ವಿಂಗಡಿಸದಸಂಸ್ಕೃತಿ, ಪರಂಪರೆ

ಪಶ್ಚಿಮ ತಿರುಪತಿ ಎಂದೇ ಪ್ರಸಿದ್ಧಿ ಪಡೆದಿದೆ ಕಾರ್ಕಳದ ಈ ದೇಗುಲ.

ಉಡುಪಿ (Udupi )ಜಿಲ್ಲೆಯ ಕಾರ್ಕಳ (karkala)ತಾಲೂಕಿನ ಮುಖ್ಯ ಪೇಟೆಯಲ್ಲಿ ಒಂದು ವೆಂಕಟರಮಣ ದೇವಾಲಯವಿದೆ(Venakataraman Temple). ಈ ವೆಂಕಟರಮಣ ದೇವಸ್ಥಾನವನ್ನು ಭಕ್ತರು  ತಿರುಪತಿಗೆ ಪರ್ಯಾಯವೆಂದೆ ಭಾವಿಸುತ್ತಾರೆ. ಪಡು ಎಂದರೆ ಪಶ್ಚಿಮ ಎಂದರ್ಥ. ಈ ದೇವಾಲಯವು ತಿರುಪತಿಯ ಪಶ್ಚಿಮಕ್ಕೆ ನೆಲೆಸಿರುವುದರಿಂದ ಪಡು ತಿರುಪತಿ ಎಂದು ಹೆಸರು ಬಂತೆಂದು ಹೇಳಲಾಗುತ್ತದೆ.

Shri venkataraman temple

ಅದೊಂದೇ ಕಾರಣ ಅಲ್ಲ, ಈ ದೇವಾಲಯ ಇನ್ನೂ ಹಲವು ವಿಶೇಷತೆ ಕಾರಣಕ್ಕೆ ಎಲ್ಲರನ್ನೂ ಸೆಳೆಯುತ್ತದೆ.  ದೇವಾಲಯದಲ್ಲಿ ಪ್ರತಿಷ್ಠಾಪಿಸಲಾಗಿರುವ ವೆಂಕಟರಮಣ ಮೂರ್ತಿ ಇಲ್ಲಿನ ಸ್ಥಳೀಯ ಗೌಡ ಸಾರಸ್ವತ ಬ್ರಾಹ್ಮಣರ ಆರಾಧ್ಯ ದೈವ. ಅಂಗಡಿಕೇರಿಯ ನಡುವೆ ಸಾಂಪ್ರದಾಯಿಕ ಶೈಲಿಯಲ್ಲಿ ನಿರ್ಮಾಣಗೊಂಡ ವಿಶಾಲ ದೇವಾಲಯವಿದು.

ಇತಿಹಾಸದ ಪ್ರಕಾರ  ಸುಮಾರು 14ನೇ ಶತಮಾನದಲ್ಲಿ ಪೋರ್ಚುಗೀಸರ ದಾಳಿಯಿಂದ ಗೋವಾದಿಂದ ಕಾರ್ಕಳಕ್ಕೆ ಬಂದಿದ್ದ ಗೌಡ ಸಾರಸ್ವತ ಬ್ರಾಹ್ಮಣರಲ್ಲಿ  ಒಂದು ಕುಟುಂಬ ಗೋವಾದಿಂದ ವೆಂಕಟೇಶ್ವರ ವಿಗ್ರಹವನ್ನು ತಂದಿದ್ದರು. ಆ ಸಮಯಕ್ಕೆ ಕಾರ್ಕಳದಲ್ಲಿ ವೈಷ್ಣವ ದೇವಾಲಯಗಳು ಇರಲಿಲ್ಲ. ಹಾಗಾಗಿ ಆ ಕುಟುಂಬ ತಾವು ತಂದಿದ್ದ ವಿಗ್ರಹಕ್ಕೆ ದೇವಾಲಯ ನಿರ್ಮಿಸಲು ಜೈನ ಅರಸರಲ್ಲಿ ಅನುಮತಿ ಕೋರುತ್ತದೆ. ಅದರಂತೆ ಆ ಕುಟುಂಬ ತಂದಿದ್ದ ವಿಗ್ರಹಕ್ಕೆ ಇಲ್ಲಿ ದೇವಾಲಯ ನಿರ್ಮಾಣ ಆಗಿದೆ ಎಂದು ಪುರಾಣಗಳು ಹೇಳುತ್ತವೆ.

ನೀವು ಇದನ್ನು ಇಷ್ಟ ಪಡಬಹುದು:ಉಡುಪಿಗೆ ಹೋದಾಗ ವರಂಗಕ್ಕೂ ಹೋಗಿ ಬನ್ನಿ

Padu tirupati

ತಿರುಪತಿಗೆ ಹಾಗೂ ಇಲ್ಲಿನ ದೇವಾಲಯಕ್ಕೆ ಅವಿನಾಭಾವ ಸಂಬಂಧ

ಆ ಕಾಲಘಟ್ಟದಲ್ಲಿ ನಡೆದ ಕೆಲ ಘಟನೆಗಳಿಂದ ಇಲ್ಲಿನ ವೆಂಕಟರಮಣ ದೇವರ ಮೂರ್ತಿ ಮೂಲ್ಕಿಯಲ್ಲಿ(Mulki) ಪ್ರತಿಷ್ಠಾಪನೆಗೊಳ್ಳುತ್ತದೆ. ಕಾರ್ಕಳದ ವೆಂಕರಮಣ ದೇಗುಲಕ್ಕೆ ತಿರುಪತಿಯಿಂದ ಓರ್ವ ಸನ್ಯಾಸಿಯು ಬಂದು ಅಲ್ಲಿಂದ ತಂದಿದ್ದ ದೇವರ ಮೂರ್ತಿಯನ್ನು ಹಸ್ತಾಂತರ ಮಾಡುತ್ತಾರೆ. ನಂತರ ಆ ವಿಗ್ರಹವನ್ನೆ ಈ ದೇವಾಲಯದಲ್ಲಿ ಮರು ಸ್ಥಾಪಿಸಲಾಗಿದೆ.  ತಿರುಪತಿಯಿಂದ (Tirupati )ಆಗಮಿಸಿದ ಭಗವಂತನನ್ನು ತಿರುಪತಿ ಚಪ್ಪರ ಶ್ರೀನಿವಾಸ ಎಂದೇ ಕರೆಯಲಾಗುತ್ತದೆ. ತಿರುಪತಿಯಲ್ಲಿ ನಡೆಯುವ ರೀತಿಯಲ್ಲಿಯೇ ಇಲ್ಲಿ ದೇವರ ಪೂಜಾ ಕಾರ್ಯಗಳು ನಡೆಯುತ್ತದೆ. ಈ ದೇವಾಲಯದಲ್ಲಿ ನಡೆಯುವ ಕೆರೆ ಉತ್ಸವ ಇಲ್ಲಿನ ಇನ್ನೊಂದು ವಿಶೇಷತೆ.

ನೀವೊಂದು ವೇಳೆ ಪಡು ತಿರುಪತಿ ದೇವಸ್ಥಾನಕ್ಕೆ ಹೋಗಬೇಕು ಅಂತಿದ್ದರೆ ನಿಮ್ಮ ಹಾದಿ ಬಹು ಸುಗಮ..ನೀವು ಕಾರ್ಕಳ ಮುಖ್ಯ ಬಸ್ ನಿಲ್ದಾಣದ ಹತ್ತಿರದಲ್ಲಿ ಈ ದೇಗುಲವಿದೆ. ಇನ್ನು ಇಲ್ಲೇ ಸಮೀಪದಲ್ಲಿ ಬಾಹುಬಲಿ(Bahubali )ಹಾಗೂ ಚತುರ್ಮುಖ ಬಸದಿ ನೀವು ನೋಡಬಹುದು.

ನಾವೂ ಇನ್ ಸ್ಟಾಗ್ರಾಮ್ ನಲ್ಲೂ ಇದ್ದೀವಿ! ನಮ್ಮ ಗ್ರೂಪ್ ಜಾಯಿನ್ ಆಗಿ.

ನೀವು ಪ್ರವಾಸ ಹೋಗುವ ತಾಣದ ಮಾಹಿತಿ, ಕನ್ನಡ.ಟ್ರಾವೆಲ್ (Kannada.Travel) ಜಾಲತಾಣದಲ್ಲಿ ಪ್ರಕಟವಾಗುವ ಬರಹಗಳ ವಿವರ, ಅಪರೂಪದ ಟ್ರಾವೆಲರ್ ಗಳ ಪರಿಚಯ, ಪ್ರವಾಸಿ ತಾಣಗಳ ಕುತೂಹಲಕರ ಚಿತ್ರ ಬರಹ ಎಲ್ಲವೂ ಇಲ್ಲಿ ನಿಮಗೆ ಸಿಗುತ್ತದೆ. ಬನ್ನಿ ಜೊತೆಯಾಗಿ.

Related Articles

Leave a Reply

Your email address will not be published. Required fields are marked *

Back to top button