ವಿಂಗಡಿಸದ

ಮಕರ ಸಂಕ್ರಾಂತಿಯನ್ನು ಇಲ್ಲಿ ವಿಭಿನ್ನವಾಗಿ ಆಚರಿಸಲಾಗುತ್ತದೆ

ಸಂಕ್ರಾಂತಿಯನ್ನು ಒಂದೊಂದು ರಾಜ್ಯದಲ್ಲಿ ಒಂದೊಂದು ರೀತಿ ಆಚರಿಸುವುದನ್ನು ಕಾಣುತ್ತೇವೆ. ಕರ್ನಾಟಕದಲ್ಲಿ ಸಂಕ್ರಾಂತಿ, ತೆಲುಗು ರಾಜ್ಯಗಳಲ್ಲಿ ಭೋಗಿ, ತಮಿಳುನಾಡಿನಲ್ಲಿ ಪೊಂಗಲ್, ಅಸ್ಸಾಂನಲ್ಲಿ ಬಿಹು, ಪಂಜಾಬ್‌ನಲ್ಲಿ ಲೋಹ್ರಿ, ಗುಜರಾತ್‌ನಲ್ಲಿ ಉತ್ತರಾಯಣವನ್ನಾಗಿ ಆಚರಿಸುವುದು ವಿಶೇಷ. ಇನ್ನು ಮಕರ ಸಂಕ್ರಾಂತಿಗೆ ಇನ್ನೂ ಕೆಲವೇ ದಿನಗಳಿವೆ. ಸಂಕ್ರಾತಿ ರಜೆಯನ್ನು ಪ್ರವಾಸದ ಜೊತೆಗೆ ಕಳೆಯಬೇಕು ಅನ್ನುವವರು ಈ ಜಾಗಗಳಿಗೆ ಭೇಟಿ ನೀಡಿ ಆಚರಣೆಗಳನ್ನು ಕಣ್ತುಂಬಿಕೊಳ್ಳಿ.

ಕರ್ನಾಟಕ (Karnataka)

ಕರ್ನಾಟಕದಲ್ಲಿ ಸಂಕ್ರಾಂತಿ, ಮಕರ ಸಂಕ್ರಾಂತಿ ಅಥವಾ ಮಕರ ಸಂಕ್ರಮಣ ಎಂದೇ ಪ್ರಸಿದ್ಧ . ರೈತರಿಗೆ ಪ್ರಮುಖ ಹಬ್ಬವಾಗಿದೆ. ಮಕರ ಸಂಕ್ರಮಣವು ಉತ್ತಮ ಇಳುವರಿಗಾಗಿ ದೇವರನ್ನು ಪ್ರಾರ್ಥಿಸುವುದು, ವಿಶೇಷವೆಂದರೆ ಎಳ್ಳು-ಬೆಲ್ಲದ ಮಿಶ್ರಣ ಮಾಡುತ್ತಾರೆ. ಇನ್ನು ಕರಾವಳಿಯ ಪ್ರಸಿದ್ಧ ದೇವಸ್ಥಾನದಲ್ಲಿ ಪ್ರಸಿದ್ಧ ಜಾತ್ರೆ ಕೂಡ ಸಂಕ್ರಾತಿ ದಿನ ನಡೆಯುತ್ತದೆ. ಸಂಕ್ರಾತಿ ದಿನ ನಡೆಯುವ ಮಾರಣಕಟ್ಟೆ ಬ್ರಹ್ಮಲಿಂಗೇಶ್ವರ ದೇವಸ್ಥಾನದ ಜಾತ್ರೆ ಕರಾವಳಿಗರಿಗೆ ವಿಶೇಷ.

Karnataka

ಒಂದು ವೇಳೆ ನೀವು ಸಂಕ್ರಾಂತಿಗೆ ಮಾರಣಕಟ್ಟೆ ಜಾತ್ರೆಗೆ ಹೋದರೆ ಕೊಲ್ಲೂರು ದೇವಾಲಯಕ್ಕೆ ಹೋಗಿ ಬರಬಹುದು. ಹತ್ತಿರದ ಮರವಂತೆ ಕಡಲ ತೀರಕ್ಕೆ ಕೂಡ ಭೇಟಿ ನೀಡಬಹುದು.

ಅಹಮದಾಬಾದ್ (ಗುಜರಾತ್) (Ahmedabad,Gujarat)

ಗುಜರಾತ್‌ನಲ್ಲಿ ಮಕರ ಸಂಕ್ರಾಂತಿಯನ್ನು ಉತ್ತರಾಯಣ ಎಂದು ಆಚರಿಸಲಾಗುತ್ತದೆ. ಅದರಲ್ಲೂ ಅಹಮದಾಬಾದ್‌ನಲ್ಲಿ ಉತ್ತರಾಯಣವನ್ನು ವಿಶಿಷ್ಟವಾಗಿ ಆಚರಿಸಲಾಗುತ್ತಿದೆ. ಹೀಗಾಗಿ ಇಲ್ಲಿಗೆ ಭೇಟಿ ನೀಡಿದರೆ ನೀವು ಸಂಕ್ರಾಂತಿಯ ವಿಶೇಷ ಆಚರಣೆಯನ್ನು ಕಣ್ತುಂಬಿಕೊಳ್ಳಬಹುದು.

Ahmadabad

ಅಮೃತಸರ, ಪಂಜಾಬ್ (Amritsar, Punjab)

ಮಕರ ಸಂಕ್ರಾಂತಿ ಹಬ್ಬವನ್ನು ಲೋಹ್ರಿಯಾಗಿ ಆಚರಿಸುತ್ತಾರೆ. ಲೋರ್ಹಿ ಹೊಸ ಸುಗ್ಗಿಯ ಆರಂಭದ ಸಂಕೇತ. ಹೀಗಾಗಿ ಈ ಹಬ್ಬದ ಹಿಂದಿನ ರಾತ್ರಿ ಜನರು ಬೃಹತ್ ಫೈಯರ್ ಕ್ಯಾಂಪ್‌ಗಳನ್ನು ಹಾಕುತ್ತಾರೆ. ಭಾಂಗ್ರಾ ನೃತ್ಯವನ್ನು ಮಾಡುತ್ತಾರೆ. ತಮ್ಮ ಪ್ರೀತಿಪಾತ್ರರನ್ನು ಭೇಟಿಯಾಗಿ ಹಬ್ಬದ ಶುಭಾಶಯಗಳನ್ನು ವಿನಿಮಯ ಮಾಡಿಕೊಳ್ಳುತ್ತಾರೆ.

ನೀವು ಇದನ್ನು ಇಷ್ಟ ಪಡಬಹುದು:ಅಯೋಧ್ಯೆ ರೈಲು ಜಂಕ್ಷನ್ ಇನ್ಮುಂದೆ ‘ ಅಯೋಧ್ಯಾ ಧಾಮ ‘

Amritsar

ಜೈಪುರ, ರಾಜಸ್ಥಾನ (Jaipur,Rajasthan)

ಸಂಕ್ರಾಂತಿ ಹಬ್ಬದ ಸಂದರ್ಭದಲ್ಲಿ ರಾಜಸ್ಥಾನದ ಜೈಪುರದಲ್ಲಿ ಹಲವು ಆಚರಣೆಗಳನ್ನು ಮಾಡಲಾಗುತ್ತದೆ. ಜನರು ಬಣ್ಣದ ಗಾಳಿಪಟಗಳನ್ನು ಹಾರಿಸುವ ಮೂಲಕ ಸಂಭ್ರಮಿಸುತ್ತಾರೆ. ಇಡೀ ಆಕಾಶ ಬಣ್ಣ ಬಣ್ಣಗಳಿಂದ ಕೂಡಿದ ಬೃಹತ್ ಗಾಳಿಪಟಗಳಿಂದ ತುಂಬಿ ಹೋಗಿರುತ್ತದೆ.

ಮಧುರೈ, ತಮಿಳುನಾಡು(Madurai, Tamilnadu)

ತಮಿಳುನಾಡನ್ನು ದೇವಾಲಯಗಳ ನಾಡು ಅಂತಲೇ ಕರೆಯಲಾಗುತ್ತದೆ. ಇಲ್ಲಿನ ಜನಪ್ರಿಯ ದೇವಾಲಯಗಳಲ್ಲಿ ಮಧುರೈ ಅಗ್ರಸ್ಥಾನದಲ್ಲಿದೆ. ಈ ನಗರದಲ್ಲಿ ಪುರಾತನ ಕಾಲದ ಮಧುರೈ ಮೀನಾಕ್ಷಿ ದೇವಾಲಯನ್ನು ನೋಡುವುದೇ ಚೆಂದ. ಮಕರ ಸಂಕ್ರಾಂತಿ ಹಬ್ಬಕ್ಕೆ ಮಧುರೈ ಪ್ರಸಿದ್ಧವಾಗಿದ್ದು, ಅಕ್ಕಿ, ಬೆಲ್ಲ ಮತ್ತು ತುಪ್ಪದಿಂದ ಮಾಡಿದ ಪೊಂಗಲ್, ಜಲ್ಲಿಕಟ್ಟು ಪ್ರಮುಖ ಆಕರ್ಷಣೆಗಳಾಗಿವೆ.

ನಾವೂ ಇನ್ ಸ್ಟಾಗ್ರಾಮ್ ನಲ್ಲೂ ಇದ್ದೀವಿ! ನಮ್ಮ ಗ್ರೂಪ್ ಜಾಯಿನ್ ಆಗಿ.

ನೀವು ಪ್ರವಾಸ ಹೋಗುವ ತಾಣದ ಮಾಹಿತಿ, ಕನ್ನಡ.ಟ್ರಾವೆಲ್ (Kannada.Travel) ಜಾಲತಾಣದಲ್ಲಿ ಪ್ರಕಟವಾಗುವ ಬರಹಗಳ ವಿವರ, ಅಪರೂಪದ ಟ್ರಾವೆಲರ್ ಗಳ ಪರಿಚಯ, ಪ್ರವಾಸಿ ತಾಣಗಳ ಕುತೂಹಲಕರ ಚಿತ್ರ ಬರಹ ಎಲ್ಲವೂ ಇಲ್ಲಿ ನಿಮಗೆ ಸಿಗುತ್ತದೆ. ಬನ್ನಿ ಜೊತೆಯಾಗಿ.

Related Articles

Leave a Reply

Your email address will not be published. Required fields are marked *

Back to top button