ಮ್ಯಾಜಿಕ್ ತಾಣಗಳುವಂಡರ್ ಬಾಕ್ಸ್ವಿಂಗಡಿಸದ

ಭಾರತದ ಈ ದೊಡ್ಡ ವಿಚಾರಗಳ ಬಗ್ಗೆ ಗೊತ್ತಾ..?

ಒಮ್ಮೆಯಾದರೂ ನಮಗೆ ನಮ್ಮ ದೇಶದ ಅತ್ಯಂತ ವಿಶೇಷ ಜಾಗಗಳ ಬಗ್ಗೆ ತಿಳಿದುಕೊಳ್ಳಬೇಕು ಎನ್ನುವ ಕುತೂಹಲ ನಿಮಗೆ ಮೂಡಿರಬಹುದು. ಅಂತಹ ಕೆಲವು ವಿಶೇಷತೆಗಳ ಬಗ್ಗೆ ಈ ಲೇಖನದಲ್ಲಿ ತಿಳಿಸಿ ಕೊಡುತ್ತೇವೆ. ನಮ್ಮ ದೇಶದಲ್ಲಿ ಅತಿ ದೊಡ್ಡದು ಎನ್ನುವ ವಿಶೇಷತೆ ಹೊಂದಿರುವ ವಿಚಾರಗಳಿವು.

ಅತ್ಯಂತ ದೊಡ್ಡ ಮರುಭೂಮಿ

ನಮ್ಮ ದೇಶದ ಅತ್ಯಂತ ದೊಡ್ಡ ಮರುಭೂಮಿ ಥಾರ್. ಈ ಮರುಭೂಮಿ ಇರುವುದು ರಾಜಸ್ಥಾನ ರಾಜ್ಯದಲ್ಲಿ. ಇನ್ನು ಈ ಮರುಭೂಮಿಯು ಪಶ್ಚಿಮ ಭಾರತದ ರಾಜಸ್ಥಾನ, ಹರಿಯಾಣ, ಪಂಜಾಬ್ ಮತ್ತು ಗುಜರಾತ್ ರಾಜ್ಯಗಳಲ್ಲಿ ಹರಡಿದೆ. ಥಾರ್ ಮರುಭೂಮಿಯ ಜಗತ್ತಿನ 20 ನೇ ಅತಿದೊಡ್ಡ ಮರುಭೂಮಿ. ಮರುಭೂಮಿಯ ಒಟ್ಟು ವಿಸ್ತೀರ್ಣ ಸುಮಾರು 4,46,೦೦೦ ಚ. ಕಿಮೀ. ಸುಮಾರು 805 ಕಿಮೀ ಉದ್ದ ಮತ್ತು . 1೦% ಮರಳು ದಿಣ್ಣೆಗಳಿಂದ ಕೂಡಿದ ಇದರ 9೦% ಭಾಗ ಕಲ್ಲು ಮಣ್ಣಿನ ಶಾಶ್ವತ ದಿಣ್ಣೆಗಳು, ಬಂಡೆಗಳು ಮತ್ತು ಉಪ್ಪಿನ ಬೈಲುಗಳಿಂದ ಕೂಡಿದೆ. ಅಲ್ಲಲ್ಲಿ ಮುಳ್ಳಿನ ಕುರುಚಲು ಗಿಡಗಳು ಮತ್ತು ಹುಲ್ಲುಗಾವಲುಗಳಿದ್ದರೂ ಇದು ಭಾಗಶಃ ಒಣ ಭೂಮಿಯಾಗಿದೆ.

Thar

ಭಾರತದ ಅತಿ ದೊಡ್ಡ ಅಣೆಕಟ್ಟು

ತೆಹರಿ ಆಣೆಕಟ್ಟು ಭಾರತದ ಅತಿ ದೊಡ್ಡ ಅಣೆಕಟ್ಟು.. ಉತ್ತರಖಂಡ ರಾಜ್ಯದ ತೆಹರಿ ಎಂಬಲ್ಲಿ ಭಾಗೀರಥಿ ನದಿಗೆ ಅಡ್ಡಲಾಗಿ ಈ ಆಣೆಕಟ್ಟನ್ನು ನಿರ್ಮಿಸಲಾಗಿದೆ. ಭಾರತದ ಅತ್ಯಂತ ಎತ್ತರದ ಆಣೆಕಟ್ಟಾಗಿರುವ ಇದು 855 ಅಡಿಗಳ ಎತ್ತರವನ್ನು ಹೊಂದಿದೆ ಹಾಗು 1886 ಅಡಿಗಳಷ್ಟು ಅಗಲವಾಗಿದೆ. 2.6 ಕ್ಯೂ.ಕಿ.ಮೀ ಗಳಷ್ಟು ನೀರನ್ನು ಹಿಡಿದಿಡುವ ಸಾಮರ್ಥ್ಯ ಇದಕ್ಕಿದೆ.

Tehri

ಅತಿದೊಡ್ಡ ಗುಹಾ ದೇವಾಲಯ

ಮಹಾರಾಷ್ಟ್ರದ ಔರಂಗಾಬಾದ್‌ನಲ್ಲಿರುವ ಎಲ್ಲೋರಾ ದೇವಾಲಯಗಳು ಭಾರತದ ಅತಿದೊಡ್ಡ ಗುಹಾ ದೇವಾಲಯ. ಎಲ್ಲೋರಾ ಗುಹೆ ದೇವಾಲಯಗಳು ಭಾರತೀಯ ರಾಕ್ ಕಟ್ ವಾಸ್ತುಶಿಲ್ಪಕ್ಕೆ ಉದಾಹರಣೆ.

ನೀವು ಇದನ್ನು ಇಷ್ಟ ಪಡಬಹುದು:ಮಳೆಗಾಲದಲ್ಲಿ ನೋಡಬಹುದಾದ ಚೆಂದದ ೧೦ ಜಾಗಗಳು

Cave temple

ಇದು 35 ಗುಹೆಗಳನ್ನು ಹೊಂದಿದೆ. ಈ ಗುಹೆಗಳು ಬೌದ್ಧ, ಹಿಂದೂ ಮತ್ತು ಜೈನ ಗುಹೆ ದೇವಾಲಯಗಳು ಮತ್ತು ಮಠಗಳನ್ನು ಒಳಗೊಂಡಿವೆ, . 12 ಬೌದ್ಧ ಗುಹೆಗಳು, 17 ಹಿಂದೂ ಗುಹೆಗಳು ಮತ್ತು 5 ಜೈನ ಗುಹೆಗಳಿವೆ. ಬೌದ್ಧ ಗುಹೆಗಳು ಐದನೇ ಮತ್ತು ಏಳನೇ ಶತಮಾನದ ನಡುವೆ ರಚಿಸಲಾದ ಆರಂಭಿಕ ರಚನೆಗಳಾಗಿವೆ. 16 ನೇ ಗುಹೆಯಲ್ಲಿರುವ ಕೈಲಾಸನಾಥ ದೇವಾಲಯವು ಎಲ್ಲೋರಾದ ಪ್ರಮುಖ ಆಕರ್ಷಣೆಯಾಗಿದೆ. ಶಿವನ ವಾಸಸ್ಥಾನವಾದ ಕೈಲಾಸ ಪರ್ವತವನ್ನು ಸ್ಮರಿಸಲು ಈ ದೇವಾಲಯವನ್ನು ವಿನ್ಯಾಸಗೊಳಿಸಲಾಗಿದೆ. ಜೈನ ದೇವಾಲಯಗಳು ಜೈನ ತತ್ವಶಾಸ್ತ್ರ ಮತ್ತು ಸಂಪ್ರದಾಯದ ನಿರ್ದಿಷ್ಟ ಆಯಾಮಗಳನ್ನು ಬಹಿರಂಗಪಡಿಸುತ್ತವೆ.

ಪ್ರದೇಶವಾರು ಅತಿ ದೊಡ್ಡ ರಾಜ್ಯ

ಭಾರತದ ಅತಿ ದೊಡ್ಡ ಪ್ರದೇಶವಾರು ರಾಜ್ಯ ರಾಜಸ್ಥಾನ. ರಾಜಸ್ಥಾನದ ರಾಜಧಾನಿ ಜೈಪುರ. 1956 ನವೆಂಬರ್ 1 ರಾಜ್ಯವಾಗಿ ರಚನೆಯಾಯ್ತು. ಒಟ್ಟು ವಿಸ್ತಿರ್ಣ 342236 ಚದರ ಕಿ ಮೀ. ಹೊಂದಿದೆ.

Rajastan

ಈ ರಾಜ್ಯವು ಸಿಂಧೂ ಕಣಿವೆ ನಾಗರಿಕತೆಗೆ ನೆಲೆಯಾಗಿದೆ . ಥಾರ್ ಮರುಭೂಮಿಯು ಪಶ್ಚಿಮ ರಾಜಸ್ಥಾನದಲ್ಲಿದೆ ಮತ್ತು ಗ್ರೇಟ್ ಇಂಡಿಯನ್ ಮರುಭೂಮಿ ಅಥವಾ ಮರಳಿನ ಸಾಗರ ಎಂದು ಕರೆಯಲ್ಪಡುತ್ತದೆ , ಇದು ವಿಶ್ವದ ಏಳನೇ ಅತಿ ದೊಡ್ಡ ಮರುಭೂಮಿಯಾಗಿದೆ . ಭಾರತದ ಪ್ರಮುಖ ಪ್ರವಾಸಿ ತಾಣಗಳಿರುವ ರಾಜ್ಯಗಳಲ್ಲಿ ಇದು ಒಂದಾಗಿದೆ .

ನಾವೂ ಇನ್ ಸ್ಟಾಗ್ರಾಮ್ ನಲ್ಲೂ ಇದ್ದೀವಿ! ನಮ್ಮ ಗ್ರೂಪ್ ಜಾಯಿನ್ ಆಗಿ.

ನೀವು ಪ್ರವಾಸ ಹೋಗುವ ತಾಣದ ಮಾಹಿತಿ, ಕನ್ನಡ.ಟ್ರಾವೆಲ್ (Kannada.Travel) ಜಾಲತಾಣದಲ್ಲಿ ಪ್ರಕಟವಾಗುವ ಬರಹಗಳ ವಿವರ, ಅಪರೂಪದ ಟ್ರಾವೆಲರ್ ಗಳ ಪರಿಚಯ, ಪ್ರವಾಸಿ ತಾಣಗಳ ಕುತೂಹಲಕರ ಚಿತ್ರ ಬರಹ ಎಲ್ಲವೂ ಇಲ್ಲಿ ನಿಮಗೆ ಸಿಗುತ್ತದೆ. ಬನ್ನಿ ಜೊತೆಯಾಗಿ.

Related Articles

Leave a Reply

Your email address will not be published. Required fields are marked *

Back to top button