ಏಕಾಂಗಿ ಸಂಚಾರಿಕಾರು ಟೂರುದೂರ ತೀರ ಯಾನವಿಂಗಡಿಸದಸ್ಫೂರ್ತಿ ಗಾಥೆ

ಕಾರ್ಪೋರೇಟ್ ಕೆಲಸಕ್ಕೆ ರಾಜೀನಾಮೆ ಕೊಟ್ಟು ಒಂಟಿಯಾಗಿ ರಾಜ್ಯರಾಜ್ಯಗಳ ಹಳ್ಳಿಹಳ್ಳಿ ಸುತ್ತುವ ಕಾವ್ಯ

ಒಬ್ಬೊಬ್ಬರಿಗೆ ಒಂದೊಂದು ಆಸಕ್ತಿ ಅಭಿರುಚಿ. ತಮ್ಮ ವಿಶಿಷ್ಟ ಶೈಲಿಯ ಹವ್ಯಾಸಗಳ ಮೂಲಕ ವಿಭಿನ್ನವಾಗಿ ಗುರುತಿಸಿಕೊಳ್ಳುತ್ತಾರೆ. ಅಂತಹವರಲ್ಲಿ ಕೆಲಸಕ್ಕೆ ರಾಜೀನಾಮೆ ಕೊಟ್ಟು ಒಂಟಿಯಾಗಿ 6 ತಿಂಗಳುಗಳ ಕಾಲ, 6 ರಾಜ್ಯಗಳ ಗ್ರಾಮೀಣ ಪ್ರದೇಶಗಳನ್ನು ಸುತ್ತಾಡಿ ಸೈ ಎನಿಸಿಕೊಂಡ ಸಿಟಿ ಹುಡುಗಿ ಕಾವ್ಯ ಸಕ್ಸೇನಾ ಅಚ್ಚರಿ ಹುಟ್ಟಿಸುತ್ತಾಳೆ. ಆಕೆಯ ಕುತೂಹಲಕರ ಕತೆ ಇಲ್ಲಿದೆ.

  • ನವ್ಯಶ್ರೀ ಶೆಟ್ಟಿ

ಒಂಭತ್ತು ವರ್ಷಗಳ ಕಾಲ ಕಾರ್ಪೊರೇಟ್ ಕಂಪನಿ ಅಲ್ಲಿ ಕೆಲಸ ಮಾಡಿದ್ದ ಆಕೆ ಒಂದು ದಿನ ತನ್ನ ಕಾರ್ಪೊರೇಟ್ ಜಗತ್ತಿಗೆ ಗುಡ್ ಬೈ ಹೇಳಿ ಬದುಕಿನ ಹೊಸ ಜರ್ನಿ ಆರಂಭಿಸಿದರು. ಮುಂದೆ ಪ್ರಾರಂಭವಾದದ್ದು ಬದುಕಿನ ಹೊಸ ರೋಚಕ ವಿಭಿನ್ನ ಅಧ್ಯಾಯ. 

ಆಕೆಯ ಹೆಸರು ಕಾವ್ಯ. ಬಹಳಷ್ಟು ಮಂದಿಗೆ ತನ್ನ ಇನ್ ಸ್ಟಾ ಗ್ರಾಮ್ ಖಾತೆ @crazyfeetkavya ಮೂಲಕವೇ ಚಿರಪರಿಚಿತೆ. ಈಕೆ ಅಕ್ಟೋಬರ್ 2, 2020ರಂದು ಆಕೆ ತನ್ನ ಕಾರಲ್ಲಿ ಒಂಟಿ ಪಯಣ ಆರಂಭಿಸಿದರು. ಏಕಾಂಗಿಯಾಗಿ ಪ್ರಯಾಣ 6 ರಾಜ್ಯಗಳನ್ನು ಸುತ್ತಿದ್ದಾರೆ. ಅದರಲ್ಲೂ ಈಕೆ ಗ್ರಾಮೀಣ ಪ್ರದೇಶ ನೋಡುವುದು ಅಂದ್ರೆ ಇಷ್ಟ. 

Kavya

ಸಿಟಿ ಹುಡುಗಿ ಕಾವ್ಯ ಸಕ್ಸೇನಾ ಬದುಕಿನ ಹೊಸ ಜರ್ನಿ ಆರಂಭವಾಗಿದ್ದು ಜೈಪುರ, ರಾಜಸ್ಥಾನ ನಗರಗಳಿಂದ. ಕಾವ್ಯ ಅವರಿಗೆ ಮೊದಲಿಂದಲೂ ಸ್ವದೇಶ, ಗ್ರಾಮೀಣ ಪ್ರದೇಶಗಳ ಕಲೆ, ಕರ ಕುಶಲಗಳ ಬಗ್ಗೆ ವಿಭಿನ್ನ ಆಸಕ್ತಿ.ಈ ಆಸಕ್ತಿ ಆಕೆಗೆ ಹೊಸ ಹೊಸ ಯೋಜನೆ ಹಾಕಿಕೊಳ್ಳಲು ಪ್ರೇರಣೆ.

ಕಾರ್ಪೊರೇಟ್ ಪ್ರಪಂಚದಿಂದ ಹೊರ ಬಂದು ತನ್ನ ಟ್ರಾವೆಲಿಂಗ್ ಹವ್ಯಾಸದ ಪಯಣ ಆರಂಭಿಸಿದ ಆಕೆಗೆ ಈ ಪಯಣ ತನ್ನ ಸಾಮರ್ಥ್ಯ ಅರಿತುಕೊಳ್ಳಲು ದಾರಿಯಾಯಿತು. ಕರೋನ ಲಾಕ್ ಡೌನ್ ಸಮಯದಲ್ಲಿ ತನ್ನ ಸಾಂಪ್ರದಾಯಿಕ ಚೌಕಟ್ಟಿನ ಎಲ್ಲೆ ದಾಟಿ ಹೊಸ ಸಾಹಸಗಳತ್ತ  ತನ್ನ ಬದುಕನ್ನು ಬದಲಾಯಿಸಿಕೊಂಡರು 

ಕಾವ್ಯ, ಪಶ್ಚಿಮ ಬಂಗಾಳ, ಅಸ್ಸಾಂ, ಅರುಣಾಚಲ ಪ್ರದೇಶ, ನಾಗಾಲ್ಯಾಂಡ್ , ಬರ್ಮಾ ಮತ್ತು ಒಡಿಶಾದಲ್ಲಿ ಇಲ್ಲಿಯ ತನಕ ಸುಮಾರು 30000ಕಿಮೀ ಸುತ್ತಾಡಿದ್ದಾರೆ. ನೈಸರ್ಗಿಕ ಸೌಂದರ್ಯ ಹೊಂದಿರುವ, ಹೆಚ್ಚಾಗಿ ಅಭಿವೃದ್ದಿ ಕಂಡಿರದ ಅರುಣಾಚಲ ಪ್ರದೇಶದ ಹಳ್ಳಿಗಳು ಸದಾ ನೆನಪಿನಲ್ಲಿರುವ ತಾಣ. ಅಲ್ಲಿನ ಸಮುದಾಯ ಜನರ ವಿಭಿನ್ನ ವಸ್ತ್ರ ವಿನ್ಯಾಸ, ಅಲ್ಲಿಯ ಮಾರುಕಟ್ಟೆ ಕೊಡುಕೊಳ್ಳುವಿಕೆ ವಿರಳ ವಿನಿಮಯ ಪದ್ಧತಿಗಳು ಜಾಸ್ತಿ. ಪ್ರತಿ ಬುಡಕಟ್ಟು ಸಮುದಾಯದ ಜೀವನ ಶೈಲಿ ಸೊಗಸು. ಕಾವ್ಯ ಅವರಿಗೆ ಅರುಣಾಚಲ ಪ್ರದೇಶ ಒಂದು ತಾಣದಲ್ಲಿ ವಿವಿಧತೆ ಕಲಿಸಿಕೊಟ್ಟ ಜಾಗ.

Kavya

ಪುರಾಣ ಕಥೆ ಸಾರುವ ನಾಗಾಲ್ಯಾಂಡ್ ನ ತುತ್ತ ತುದಿಯ ಮೊನ್ (mon)ಹಳ್ಳಿಯ ಹೃದಯ ಭಾಗದ fierce  konyaksನಲ್ಲಿ ಕೆಲ ಸಮಯ ಕಳೆದಿದ್ದರು. ಅಲ್ಲಿನ ಸ್ಥಳೀಯರ ಜೊತೆ ಸೇರಿ ಹೊಳೆಯಲ್ಲಿ ಮೀನು ಹಿಡಿಯುತ್ತಾ, ಅಲ್ಲಿನ ಹಳ್ಳಿಯಲ್ಲಿ ತಿರುಗಾಟ ನಡೆಸಿದ್ದರು ಕಾವ್ಯ. ಅಲ್ಲಿನ ಜನರು,ಸ್ಥಳೀಯ ವಾತಾವರಣ ಹಿಂದೆಂದೂ ಕಂಡಿರದಷ್ಟು ಸೊಗಸು.

ಭಾರತದ ಈಶಾನ್ಯ ರಾಜ್ಯಗಳ ಹಳ್ಳಿಯಲ್ಲಿ ಪ್ರಯಾಣಿಸುತ್ತಾ ಕೋಲ್ಕತ್ತಾದ ನಗರದಲ್ಲಿನ ಟೋಪಿಸಾ ಮತ್ತು ದ್ಯಾನಕುರಿಯ (topisa ,dhyanakuriya)ಸಮುದಾಯದ ಕರಕುಶಲತೆಗೆ ಮಾರು ಹೋಗಿದ್ದರು. ಈಶಾನ್ಯ ರಾಜ್ಯಗಳ ನಗರಗಳಿಗಿಂತ ಹಳ್ಳಿಯ ಪ್ರದೇಶಗಳೇ ಹೆಚ್ಚು ಕಾವ್ಯರ ಗಮನ ಸೆಳೆದದ್ದು.

ಕಾವ್ಯ ಸಾಕಷ್ಟು ಕಠಿಣ ಹಾದಿಗಳನ್ನು ದಾಟಿ ತನ್ನ ಪಯಣ ಪೂರ್ಣಗೊಳಿಸಿದ್ದಾರೆ. ದುರ್ಗಮ ಹಾದಿಯಲ್ಲಿ ಪಯಣ, ಭಾಷಾ ಸಮಸ್ಯೆ, ಹೊಟೇಲ್ ಗಳಲ್ಲಿ ಉಳಿದುಕೊಂಡಾಗ ಅಲ್ಲಿ ಕೆಲವು ಸಮಸ್ಯೆ ಸೇರಿದಂತೆ ಕಠಿಣ ಸವಾಲುಗಳನ್ನು ಕಾವ್ಯ ಎದುರಿಸಿದ್ದಾರೆ. ಆದರೆ ಎಂದು ತಮ್ಮ ಪಯಣದ ಹಾದಿಯಿಂದ ಹಿಂದೆ ಸರಿದಿಲ್ಲ.

ಕಾವ್ಯ ಜರ್ನಿಯನ್ನು ಸವಾಲಾಗಿ ಸ್ವೀಕರಿಸಿದರು. ಉದ್ಯೋಗಿಗಳ ದಿನಚರಿ ಹಾಗೆ ಇವರಿಗೂ ಪ್ರವಾಸ ದಿನಚರಿಯಾಗಿತ್ತು. ಉತ್ತಮ ಉದ್ಯೋಗ ತ್ಯಜಿಸಿ, ಲಾಕ್ ಡೌನ್ ನಂತಹ ಕಠಿಣ ಸಮಯದಲ್ಲಿ ಪ್ರವಾಸಕ್ಕೆ ಹೋದಾಗ ಆಕೆಯ ನಿರ್ಧಾರಕ್ಕೆ ವಿರೋಧಿಸಿದವರು ಕೂಡ ಅನೇಕರು. ಆದರೆ ಕಾವ್ಯ ಅವರ ಪ್ರಕಾರ ಆಕೆಗೆ ಇದೊಂದು ಉತ್ತಮ ನಿರ್ಧಾರ. ಜೀವನವನ್ನು ಸುಂದರವಾಗಿ ಕಳೆಯಲು  ಇದು ಸರಿಯಾದ ಸಮಯ.

ನೀವು ಇದನ್ನು ಇಷ್ಟಪಡಬಹುದು: ಜಗತ್ತಿನಲ್ಲಿ 195 ದೇಶಗಳಲ್ಲಿ 186 ದೇಶ ಸುತ್ತಿ ಬಂದಿರುವ ರವಿ ಪ್ರಭು

ಇಲ್ಲಿ ತನಕ ಆಕೆ ತನ್ನ ಪಯಣದ ವೆಚ್ಚವನ್ನು ಒಬ್ಬಂಟಿಯಾಗಿ ಭರಿಸಿದ್ದಾರೆ. ಮತ್ತಷ್ಟು ದೇಶ ಸುತ್ತಬೇಕು ಹಂಬಲ ಇರುವ ಆಕೆಗೆ  

ಕ್ಯಾಂಪೇನ್ ಮೂಲಕ ಹಣ ಸಂಗ್ರಹಿಸಿ ಮತ್ತೊಂದು ಪಯಣ ಜರ್ನಿ ಆರಂಭಿಸುವ ಬಯಕೆ.

ಹಳ್ಳಿಯ ಪ್ರದೇಶದ ಕಲಾವಿದರು ಅಲ್ಲಿನ ಕರಕುಶಲತೆಗಳ ಬಗ್ಗೆ ಕಾವ್ಯರಿಗೆ ವಿಪರೀತ ಆಸಕ್ತಿ. ತಮ್ಮ ಪ್ರವಾಸದ ಉದ್ದಕ್ಕೂ ತಾವು ಹೋದ ಸ್ಥಳಗಳ ವಿಶೇಷತೆ, ಅಹಾರ ,ಸಂಸ್ಕೃತಿ, ಕರಕುಶಕತೆಗಳ ಬಗ್ಗೆ ತಮ್ಮ ಡೈರಿಯಲ್ಲಿ ಬರೆದುಕೊಂಡಿದ್ದಾರೆ.

ತನ್ನ ವಾಹನ ಶಕ್ತಿಯ ಜೊತೆಗೆ ಬ್ರಹ್ಮ ಪುತ್ರ ನದಿಯ ಬಿದಿರಿನ ಬ್ರಿಡ್ಜ್ ಮೇಲಿನ ಪಯಣ, ಅರುಣಾಚಲ ಪ್ರದೇಶದ ಝೀರೋ ವ್ಯಾಲಿ (ziro valley), ಮುರಶಿರಬಾದ್ (murshidabad)ನ ಗುಡ್ಡ ಪ್ರದೇಶಗಳ ಭೂ ಭಾಗಗಳ ಸುತ್ತಾಟ ಕಾವ್ಯ ಬದುಕಿನ ಮರೆಯದ ಅಧ್ಯಾಯಗಳು.

ಭಾರತದ ಹಳ್ಳಿಗಳು ಸುರಕ್ಷಿತ ಮತ್ತು ಸ್ವಚ್ಛ ಎಂದು ಸಾರುವುದೇ ಕಾವ್ಯ ಅವರ ಗುರಿ. ಗ್ರಾಮೀಣ ಪ್ರದೇಶಗಳಲ್ಲಿ ಕೂಡ ಎಲ್ಲವೂ ದೊರಕುವಂತೆ ಆಗಬೇಕು, ಹಳ್ಳಿಗಳನ್ನು ಕೂಡ ಮುಂದೆ ತರಬೇಕು ಹೀಗೆ ಹಳ್ಳಿಯ ಅಭಿವೃದ್ದಿಯ ಬಗ್ಗೆ ಕನಸು ಕಂಡಿರುವ ಕಾವ್ಯ ಹತ್ತಾರು ಯೋಜನೆಗಳನ್ನು ಕೂಡ ಹಾಕಿಕೊಂಡಿದ್ದಾರೆ.

ಕಾವ್ಯ ಪ್ರಸ್ತುತ ಒಡಿಶಾದ ಕಾಲಹಂದಿ(kaalahandi), ಕೊರಪುತ್(Koraput), ಗೋಪಾಲಪುರ(ಗೋಪಾಲಪುರ)ಪ್ರದೇಶದ ತಾಣಗಳ ಸೌಂದರ್ಯ ಸವಿಯುತ್ತಿದ್ದಾರೆ .ಮುಂದೆ ಛತ್ತೀಸಗಡದ ಹಳ್ಳಿ ಪ್ರದೇಶಗಳನ್ನು ನೋಡಬೇಕು ಎನ್ನುವ ಆಸೆ ಹೊಂದಿದ್ದಾರೆ.

ಕಾವ್ಯ ಅವರ ಪಯಣ ಒಂಟಿ ಪಯಣಿಗರಿಗೆ ಸ್ಫೂರ್ತಿ. ಸಿಟಿ ಹುಡುಗಿಯ ಹಳ್ಳಿ ಜರ್ನಿ ರೋಚಕ. ಕಾರ್ಪೊರೇಟ್ ಜಗತ್ತಿನ ಜಂಜಾಟಗಳ ನಡುವೆ ಮನಸಿಗೆ ಶಾಂತಿ, ವಿರಾಮ ಬಯಸುವವರಿಗೆ ಇವರ ಈಶಾನ್ಯ ರಾಜ್ಯಗಳ ಹಳ್ಳಿಯಲ್ಲಿನ ಪ್ರವಾಸ ದಾರಿ ತೋರಿಸಬಹುದು. ಕಾವ್ಯ ಅವರ ಹಳ್ಳಿಯ ಪ್ರದೇಶಗಳ ಸುತ್ತಾಟಗಳ ಬಗ್ಗೆ ಇನ್ನಷ್ಟು ತಿಳಿದುಕೊಳ್ಳಬೇಕು ಎನ್ನುವ ತುಡಿತ ಇದ್ದರೆ ಕಾವ್ಯ ಅವರ ಇನ್ ಸ್ಟಾಗ್ರಾಂನಲ್ಲಿ ಸಾಕಷ್ಟು ಮಾಹಿತಿ ಕೂಡ ಇದೆ. ಸಿಟಿ ಹುಡುಗಿಯ ಗೊತ್ತೇ ಇಲ್ಲದ ಊರುಗಳಲ್ಲಿನ ಒಂಟಿ ಪಯಣ ಸಾಕಷ್ಟು ಜನರಿಗೆ ಮಾದರಿ.

Related Articles

Leave a Reply

Your email address will not be published. Required fields are marked *

Back to top button