ಮ್ಯಾಜಿಕ್ ತಾಣಗಳುವಿಂಗಡಿಸದಸ್ಮರಣೀಯ ಜಾಗ

ಹಂಪಿ ವೃತ್ತದಲ್ಲಿ ಕೆಫೆ & ವಿಶ್ರಾಂತಿ ಕೊಠಡಿ ಆರಂಭಿಸಿದ ಭಾರತೀಯ ಪುರಾತತ್ವ ಇಲಾಖೆ

ಭಾರತೀಯ ಪುರಾತತ್ವ ಸರ್ವೇಕ್ಷಣಾ ಇಲಾಖೆ (ASI) ಹಂಪಿ ವೃತ್ತದಲ್ಲಿ ಮೊದಲ ಬಾರಿಗೆ ಕೆಫೆಗಳು, ವಿಶ್ರಾಂತಿ ಕೊಠಡಿಗಳು ಮತ್ತು ಇತರ ಪ್ರವಾಸಿ ಸೌಲಭ್ಯಗಳನ್ನು ಪ್ರಾರಂಭಿಸಿದೆ. ಈ ಮೂಲಕ ಪ್ರವಾಸಿಗರಿಗೆ ವಸತಿ ಮತ್ತು ಆಹಾರ ಸೌಲಭ್ಯಗಳನ್ನು ಒದಗಿಸಲು ASI (Archaeological Survey of India) ಮುಂದಾಗಿದೆ.

ವಿಶ್ವ ಪಾರಂಪರಿಕ ತಾಣವಾದ (UNESCO World Heritage Site) ಹಂಪಿಯು ಕರ್ನಾಟಕದ ಪ್ರಮುಖ ಪ್ರವಾಸಿ ತಾಣವಾಗಿದೆ. ಪ್ರತಿವರ್ಷ ದೇಶ-ವಿದೇಶಗಳಿಂದ ಅನೇಕ ಪ್ರವಾಸಿಗರು ಭೇಟಿ ನೀಡಿ ಹಂಪಿಯ ವೈಭವವನ್ನು ಕಣ್ತುಂಬಿಕೊಳ್ಳುತ್ತಾರೆ.

ಆದರೆ ವಿಜಯನಗರ ಸಾಮ್ರಾಜ್ಯದ ಅವಶೇಷಗಳನ್ನು ಸಂರಕ್ಷಿಸುವ ನಿಟ್ಟಿನಿಂದ, ಸಂರಕ್ಷಿತ ತಾಣಗಳ ಆಸುಪಾಸಿನಲ್ಲಿ ಯಾವುದೇ ರೀತಿಯ ಅಂಗಡಿಗಳು, ತಿನಿಸು ಮತ್ತು ವಿಶ್ರಾಂತಿ ಕೊಠಡಿಗಳ ವ್ಯವಸ್ಥೆ ಇರಲಿಲ್ಲ.

ಅತಿಯಾದ ತಾಪಮಾನ ಹೊಂದಿರುವ ತಾಣ ಹಂಪಿಯಾಗಿರುವುದರಿಂದ, ಪ್ರವಾಸಿಗರ ಬೇಡಿಕೆಯ ಮೇರೆಗೆ ಪುರಾತತ್ವ ಇಲಾಖೆಯು ರೆಸ್ಟೋರೆಂಟ್ ಮತ್ತು ವಸತಿ ಸೌಲಭ್ಯದಂತಹ ಸೇವೆಗಳನ್ನು ಪ್ರಾರಂಭಿಸಲು ಯೋಜಿಸಿದೆ.

ವಿಜಯ ವಿಠ್ಠಲ ದೇವಸ್ಥಾನದ ಆವರಣದ ಎರಡು ಸ್ಥಳಗಳಲ್ಲಿ ಮತ್ತು ಉಗ್ರನರಸಿಂಹ ದೇವಸ್ಥಾನದ ಸಮೀಪದಲ್ಲಿ ಉಪಹಾರ ಗೃಹಗಳನ್ನು ನಿರ್ಮಿಸಲಾಗುವುದು ಎಂದು ASI ತಿಳಿಸಿದೆ.

ಸದ್ಯ ಒಂದು ಸಣ್ಣ ಅಂಗಡಿಯಲ್ಲಿ ಚಹಾ, ಕಾಫಿ, ಹಾಗೂ ಲಘು ಉಪಹಾರಗಳ ಸೇವೆಗಳನ್ನು ನೀಡಲಾಗುತ್ತಿದ್ದು, ಎಎಸ್‌ಐ ತಂಡವು ಪ್ರವಾಸಿಗರಿಗೆ ತಾತ್ಕಾಲಿಕ ವಸತಿ ಸೌಲಭ್ಯವನ್ನು ಒದಗಿಸಲು ಶೀಘ್ರದಲ್ಲೇ ಕೆಲವು ಕೊಠಡಿಗಳನ್ನು ತೆರೆಯಲಿದೆ.

ASI ಯ ಅಧಿಕಾರಿಗಳು ನೀಡಿರುವ ಮಾಹಿತಿಯ ಪ್ರಕಾರ, ಹಂಪಿಯಲ್ಲಿ (Hampi) ಎರಡು ಕೆಫೆಗಳನ್ನು ತೆರೆಯಲಾಗಿದ್ದು, ಮುಂದೆ ಇನ್ನೂ ಹೆಚ್ಚಿನ ಅಂಗಡಿಗಳನ್ನು ನಿರೀಕ್ಷಿಸಬಹುದು.

ಇಲ್ಲಿ ಒಂದು ಕಪ್ ಕಾಫಿ/ಚಹಾದ ಬೆಲೆ 10 ರೂ ಇರಲಿದ್ದು, ಸಮೋಸಾ, ಪಫ್ಸ್, ಕೂಲ್ ಡ್ರಿಂಕ್ಸ್ ಮತ್ತು ನೀರಿನ ಬಾಟಲಿಗಳು ಸಹ ಲಭ್ಯವಿರಲಿದೆ. ವಸತಿ ಸೌಲಭ್ಯದ ದರವನ್ನು ಇನ್ನೂ ಅಂತಿಮಗೊಳಿಸಿಲ್ಲ ಎಂದು ತಿಳಿಸಿದ್ದಾರೆ.

ಭಾರತೀಯ ಪುರಾತತ್ವ ಇಲಾಖೆ ವತಿಯಿಂದ ನೀಡುವ ಈ ವಸತಿ ಸೌಲಭ್ಯದ ಕೆಲಸಗಳು ಅಂತಿಮ ಹಂತವನ್ನು ತಲುಪಿದ್ದು, ಪ್ರವಾಸಿಗರಿಗೆ ಉತ್ತಮ ಗುಟಮಟ್ಟದ ಸೇವೆ ಸಿಗಲಿದೆ. ಉತ್ತಮ ಗುಣಮಟ್ಟದ ಕೊಠಡಿಗಳು, ಸ್ವಚ್ಛವಾದ ಶೌಚಾಲಯ, ನೀರಿನ ಸೌಕರ್ಯ ಎಲ್ಲವೂ ಇರಲಿವೆ.

ಈ ವಸತಿ ಗೃಹಗಳನ್ನು ವಿಶಿಷ್ಟವಾದ ಹಂಪಿ ವಾಸ್ತುಶಿಲ್ಪ ಶೈಲಿಯಲ್ಲಿ ನಿರ್ಮಿಸಲಾಗುವುದು ಎಂದು ಹೇಳಲಾಗುತ್ತಿದೆ. ಒಟ್ಟಾರೆಯಾಗಿ ASI ಹಂಪಿಯಲ್ಲಿ ಪ್ರವಾಸಿಗರಿಗೆ ಆರೋಗ್ಯಕರ ಆಹಾರ ಮತ್ತು ಉತ್ತಮ ಗುಣಮಟ್ಟದ ಕೊಠಡಿ ಸೌಲಭ್ಯಗಳನ್ನು ಒದಗಿಸುವ ಗುರಿಯನ್ನು ಹೊಂದಿದ್ದು, ಅದೇ ಕಾರ್ಯದಲ್ಲಿ ತೊಡಗಿದೆ.

ನಾವೂ ಇನ್ ಸ್ಟಾಗ್ರಾಮ್ ನಲ್ಲೂ ಇದ್ದೀವಿ! ನಮ್ಮ ಗ್ರೂಪ್ ಜಾಯಿನ್ ಆಗಿ.

ನೀವು ಪ್ರವಾಸ ಹೋಗುವ ತಾಣದ ಮಾಹಿತಿ, ಕನ್ನಡ.ಟ್ರಾವೆಲ್ (Kannada.Travel) ಜಾಲತಾಣದಲ್ಲಿ ಪ್ರಕಟವಾಗುವ ಬರಹಗಳ ವಿವರ, ಅಪರೂಪದ ಟ್ರಾವೆಲರ್ ಗಳ ಪರಿಚಯ, ಪ್ರವಾಸಿ ತಾಣಗಳ ಕುತೂಹಲಕರ ಚಿತ್ರ ಬರಹ ಎಲ್ಲವೂ ಇಲ್ಲಿ ನಿಮಗೆ ಸಿಗುತ್ತದೆ. ಬನ್ನಿ ಜೊತೆಯಾಗಿ.

Related Articles

Leave a Reply

Your email address will not be published. Required fields are marked *

Back to top button