ಮ್ಯಾಜಿಕ್ ತಾಣಗಳುವಿಂಗಡಿಸದಸಂಸ್ಕೃತಿ, ಪರಂಪರೆಸ್ಮರಣೀಯ ಜಾಗ

ಸಮುದ್ರದಲ್ಲಿ ಮುಳುಗಿರುವ ಪ್ರಾಚೀನ ದ್ವಾರಕಾ ನಗರಿಯನ್ನು ವೀಕ್ಷಿಸಲು ಬಯಸುವವರಿಗೆ ಶುಭ ಸುದ್ದಿ

ಗುಜರಾತ್ ರಾಜ್ಯವು ಭಾರತದ ಮೊದಲ ಜಲಾಂತರ್ಗಾಮಿ ಪ್ರವಾಸೋದ್ಯಮವನ್ನು ಪರಿಚಯಿಸಲು ಸಜ್ಜಾಗುತ್ತಿದೆ. ಪೌರಾಣಿಕ ಪ್ರಾಮುಖ್ಯತೆಯನ್ನು ಹೊಂದಿರುವ ದ್ವಾರಕಾ ನಗರಿ ಮತ್ತು ಸುತ್ತಮುತ್ತಲಿನ ಸಮುದ್ರ ಜೀವಿಗಳನ್ನು ಅನ್ವೇಷಿಸಲು ಈ ಉಪಕ್ರಮವನ್ನು ಯೋಜಿಸಲಾಗಿದೆ.

ಜಲಾಂತರ್ಗಾಮಿ ಪ್ರವಾಸೋದ್ಯಮವನ್ನು (Submarine Tourism) ಪ್ರಾರಂಭಿಸಲು ಗುಜರಾತ್ ಸರ್ಕಾರವು ಮಜಗಾಂವ್ ಡಾಕ್ ಹಡಗು ನಿರ್ಮಾಣಗಾರರೊಂದಿಗೆ ಒಪ್ಪಂದ ಮಾಡಿಕೊಂಡಿದೆ. ಜಲಾಂತರ್ಗಾಮಿ ನೌಕೆ ಮೂಲಕ ಸಮುದ್ರದೊಳಗೆ ಹೋಗುವ ಮೊದಲ ಸಬ್ ಮರೈನ್ ಪ್ರವಾಸೋದ್ಯಮ ಇದಾಗಲಿದೆ.

ಈ ಪ್ರವಾಸೋದ್ಯಮವನ್ನು 2024ರ ದೀಪಾವಳಿಯ ಸಮಯದಲ್ಲಿ ಕಾರ್ಯಗತಗೊಳಿಸುವ ಸಾಧ್ಯತೆ ಇದೆ. ಪ್ರವಾಸಿಗರನ್ನು ಜಲಾಂತರ್ಗಾಮಿ ನೌಕೆಯ ಮೂಲಕ ಸಮುದ್ರದ ಜೀವಿಗಳನ್ನು ಅನ್ವೇಷಿಸಲು 100 ಮೀ ಆಳದವರೆಗೂ ಕರೆದುಕೊಂಡು ಹೋಗಲಾಗುತ್ತದೆ.

ಇದರ ಇನ್ನೊಂದು ವೈಶಿಷ್ಟ್ಯತೆ ಎಂದರೆ ಪ್ರಾಚೀನ ಕಾಲದಲ್ಲಿ ಮುಳುಗಿ ಹೋಗಿದೆ ಎನ್ನಲಾದ ದ್ವಾರಕಾ ನಗರಿಯ (Dwarka) ಅವಶೇಷಗಳನ್ನು ವೀಕ್ಷಿಸಲು ಇದು ಅನುವು ಮಾಡಿಕೊಡುತ್ತದೆ. ಎರಡು ಗಂಟೆಗಳ ಕಾಲ ಪ್ರವಾಸಿಗರು ಈ ರೋಮಾಂಚಕ ಅನುಭವವನ್ನು ಪಡೆಯಬಹುದಾಗಿದೆ.

India’s first submarine tourism in Dwarka

ಮುಂಬರುವ ವೈಬ್ರೆಂಟ್ ಗುಜರಾತ್ ಗ್ಲೋಬಲ್ ಶೃಂಗಸಭೆಯಲ್ಲಿ ಅಧಿಕೃತವಾಗಿ ಯೋಜನೆಯ ಕುರಿತು ಘೋಷಣೆ ಮಾಡಲಾಗುವುದು ಎಂದು ಟೈಮ್ಸ್ ಆಫ್ ಇಂಡಿಯಾ ವರದಿ ಮಾಡಿದೆ.

ಜಲಾಂತರ್ಗಾಮಿ ನೌಕೆಯು ಸುಮಾರು 35 ಟನ್ ತೂಕವಿದ್ದು, 30 ಪ್ರಯಾಣಿಕರನ್ನು ಸಾಗಿಸುವ ಸಾಮರ್ಥ್ಯ ಹೊಂದಿದೆ ಎಂದು ವರದಿಯಾಗಿದೆ. ಇದು ಏಕಕಾಲದಲ್ಲಿ, 24 ಪ್ರವಾಸಿಗರನ್ನು ಕರೆದೊಯ್ಯುತ್ತದೆ.

ಕಿಟಕಿಯ ಆಸನಗಳ ಪಕ್ಕದಲ್ಲಿ ಎರಡು ಸಾಲುಗಳಲ್ಲಿ ಕುಳಿತುಕೊಳ್ಳುವಂತೆ ಮಾಡಲಾಗುವುದು ಮತ್ತು ಅದರ ಮೂಲಕ ಪ್ರವಾಸಿಗರು ನೌಕೆಯ ಒಳಗಿಂದಲೇ ದ್ವಾರಕೆಯ ವೈಭವವನ್ನು ವೀಕ್ಷಿಸಬಹುದು.

ಇಂಡಿಯಾ ಟುಡೆಯೊಂದಿಗೆ ಮಾತನಾಡಿದ ಗುಜರಾತ್ ಪ್ರವಾಸೋದ್ಯಮದ (Gujarat Tourism) ವ್ಯವಸ್ಥಾಪಕ ನಿರ್ದೇಶಕರಾದ ಸೌರಭ್ ಪಾರ್ಧಿ ಅವರು “ಇದು ಪ್ರವಾಸೋದ್ಯಮ ಕ್ಷೇತ್ರದಲ್ಲಿಯೇ ಒಂದು ವಿಭಿನ್ನ ಯೋಜನೆಯಾಗಿದ್ದು, ನಗರದಲ್ಲಿ ಪ್ರವಾಸೋದ್ಯಮಕ್ಕೆ ಗಮನಾರ್ಹ ಉತ್ತೇಜನವನ್ನು ನೀಡಲು ಇದು ಸಹಾಯ ಮಾಡುತ್ತದೆ.”

ದ್ವಾರಕೆಗೆ ಹೋಗುವ ಪ್ರವಾಸಿಗರು ಸಾಮಾನ್ಯವಾಗಿ ದ್ವಾರಕಾಧೀಶನ ಜಗತ್ ಮಂದಿರಕ್ಕೆ ಭೇಟಿ ನೀಡುತ್ತಾರೆ. ಇನ್ನು ಮುಂದೆ ಇದರೊಂದಿಗೆ ಮುಳುಗಿರುವ ಶ್ರೀಕೃಷ್ಣನ ದ್ವಾರಕಾ ನಗರಿಯನ್ನು ಕೂಡಾ ನೋಡಬಹುದಾಗಿದೆ.

ನಾವೂ ಇನ್ ಸ್ಟಾಗ್ರಾಮ್ ನಲ್ಲೂ ಇದ್ದೀವಿ! ನಮ್ಮ ಗ್ರೂಪ್ ಜಾಯಿನ್ ಆಗಿ.

ನೀವು ಪ್ರವಾಸ ಹೋಗುವ ತಾಣದ ಮಾಹಿತಿ, ಕನ್ನಡ.ಟ್ರಾವೆಲ್ (Kannada.Travel) ಜಾಲತಾಣದಲ್ಲಿ ಪ್ರಕಟವಾಗುವ ಬರಹಗಳ ವಿವರ, ಅಪರೂಪದ ಟ್ರಾವೆಲರ್ ಗಳ ಪರಿಚಯ, ಪ್ರವಾಸಿ ತಾಣಗಳ ಕುತೂಹಲಕರ ಚಿತ್ರ ಬರಹ ಎಲ್ಲವೂ ಇಲ್ಲಿ ನಿಮಗೆ ಸಿಗುತ್ತದೆ. ಬನ್ನಿ ಜೊತೆಯಾಗಿ.

Related Articles

Leave a Reply

Your email address will not be published. Required fields are marked *

Back to top button