ದೂರ ತೀರ ಯಾನವಂಡರ್ ಬಾಕ್ಸ್ವಿಂಗಡಿಸದ

ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಮತ್ತೊಂದು ಹೊಸ ಗರಿ

ಸಾಮಾನ್ಯವಾಗಿ ದೂರ ಪ್ರಯಾಣಕ್ಕೆ ಹೊರಟಾಗ ನಮ್ಮನ್ನ ಕಾಡೋ ಏಕೈಕ ಸಮಸ್ಯೆ ಅಂದ್ರೆ ಸಂಚಾರ ಸಮಸ್ಯೆ. ಅದರಲ್ಲೂ ಏರ್‌ಪೋರ್ಟ್‌ಗಳಲ್ಲಿ ಹವಮಾನ ಅಥವಾ ಇನ್ಯಾವುದೋ ತಾಂತ್ರಿಕ ದೋಷದಿಂದ ಪದೇ ಪದೇ ವಿಮಾನ ವಿಳಂಬವಾಗ್ತಿರುತ್ತೆ. ಆದ್ರೆ. ಬೆಂಗಳೂರು ಏರ್‌ಪೋರ್ಟ್‌ನಲ್ಲಿ ಕರೆಕ್ಟ್‌ ಟೈಮಿಗೆ ವಿಮಾನ ಹಾರಾಟವಾಗುತ್ತದೆ ಅಂತ ವರದಿಯೊಂದು ಹೇಳಿದೆ.

ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ (Kempegowda International airport)ಜನಪ್ರಿಯತೆಗೆ ಮತ್ತೊಂದು ಹೆಮ್ಮೆಯ ಗರಿ ಸೇರಿಕೊಂಡಿದೆ. ವಿಶ್ವದಲ್ಲೇ ಅತ್ಯಂತ ಪಂಕ್ಟುವಲ್‌ ಏರ್‌ಪೋರ್ಟ್‌ಗಳಲ್ಲಿ 3ನೇ ಸ್ಥಾನ ಪಡೆದುಕೊಂಡಿದೆ. ಈ ಮೂಲಕ ಅಂತಾರಾಷ್ಟ್ರೀಯ ಮಟ್ಟದಲ್ಲಿ ಮತ್ತೊಂದು ಮೈಲಿಗಲ್ಲು ಸಾಧಿಸಿದೆ. ಅತ್ಯುತ್ತಮ ಕಾರ್ಯಕ್ಷಮತೆ ಮತ್ತು ಸಮಯೋಚಿತ ಸೇವೆ ವಿಭಾಗದಲ್ಲಿ ಬೆಂಗಳೂರಿನ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಜಾಗತಿಕವಾಗಿ 3ನೇ ರಾಂಕ್ ಪಡೆದಿದೆ.

Kempegowda International Airport

ಏವಿಯೇಷನ್ ಅನಾಲಿಟಿಕ್ಸ್ ಸಂಸ್ಥೆ ಸಿರಿಯಮ್‌, (aviation analytics firm Cirium)2023ರ ಆನ್-ಟೈಮ್ ಪರ್ಫಾರ್ಮೆನ್ಸ್ ಆಧಾರದ ಮೇಲೆ ಸ್ಥಾನವನ್ನ ನೀಡಿದ್ದು, ಬೆಂಗಳೂರು ವಿಮಾನ ನಿಲ್ದಾಣ ಅತ್ಯಂತ ಪಂಕ್ಟುವಲ್‌ ಏರ್‌ಪೋರ್ಟ್‌ಗಳಲ್ಲಿ ಟಾಪ್ 3 ಸ್ಥಾನ ಪಡೆದುಕೊಂಡಿದೆ. ಅತ್ಯಂತ ಪಂಕ್ಟುವಲ್‌ (Punctual)ಏರ್‌ಪೋರ್ಟ್‌ಗಳಲ್ಲಿ ಹೈದರಾಬಾದ್(Hyderabad), ಕೋಲ್ಕತ್ತಾ( Calcutta )ಸೇರಿದಂತೆ 3 ಭಾರತೀಯ ವಿಮಾನ ನಿಲ್ದಾಣಗಳಿಗೆ ಈ ಗರಿ ದೊರೆತಿದೆ.

ನೀವು ಇದನ್ನು ಇಷ್ಟ ಪಡಬಹುದು: “ವಿಶ್ವದ ಅತಿ ಸುಂದರ ವಿಮಾನ ನಿಲ್ದಾಣ”ಗಳ ಪಟ್ಟಿಯಲ್ಲಿ ಬೆಂಗಳೂರು ವಿಮಾನ ನಿಲ್ದಾಣ T2:

Punctual

ಅದರಲ್ಲಿ ಶೇ 84.08 ರಷ್ಟು ಅಂಕ ಗಳಿಸುವ ಮೂಲಕ, ಬೆಂಗಳೂರಿನ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಮೂರನೇ ಸ್ಥಾನ ಪಡೆದುಕೊಂಡಿದೆ. ಆಗಮನ ಅಥವಾ ನಿರ್ಗಮನದಲ್ಲಿ 15 ನಿಮಿಷದ ವಿಳಂಬವನ್ನು ಸಮಯಪಾಲನೆಯ ಮೇಲೆ ಪರಿಣಾಮ ಬೀರುವ ಅಂಶವೆಂದು ಪರಿಗಣಿಸಿದೆ.

Aviation analytics firm Cirium

ವಾಯುಯಾನ ಕಾರ್ಯಕ್ಷಮತೆಯನ್ನು ನಿರ್ಣಯಿಸುವಲ್ಲಿ ಅನ್ವಯಿಸಲಾದ ಕಠಿಣ ಮಾನದಂಡ ಎಂದು ಇದನ್ನ ಸಿರಿಯಮ್ ಗುರುತಿಸಿದೆ. ಅತ್ಯಂತ ಪಂಕ್ಟುವಲ್‌ ಏರ್‌ಪೋರ್ಟ್‌ಗಳಲ್ಲಿ ಬೆಂಗಳೂರು ವಿಮಾನ ನಿಲ್ದಾಣಕ್ಕೆ ದೊರೆತಿರುವ ಮೂರನೇ ಸ್ಥಾನವು ಸಿಲಿಕಾನ್ ಸಿಟಿಯ ಗರಿಮೆಯನ್ನ ಮತ್ತಷ್ಟು ಹೆಚ್ಚಿಸಿದೆ.

ನಾವೂ ಇನ್ ಸ್ಟಾಗ್ರಾಮ್ ನಲ್ಲೂ ಇದ್ದೀವಿ! ನಮ್ಮ ಗ್ರೂಪ್ ಜಾಯಿನ್ ಆಗಿ.

ನೀವು ಪ್ರವಾಸ ಹೋಗುವ ತಾಣದ ಮಾಹಿತಿ, ಕನ್ನಡ.ಟ್ರಾವೆಲ್ (Kannada.Travel) ಜಾಲತಾಣದಲ್ಲಿ ಪ್ರಕಟವಾಗುವ ಬರಹಗಳ ವಿವರ, ಅಪರೂಪದ ಟ್ರಾವೆಲರ್ ಗಳ ಪರಿಚಯ, ಪ್ರವಾಸಿ ತಾಣಗಳ ಕುತೂಹಲಕರ ಚಿತ್ರ ಬರಹ ಎಲ್ಲವೂ ಇಲ್ಲಿ ನಿಮಗೆ ಸಿಗುತ್ತದೆ. ಬನ್ನಿ ಜೊತೆಯಾಗಿ.

Related Articles

Leave a Reply

Your email address will not be published. Required fields are marked *

Back to top button