ವಿಂಗಡಿಸದ

ರಾಷ್ಟ್ರೀಯ ಆಯುರ್ವೇದ ದಿನ: ಭಾರತದ ಅತ್ಯಂತ ಪ್ರಾಚೀನ ಚಿಕಿತ್ಸಾ ಪದ್ಧತಿ “ಆಯುರ್ವೇದ”

12,000 ವರ್ಷಗಳಿಗೂ ಹೆಚ್ಚು ಹಳೆಯದಾದ ಔಷಧೀಯ ಪದ್ಧತಿಯಾದ “ಆಯುರ್ವೇದ” ದ ಮಹತ್ವವನ್ನು ಅರಿಯುವ ನಿಟ್ಟಿನಿಂದ 2016ರಿಂದ ಪ್ರತಿವರ್ಷ ಧನ್ವಂತರಿ ಜಯಂತಿಯಂದು “ರಾಷ್ಟ್ರೀಯ ಆಯುರ್ವೇದ ದಿನ” ವನ್ನು ಆಚರಿಸಲಾಗುತ್ತದೆ.

ಉಜ್ವಲಾ ವಿ.ಯು

“ಆಯುರ್ವೇದ ಪದ್ಧತಿ” ಯ ಕುರಿತು:

“ಆಯುರ್ವೇದ” ಭಾರತದ ಅತ್ಯಂತ ಪ್ರಾಚೀನ ಚಿಕಿತ್ಸಾ ಪದ್ಧತಿಯಾಗಿದ್ದು, ವೇದಕಾಲಗಳಲ್ಲಿ ಋಷಿಮುನಿಗಳಿಂದ ಮೂಡಿಬಂದಿರುವ ಪದ್ಧತಿ ಇದಾಗಿದೆ. ಇದು ಅಥರ್ವಣವೇದದ ಉಪವೇದವೆಂದು ಹೇಳಲಾಗುತ್ತದೆ.

National Ayurveda Day

“ಸ್ವಸ್ಥಸ್ಯ ಸ್ವಾಸ್ಥ್ಯ ರಕ್ಷಣಂ ಆತುರಸ್ಯ ವಿಕಾರ ಪ್ರಶಮನಂ ಆಯುರ್ವೇದಮ್” ಎಂದರೆ ಆರೋಗ್ಯವಂತನು ಹೇಗೆ ತನ್ನ ಆರೋಗ್ಯವನ್ನು ಕಾಪಾಡಿಕೊಳ್ಳಬೇಕೆಂದು, ರೋಗಿಷ್ಟನು ಹೇಗೆ ತನ್ನ ರೋಗಕ್ಕೆ ಚಿಕಿತ್ಸೆ ನೀಡಬೇಕೆಂದು ತಿಳಿಸಿಕೊಡುವುದು ಆಯುರ್ವೇದದ ಮೂಲ ಉದ್ದೇಶವಾಗಿದೆ.

ಆಯುರ್ವೇದ ಪದ್ಧತಿಯು ದೇಹದಲ್ಲಿನ ವಾತ, ಪಿತ್ತ ಮತ್ತು ಕಫ ಎಂಬ ತ್ರಿದೋಷಗಳ ಅಸಮತೋಲನದಿಂದ ಉಂಟಾಗುವ ರೋಗಗಳಿಗೆ ಉಪಶಮನ ವಿಧಾನವನ್ನು ತಿಳಿಸಿಕೊಡುತ್ತದೆ. ಆಯುರ್ವೇದದಲ್ಲಿ ಒಟ್ಟು ಎಂಟು ರೀತಿಯ ಚಿಕಿತ್ಸಾ ವಿಧಾನವನ್ನು ವಿವರಿಸಲಾಗಿದೆ.

“Sushrutha” and “Charaka”

ಆಯುರ್ವೇದ (Ayurveda) ದ ಅತಿ ದೊಡ್ಡ ಮತ್ತು ಪ್ರಾಚೀನ ಗ್ರಂಥಗಳಾದ “ಚರಕ ಸಂಹಿತೆ” ಮತ್ತು “ಸುಶ್ರುತ ಸಂಹಿತೆ”ಯಲ್ಲಿ ಉಲ್ಲೇಖಿಸಲಾಗಿರುವ ಶಸ್ತ್ರಚಿಕಿತ್ಸೆ ಮತ್ತು ಇತರೆ ಚಿಕಿತ್ಸಾ ಕ್ರಮಗಳನ್ನು ಇಂದು ಕೂಡ ಆಧುನಿಕ ವೈದ್ಯ ಪದ್ಧತಿಯು ಅನುಸರಿಸುತ್ತಿದೆ.

“ಧನ್ವಂತರಿ ಜಯಂತಿ” ಮತ್ತು “ರಾಷ್ಟ್ರೀಯ ಆಯುರ್ವೇದ ದಿನ” :

ಆಯುರ್ವೇದದ ಅಧಿದೇವತೆ “ಧನ್ವಂತರಿ”. ಧನ್ವಂತರಿಯ ಜಪದಿಂದ ನಾನಾ ರೀತಿಯ ರೋಗಭಾದೆಗಳು ನಾಶ ಹೊಂದುತ್ತವೆ ಎಂಬುದು ನಂಬಿಕೆ. ಕಾರ್ತಿಕ ಮಾಸದ ಕೃಷ್ಣಪಕ್ಷದ ತ್ರಯೋದಶಿ ದಿನದಂದು “ಧನ್ವಂತರಿ ಜಯಂತಿ” ಆಚರಿಸಲಾಗುತ್ತದೆ.

“Dhanvantari”

ಅದೇ ದಿನದಂದು ಕೇಂದ್ರ ಆಯುಷ್ ಸಚಿವಾಲಯವು 28 ಅಕ್ಟೋಬರ್ 2016 ರಂದು ರಾಷ್ಟ್ರೀಯ ಆಯುರ್ವೇದ ದಿನವನ್ನು ಪ್ರಾರಂಭಿಸಿತು. ಹೀಗೆ ಪ್ರತಿವರ್ಷ ಧನ್ವಂತರಿ ಜಯಂತಿ ದಿನದಂದು “ರಾಷ್ಟ್ರೀಯ ಆಯುರ್ವೇದ ದಿನ” (National Ayurveda Day) ವನ್ನು ಕೂಡಾ ಆಚರಿಸಲಾಗುತ್ತದೆ.

ಈ ವರ್ಷ 2023 ರಂದು ನವೆಂಬರ 10ರಂದು (ಇಂದು) ಧನ್ವಂತರಿ ಜಯಂತಿ ಮತ್ತು ರಾಷ್ಟ್ರೀಯ ಆಯುರ್ವೇದ ದಿನವನ್ನು ನಾವು ಆಚರಿಸುತ್ತಿದ್ದೇವೆ.

ಕೇಂದ್ರ ಆಯುಷ್​ ಸಚಿವಾಲಯ 100 ವಿವಿಧ ದೇಶಗಳ ಸಚಿವಾಲಯದೊಂದಿಗೆ ಸೇರಿ ಜಾಗತಿಕವಾಗಿ ಈ ದಿನವನ್ನು ಆಚರಿಸಲು ಮುಂದಾಗಿದೆ.

ರಾಷ್ಟ್ರೀಯ ಆಯುರ್ವೇದ ದಿನ 2023ರ ಥೀಮ್ :

“ಪ್ರತೀ ದಿನ ಎಲ್ಲರಿಗೂ ಆಯುರ್ವೇದ” (ಹರ್ ದಿನ್ ಹರ್ ಕಿಸಿ ಕೆ ಲಿಯೇ ಆಯುರ್ವೇದ) ಎಂಬ ಧ್ಯೇಯವಾಕ್ಯದೊಂದಿಗೆ “ಆರೋಗ್ಯಕ್ಕಾಗಿ ಆಯುರ್ವೇದ” ಎಂಬ ಥೀಮ್ ನ್ನು ಇಟ್ಟುಕೊಂಡು ಈ ವರ್ಷದ ಆಯುರ್ವೇದದ ದಿನವನ್ನು ಆಚರಿಸಲಾಗುತ್ತಿದೆ.

ನಾವೂ ಇನ್ ಸ್ಟಾಗ್ರಾಮ್ ನಲ್ಲೂ ಇದ್ದೀವಿ! ನಮ್ಮ ಗ್ರೂಪ್ ಜಾಯಿನ್ ಆಗಿ.

ನೀವು ಪ್ರವಾಸ ಹೋಗುವ ತಾಣದ ಮಾಹಿತಿ, ಕನ್ನಡ.ಟ್ರಾವೆಲ್ (Kannada.Travel) ಜಾಲತಾಣದಲ್ಲಿ ಪ್ರಕಟವಾಗುವ ಬರಹಗಳ ವಿವರ, ಅಪರೂಪದ ಟ್ರಾವೆಲರ್ ಗಳ ಪರಿಚಯ, ಪ್ರವಾಸಿ ತಾಣಗಳ ಕುತೂಹಲಕರ ಚಿತ್ರ ಬರಹ ಎಲ್ಲವೂ ಇಲ್ಲಿ ನಿಮಗೆ ಸಿಗುತ್ತದೆ. ಬನ್ನಿ ಜೊತೆಯಾಗಿ.

Related Articles

Leave a Reply

Your email address will not be published. Required fields are marked *

Back to top button