ವೈವಿಧ್ಯಮಯ ಕಲಾ ಪ್ರಕಾರಗಳಿಂದ ಮಿಂಚಿದ 2024ರ ಚಿತ್ರ ಸಂತೆ; ಫೋಟೋಸ್ ಇಲ್ಲಿವೆ
ಕರ್ನಾಟಕ ಚಿತ್ರಕಲಾ ಪರಿಷತ್ತು ನಿನ್ನೆ (ಜ.7 ಭಾನುವಾರ) ಬೆಂಗಳೂರಿನ ಕುಮಾರಕೃಪ ರಸ್ತೆಯಲ್ಲಿ ಆಯೋಜಿಸಿದ್ದ 21ನೇ ಚಿತ್ರಸಂತೆ ಯಶಸ್ವಿಯಾಗಿ ಪೂರ್ಣಗೊಂಡಿದೆ.
ಬಾಹ್ಯಾಕಾಶ ಕ್ಷೇತ್ರದಲ್ಲಿ ಸಾಧನೆ ಮಾಡಿದ ಭಾರತೀಯ ವಿಜ್ಞಾನಿಗಳಿಗೆ ಈ ಬಾರಿಯ ಚಿತ್ರಸಂತೆಯನ್ನು ಸಮರ್ಪಣೆ ಮಾಡಲಾಗಿದೆ.
ಕುಮಾರಕೃಪ ರಸ್ತೆಯಿಂದ ಶಿವಾನಂದ ಸರ್ಕಲ್ಗೆ ಸಂಪರ್ಕ ಕಲ್ಪಿಸುವ ರಸ್ತೆಯ ಉದ್ದಕ್ಕೂ ವಿವಿಧ ಪ್ರಕಾರದಕಲಾಕೃತಿಗಳ ಪ್ರದರ್ಶನ ಕಣ್ಮನ ಸೆಳೆಯಿತು. ರಸ್ತೆಯು ಜನಜಂಗುಳಿಯಿಂದ ತುಂಬಿತ್ತು.
ನಿನ್ನೆ ಬೆಳಗ್ಗೆ 8 ಗಂಟೆಯಿಂದ ರಾತ್ರಿ 8 ಗಂಟೆಯವರೆಗೆ ಚಿತ್ರಕಲೆಗಳ ಪ್ರದರ್ಶನ ನಡೆದಿದ್ದು, 100 ರೂಪಾಯಿಯಿಂದ ಹಿಡಿದು ಲಕ್ಷಕ್ಕೂ ಅಧಿಕ ಮೌಲ್ಯದ ಪೇಂಟಿಂಗ್ಗಳು ಇಲ್ಲಿ ಇದ್ದವು.
ಕರ್ನಾಟಕ ಮಾತ್ರವಲ್ಲದೆ 20ಕ್ಕೂ ಹೆಚ್ಚು ರಾಜ್ಯಗಳಿಂದ ಸುಮಾರು 1000 ಕ್ಕೂ ಹೆಚ್ಚು ಕಲಾವಿದರು ಭಾಗವಹಿಸಿದ್ದರು.
ಆಧುನಿಕತೆಯನ್ನು ಇತಿಹಾಸದೊಂದಿಗೆ ಬೆಸೆದು ಸಾಂಪ್ರದಾಯಿಕ ಮತ್ತು ಸಮಕಾಲೀನ ಕಲಾ ಪ್ರಕಾರಗಳಿಗೆ ಮಹತ್ವದ ಸ್ಥಾನ ನೀಡಲಾಗಿತ್ತು.
ಕೆಲವರು ಆಧ್ಯಾತ್ಮಿಕ ಕಲೆಗಳನ್ನು ಪ್ರದರ್ಶಿಸಿದರೆ, ಇನ್ನು ಕೆಲವರು ಲೌಕಿಕ ದೈನಂದಿನ ಜೀವನದ ಕಷ್ಟ ಸುಖಗಳನ್ನು ಚಿತ್ರ ಕಲೆಯಲ್ಲಿ ಮೂಡಿಸಿದ್ದರು.
ದೇಶದ ವಿವಿಧ ಐತಿಹಾಸಿಕ ತಾಣಗಳ ಚಿತ್ರಗಳು ಮನಮೋಹಕವಾಗಿತ್ತು. ಚಲನಚಿತ್ರ ಕಲಾವಿದರ ಚಿತ್ರಗಳೂ ಸಹ ಇದ್ದವು.
ಪೊಟ್ರ್ಯಾಟ್ ಚಿತ್ರ ಕಲಾವಿದರು ಅಲ್ಲಿಯೇ ಜನರ ಚಿತ್ರಗಳನ್ನು ಬಿಡಿಸುತ್ತಿದ್ದರು. ದಂಪತಿಗಳು, ಮಕ್ಕಳು ಅನೇಕರು ತಮ್ಮ ಚಿತ್ರಗಳನ್ನು ಅವರ ಬಳಿ ಮಾಡಿಸಿಕೊಳ್ಳುವ ಮೂಲಕ ಚಿತ್ರಗಳನ್ನು ಆನಂದಿಸಿದರು.
ಚಿಕಣಿ ಕಲೆ, ಮರದಿಂದ ಕೆತ್ತಿದ ಚಿತ್ರಗಳು, ತೆಂಗಿನ ಕಾಯಿಯಿಂದ ಮೂಡಿಬಂದ ಚಿತ್ರಗಳು, ಮರಳಿನ ಚಿತ್ರ ಕಲೆ ಹೀಗೆ ಈ ಬಾರಿಯ ಚಿತ್ರ ಸಂತೆ ವೈವಿಧ್ಯಮಯ ಕಲಾ ಪ್ರಕಾರಗಳಿಂದ ಕೂಡಿತ್ತು.
ನಾವೂ ಇನ್ ಸ್ಟಾಗ್ರಾಮ್ ನಲ್ಲೂ ಇದ್ದೀವಿ! ನಮ್ಮ ಗ್ರೂಪ್ ಜಾಯಿನ್ ಆಗಿ.
ನೀವು ಪ್ರವಾಸ ಹೋಗುವ ತಾಣದ ಮಾಹಿತಿ, ಕನ್ನಡ.ಟ್ರಾವೆಲ್ (Kannada.Travel) ಜಾಲತಾಣದಲ್ಲಿ ಪ್ರಕಟವಾಗುವ ಬರಹಗಳ ವಿವರ, ಅಪರೂಪದ ಟ್ರಾವೆಲರ್ ಗಳ ಪರಿಚಯ, ಪ್ರವಾಸಿ ತಾಣಗಳ ಕುತೂಹಲಕರ ಚಿತ್ರ ಬರಹ ಎಲ್ಲವೂ ಇಲ್ಲಿ ನಿಮಗೆ ಸಿಗುತ್ತದೆ. ಬನ್ನಿ ಜೊತೆಯಾಗಿ.