ದೂರ ತೀರ ಯಾನವಿಂಗಡಿಸದ

ದೇವರ ನಾಡು ಕೇರಳದಲ್ಲಿ ನೀವು ನೋಡಬಹುದಾದ ಜಾಗ ಗಳಿವು

ದೇವರ ನಾಡೆಂದೆ ಪ್ರಸಿದ್ದಿ ಹೊಂದಿರುವ ಕೇರಳ ಸಾಂಸ್ಕೃತಿಕವಾಗಿ ಅತ್ಯಂತ ಶ್ರೀಮಂತ ರಾಜ್ಯವಾಗಿದೆ . ಕಡಿಮೆ ಭೌಗೋಳಿಕ ವಿಸ್ತೀರ್ಣದಲ್ಲಿ ಸಾಕಷ್ಟು ಪ್ರವಾಸಿ ಸ್ಥಳಗಳನ್ನು ಹೊಂದಿರುವ ಇದು ಬಹು ಸಂಖ್ಯೆಯಲ್ಲಿ ಪ್ರವಾಸಿಗರನ್ನು ಆಕರ್ಷಿಸುತ್ತದೆ.

ಅಲ್ಲೆಪ್ಪಿ

ಅಲೆಪ್ಪಿಯಲ್ಲಿ ಬೌಟ್ ಹೌಸ್ಕೇರಳಕ್ಕೆ ಹೋದಾಗ ಅಲೆಪ್ಪಿಗೆ ಹೋಗುವುದನ್ನು ಮಿಸ್ ಮಾಡಬೇಡಿ. . ಆಕರ್ಷಕ ಹಿನ್ನೀರಿನಿಂದ ಕೂಡಿರುವ ಇದು ಪ್ರಕೃತಿ ಪ್ರಿಯರಿಗೆ ನೆಚ್ಚಿನ ತಾಣವಾಗಿದೆ. ಸಾಂಪ್ರದಾಯಿಕ ಹೌಸ್ ಬೋಟ್ ಮೇಲೆ ಹಿನ್ನೀರಿನಲ್ಲಿ ಪ್ರಯಾಣಿಸುವುದು ಕೇರಳದ ವಿಶಿಷ್ಟ ಅನುಭವಗಳಲ್ಲಿ ಒಂದಾಗಿದೆ. ಅಲೆಪ್ಪಿಗೆ ಹೋದಾಗ ಗ್ರಾಮ ಪ್ರವಾಸ, ಮೀನುಗಾರಿಕೆ, ಕ್ಯಾಂಡಲ್-ಲೈಟ್ ಡಿನ್ನರ್, ರುಚಿಯಾದ ಕೇರಳ ಭಕ್ಷ್ಯಗಳ ರುಚಿ, ಕ್ಯಾನೋಯಿಂಗ್, ಕಯಾಕಿಂಗ್, ವಾಟರ್ ಸ್ಪೋರ್ಟ್ಸ್, ಆಯುರ್ವೇದ ಮಸಾಜ್ ಮಿಸ್ ಮಾಡಬೇಡಿ. ಅಲೆಪ್ಪಿಗೆ ಭೇಟಿ ನೀಡಲು ಉತ್ತಮ ಸಮಯ ಅಕ್ಟೋಬರ್ ನಿಂದ ಏಪ್ರಿಲ್.

Alleppi

ಮುನ್ನಾರ್

ಕೇರಳದ ಹೆಸರುವಾಸಿಯಾದ ಗಿರಿ ಧಾಮಗಳಲ್ಲಿ ಇದು ಕೂಡ ಒಂದು. ಇಲ್ಲಿ ನಮ್ಮ ಕಣ್ಣು ಬೇಡವೆಂದರೂ ಹೋಗುವುದು ಚಹಾ ತೋಟದ ಕಡೆ. ರಜಾ ದಿನಗಳಲ್ಲಿ ಬಂದರೆ ಇಲ್ಲಿ ಬಂಗಲೆಗಳನ್ನು,ಟಾಟಾ ಟೀ ಮ್ಯೂಸಿಯಂ, ಅಟಕುಲ್ ಜಲಪಾತ, ಟಾಪ್ ಸ್ಟೇಷನ್, ಕುಂಡಲ ಕೆರೆ, ಅನಾಮುಡಿ ಮತ್ತು ಎರಾವಿಕುಲಂ ನ್ಯಾಷನಲ್ ಪಾರ್ಕ್ ಗಳನ್ನ ನೋಡಬಹುದು.

Munnar

ವರ್ಕಲ

ಇದು ಕೇರಳದಲ್ಲಿ ಸೂರ್ಯೋದಯ ಮತ್ತು ಸೂರ್ಯಾಸ್ತವನ್ನು ನೋಡಿ ಆನಂದಿಸಲು ಸೂಕ್ತ ಸ್ಥಳ. ಹಿಂದೂ ಸಂಸ್ಕೃತಿಯ ಧಾರ್ಮಿಕ ಸ್ಥಳವಾದ್ದುದರಿಂದ ಹೆಚ್ಚಿನ ಸಂಖ್ಯೆಯ ಹಿಂದೂಗಳೂ ಇಲ್ಲಿ ಬರುವುದರೊಂದಿಗೆ ಪಾಪ ನಾಶ ಬೀಚ್, ವಿಷ್ಣು ದೇವಾಲಯ,ವರ್ಕಲ ಸುರಂಗಕ್ಕೆ ಭೇಟಿ ನೀಡುತ್ತಾರೆ.

Varkala

ಅಷ್ಟಮುಡಿ ಬ್ಯಾಕ್ ವಾಟರ್

ಕೇರಳದ ಅತ್ಯಂತ ಸುಂದರವಾದ ಸ್ಥಳಗಳಲ್ಲಿ ಅಷ್ಟಮುಡಿ ಬ್ಯಾಕ್ ವಾಟರ್ ಕೂಡ ಒಂದು. 16 ಕಿ.ಮೀ ಇರುವ ಬ್ಯಾಕ್ ವಾಟರ್’ನಲ್ಲಿ ದೋಣಿ ಮೇಲೆ ಹೋಗುವಾಗ ಭತ್ತದ ಗದ್ದೆಗಳ ಹಸಿರು ನೋಟ, ಕೆರೆಗಳು ಮತ್ತು ಕಾಲುವೆಗಳ ಅದ್ಭುತ ನೋಟ ಕಣ್ತುಂಬಿಕೊಳ್ಳಬಹುದು. ಕಾಂಜಿರೊಟ್ಟು, ಕುಂಬಲತ್, ಕುರೀಪುಜಾ, ಕಂದಾಚೀರಾ, ಪೆರುಮೊನ್, ಥೆವಾಲಿ, ಕಲ್ಲಾಡಾ ಮತ್ತು ಕುಂಬಲತ್ ಸರೋವರಗಳು ಸೇರಿ ಅಷ್ಟಮುಡಿ ಎಂಬ ಹೆಸರು ಬಂದಿದೆ ಎನ್ನಲಾಗುತ್ತಿದೆ .ಸಾಂಪ್ರದಾಯಿಕ ಹೌಸ್ ಬೋಟ್‌ಗಳು ಅಷ್ಟಮುಡಿ ಸೌಂದರ್ಯವನ್ನು ಮತ್ತಷ್ಟು ಹೆಚ್ಚಿಸಿವೆ.

ಪದ್ಮನಾಭಸ್ವಾಮಿ ದೇವಾಲಯ

ಪದ್ಮನಾಭಸ್ವಾಮಿ ತಿರುವನಂತಪುರ ರಾಜಮನೆತನದ ಪೂಜ್ಯ ದೇವರು. ಶ್ರೀ ಪದ್ಮನಾಭಸ್ವಾಮಿ ದೇವಾಲಯವನ್ನು ತಿರುವನಂತಪುರಂ ನಗರದ ಹೃದಯಭಾಗದಲ್ಲಿ ನಿರ್ಮಿಸಲಾಗಿದೆ. ಕೇರಳಕ್ಕೆ ಭೇಟಿ ನೀಡುವವರು ಶ್ರೀ ಪದ್ಮನಾಭಸ್ವಾಮಿ ಆಶೀರ್ವಾದ ಪಡೆಯುವುದನ್ನು ಮರೆಯುವುದಿಲ್ಲ. ದೇವಾಲಯದಲ್ಲಿ ಪದ್ಮನಾಭಸ್ವಾಮಿಯ ಪ್ರತಿಮೆಯ ನೋಟ, ಸ್ತಂಭಗಳ ಸಂಕೀರ್ಣ ಕೆತ್ತನೆ, ಮಂಟಪ ವಿಶಿಷ್ಟವಾಗಿದೆ.

ನೀವು ಇದನ್ನು ಇಷ್ಟ ಪಡಬಹುದು:ರಾಯಚೂರು ಜಿಲ್ಲೆಯಲ್ಲಿದೆ ಮನಸೂರೆಗೊಳಿಸುವ ಐತಿಹಾಸಿಕ ತಾಣಗಳು

Padmanabhaswami temple

ಕೊಚ್ಚಿ

‘ಕೇರಳದ ಗೇಟ್‌ವೇ’ ಎಂದೂ ಕರೆಯಲ್ಪಡುವ ಕೇರಳದ ಅತ್ಯುತ್ತಮ ಪ್ರವಾಸಿ ಸ್ಥಳ. ಕೇರಳದ ಅತ್ಯುತ್ತಮ ಬಂದರು ನಗರಗಳಲ್ಲಿ ಒಂದು. ‘ಅರೇಬಿಯನ್ ಸಮುದ್ರದ ರಾಣಿ’ ಎಂದು ಜನಪ್ರಿಯವಾಗಿ ಕರೆಯಲ್ಪಡುವ ಕೊಚ್ಚಿಯು ವಿಶ್ವದ ಅತ್ಯುತ್ತಮ ನೈಸರ್ಗಿಕ ಬಂದರುಗಳಲ್ಲಿ ಒಂದಾಗಿದೆ . ಕೊಚ್ಚಿಯು ಅನೇಕ ಸಂಸ್ಕೃತಿಗಳು ಮತ್ತು ಧರ್ಮಗಳ ಭೂಮಿಯಾಗಿದೆ ಮತ್ತು ಅದರ ವಸಾಹತುಶಾಹಿ ಸೌಂದರ್ಯ ಮತ್ತು ಪರಂಪರೆಯನ್ನು ಯುರೋಪಿಯನ್ ವಾಸ್ತುಶೈಲಿಯೊಂದಿಗೆ ಹಳೆಯ ಪಟ್ಟಣವಾದ ಫೋರ್ಟ್ ಕೊಚ್ಚಿಯಲ್ಲಿ ಕಾಣಬಹುದು.

Coachin

ನಾವೂ ಇನ್ ಸ್ಟಾಗ್ರಾಮ್ ನಲ್ಲೂ ಇದ್ದೀವಿ! ನಮ್ಮ ಗ್ರೂಪ್ ಜಾಯಿನ್ ಆಗಿ.

ನೀವು ಪ್ರವಾಸ ಹೋಗುವ ತಾಣದ ಮಾಹಿತಿ, ಕನ್ನಡ.ಟ್ರಾವೆಲ್ (Kannada.Travel) ಜಾಲತಾಣದಲ್ಲಿ ಪ್ರಕಟವಾಗುವ ಬರಹಗಳ ವಿವರ, ಅಪರೂಪದ ಟ್ರಾವೆಲರ್ ಗಳ ಪರಿಚಯ, ಪ್ರವಾಸಿ ತಾಣಗಳ ಕುತೂಹಲಕರ ಚಿತ್ರ ಬರಹ ಎಲ್ಲವೂ ಇಲ್ಲಿ ನಿಮಗೆ ಸಿಗುತ್ತದೆ. ಬನ್ನಿ ಜೊತೆಯಾಗಿ.

Related Articles

Leave a Reply

Your email address will not be published. Required fields are marked *

Back to top button