ವಿಂಗಡಿಸದ

ಪ್ರವಾಸಿಗರ ಸ್ವರ್ಗ ದೂದ್ ಸಾಗರ್

ದಿನದಿಂದ ದಿನಕ್ಕೆ ಬೆಳೆಯುತ್ತಿರುವ ನಗರ ಪ್ರದೇಶದಲ್ಲಿರುವ ಜನರು ಮತ್ತೆ ಅದೇನು ಹೊಸತನ್ನು ನೋಡಬೇಕು, ನೋಡಿದ್ದನ್ನು ಅನುಭವಕ್ಕೆ ಪಡೆದುಕೊಳ್ಳಬೇಕು ಎನ್ನುವವರು ಸದಾ ಪ್ರವಾಸಿ ತಾಣಗಳ ಕಡೆ ಮನಸ್ಸು ಹಾಯಿಸುತ್ತಾರೆ. ಅಂತಹ ಪ್ರವಾಸ ಪ್ರಿಯರು ಮೊದಲು ಬ್ಯಾಗ್ ಪ್ಯಾಕ್ ಮಾಡಬೇಕಾದದು, ಬಂದ ಪ್ರವಾಸಿಗರನ್ನು ಹಿಂದಿರುಗಲು ಬಿಡದಂತೆ ಆಕರ್ಷಿಸುವ ದೂದ್ ಸಾಗರ್ ನತ್ತ. ಪ್ರವಾಸಿಗರರನ್ನು ತನ್ನತ್ತ ಕೈ ಬೀಸಿ ಕರೆಯುವ ದೂದ್ ಸಾಗರ್ ಕುರಿತಾದ ಮಾಹಿತಿ ನಿಮಗಾಗಿ

ರಾಹುಲ್ ಆರ್ ಸುವರ್ಣ

ಸ್ವರ್ಗಕ್ಕೆ ಇನ್ನೊಂದು ಹೆಸರಿನಂತಿರುವ ದೂದ್ ಸಾಗರ್, ವಿಶ್ವದಲ್ಲಿ ಐದನೇ ಅತಿ ದೊಡ್ಡ ಜಲಪಾತ. ಅತಿ ಎತ್ತರದಿಂದ ಹಾಲಿನ ನೊರೆಯಂತೆ ಧುಮ್ಮಿಕ್ಕುವ ಈ ಜಲಪಾತ ಗೋವಾ ರಾಜಧಾನಿ ಪಣಜಿಯಿಂದ ಕೇವಲ 60 ಕಿಲೋಮೀಟರ್ ದೂರದಲ್ಲಿದೆ. ಮಳೆಗಾಲದಲ್ಲಂತೂ ಈ ಸ್ಥಳವು ಬಂದ ಪ್ರವಾಸಿಗರ ಕಣ್ಣು ಮಿಟುಕಿಸಲೂ ಬಿಡುವುದಿಲ್ಲ. ಕರ್ನಾಟಕದ ಗಡಿಭಾಗದಲ್ಲಿರುವ ಇದು ಮಡಗಾವ್ ಹತ್ತಿರ ಹತ್ತಿರದಲ್ಲಿದೆ.

Falls

ದೂದ್ ಸಾಗರ್ ತಲುಪುವ ದಾರಿ

ದೂದ್ ಸಾಗರ್ ಹೋಗಬೇಕೆಂದು ಕೊಂಡವರಿಗೆ ರೈಲುಮಾರ್ಗ ಅತಿ ಸುರಕ್ಷಿತ. ಬೆಳಗಾವಿಯಿಂದ ನಿತ್ಯ ಬೆಳಗ್ಗೆ 10:30 ಕ್ಕೆ ಕ್ಯಾಸಲ್ ರಾಕ್ ಗೆತೆರಳುವ ರೈಲಿಗೆ ಹತ್ತಿದರೆ ದೂದ್ಘಾಗರ್ ಇಳಿಯಬಹುದು. ಸಂಜೆ 5 ಗಂಟೆ ಸುಮಾರಿಗೆ ಅದೇ ಮಾರ್ಗವಾಗಿ ಬರುವ ನಿಜಮುದ್ದಿನ್ ಎಕ್ಸೆಸ್ ನಲ್ಲಿ ಕೂತು ಅಲ್ಲಿಂದ ದೂದ್ ಸಾಗರ್ ನಿಂದ ದೂರಾಗಬಹುದು. ಕರ್ನಾಟಕದಿಂದ ಹೋಗಬೇಕಾದರೆ ವಾಸ್ಕೋ ಗೋವಾ ಮಾರ್ಗದ ರೈಲು ಹತ್ತಿದರೆ, ಅದೇ ಮಾರ್ಗದಲ್ಲಿ ಸಿಗುವ ಲೋಂಡಾ ಇಳಿದುಕೊಂಡರೆ ದೂದ್ ಸಾಗರ್ ಗೆ ಹೋಗುವ ರಸ್ತೆ ಸಿಗುತ್ತದೆ. ಅಲ್ಲಿಂದ ಕ್ಯಾಸಲ್ ರಾಕ್ ಗೆ ಹೋಗುವ ರೈಲನ್ನು ಹತ್ತಿದರೆ, ಸುರಂಗ ಮಾರ್ಗದಲಿ ಚಲಿಸುವ ಈ ರೈಲು ಮತ್ತೊಂದು ಲೋಕಕ್ಕೆ ಸಾಗುತ್ತಿದ್ದೇವೋ ಎನ್ನುವ ಅನುಭವವನ್ನು ನಮಗಿಡುತ್ತದೆ.

ಇಲ್ಲಿ ಪ್ರಯಾಣಿಕರಿಗೆ ಅಗತ್ಯವಾಗಿ ಬೇಕಾಗುವ ಟೀಸ್ಟಾಲ್,ಶೌಚಾಲಯ ಹಾಗೂ ರೈಲು ನಿಲ್ದಾಣದಿಂದ ಜಲಪಾತಕ್ಕೆ ತಲುಪಲು ಪಾಥ್ ವೇ ದೂದ್ ಸಾಗರ್ ಪ್ರದೇಶಗಳನ್ನು ಅಭಿವೃದ್ಧಿಪಡಿಸಲಾಗಿದೆ. ಬೆಳಗಾವಿ ಗೋವಾ- ಉತ್ತರಕನ್ನಡ ಈ ಮೂರು ಜಿಲ್ಲೆಗಳ ಸಂಗಮ ಇದಾಗಿದೆ. ಸುತ್ತಲು ಮಂಜಿನಿಂದ ಆವರಿಸಲ್ಪಟ್ಟ ಹಾಲಿನಂತೆ ದುಮ್ಮಿಕ್ಕುವ ಈ ಜಲ ಸಾಗರದ ಸುತ್ತಮುತ್ತಲು ಹಚ್ಚ-ಹಸಿರು ತುಂಬಿಕೊಂಡಿರುವುದರಿಂದ ಪ್ರವಾಸಿಗರು ಖಂಡಿತ ಇಷ್ಟ ಪಡುವಂತಿದೆ.

ನೀವು ಇದನ್ನು ಇಷ್ಟ ಪಡಬಹುದು:ಕೊಡಗಿನಲ್ಲಿರುವ ಚೆಂದದ  ಅಬ್ಬಿ ಜಲಪಾತ

Goa

ಪ್ರವಾಸಿಗರ ಮನಕ್ಕೆ ಹಿಡಿಸುವ ದೂದ್ ಸಾಗರಂತೂ ಭೂಲೋಕದ ಸ್ವರ್ಗದಂತೆ ಕಾಣುತ್ತಿರುತ್ತದೆ. ಅಲ್ಲಿಗೆ ತಲುಪುವುದು ತುಸು ಕಷ್ಟವೇ ಇರಬಹುದು. ಆದರೆ ಬಾಯಿ ಮೊಸರಾಗ ಬೇಕಾದರೆ ಕೈ ಕೆಸರಾಗಲೇಬೇಕಲ್ಲವೇ? ಈಗ ಕೋವಿಡ್ ನಿರ್ಬಂಧಗಳು ಸಡಿಲಗೊಂಡಿದ್ದು, ದೂದ್ ಸಾಗರ್ ಜಲಪಾತದಲ್ಲಿ ಪ್ರವಾಸಿಗರು ಸೇರುವ ನಿರೀಕ್ಷೆಯಿದೆ. ರೈಲ್ವೆ ನಿಲ್ದಾಣದಿಂದ ಜಲಪಾತದವರೆಗೂ ಕಾಂಕ್ರೀಟ್ ಕ್ಲೀಪರ್ ಗಳು ಹಾಗೂ ದೂದ್ ಸಾಗರ್ ಜಲಪಾತದ ಎದುರು ಕುಳಿತು ಪ್ರಕೃತಿ ಸೊಬಗನ್ನು ಸವಿಯಲು ಸ್ಟೆಪ್ ಗಾರ್ಡನ್, ಬೆಂಚ್ಚಳು ನಿಮಗಾಗಿ ಕಾಯುತ್ತಿವೆ. ಈ ಪ್ರದೇಶದಲ್ಲಿ ಏಕಕಾಲಕ್ಕೆ 75 ಜನರು ಬರುವಷು, ಸೌಲಭ್ಯವಿದ್ದು ವ್ಯೂ ಪಾಯಿಂಟ್ ವ್ಯವಸ್ಥೆ ಕಲ್ಪಿಸಲಾಗಿದೆ.

Dudhsagar falls

ನಾವೂ ಟೆಲಿಗ್ರಾಮ್ ನಲ್ಲೂ ಇದ್ದೀವಿ! ಕನ್ನಡ.ಟೆಲಿಗ್ರಾಮ್ ಗ್ರೂಪ್ ಜಾಯಿನ್ ಆಗಿ.

ನೀವು ಪ್ರವಾಸ ಹೋಗುವ ತಾಣದ ಮಾಹಿತಿ, ಕನ್ನಡ.ಟ್ರಾವೆಲ್ (Kannada.Travel) ಜಾಲತಾಣದಲ್ಲಿ ಪ್ರಕಟವಾಗುವ ಬರಹಗಳ ವಿವರ, ಅಪರೂಪದ ಟ್ರಾವೆಲರ್ ಗಳ ಪರಿಚಯ, ಪ್ರವಾಸಿ ತಾಣಗಳ ಕುತೂಹಲಕರ ಚಿತ್ರ ಬರಹ ಎಲ್ಲವೂ ಇಲ್ಲಿ ನಿಮಗೆ ಸಿಗುತ್ತದೆ. ಬನ್ನಿ ಜೊತೆಯಾಗಿ.

Related Articles

Leave a Reply

Your email address will not be published. Required fields are marked *

Back to top button