ಬೆರಗಿನ ಪಯಣಿಗರುವಿಂಗಡಿಸದಸ್ಫೂರ್ತಿ ಗಾಥೆ

ಮೂರು ವರ್ಷ ಮನೆಗೇ ಬಾರದೆ ಜಗತ್ತು ಸುತ್ತಿದ ಮುಂಬೈನ ವಿಷ್ಣುವಿನ ಸ್ಫೂರ್ತಿ ಕಥೆ

2016 ಮಾರ್ಚ್ 16ರಂದು ಆರಂಭಿಸಿ ಸತತ ಮೂರು ವರ್ಷ ನಡಿಗೆಯಲ್ಲಿಯೇ ಜಗತ್ತು ಸುತ್ತಿ ಬಂದ ಮುಂಬೈನ ವಿಷ್ಣುದಾಸ್ ಚಪ್ಕೆಯವರ ಸ್ಫೂರ್ತಿ ಗಾಥೆ ಇದು. ಪಕ್ಕದ ಊರಿಗೆ ಪ್ರವಾಸ ಹೋಗಲು ಹಿಂಜರಿಯುವವರ ಮಧ್ಯೆ ಇದ್ದಕ್ಕಿದ್ದಂತೆ ಹೊರಟು ಬೇಕಾದ ಆಹಾರ ಸಿಗದಿದ್ದಾಗ ತಾನೇ ಅಡುಗೆ ಮಾಡಿ, ಟೀಚರ್ ಕೆಲಸ ಮಾಡಿ ದುಡ್ಡು ಹೊಂದಿಸಿಕೊಂಡು ಜಗತ್ತು ಸುತ್ತಿದವನ ಕುತೂಹಲಕರ ಕಥೆ.     

  • ನವ್ಯಶ್ರೀ ಶೆಟ್ಟಿ

ಪ್ರಪಂಚ ಪರ್ಯಟನೆ ಕೊಡುವ ಜ್ಞಾನ, ಅನುಭವ, ತರ್ಕಕ್ಕೆ ನಿಲುಕದ್ದು. ಪ್ರವಾಸಿ ಪ್ರಿಯರಿಗೆ ಅದೊಂದು ಹುರುಪು.ಸದಾ ವಿಭಿನ್ನವಾಗಿ ಪ್ರವಾಸ ಮಾಡುತ್ತಾ ಇತರರಿಗೂ ಹೊಸ ಹುರುಪು ನೀಡುತ್ತಾರೆ. ಆ ರೀತಿಯಲ್ಲಿ 3 ವರ್ಷ ಸುದೀರ್ಘ ಪಯಣ ಮಾಡಿ 35 ದೇಶ ಸುತ್ತಿದ ಉತ್ಸಾಹಿ ಪ್ರವಾಸಿ ಪ್ರಿಯ (Vishnu Da Gama) ವಿಷ್ಣು.

ನೀವು ಇದನ್ನು ಇಷ್ಟಪಡಬಹುದು: ಹುಬ್ಬಳ್ಳಿ-ಧಾರವಾಡದ ಅತಿ ಸುಂದರ ಜಲಪಾತ ವರವಿ ಸಿದ್ದೇಶ್ವರ ಕೊಳ್ಳ: ಬೈಕರ್ ಪ್ರದೀಪ್ ತುಮ್ಮರಮಟ್ಟಿ ಪರಿಚಯಿಸಿದ ಅಚ್ಚರಿ ತಾಣ

ತನ್ನ ಕೆಲಸಕ್ಕೆ ಗುಡ್ ಬೈ ಹೇಳಿ ದೇಶ ಸುತ್ತುವ ಕನಸಿನತ್ತ ಪಯಣ ಬೆಳೆಸಿದರು. ಮುಂಬೈನಲ್ಲಿ ಮನೆ ಖರೀದಿಸಲು ಕೂಡಿಟ್ಟಿದ್ದ ಉಳಿತಾಯದ ಹಣ, ಸ್ನೇಹಿತರ ನೆರವು, ಇತರ ಹಣಕಾಸಿನ ನೆರವಿನಿಂದ ಪ್ರಪಂಚ ಪರ್ಯಟನೆಯ ತನ್ನ ಕನಸನ್ನು ಸಾಕಾರಗೊಳಿಸಲು ಆರಂಭಿಸಿದರು.

ಪ್ರವಾಸದ ಆರಂಭದಲ್ಲಿ ಯಾವುದೆಲ್ಲ ಸ್ಥಳಗಳಿಗೆ ಹೋಗಬೇಕು ಅನ್ನುವುದರ ಬಗ್ಗೆ ನಿಖರ ಆಲೋಚನೆ ಇರಲಿಲ್ಲ. ಆದರೆ ಉತ್ತರ ಭಾರತದ ರಾಜ್ಯಗಳಾದ ಅಸ್ಸಾಂ, ಮಣಿಪುರ, ಮೇಘಾಲಯ, ನಾಗಾಲ್ಯಾಂಡ್ ಜೊತೆಗೆ ಮಯನ್ಮಾರ್, ಭೂತಾನ್ ಸ್ಥಳಗಳಿಗೆ ಹೋಗಿ ಅಲ್ಲಿಂದ ಬ್ಯಾಂಕಾಕ್ ಮಾರ್ಗವಾಗಿ ಮುಂಬೈಗೆ ಮರಳುವುದರ ಬಗ್ಗೆ ಸಣ್ಣ ಪ್ಲಾನ್ ಮಾಡಿಕೊಂಡಿದ್ದರು. ಆದರೆ ಬಳಿಕ ಅವರ ಪ್ಲಾನ್ ಬದಲಾಗಿ ಹೋಗಿತ್ತು. ಸ್ನೇಹಿತರ ಸಹಕಾರ ಇನ್ನಷ್ಟು ಸ್ಥಳಗಳನ್ನು ನೋಡುವಂತೆ ಮಾಡಿತು. ಯಾವುದೇ ನಕ್ಷೆ ಉಪಯೋಗಿಸದೇ ಪೂರ್ವ, ಪಶ್ಚಿಮ ದಿಕ್ಕುಗಳ ದೇಶ ಸುತ್ತಲು ಆರಂಭಿಸಿದರು.

ವಿಷ್ಣು ಅವರ ಜರ್ನಿ ಆರಂಭವಾಗಿದ್ದು ಮುಂಬೈನ ಥಾಣೆಯ ರೈಲ್ವೆ ಸ್ಟೇಷನ್ ನಿಂದ. ಮಾರ್ಚ್ 16,2016ರಲ್ಲಿ ಆರಂಭವಾದ ಇವರ ಜರ್ನಿ ಮುಂದಿನ ಮೂರು ವರ್ಷಗಳಲ್ಲಿ ಬದುಕಿನ ದಿಕ್ಕನ್ನೇ ಬದಲಾಯಿಸಿ ಬಿಟ್ಟಿತ್ತು. 

ವಿಷ್ಣು ಅವರು ಮೊದಲು ಹೋಗಿದ್ದು ಆಸ್ಟ್ರೇಲಿಯಾಗೆ. 3 ವರ್ಷಗಳ ಪಯಣದ ಹಾದಿಯಲ್ಲಿ ಮೊದಲ ವರ್ಷ ಕೊಂಚ ಕಷ್ಟವಿತ್ತು. ತನ್ನ ಇತಿಮಿತಿಯಲ್ಲಿ ಖರ್ಚು ಮಾಡಬೇಕಿತ್ತು. ಆಸ್ಟ್ರೇಲಿಯಾಕ್ಕೆ ಹೋದ ಮೊದಲ ವಾರ ಹಾಸ್ಟೆಲ್ ನಲ್ಲಿ ಕಳೆದಿದ್ದರು. ನಂತರ ಸ್ನೇಹಿತರ ಜೊತೆ ಉಳಿದುಕೊಂಡರು. ಸುಮಾರು 4 ತಿಂಗಳುಗಳ ಕಾಲ ಆಸ್ಟ್ರೇಲಿಯಾದ ಸೌಂದರ್ಯ ಸವಿದರು.

ಬೇರೆ ಸ್ಥಳಗಳಿಗೆ ಹೋದಾಗ ಸಸ್ಯಾಹಾರಿಗಳಿಗೆ ಆಹಾರದ ಆಯ್ಕೆ ದೊಡ್ಡ ಸಮಸ್ಯೆ. ಜೊತೆ ಇತಿಮಿತಿ ಬಜೆಟ್. ಆ ಕಾರಣಕ್ಕಾಗಿ ವಿಷ್ಣು ಅವರು ಸಾಧ್ಯವಾದ ಕಡೆಗಳಲ್ಲಿ ತನ್ನ ಆಹಾರವನ್ನು ತಾನೇ ತಯಾರಿಸಿಕೊಳ್ಳುತ್ತಿದ್ದರು.

ಪ್ರತಿ ಜರ್ನಿ ಸವಾಲುಗಳಿಂದ ಕೂಡಿರುತ್ತದೆ.ಮರೆಯಲಾಗದ ನೆನಪುಗಳಿಗೆ ಸಾಕ್ಷಿಯಾಗುತ್ತದೆ. ಅದೇ ರೀತಿ ವಿಷ್ಣು ಅವರಿಗೆ ಎಂದು ಮರೆಯಲಾಗದ ಘಟನೆ ಎನ್ನುವಂತೆ ಚಿಲಿ ಮತ್ತು ಅರ್ಜೆಂಟೆನಿಯಾದ ಗಡಿ ಪ್ರದೇಶದಲ್ಲಿ ಇವರ ಮೇಲೆ ನಡೆದ ಕಳ್ಳತನ ಯತ್ನ ಪ್ರಕರಣ. ಅಲ್ಲಿ ಸಾಕಷ್ಟು ಕಷ್ಟಪಟ್ಟು ಅದರಿಂದ ಪಾರಾದರು.

ಸಾಮಾನ್ಯವಾಗಿ ಬೇರೆ ದೇಶಗಳಿಗೆ ಹೋದಾಗ ಕೆಲವೊಮ್ಮೆ ವೀಸಾ ಸಮಸ್ಯೆ ಎದುರಾಗುತ್ತದೆ. 90 ಸೆಕೆಂಡ್ ನಲ್ಲಿ ಇಂಟರ್ವ್ಯೂ ಮುಗಿಸಿ ವೀಸಾ ರಿಜೆಕ್ಟ್ ಆಗಿರುವ ಘಟನೆ ಕೂಡ ಇವರ ಜರ್ನಿಯಲ್ಲಿದೆ. 9 ತಿಂಗಳ ಕಾಲ ಯುಎಸ್ಎ ವೀಸಾ ಬಳಸಿ ಸುತ್ತಿದ್ದರು. 52ದಿನಗಳ ಕಾಲ ನಿಕರಾಗುವಾ ಅಲ್ಲಿ ಇವರು ವೀಸಾ ತಡೆಹಿಡಿಯಲಾಗಿತ್ತು.  

ವಿಷ್ಣು ಅವರು ವೀಸಾಕ್ಕಾಗಿ ಕಾಯುವ ಸಮಯದಲ್ಲಿ ಅಮೆಲಿಯಾ ಮಾನ್ (amelia mon)ನಲ್ಲಿ ಶಿಕ್ಷಕರಾಗಿ ಕೆಲಸ ಮಾಡಿದರು. ಅಲ್ಪಾವಧಿಯಲ್ಲಿ ಸ್ಪಾನಿಷ್ ಭಾಷೆ ಕಲಿತರು. ಅಲ್ಲಿನ ಜನರ ಜೊತೆ ಬೆರೆತರು. ಅಲ್ಲಿನ ಜನರ ಜೊತೆ ಕ್ರಿಸ್ಮಸ್ ಆಚರಣೆಯಲ್ಲಿ ಪಾಲ್ಗೊಂಡರು. ವಿಷ್ಣು ತಮ್ಮ ಪ್ರವಾಸದ ಸಮಯದಲ್ಲಿ ಯಾವುದೇ ಧರ್ಮ ಭೇದವಿಲ್ಲದೆ ಎಲ್ಲ ಧರ್ಮಗಳ ಪವಿತ್ರ ಸ್ಥಳಗಳಿಗೆ ಭೇಟಿ ನೀಡುತ್ತಿದ್ದರು. 

ಒಂದು ಸಮಯದಲ್ಲಿ ವಿಷ್ಣು ಅವರು ಜರ್ಮನಿ ಸಚಿವರನ್ನು ಭೇಟಿಯಾಗುವ ಅವಕಾಶ ಒದಗಿ ಬಂದಿತ್ತು. ಆ ಸಮಯದಲ್ಲಿ ಸಚಿವರು ಅವರಿಗೆ ಉಚಿತವಾಗಿ schegen ಪಯಣ ವೀಸಾ ಕಲ್ಪಿಸಿದ್ದರು.

ತಮ್ಮ ಪಯಣದ ಹಾದಿಯಲ್ಲಿ ತಾನು ಹೋಗಿರುವ ಸ್ಥಳಗಳನ್ನು ಒಂದೊಂದು ಸಸಿ ನೆಟ್ಟು ಬಂದಿದ್ದಾರೆ. ಚಿಲಿಯಲ್ಲಿ ಕಾಡ್ಗಿಚ್ಚು (wildfire) ಸಮಯದಲ್ಲಿ ಸ್ವಯಂ ಸೇವಕರಾಗಿ ವಿಷ್ಣು ಅವರು ಪಾಲ್ಗೊಂಡಿದ್ದು, ವೈಯುಕ್ತಿಕವಾಗಿ ಜರ್ಮನಿಯ ಪ್ರಧಾನಿ, ಸಚಿವರ ಸತ್ಕಾರಕ್ಕೆ ಕೂಡ ಇವರು ಪಾತ್ರರಾಗಿದ್ದಾರೆ.

1097 ದಿನಗಳ ಸುದೀರ್ಘ ಪಯಣ ಮುಗಿಸಿ ಮುಂಬೈನ ಥಾಣೆ ಸ್ಟೇಷನ್ ನಲ್ಲಿ ತಮ್ಮ ಪಯಣ ಮುಗಿಸಿದ್ದಾರೆ. ವಿಷ್ಣು ಅವರ ಸುದೀರ್ಘ ಪ್ರವಾಸದ ಪಯಣದ ಉತ್ಸಾಹಿ ಪ್ರವಾಸಿ ಪ್ರಿಯರಿಗೆ ನಿಜಕ್ಕೂ ಪ್ರೇರಣೆ.

ನಾವೂ ಟೆಲಿಗ್ರಾಮ್ ನಲ್ಲೂ ಇದ್ದೀವಿ! ಕನ್ನಡ.ಟೆಲಿಗ್ರಾಮ್ ಗ್ರೂಪ್ ಜಾಯಿನ್ ಆಗಿ. 

ನೀವು ಪ್ರವಾಸ ಹೋಗುವ ತಾಣದ ಮಾಹಿತಿ, ಕನ್ನಡ.ಟ್ರಾವೆಲ್ (Kannada.Travel) ಜಾಲತಾಣದಲ್ಲಿ ಪ್ರಕಟವಾಗುವ ಬರಹಗಳ ವಿವರ, ಅಪರೂಪದ ಟ್ರಾವೆಲರ್ ಗಳ ಪರಿಚಯ, ಪ್ರವಾಸಿ ತಾಣಗಳ ಕುತೂಹಲಕರ ಚಿತ್ರ, ಬರಹ ಎಲ್ಲವೂ ಇಲ್ಲಿ ನಿಮಗೆ ಸಿಗುತ್ತದೆ. ಬನ್ನಿ ಜೊತೆಯಾಗಿ

Related Articles

Leave a Reply

Your email address will not be published. Required fields are marked *

Back to top button