ಇವರ ದಾರಿಯೇ ಡಿಫರೆಂಟುವಂಡರ್ ಬಾಕ್ಸ್ವಿಂಗಡಿಸದಸ್ಫೂರ್ತಿ ಗಾಥೆ

ಜಗತ್ತಿನೆಲ್ಲೆಡೆ ಇರುವ ಕನ್ನಡಿಗರ ಅಂಗೈಯಲ್ಲಿ ಕನ್ನಡ ಇ-ಪುಸ್ತಕಗಳನ್ನಿಟ್ಟ ಮೈಲ್ಯಾಂಗ್: ಕನ್ನಡದ ಹೆಮ್ಮೆಯ ಸಂಸ್ಥೆ ಕಟ್ಟಿದ ಪವಮಾನ್

ದೇಶ ಸುತ್ತು, ಕೋಶ ಓದು ಅನ್ನುವ ಮಾತು ಎಲ್ಲರಿಗೂ ಪರಿಚಿತ. ನಾವು ದೇಶ ಸುಲಭವಾಗಿ ಸುತ್ತಬಹುದು. ಆದರೆ ಜಗತ್ತಿನ ಎಲ್ಲಾ ಕಡೆ ಇರುವವರಿಗೆ ಕನ್ನಡ ಕೋಶ  ಸುಲಭವಾಗಿ ಸಿಗುತ್ತಿರಲಿಲ್ಲ. ಅಂಥದ್ದರಲ್ಲಿ ಎಲ್ಲರೂ ಅನುಮಾನದಿಂದ ನೋಡುವ ಹೊತ್ತಲ್ಲಿ ಕನ್ನಡ ಇ-ಬುಕ್, ಆಡಿಯೋ ಬುಕ್ ಸಿಗುವಂತೆ ಮಾಡಿ ಕನ್ನಡ ಪುಸ್ತಕಲೋಕವನ್ನು ಸಮೃದ್ಧವಾಗಿಸಿದ್ದು ಮೈಲ್ಯಾಂಗ್ (mylang )ಸಂಸ್ಥೆ. ಆ ಸಂಸ್ಥೆಯ ಯಶಸ್ಸಿನ ಕತೆ ಇಲ್ಲಿದೆ.

ಒಂದು ಕಾಲದಲ್ಲಿ ಕನ್ನಡದಲ್ಲಿ ಇ-ಪುಸ್ತಕಗಳನ್ನು ತರುವುದಕ್ಕೆ ಸಾಧ್ಯವೇ ಇಲ್ಲ ಎಂಬ ಮನೋಭಾವ ಇತ್ತು. ಒಂದಷ್ಟು ಮಂದಿ ಇ-ಪುಸ್ತಕಗಳನ್ನು ಮಾಡಿ ಕೈಚೆಲ್ಲಿದರು. ಇನ್ನೊಂದಷ್ಟು ಮಂದಿ ಕಿಂಡಲ್ ನಲ್ಲಿ ಕನ್ನಡ(kannada) ಸಿಗುವಂತೆ ಮಾಡಲು ಹೋರಾಡಿದರು. ಆದರೆ ಕನ್ನಡದಲ್ಲಿ ಇ-ಪುಸ್ತಕ ಸಿಗುವಂತೆ ಮಾಡುವ ಯಾವ ಪ್ರಯತ್ನವೂ ಯಶಸ್ವಿಯಾಗಲಿಲ್ಲ. ಹಾಗಾಗಿ ಬರಹಗಾರರಿಗೂ ಪ್ರಕಾಶಕರಿಗೂ ಇ-ಪುಸ್ತಕಗಳ(e-book) ಮೇಲೆ ನಂಬಿಕೆ ಮೂಡಲಿಲ್ಲ.

Image result for mylang app

ಒಂದೊಳ್ಳೆ ದಿನ ಒಂದೊಳ್ಳೆ ಐಡಿಯಾ ಇಟ್ಟುಕೊಂಡು ಬಂದಿದ್ದು ಪವಮಾನ್ ಪ್ರಸಾದ್ ಎಂಬ ಕನಸುಗಾರ. ಅಮೆರಿಕಾದಲ್ಲಿ(US) ಇದ್ದವರು. ಸಾಫ್ಟ್ ವೇರ್ ಇಂಜಿನಿಯರ್ ಆಗಿದ್ದರು. ಒಂದೆರಡು ಕಂಪನಿ ಕಟ್ಟಿ ಗೆಲ್ಲಿಸಿದ ಅನುಭವವಿದ್ದ ಸಾಹಸಿ. ಆದರೂ ಅವರು ಇ-ಪುಸ್ತಕ ಮಾಡುವ ಸಂಸ್ಥೆ ಕಟ್ಟುತ್ತೇನೆ ಎಂದಾಗ ಅನೇಕರು ಅನುಮಾನ ವ್ಯಕ್ತಪಡಿಸಿದ್ದರು. ಆದರೆ ಪವಮಾನ್ ಗೆ ಆ ಅನುಮಾನ ಇರಲಿಲ್ಲ. ನಾನು ಗೆದ್ದೇ ಗೆಲ್ಲುತ್ತೇನೆ ಎಂಬ ಛಲದಿಂದ ಬಂದರು. ಬರಹಗಾರರನ್ನು, ಪ್ರಕಾಶಕರನ್ನು ಭೇಟಿ ಮಾಡಿದರು. ಅವರಲ್ಲಿ ಅನೇಕರನ್ನು ಪುಸ್ತಕ ಕೊಡುವಂತೆ ಒಪ್ಪಿಸಿದರು. ಹತ್ತಾರು ಪುಸ್ತಕಗಳನ್ನು ಇ-ಪುಸ್ತಕ ಮಾಡುವ ಅನುಮತಿ ದೊರೆತ ಕೂಡಲೇ ಅವರು ಶುರು ಮಾಡಿದ ಅದ್ಭುತ ಸಂಸ್ಥೆ ಮೈಲ್ಯಾಂಗ್.

ನೀವು ಇದನ್ನು ಇಷ್ಟಪಡಬಹುದು: ಮೂರು ವರ್ಷ ಮನೆಗೇ ಬಾರದೆ ಜಗತ್ತು ಸುತ್ತಿದ ಮುಂಬೈನ ವಿಷ್ಣುವಿನ ಸ್ಫೂರ್ತಿ ಕಥೆ

ಹತ್ತಾರು ಮಂದಿಯ ಅನುಮಾನಕ್ಕೆ ಉತ್ತರ ಈ ಮೈಲ್ಯಾಂಗ್. ಇಲ್ಲಿ ನೂರಾರು ಕನ್ನಡದ ಇ-ಪುಸ್ತಕಗಳಿವೆ. ಜಗತ್ತಿನ ಎಲ್ಲೆಡೆ ಇರುವ ಕನ್ನಡಿಗರು ಓದಬೇಕು ಅಂತನ್ನಿಸಿದ ತಕ್ಷಣವೇ ಕನ್ನಡ ಪುಸ್ತಕವನ್ನು ಓದಬಹುದಾಗಿದೆ. ಪುಸ್ತಕ ಬಿಡುಗಡೆಯಾದ ತಕ್ಷಣವೇ ಇ-ಪುಸ್ತಕವೂ ಸಿಗುವಂತೆ ಮೈಲ್ಯಾಂದ್ ಮಾಡುತ್ತಿದೆ. ಕನ್ನಡದ ಇ-ಪುಸ್ತಕ ಲೋಕ ಗಟ್ಟಿಯಾಗಿ ಬೆಳೆದು ನಿಂತಿದೆ.

May be an image of 1 person, phone and text that says "ಈಗ ಬಂದಿದೆ ಕರ್ವಾಲೊ ಆಡಿಯೋ ಪುಸ್ತಕ! ಕೆ.ಪಿ.ಪೂರ್ಣಚಂದ್ರತೇಜಸ್ವಿ ಕೆ.ಪಿ ಪೂರ್ಣಚಂದ್ರ ತೇಜಸ್ವಿ ಕರ್ಮಾ ಲೊ ಏರ್ಣ ಚಂ ದ್ರ ತೇಜಸ್ನಿ ಕನ್ನಡಿಗರ ನೆಚ್ಚಿನ ಬರಹಗಾರ ಪೂರ್ಣಚಂದ್ರ ತೇಜಸ್ವಿ ಅವರ ಜನಪ್ರಿಯ ಕಾದಂಬರಿ ಕರ್ವಾಲೊ ಈಗ ಕೇಳಿ ಮೈಲ್ಯಾಂಗ್ ಮೊಬೈಲ್ ಆಯಪ್ ಅಲ್ಲಿ ಮಾತ್ರ" ಕೇಳಿ ಕಿವಿ ತುಂಬಾ ಕೇಳಿಸಿ ಕಿವಿ ತುಂಬಾ!! ಭೇಟಿ ಕೊಡಿ: www.mylang.in www.mylangbooks.com"

ಮೈಲ್ಯಾಂಗ್ ಗಟ್ಟಿಯಾಗಿ ನಿಂತಿದ್ದಕ್ಕೆ ಕಾರಣವಿದೆ. ಓದುಗರಿಗೆ ತುಂಬಾ ಸುಲಭವಾಗುವಂತೆ ಆಪ್ ರೂಪಿಸಿದ್ದು ಮೊದಲ ಕಾರಣ. ಮೈಲ್ಯಾಂಗ್ ಆಪ್(mylang app) ಡೌನ್ ಲೋಡ್ ಮಾಡಿ ತುಂಬಾ ಸುಲಭವಾಗಿ ಇ-ಪುಸ್ತಕಗಳನ್ನೂ ಡೌನ್ ಲೋಡ್ ಮಾಡಬಹುದು. ಮೈ ಲ್ಯಾಂಗ್ ಗೆಲುವಿಗೆ ಎರಡನೇ ಕಾರಣ ಬರಹಗಾರರ ನಂಬಿಕೆ ಗಳಿಸಿದ್ದು. ಅತ್ಯಂತ ಶಿಸ್ತಿನಿಂದ ಆಪ್ ರೂಪಿಸಿರುವ ಮೈ ಲ್ಯಾಂಗ್ ಯಾವ ಪುಸ್ತಕವೂ ಇಲ್ಲಿ ಕದ್ದು ಹೋಗದಂತೆ ನೋಡಿಕೊಳ್ಳುತ್ತದೆ. ಅಲ್ಲದೆ ಪುಸ್ತಕ ಮಾರಾಟವಾದ ತಕ್ಷಣ ಬರಹಗಾರರಿಗೆ ಅದರ ಮಾಹಿತಿ ತಲುಪುತ್ತದೆ ಮತ್ತು ಸಂಭಾವನೆಯೂ ಸಿಗುತ್ತದೆ. ಹಾಗಾಗಿ ಬರಹಗಾರರು, ಪ್ರಕಾಶಕರು, ಓದುಗರು ಎಲ್ಲರಿಗೂ ಮೈಲ್ಯಾಂಗ್ ನಂಬಿಕಾರ್ಹ ಸಂಸ್ಥೆಯಾಗಿದೆ.

ಮೈಲ್ಯಾಂಗ್ ಸಾಧನೆ ಇಷ್ಟಕ್ಕೆ ನಿಲ್ಲುವುದಿಲ್ಲ. ಇ-ಬುಕ್ ಲೋಕವನ್ನು ಅವರು ಕನ್ನಡಿಗರಿಗೆ ಪರಿಚಯಿಸಿದ ರೀತಿ ನೋಡಿ ಅನೇಕರು ಸ್ಫೂರ್ತಿಗೊಂಡಿದ್ದಾರೆ. ತಾವೂ ಇ-ಪುಸ್ತಕದಂಗಡಿಗಳನ್ನು ಆರಂಭಿಸಿದ್ದಾರೆ. ಅಷ್ಟರ ಮಟ್ಟಿಗೆ ಕನ್ನಡ ಪುಸ್ತಕಗಳಿಗೆ ಬೇಡಿಕೆ ಹೆಚ್ಚಿದೆ. ಇನ್ನು ಅನೇಕ ಯುವ ಓದುಗರನ್ನು ಪುಸ್ತಕದೆಡೆಗೆ ಎಳೆದು ತಂದಿದ್ದು ಮೈಲ್ಯಾಂಗ್ ನ ಬಹುದೊಡ್ಡ ಸಾಧನೆ. ಈ ಎಲ್ಲಾ ಕಾರಣಗಳಿಂದಾಗಿಯೇ ಮೈಲ್ಯಾಂಗ್ ಕನ್ನಡಕ್ಕೆ ಬಹುದೊಡ್ಡ ಕೊಡುಗೆಯಾಗಿದೆ.

ಮೈಲ್ಯಾಂಗ್ ಸಂಸ್ಥೆಯ ಗೆಲುವಿಗೆ ಕಾರಣಕರ್ತರಲ್ಲಿ ಪವಮಾನ್ ಪ್ರಸಾದ್ ಜೊತೆ ವಸಂತ್ ಶೆಟ್ಟಿಯವರೂ ಇದ್ದಾರೆ. ಇವರಿಬ್ಬರು ಕನ್ನಡದ ಜಗತ್ತನ್ನು ವಿಸ್ತರಿಸಿದ ಪರಿ ನಿಜಕ್ಕೂ ಮೆಚ್ಚುಗೆಗೆ ಅರ್ಹವಾದುದು.

ಈಗ ನೀವೂ ಮೈಲ್ಯಾಂಗ್ ನಲ್ಲಿ ಪುಸ್ತಕ ಖರೀದಿಸಿ ಓದಬಹುದು. ಇಲ್ಲಿ ಇ-ಬುಕ್ ಅಷ್ಟೇ ಅಲ್ಲ, ಆಡಿಯೋ ಬುಕ್ ಕೂಡ ಲಭ್ಯ. ತೇಜಸ್ವಿ, ಅನಂತಮೂರ್ತಿ, ಜೋಗಿ, ವಸುಧೇಂದ್ರ, ಕರಣಮ್ ಪವನ್ ಪ್ರಸಾದ್, ನೇಮಿಚಂದ್ರ ಹೀಗೆ ದೊಡ್ಡ ದೊಡ್ಡ ಬರಹಗಾರರ ಬಹುತೇಕ ಪುಸ್ತಕಗಳು ಇಲ್ಲಿ ಸಿಗುತ್ತವೆ.

ಒಮ್ಮೆ https://mylang.in/ ವೆಬ್ ಸೈಟ್ ಗೆ ಭೇಟಿ ನೀಡಿ. ಅಲ್ಲಿ ಪುಸ್ತಕಗಳ ಪಟ್ಟಿ, ಲೇಖಕರ ಪಟ್ಟಿ ಎಲ್ಲವನ್ನೂ ನೋಡಬಹುದು. ಆಮೇಲೆ ನಿಮ್ಮ ಮೊಬೈಲಲ್ಲಿ mylang ಆಪ್ ಡೌನ್ ಲೋಡ್ ಮಾಡಿ ಸುಲಭವಾಗಿ ಪುಸ್ತಕಗಳನ್ನು ಡೌನ್ ಲೋಡ್ ಮಾಡಿ ಓದಬಹುದು. ಪರ ಊರಲ್ಲಿರುವ ಪುಸ್ತಕ ಪ್ರೇಮಿಗಳಿಗೂ ಈ ವಿಚಾರ ತಿಳಿಸಬಹುದು. ನೀವು ಪುಸ್ತಕ ಖರೀದಿಸುವಾಗ KT20 ಎಂಬ ಕೋಡ್ ಹಾಕಿದರೆ ಶೇ.20 ರಿಯಾಯಿತಿ ಸಿಗುತ್ತದೆ.

ಕನ್ನಡ ಪುಸ್ತಕ ಓದಿ. ಕನ್ನಡದ ಜಗತ್ತು ವಿಸ್ತರಿಸಿ.

ನಾವೂ ಟೆಲಿಗ್ರಾಮ್ ನಲ್ಲೂ ಇದ್ದೀವಿ! ಕನ್ನಡ.ಟೆಲಿಗ್ರಾಮ್ ಗ್ರೂಪ್ ಜಾಯಿನ್ ಆಗಿ. 

ನೀವು ಪ್ರವಾಸ ಹೋಗುವ ತಾಣದ ಮಾಹಿತಿ, ಕನ್ನಡ.ಟ್ರಾವೆಲ್ ಜಾಲತಾಣದಲ್ಲಿ ಪ್ರಕಟವಾಗುವ ಬರಹಗಳ ವಿವರ, ಅಪರೂಪದ ಟ್ರಾವೆಲರ್ ಗಳ ಪರಿಚಯ, ಪ್ರವಾಸಿ ತಾಣಗಳ ಕುತೂಹಲಕರ ಚಿತ್ರ, ಬರಹ ಎಲ್ಲವೂ ಇಲ್ಲಿ ನಿಮಗೆ ಸಿಗುತ್ತದೆ. 

Related Articles

Leave a Reply

Your email address will not be published. Required fields are marked *

Back to top button