ದೂರ ತೀರ ಯಾನವಿಂಗಡಿಸದ

ಇಂಧನ ಶುಲ್ಕ ಕೈಬಿಟ್ಟ ಇಂಡಿಗೋ; ವಿಮಾನ ಟಿಕೆಟ್ ದರದಲ್ಲಿ ರೂ 1,000ದವರೆಗೆ ಕಡಿತ

ವೈಮಾನಿಕ ಇಂಧನ ದರದಲ್ಲಿ (Reduction in ATF Prices) ಇತ್ತೀಚಿನ ಇಳಿಕೆಯ ಪರಿಣಾಮ ದೇಶದ ಅತಿದೊಡ್ಡ ಏರ್‌ಲೈನ್‌ ಇಂಡಿಗೋ (IndiGo) ತನ್ನ ವಿಮಾನ ಟಿಕೆಟ್ ದರದಿಂದ ಇಂಧನ ಶುಲ್ಕವನ್ನು ಕೈಬಿಟ್ಟಿದೆ. ಇದರ ಪರಿಣಾಮ ವಿಮಾನ ಟಿಕೆಟ್‌ ದರದಲ್ಲಿ 1,000 ರೂ.ವರೆಗೆ ಕಡಿತವಾಗಲಿದೆ.

ಇಂಧನ ವೆಚ್ಚಗಳು ವಾಹಕದ ಕಾರ್ಯಾಚರಣೆಯ ವೆಚ್ಚಗಳ ಒಂದು ಗಮನಾರ್ಹ ಭಾಗವಾಗಿದೆ. ವಿಮಾನಯಾನದ ದೇಶೀಯ ಮತ್ತು ಅಂತರಾಷ್ಟ್ರೀಯ ಮಾರ್ಗಗಳ ವೈಮಾನಿಕ ಇಂಧನ ದರದ ಆಧಾರದ ಮೇಲೆ ಇಂಧನ ಶುಲ್ಕ (Fuel charge) ಅನ್ವಯಿಸುತ್ತದೆ.

ವೈಮಾನಿಕ ಇಂಧನ ದರ ಏರಿಕೆಯಾದ ನಂತರ 2023ರ ಅ.6ರಿಂದ ದೇಶೀಯ ಮತ್ತು ವಿದೇಶಿ ಟಿಕೆಟ್‌ ದರದ ಮೇಲೆ ಹೆಚ್ಚವರಿಯಾಗಿ ಇಂಧನ ದರವನ್ನು ಸಂಸ್ಥೆ ವಿಧಿಸುತ್ತಿತ್ತು.

ತನ್ನ ದೇಶೀಯ ಮತ್ತು ಅಂತರಾಷ್ಟ್ರೀಯ ಮಾರ್ಗಗಳಲ್ಲಿ ಏರುತ್ತಿರುವ ವೈಮಾನಿಕ ಇಂಧನ ದರದ ಆಧಾರದ ಮೇಲೆ ಹೆಚ್ಚುವರಿಯಾಗಿ ರೂ 300 ರಿಂದ 1,000ರೂ.ವರೆಗೆ ದರ ವಿಧಿಸಿತ್ತು.

ಈಗ ವೈಮಾನಿಕ ಇಂಧನ ಬೆಲೆ ತಗ್ಗಿರುವ ಕಾರಣ ಜ.4ರಿಂದ ಸಂಸ್ಥೆಯು ಇಂಧನ ಶುಲ್ಕವನ್ನು ತೆಗೆದು ಹಾಕಿದೆ.

“ವೈಮಾನಿಕ ಇಂಧನ ದರವು ಕ್ರಿಯಾತ್ಮಕವಾಗಿರುವುದರಿಂದ, ಅದರ ಬೆಲೆಗಳು ಮತ್ತು ಮಾರುಕಟ್ಟೆಯ ಯಾವುದೇ ಪರಿಸ್ಥಿತಿಗಳ ಬದಲಾವಣೆಗೆ ಸಕಾರಾತ್ಮಕವಾಗಿ ಪ್ರತಿಕ್ರಿಯಿಸಲು ಇಂಡಿಗೋ ದರಗಳು ಮತ್ತು ಅದರ ಘಟಕಗಳನ್ನು ಸರಿಹೊಂದಿಸುವುದನ್ನು ಮುಂದುವರಿಸುತ್ತದೆ. ಇಂಡಿಗೋ ತಮ್ಮ ಗ್ರಾಹಕರಿಗಾಗಿ ತೊಂದರೆ ಮುಕ್ತ ಸೌಲಭ್ಯಗಳನ್ನು ಒದಗಿಸುವಲ್ಲಿ ಎಂದಿಗೂ ಬದ್ಧವಾಗಿರುತ್ತದೆ.” ಎಂದು ಇಂಡಿಗೋ ಏರ್ ಲೈನ್ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದೆ.

ನಾವೂ ಇನ್ ಸ್ಟಾಗ್ರಾಮ್ ನಲ್ಲೂ ಇದ್ದೀವಿ! ನಮ್ಮ ಗ್ರೂಪ್ ಜಾಯಿನ್ ಆಗಿ.

ನೀವು ಪ್ರವಾಸ ಹೋಗುವ ತಾಣದ ಮಾಹಿತಿ, ಕನ್ನಡ.ಟ್ರಾವೆಲ್ (Kannada.Travel) ಜಾಲತಾಣದಲ್ಲಿ ಪ್ರಕಟವಾಗುವ ಬರಹಗಳ ವಿವರ, ಅಪರೂಪದ ಟ್ರಾವೆಲರ್ ಗಳ ಪರಿಚಯ, ಪ್ರವಾಸಿ ತಾಣಗಳ ಕುತೂಹಲಕರ ಚಿತ್ರ ಬರಹ ಎಲ್ಲವೂ ಇಲ್ಲಿ ನಿಮಗೆ ಸಿಗುತ್ತದೆ. ಬನ್ನಿ ಜೊತೆಯಾಗಿ.

Related Articles

Leave a Reply

Your email address will not be published. Required fields are marked *

Back to top button