತ್ತ ಕೈಬೀಸಿ ಕರೆಯುತ್ತದೆ. ನಮ್ಮ ದೇಶದಲ್ಲಿ ಹಲವು ಸುಂದರ ದ್ವೀಪಗಳಿವೆ. ಈ ಕುರಿತಾದ ಬರಹ ಇಲ್ಲಿದೆ.

ಮಜಲಿ ದ್ವೀಪ (Majali Island)

ಈ ದ್ವೀಪ ಕೇವಲ ಭಾರತ ಮಾತ್ರವಲ್ಲ, ವಿಶ್ವದ ಅತ್ಯಂತ ದೊಡ್ಡ ನದಿ ದ್ವೀಪವಾಗಿದೆ. ಈ ದ್ವೀಪ ಜನರನ್ನು ಮಂತ್ರ ಮುಗ್ಧಗೊಳಿಸುವ ಸೂರ್ಯಾಸ್ತ ಮತ್ತು ಸೂರ್ಯೋದಯಕ್ಕೆ ಫೇಮಸ್ ಆಗಿದೆ. ನದಿ ದ್ವೀಪಗಳು ಸಾಮಾನ್ಯವಾಗಿ ಮರಳಿನಿಂದ ಸುತ್ತು ವರೆದಿರುತ್ತದೆ. ಆದರೆ ಮಜಲಿ ದ್ವೀಪ ಪಾಚಿಗಳಿಂದ ತುಂಬಿ ಹೋಗಿದೆ. ಇನ್ನು ನಿಮಗೆ ಇಲ್ಲಿ ಸಮುದ್ರ ಆಹಾರದ ಬದಲು ಈಶಾನ್ಯ ರಾಜ್ಯದ ಊಟಗಳನ್ನು ಸವಿಯುವುದಕ್ಕೆ ಸಿಗುತ್ತದೆ.ಅಲ್ಲದೆ ಈ ದ್ವೀಪಕ್ಕೆ ನೀವು ಭೇಟಿ ನೀಡಬೇಕು ಅಂತಂದ್ರೆ ಅಕ್ಟೋಬರ್ ನಿಂದ ಡಿಸೆಂಬರ್ ರವರೆಗೆ ಉತ್ತಮ ಸಮಯ.

Manjali Island

ಲಿಟ್ಲ್ ಅಂಡಮಾನ್ ದ್ವೀಪ (Little Andaman Island)

ಅಂಡಮಾನ್ ದ್ವೀಪಗಳಲ್ಲಿರುವ ಅತಿ ಸುಂದರ ದ್ವೀಪಗಳಲ್ಲಿ ಇದು ಕೂಡ ಒಂದು. ಡಿಸೆಂಬರ್ ನಿಂದ ಫೆಬ್ರವರಿ ನೀವು ಈ ದ್ವೀಪಕ್ಕೆ ಭೇಟಿ ನೀಡಲು ಪ್ರಶಸ್ತ ಸಮಯ. ಈ ದ್ವೀಪಕ್ಕೆ ನೀವು ಹೋಗಬೇಕು ಅಂತಿದ್ರೆ ಪೋರ್ಟ್ ಬ್ಲೇರ್ ಮೂಲಕ ವಿಮಾನ ಅಥವಾ ಹಡಗಿನ ಮೂಲಕ ಹೋಗಬಹುದು. ಇನ್ನು ನೀವು ಇಲ್ಲಿ ಹಲವು ಜಲಪಾತಗಳನ್ನು ಕಣ್ತುಂಬಿಕೊಳ್ಳಬಹುದು. ಸರ್ಫಿಂಗ್ ಕೂಡ ನಡೆಸಬಹುದು.

Little Andaman Island)

ದಿಯು ದ್ವೀಪ (Diyu Island)

ಈ ದಿಯು ದ್ವೀಪ ಗುಜರಾತಿನ ಕಡಲ ತೀರದಲ್ಲಿದೆ. ಇಲ್ಲಿ ಸಮುದ್ರ ಆಹಾರ ತುಂಬಾನೇ ಫೇಮಸ್. ನೀವು ಅಕ್ಟೋಬರ್ ನಿಂದ ಡಿಸೆಂಬರ್ ತನಕ ಯಾವಾಗ ಬೇಕಿದ್ದರೂ ಭೇಟಿ ನೀಡಬಹುದು. ಈ ದ್ವೀಪಕ್ಕೆ ರೈಲು ಮಾರ್ಗವನ್ನು ಹೊರತು ಪಡಿಸಿ ಯಾವ ಮಾರ್ಗದಲ್ಲಿ ಬೇಕಿದ್ದರೂ ಸಂಚಾರ ಮಾಡಬಹುದು.ದ್ವೀಪದಲ್ಲಿ ನೀವು ದಿಯು ಕೋಟೆ, ಗಂಗೇಶ್ವರ ದೇವಸ್ಥಾನ ಸೇರಿದಂತೆ ಕೆಲವು ಪ್ರಮುಖ ತಾಣಗಳಿಗೆ ಭೀತಿ ನೀಡಬಹುದು.

Diyu Island

ದಿವಾರ್ ದ್ವೀಪ (Diwar Island)

ಇದು ಗೋವಾ ರಾಜ್ಯದಲ್ಲಿದ್ದ , ಗೋವಾದ ಪಣಜಿಯಿಂದ 10ಕಿಮೀ ದೂರದಲ್ಲಿದೆ. ಇದು ಮಜಲಿ ದ್ವೀಪದ ರೀತಿ ನದಿ ದ್ವೀಪವಾಗಿದ್ದು , ಮಾಂಡವಿ ನದಿಯಿಂದ ಸುತ್ತುವರೆದಿದೆ. ಇಲ್ಲಿ ಪ್ರಕೃತಿ ಸೌಂದರ್ಯದ ಜೊತೆಗೆ ದೇವಸ್ಥಾನ ,ಚರ್ಚ್, ಯುರೋಪಿಯನ್ ಮನೆಗಳು ,ಪೋರ್ಚುಗೀಸರ ಕುರುಹುಗಳನ್ನು ನೋಡಬಹುದು.

Diwar Island

ಸೇಂಟ್ ಮೇರಿಸ್ ದ್ವೀಪ (St Mary’s Island )

ಕರ್ನಾಟಕದಲ್ಲಿರುವ ಈ ದ್ವೀಪ ನಾಲ್ಕು ಚಿಕ್ಕ ದ್ವೀಪಗಳನ್ನು ಒಳಗೊಂಡಿದೆ. ಆದರೆ ರಾಜ್ಯವನ್ನು ಹೊರತುಪಡಿಸಿ ಬೇರೆ ಭಾಗದ ಜನರಿಗೆ ಈ ದ್ವೀಪದ ಬಗ್ಗೆ ಹೆಚ್ಚಿಗೆ ತಿಳಿದಿಲ್ಲ. ಉಡುಪಿ ಜಿಲ್ಲೆಯ ಮಲ್ಪೆಯಿಂದ ಬೋಟ್ ಮೂಲಕ ಸೇಂಟ್ ಮೇರಿಸ್ ದ್ವೀಪಕ್ಕೆ ಹೋಗಬಹುದು. ಇಲ್ಲಿ ಕೋಕೊನೋಟ್ ಗಾರ್ಡನ್ ಫೇಮಸ್.

ನೀವು ಇದನ್ನು ಇಷ್ಟ ಪಡಬಹುದು:ನಿಮ್ಮನ್ನು ಮಂತ್ರ ಮುಗ್ಧಗೊಳಿಸುತ್ತದೆ ಭಾರತದ ಈ ಐದು ಜಾಗಗಳು.

St Mary's Island

ಲಕ್ಷದೀಪ ಐಲ್ಯಾಂಡ್ (Lakshadweep)

ಪಾಮ್ ಮರಗಳಿಂದ 36 ಕೊರಲ್ ದ್ವೀಪಗಳನ್ನು ಲಕ್ಷದ್ವೀಪ ಒಳಗೊಂಡಿದೆ. ಹಿಂದೂ ಮಹಾಸಾಗರದಲ್ಲಿ ರುವ ಅದ್ಭುತವಾದ ಐಲ್ಯಾಂಡ್ ಇದು. ಲಕ್ಷದ್ವೀಪಕ್ಕೆ ಭೇಟಿ ನೀಡುವುದಕ್ಕೆ ಅಕ್ಟೋಬರ್ ನಿಂದ ಮೇ ತಿಂಗಳು ಅತ್ಯುತ್ತಮ ಸಮಯ.

ನೀವು ಇದನ್ನು ಇಷ್ಟ ಪಡಬಹುದು:ಭಾರತದ ಈ ದೊಡ್ಡ ವಿಚಾರಗಳ ಬಗ್ಗೆ ಗೊತ್ತಾ..?

Lakshadweep

ಗ್ರಾಂಡ್ ದ್ವೀಪ (Grand Island)

ಈ ದ್ವೀಪ ಗೋವಾ ರಾಜ್ಯದಲ್ಲಿದ್ದ ಸ್ಕೂಬಾ ಡೈವಿಂಗ್ ಗೆ ಹೇಳಿ ಮಾಡಿಸಿದ ಜಾಗ. ಇಲ್ಲಿನ ಸೌಂದರ್ಯ ಹಾಗೂ ಬೀಚ್ ಗಳು ಈ ದ್ವೀಪಕ್ಕೆ ಹೆಚ್ಚಿನ ಪ್ರವಾಸಿಗರನ್ನು ತನ್ನತ್ತ ಸೆಳೆಯುತ್ತದೆ. ಗೋವಾದಿಂದ 20 ರಿಂದ 40 ನಿಮಿಷದಲ್ಲಿ ಈ ದ್ವೀಪವನ್ನು ನೀವು ತಲುಪಬಹುದು. ದಿನದಲ್ಲಿ 8 ಗಂಟೆಗಳ ಓಪನ್ ಇರುವ ಈ ದ್ವೀಪ ಭಾರತೀಯ ನೌಕಾ ಪಡೆಯ ನೆಲೆಯಾಗಿದೆ . ನೌಕಾ ಸಿಬ್ಬಂದಿಗಳಿಗೆ ತರಬೇತಿ ನೀಡುವ ಸಮಯದಲ್ಲಿ ಇಲ್ಲಿ ಪ್ರವಾಸಿಗರಿಗೆ ಪ್ರವೇಶವಿಲ್ಲ. ಭೇಟಿ ನೀಡುವುದಕ್ಕೆ ಅಕ್ಟೋಬರ್ ನಿಂದ ಮೇ ತಿಂಗಳು ಅತ್ಯುತ್ತಮ ಸಮಯ.

Grand Island

ಗ್ರೇಟ್ ನಿಕೋಬಾರ್ ದ್ವೀಪ (Grate Nicobar Island)

ಇದು ಭಾರತದ ಅತಿ ದೊಡ್ಡ ದ್ವೀಪ. ಅತಿ ಶುದ್ಧ ನೀರನ್ನು ಇಲ್ಲಿನ ನದಿಗಳು ಹೊಂದಿದೆ. ಇಲ್ಲಿನ ಸಸ್ಯ ಪ್ರಭೇದಗಳು, ಪ್ರಾಣಿ ಪಕ್ಷಿಗಳು ನಿಮ್ಮನ್ನು ಬೇರೆಯದ್ದೇ ಲೋಕಕ್ಕೆ ಕರೆದುಕೊಂಡು ಹೋಗುತ್ತದೆ.

Grate Nicobar Island

ನೇತ್ರಾಣಿ ದ್ವೀಪ (Netrani Island )

ಅರಬ್ಬಿ ಸಮುದ್ರದಲ್ಲಿರುವ ಭಾರತದ ಒಂದು ಸಣ್ಣ ದ್ವೀಪವಾಗಿದೆ . ಇದು ಕರ್ನಾಟಕದ ಕರಾವಳಿಯಲ್ಲಿ ಭಟ್ಕಳ ತಾಲೂಕಿನ ಮುರುಡೇಶ್ವರ ದೇವಸ್ಥಾನದಿಂದ ಸರಿಸುಮಾರು 19 ಕಿಮೀ ದೂರದಲ್ಲಿದೆ . ಇದು ಸ್ಕೂಬಾ ಡೈವಿಂಗ್ ಮಾಡಬಹುದು ಹೊಂದಿದೆ ಮತ್ತು ಭಟ್ಕಳ , ಮಂಗಳೂರು , ಗೋವಾ , ಮುಂಬೈ ಅಥವಾ ಬೆಂಗಳೂರಿನಿಂದ ಸುಲಭವಾಗಿ ತಲುಪಬಹುದು .

Netrani Island

ನಾವೂ ಇನ್ ಸ್ಟಾಗ್ರಾಮ್ ನಲ್ಲೂ ಇದ್ದೀವಿ! ನಮ್ಮ ಗ್ರೂಪ್ ಜಾಯಿನ್ ಆಗಿ.

ನೀವು ಪ್ರವಾಸ ಹೋಗುವ ತಾಣದ ಮಾಹಿತಿ, ವೆಲ್ (Kannada.Travel) ಜಾಲತಾಣದಲ್ಲಿ ಪ್ರಕಟವಾಗುವ ಬರಹಗಳ ವಿವರ, ಅಪರೂಪದ ಟ್ರಾವೆಲರ್ ಗಳ ಪರಿಚಯ, ಪ್ರವಾಸಿ ತಾಣಗಳ ಕುತೂಹಲಕರ ಚಿತ್ರ ಬರಹ ಎಲ್ಲವೂ ಇಲ್ಲಿ ನಿಮಗೆ ಸಿಗುತ್ತದೆ. ಬನ್ನಿ ಜೊತೆಯಾಗಿ.

Related Articles

Leave a Reply

Your email address will not be published. Required fields are marked *

Back to top button