ಮ್ಯಾಜಿಕ್ ತಾಣಗಳುವಿಂಗಡಿಸದ

ನಿಮ್ಮನ್ನು ಮಂತ್ರ ಮುಗ್ಧಗೊಳಿಸುತ್ತದೆ ಭಾರತದ ಈ ಐದು ಜಾಗಗಳು.

ಭಾರತದ ಸಾಂಸ್ಕೃತಿಕ , ಭೌಗೋಳಿಕವಾಗಿ ಭಿನ್ನತೆ ಇರುವ ರಾಷ್ಟ್ರ. ಇಲ್ಲಿನ ಪ್ರವಾಸಿ ತಾಣಗಳು ವಿದೇಶಿಗರನ್ನು ಕೂಡ ಆಕರ್ಷಿಸುತ್ತದೆ. ಪ್ರತಿ ತಾಣಗಳು ಒಂದೊಂದು ಅನುಭವ ನೀಡುತ್ತದೆ. ಭಾರತದ ಈ ಐದು ಜಾಗಗಳಿಗೆ ನೀವು ಭೇಟಿ ನೀಡಿದರೆ ಆ ತಾಣಗಳು ನಿಮ್ಮನ್ನು ಮಂತ್ರ ಮುಗ್ದಗೊಳಿಸುತ್ತದೆ . ಆ ತಾಣಗಳ ಕುರಿತಾದ ಮಾಹಿತಿ ಇಲ್ಲಿದೆ .

ನವ್ಯಶ್ರೀ ಶೆಟ್ಟಿ

ನಿಮ್ಮನ್ನು ಮಂತ್ರ ಮುಗ್ಧ ಗೊಳಿಸುವ ಭಾರತದ ಈ ಐದು ಜಾಗಗಳು.

ಯುಮ್ಥಾಂಗ್ ಕಣಿವೆ, ಸಿಕ್ಕಿಂ (YuMthang Valley, Sikkim)

ಸಿಕ್ಕಿಂ ಭಾರತದ ಸುಂದರ ರಾಜ್ಯಗಳಲ್ಲಿ ಒಂದು. ತನ್ನ ಪ್ರಾಕೃತಿಕ ಸೌಂದರ್ಯ ದಿಂದ ಸಿಕ್ಕಿಂ ಪ್ರವಾಸಿಗರನ್ನು ಆಕರ್ಷಿಸುತ್ತದೆ. ಈ ರಾಜ್ಯದಲ್ಲಿರುವ ಪ್ರವಾಸಿ ತಾಣವೇ ಯುಮ್ಹಾಂಗ್ ಕಣಿವೆ. ಭಾರತದ ಉತ್ತರ ಭಾಗದಲ್ಲಿರುವ ಈ ಜಾಗ ನಿಮ್ಮನ್ನು ಮಂತ್ರ ಮುಗ್ಧಗೊಳಿಸುತ್ತದೆ. ಬಣ್ಣ ಬಣ್ಣದ ಹೂವುಗಳು. ಕಣಿವೆಯ ಉತ್ತರದಲ್ಲಿ ಹರಿಯುವ ನದಿ ಇಲ್ಲಿನ ಪ್ರಮುಖ ಆಕರ್ಷಣೆ. ನೀವು ಒಮ್ಮೆ ಈ ಜಾಗಕ್ಕೆ ಭೇಟಿ ನೀಡಿದರೆ ಈ ತಾಣ ನಿಮಗೆ ಮರೆಯಲಾಗದ ನೆನಪುಗಳನ್ನು ಸೃಷ್ಟಿಸುತ್ತದೆ.

Yumnthang valley

ಶಾಂತಿನಿಕೇತನ, ಪಶ್ಚಿಮ ಬಂಗಾಳ(Shantiniketan, West Bengal)

ಪಶ್ಚಿಮ ಬಂಗಾಳ ರಾಜ್ಯದಲ್ಲಿರುವ ಶಾಂತಿನಿಕೇತನ ಬಗ್ಗೆ ಬಹುತೇಕರು ಕೇಳಿರುತ್ತಾರೆ. ಈ ಜಾಗ ಶಾಂತಿ , ಮನಸ್ಸಿನ ನೆಮ್ಮದಿ ಬಯಸುವವರಿಗೆ ಉತ್ತಮ ತಾಣ, . ಸುತ್ತಲು ಇರುವ ಹಸಿರಿನ ಪ್ರಕೃತಿ ನಿಮ್ಮ ಮನಸಿಗೆ ಮುದ ನೀಡುತ್ತದೆ. ರವಿಂದ್ರನಾಥ್ ಟ್ಯಾಗೋರ್ ವಿರಾಮ ತೆಗೆದುಕೊಳ್ಳುತ್ತಿದ್ದ ಜಾಗವಿದು.

Shantiniketan

ಬುರ್ಹಾನ್ ಪುರ , ಮಧ್ಯಪ್ರದೇಶ

ಮಧ್ಯಪ್ರದೇಶ ರಾಜ್ಯಕ್ಕೆ ಭೇಟಿ ನೀಡಿದವರು ಒಮ್ಮೆಯಾದರೂ ಬುರ್ಹಾನ್‌ಪುರಕ್ಕೆ ಭೇಟಿ ನೀಡಬೇಕು. 1400 AD ಯಲ್ಲಿ ಈ ಸ್ಥಳವನ್ನು ಸ್ಥಾಪಿಸಲಾಯಿತು. ಇದೊಂದು ಐತಿಹಾಸಿಕ ತಾಣ. ಬುರ್ಹಾನ್‌ಪುರವು ಶಾಹಿ ಕಿಲಾರ ನೆಲೆ, ಇದು ತಾಜ್ ಮಹಲ್‌ಗೆ ಸ್ಫೂರ್ತಿ ನೀಡಿತು ಎಂದು ಕೆಲವರು ಹೇಳಲಾಗುತ್ತದೆ. ಇಲ್ಲಿನ ಜಾಮಾ ಮಸೀದಿಯು ಉರ್ದು ಮತ್ತು ಸಂಸ್ಕೃತ ಎರಡರಲ್ಲೂ ಲಿಪಿಯನ್ನು ಒಳಗೊಂಡಿದೆ.

ನೀವು ಇದನ್ನು ಇಷ್ಟ ಪಡಬಹುದು:ಮಳೆಗಾಲದಲ್ಲಿ ನೋಡಬಹುದಾದ ಚೆಂದದ ೧೦ ಜಾಗಗಳು

Burhanpur

ಬಟರ್‌ಫ್ಲೈ ಬೀಚ್, ಗೋವಾ

ಗೋವಾ ಬಹುತೇಕರು ಭೇಟಿ ನೀಡಬೇಕು ಎಂದು ಬಯಸುವ ತಾಣ. ಗೋವಾ ವಿಸ್ಮಯದ ಜಾಗಗಳಲ್ಲಿ ಒಂದು. ಇಲ್ಲಿನ ಬೀಚ್ ಗಳು ಪ್ರವಾಸಿಗರನ್ನು ಆಕರ್ಷಿಸುತ್ತದೆ. ಅಂತಹ ಬೀಚ್ ಗಲ್ಲಿ ಬಟರ್‌ಫ್ಲೈ ಬೀಚ್ ಕೂಡ ಒಂದು. ಇದನ್ನು ಹನಿಮೂನ್ ಬೀಚ್ ಎಂತಲೂ ಕರೆಯುತ್ತಾರೆ. ಪಲೋರೆಂ ಬೀಚ್ ನಿಂದ ಬಟರ್ ಫ್ಲೈ ಬೀಚ್ ಗೆ ನೀವು ದೋಣಿ ಮೂಲಕ ಹೋಗಬಹುದು. ಗೋವಾದ ಕೆನಕೊಮ್ ಪ್ರದೇಶದಲ್ಲಿದೆ ಈ ಬೀಚ್. ಇಲ್ಲಿ ನೀವು ಚಿಟ್ಟೆ , ಡಾಲ್ಫಿನ್,ಅನೇಕ ಸಮುದ್ರ ಜೀವಿಗಳನ್ನು ಸಮುದ್ರದ ಅಲೆಗಳಲ್ಲಿ ಏರಿಳಿತಗಳು ಉಂಟಾದಾಗ ನೋಡಬಹುದು.

Butterfly beach

ತರಂಗಂಬಾಡಿ, ತಮಿಳುನಾಡು

ಸಂಗೀತ ನುಡಿಸುವ ಊರು ತರಂಗಬಾಡಿ ಎನ್ನುತ್ತಾರೆ. ಡ್ಯಾನಿಶ್ ವಾಸ್ತುಶಿಲ್ಪದ ಅದ್ಭುತಗಳಿಗೆ ಹೆಸರುವಾಸಿ ತರಂಗಂಬಾಡಿ . ಡ್ಯಾನಿಶ್ ಕೋಟೆ, ಡ್ಯಾನಿಶ್ ಮ್ಯೂಸಿಯಂ ಸೇರಿದಂತೆ ಇಲ್ಲಿ ಹಲವು ನೀವು ನೋಡಲು ಹಲವು ಜಾಗಗಳಿವೆ. ಈ Joonow@(tharangambadi) ತಮಿಳುನಾಡಿನ ಪಾಂಡಿಚೇರಿಯಿಂದ 4 ಗಂಟೆ ಪ್ರಯಾಣ ಮಾಡುವಷ್ಟು ದೂರವಿರುವ ಚಿಕ್ಕ ಪಟ್ಟಣ. ಈ ಊರಿಗೆ ಈ ಹೆಸರು ಬರಲು ಒಂದು ಕಾರಣವಿದೆ. ಈ ಪಟ್ಟಣ ಬಂಗಾಳಕೊಲ್ಲಿ ಕರಾವಳಿ ತೀರದಲ್ಲಿದ್ದು, ಇಲ್ಲಿ ಸದಾ ಕಾಲ ತರಂಗಗಳ ನಾದ ಸಂಗೀತದಂತೆ ಜೋಗುಳ ಹಾಡುತ್ತಿರುತ್ತದೆ. ಅದಕ್ಕೆ ತರಂಗಬಾಡಿ ಎಂದು ಕರೆಯಲಾಗುತ್ತದೆ.

Tarangabadi

ನಾವೂ ಟೆಲಿಗ್ರಾಮ್ ನಲ್ಲೂ ಇದ್ದೀವಿ! ಕನ್ನಡ.ಟೆಲಿಗ್ರಾಮ್ ಗ್ರೂಪ್ ಜಾಯಿನ್ ಆಗಿ. 

ನೀವು ಪ್ರವಾಸ ಹೋಗುವ ತಾಣದ ಮಾಹಿತಿ, ಕನ್ನಡ.ಟ್ರಾವೆಲ್ (Kannada.Travel) ಜಾಲತಾಣದಲ್ಲಿ ಪ್ರಕಟವಾಗುವ ಬರಹಗಳ ವಿವರ, ಅಪರೂಪದ ಟ್ರಾವೆಲರ್ ಗಳ ಪರಿಚಯ, ಪ್ರವಾಸಿ ತಾಣಗಳ ಕುತೂಹಲಕರ ಚಿತ್ರ, ಬರಹ ಎಲ್ಲವೂ ಇಲ್ಲಿ ನಿಮಗೆ ಸಿಗುತ್ತದೆ. ಬನ್ನಿ ಜೊತೆಯಾಗಿ.

Related Articles

Leave a Reply

Your email address will not be published. Required fields are marked *

Back to top button