ವಿಂಗಡಿಸದ

ದೇಶೀಯ ಪ್ರಯಾಣಿಕರಿಗಾಗಿ ಅಭಿವೃದ್ಧಿಗೊಂಡಿದೆ ಬೆಂಗಳೂರು ವಿಮಾನ ನಿಲ್ದಾಣದ “ಟರ್ಮಿನಲ್‌ -1”

ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣ (KIA)ವು ಈಗ ಹೊಸ ಯೋಜನೆಯೊಂದಿಗೆ ಹೊರಹೊಮ್ಮಿದೆ. ಇದು ತನ್ನ ಪ್ರಮುಖ ಟರ್ಮಿನಲ್‌-1 ಅನ್ನು ದೇಶೀಯ ಪ್ರಯಾಣಿಕರಿಗೆ ಅನುಕೂಲವಾಗುವಂತೆ ರೂಪಾಂತರಗೊಳಿಸುವಲ್ಲಿ ಯಶಸ್ವಿಯಾಗಿದೆ.

ಉಜ್ವಲಾ ವಿ.ಯು

ಇದು ದೇಶೀಯ ಚಟುವಟಿಕೆಗಳಿಗೆ ಅನುಕೂಲವಾಗುವಂತೆ ವಿಸ್ತಾರವಾದ ಮತ್ತು ಮೀಸಲಾದ ಸ್ಥಳವನ್ನು ಒದಗಿಸಲು ಟರ್ಮಿನಲ್‌-1 ನ ಅಂತರಾಷ್ರ್ಟೀಯ ಚಟುವಟಿಕೆಗಳನ್ನು ಸೆಪ್ಟೆಂಬರನಲ್ಲಿಯೇ ಟರ್ಮಿನಲ್‌-2 ಕ್ಕೆ ಸ್ಥಳಾಂತರಿಸಿದೆ.

Bengaluru Airport improves Terminal 1 to enhance domestic passenger’s experience

BIAL (Bengaluru International Airport Ltd) ದೇಶೀಯ ಕಾರ್ಯಾಚರಣೆಗಳಿಗೆ ಮೀಸಲಾಗಿರುವ ಅಸ್ತಿತ್ವದಲ್ಲಿರುವ 8 ಸ್ಟ್ಯಾಂಡ್‌ಗಳಿಗೆ ಪೂರಕವಾಗಿ, 9 ಹೊಸ ಸಂಪರ್ಕ ಸ್ಟ್ಯಾಂಡ್‌ಗಳನ್ನು ಪರಿಚಯಿಸಿದೆ. ಈ ವಿಸ್ತರಣೆಯು ದೇಶೀಯ ವಿಮಾನಗಳ ಹಾರಾಟವನ್ನು ಸುಗಮಗೊಳಿಸುವ ಮತ್ತು ಪ್ರಯಾಣಿಕರ ದಟ್ಟಣೆಯನ್ನು ಕಡಿಮೆಗೊಳಿಸುವ ಉದ್ದೇಶವನ್ನು ಹೊಂದಿದೆ.

ಭದ್ರತೆಯನ್ನು ಇನ್ನಷ್ಟು ಬಿಗಿಗೊಳಿಸಲು, ಸ್ವಯಂಚಾಲಿತ ಟ್ರೇ ರಿಟರ್ನ್ ಸಿಸ್ಟಮ್‌ (ATRS) ಹೊಂದಿದ ಹೊಸ ಪ್ರೀ-ಎಂಬಾರ್ಕೇಶನ್ ಸೆಕ್ಯುರಿಟಿ ಚೆಕ್ (PESC) ಪ್ರದೇಶವನ್ನು ಸಕ್ರಿಯಗೊಳಿಸಿದೆ. ಈ ತಂತ್ರಜ್ಞಾನವು ಸೆಕ್ಯುರಿಟಿ ಹೋಲ್ಡ್ ಏರಿಯಾ (SHA) ಮತ್ತು ಹೊಸ ಬೋರ್ಡಿಂಗ್ ಗೇಟ್‌ಗಳಿಗೆ ಪ್ರಯಾಣಿಕರು ಸುಗಮವಾಗಿ ಚಲಿಸುವಂತೆ ಮಾಡುತ್ತದೆ. ಮತ್ತು ತ್ವರಿತ ಮತ್ತು ಸುರಕ್ಷಿತ ಸ್ಕ್ರೀನಿಂಗ್ ಪ್ರಕ್ರಿಯೆಯನ್ನು ಒದಗಿಸುತ್ತದೆ.

ದೇಶೀಯ ಪ್ರಯಾಣಿಕರಿಗೆ ಯಾವುದೇ ಅಡ್ಡಿ ಆತಂಕಗಳಿಲ್ಲದೇ, ತಮ್ಮ ಲಗೇಜ್ ಹಿಂಪಡೆಯಲು ಅನುಕೂಲವಾಗುವಂತೆ ವಿಮಾನ ನಿಲ್ದಾಣದಲ್ಲಿ ಮೂರು ಹೊಸ ಬೆಲ್ಟ್ ಗಳನ್ನು ಪರಿಚಯಿಸುವ ಮೂಲಕ ಬ್ಯಾಗೇಜ್ ಕ್ಲೈಮ್ ಬೆಲ್ಟ್‌ಗಳ ಸಂಖ್ಯೆಯನ್ನು 10 ಕ್ಕೆ ಹೆಚ್ಚಿಸಿದೆ. ದೇಶೀಯ ಪ್ರಯಾಣಿಕರ ವಿಶೇಷ ಆದ್ಯತೆಯನ್ನು ಪೂರೈಸುವ ನಿಟ್ಟಿನಿಂದ, ವಿಮಾನ ನಿಲ್ದಾಣದಲ್ಲಿ ಚಿಲ್ಲರೆ ಸೌಲಭ್ಯವನ್ನು ಮತ್ತು ವಿವಿಧ ಬಗೆಯ ಊಟದ ಆಯ್ಕೆಗಳನ್ನು ಸಹ ವಿಸ್ತರಿಸಿದೆ.

ಇವುಗಳಲ್ಲದೇ, ದೇಶೀಯ ಪ್ರಯಾಣಿಕರು ಐಷಾರಾಮಿ ವಿಶ್ರಾಂತಿ ಕೋಣೆಗಳು (080 Lounge) ಮತ್ತು ಸ್ಪಾ (Spa) ಸೌಕರ್ಯಗಳನ್ನೂ ಸಹ ವಿಮಾನ ನಿಲ್ದಾಣದಲ್ಲಿ ಅನುಭವಿಸಬಹುದಾಗಿದೆ.

ವಿಶೇಷ ಅಗತ್ಯತೆಯುಳ್ಳ ಪ್ರಯಾಣಿಕರು ಭದ್ರತಾ ಹೋಲ್ಡ್ ಪ್ರದೇಶ (SHA)ದಲ್ಲಿ ಸುಲಭವಾಗಿ ಸಂಚರಿಸುವಂತೆ ಸಣ್ಣ ಮೋಟರ್ ವಾಹನಗಳ (Buggies) ಸೌಲಭ್ಯವನ್ನು ಕೂಡಾ ಒದಗಿಸಲಾಗಿದೆ. ಇದು ವಯಸ್ಸಾದವರಿಗೆ ಮತ್ತು ವಿಶೇಷ ಚೇತನರಿಗೆ ಸುಗಮ ಪ್ರಯಾಣವನ್ನು ಒದಗಿಸುವ ಗುರಿಯನ್ನು ಹೊಂದಿದೆ.

ನಾವೂ ಇನ್ ಸ್ಟಾಗ್ರಾಮ್ ನಲ್ಲೂ ಇದ್ದೀವಿ! ನಮ್ಮ ಗ್ರೂಪ್ ಜಾಯಿನ್ ಆಗಿ.

ನೀವು ಪ್ರವಾಸ ಹೋಗುವ ತಾಣದ ಮಾಹಿತಿ, ಕನ್ನಡ.ಟ್ರಾವೆಲ್ (Kannada.Travel) ಜಾಲತಾಣದಲ್ಲಿ ಪ್ರಕಟವಾಗುವ ಬರಹಗಳ ವಿವರ, ಅಪರೂಪದ ಟ್ರಾವೆಲರ್ ಗಳ ಪರಿಚಯ, ಪ್ರವಾಸಿ ತಾಣಗಳ ಕುತೂಹಲಕರ ಚಿತ್ರ ಬರಹ ಎಲ್ಲವೂ ಇಲ್ಲಿ ನಿಮಗೆ ಸಿಗುತ್ತದೆ. ಬನ್ನಿ ಜೊತೆಯಾಗಿ.

Related Articles

Leave a Reply

Your email address will not be published. Required fields are marked *

Back to top button