ಮೋಟಾರ್ ಸೈಕಲ್ ಡೈರಿಮ್ಯಾಜಿಕ್ ತಾಣಗಳುವಿಂಗಡಿಸದ

ಭಾರತೀಯ ಡ್ರೈವಿಂಗ್ ಲೈಸೆನ್ಸ್ ಬಳಸಿ ನೀವು ಈ ದೇಶಗಳಲ್ಲಿ ಸುತ್ತಬಹುದು

ವಿದೇಶ ಪ್ರವಾಸ ಅನೇಕರ ಕನಸು. ವಿದೇಶಗಳಿಗೆ ಹೋಗಬೇಕು, ಅಲ್ಲಿನ ಹೊಸ ತಾಣಗಳನ್ನು ಅನ್ವೇಷಿಸಬೇಕು, ಆಲ್ಲಿಯ ಆಹಾರ ವೈವಿಧ್ಯತೆಯನ್ನು ಸವಿಯಬೇಕು ಎಂಬ ಕನಸು ಅನೇಕ ಪ್ರವಾಸಿಪ್ರಿಯರಿಗೆ ಇರುತ್ತದೆ.

ವಿದೇಶಗಳ ತಾಣಗಳು ಪ್ರವಾಸಪ್ರಿಯರಿಗೆ ರೋಮಾಂಚಕ ಅನುಭವಗಳನ್ನು ನೀಡುತ್ತದೆ. ಇದರೊಂದಿಗೆ ನಾವೇ ರಸ್ತೆಗಳಲ್ಲಿ ವಾಹನಗಳನ್ನು ಚಲಾಯಿಸುತ್ತಾ, ವಿದೇಶದ ತಾಣಗಳನ್ನು ವೀಕ್ಷಿಸುವ ಅವಕಾಶ ಇದ್ದರಂತೂ ನಮ್ಮ ಖುಷಿ ದುಪ್ಪಟ್ಟಾದಂತೆ.

ಈ ಅನುಭವಗಳನ್ನು ನೀಡುವ ಕೆಲವು ದೇಶಗಳಿವೆ. ಇಲ್ಲಿ ನೀವು ನಿಮ್ಮ ಭಾರತೀಯ ಚಾಲನಾ ಪರವಾನಗಿ (Driving License) ಬಳಸಿಕೊಂಡು ವಿದೇಶದ ವಾಹನಗಳನ್ನು ಚಲಾಯಿಸಬಹುದು. ಅಂತಹ ಐದು ದೇಶಗಳ ಕುರಿತು ಮಾಹಿತಿ ಇಲ್ಲಿದೆ.

1. ಯುನೈಟೆಡ್ ಸ್ಟೇಟ್ಸ್ :

ಭಾರತೀಯ ಚಾಲನಾ ಪರವಾನಗಿ ಬಳಸಿಕೊಂಡು ವಾಹನಗಳನ್ನು ಚಲಾಯಿಸಲು US ಅವಕಾಶವನ್ನು ನೀಡುತ್ತದೆ. ಈ ಡ್ರೈವಿಂಗ್ ಲೈಸೆನ್ಸ್ US ಗೆ ಪ್ರವೇಶಿಸಿದ ದಿನದಿಂದ 1 ವರ್ಷದವರೆಗೆ ಮಾನ್ಯವಾಗಿರುತ್ತದೆ.

ಆದರೆ ಡ್ರೈವಿಂಗ್ ಲೈಸೆನ್ಸ್ ಭಾರತದ ಯಾವುದೇ ಪ್ರಾದೇಶಿಕ ಭಾಷೆಯನ್ನು ಹೊರತು ಪಡಿಸಿ, ಇಂಗ್ಲಿಷ್‌ನಲ್ಲಿರಬೇಕು ಇಲ್ಲದಿದ್ದರೆ ಅನುವಾದಿಸಿಕೊಳ್ಳಬೇಕು. ಹಾಗೂ ನೀವು “ಫಾರ್ಮ್ I-94” ಮತ್ತು ಅಂತರಾಷ್ಟ್ರೀಯ ಡ್ರೈವಿಂಗ್ ಪರ್ಮಿಟ್ ನ ನಕಲನ್ನು ಕೂಡಾ ಹೊಂದಿರಬೇಕು.

2. ಆಸ್ಟ್ರೇಲಿಯಾ:

ಭಾರತದ ಡ್ರೈವಿಂಗ್ ಲೈಸೆನ್ಸ್ ಅನ್ನು ಒಂದು ವರ್ಷದವರೆಗೆ ಬಳಸಲು ಆಸ್ಟ್ರೇಲಿಯಾ (Australia) ಅನುಮತಿಸುತ್ತದೆ. ಪರವಾನಗಿಯು ನ್ಯೂ ಸೌತ್ ವೇಲ್ಸ್, ಕ್ವೀನ್ಸ್‌ಲ್ಯಾಂಡ್, ದಕ್ಷಿಣ ಆಸ್ಟ್ರೇಲಿಯಾ ಮತ್ತು ಆಸ್ಟ್ರೇಲಿಯನ್ ಕ್ಯಾಪಿಟಲ್ ಟೆರಿಟರಿಯಲ್ಲಿ ಮಾತ್ರ ಒಂದು ವರ್ಷದವರೆಗೆ ಮಾನ್ಯವಾಗಿರುತ್ತದೆ.

ಆದರೆ ಉತ್ತರ ಆಸ್ಟ್ರೇಲಿಯಾದಲ್ಲಿ, ಪರವಾನಗಿ 3 ತಿಂಗಳವರೆಗೆ ಮಾತ್ರ ಮಾನ್ಯವಾಗಿರುತ್ತದೆ. ವಿಶೇಷವಾಗಿ ಉತ್ತರ ಆಸ್ಟ್ರೇಲಿಯಾದಲ್ಲಿ ಚಲಾಯಿಸುವಾಗ ಅಂತರಾಷ್ಟ್ರೀಯ ಚಾಲನಾ ಪರವಾನಗಿಯನ್ನು ಕೊಂಡೊಯ್ಯುವುದು ಒಳ್ಳೆಯದು.

3. ಯುನೈಟೆಡ್ ಕಿಂಗ್ಡಮ್:

ಯುಕೆಯಲ್ಲಿ, (United Kingdom) ಭಾರತೀಯ ಪರವಾನಗಿ ಹೊಂದಿರುವವರು ಇಂಗ್ಲೆಂಡ್, ವೇಲ್ಸ್ ಮತ್ತು ಸ್ಕಾಟ್ಲೆಂಡ್ ರಸ್ತೆಗಳಲ್ಲಿ ಒಂದು ವರ್ಷದವರೆಗೆ ಚಾಲನೆ ಮಾಡಬಹುದು.

ಭಾರತದಂತೆಯೇ, ರಸ್ತೆಯ ಎಡಭಾಗದಲ್ಲಿ ವಾಹನಗಳ ಚಾಲನೆ ಇರುತ್ತದೆ. ಆದರೆ ಇಲ್ಲಿ ನಿಮ್ಮ ಡಿಎಲ್‌ನಲ್ಲಿ ನಮೂದಿಸಿರುವ ನಿರ್ದಿಷ್ಟ ವಾಹನಗಳನ್ನು ಮಾತ್ರ ಚಲಾಯಿಸುವ ಅವಕಾಶ ಇರುತ್ತದೆ.

4. ಜರ್ಮನಿ:

ಜರ್ಮನಿಯು (Germany) ಮತ್ತೊಂದು ಯುರೋಪಿಯನ್ ರಾಷ್ಟ್ರವಾಗಿದ್ದು ಅದು ಭಾರತೀಯ ಡ್ರೈವಿಂಗ್ ಲೈಸೆನ್ಸ್ ಅನ್ನು ಆರು ತಿಂಗಳವರೆಗೆ ಮಾತ್ರ ಅನುಮತಿಸುತ್ತದೆ. ಪರವಾನಗಿ ಇಂಗ್ಲಿಷ್ ಅಥವಾ ಜರ್ಮನ್ ಭಾಷೆಯಲ್ಲಿರಬೇಕು.

ಇಲ್ಲದಿದ್ದರೆ, ನೀವು ಅದನ್ನು ಪೊಲೀಸ್ ಅಧಿಕಾರಿಗಳು ಅಥವಾ ಬಾಡಿಗೆ ಏಜೆನ್ಸಿಗಳಿಂದ ಅನುವಾದಿಸಬೇಕು. ಆರು ತಿಂಗಳ ನಂತರ, ನೀವು ಅಂತರರಾಷ್ಟ್ರೀಯ ಚಾಲನಾ ಪರವಾನಗಿ ಅಥವಾ ಜರ್ಮನ್ ಚಾಲನಾ ಪರವಾನಗಿಯನ್ನೇ ಬಳಸಬೇಕು.

5. ನ್ಯೂಜಿಲ್ಯಾಂಡ್:

ನ್ಯೂಜಿಲೆಂಡ್ (New Zealand) ಕೂಡ ಒಂದು ವರ್ಷದವರೆಗೆ ಭಾರತೀಯ ಚಾಲನಾ ಪರವಾನಗಿಯನ್ನು ಬಳಸಲು ಅನುಮತಿಸುತ್ತದೆ. ಒಂದು ವರ್ಷದ ನಂತರ ನ್ಯೂಜಿಲ್ಯಾಂಡ್ ಡ್ರೈವಿಂಗ್ ಪರವಾನಗಿ ಅಥವಾ ಅಂತರರಾಷ್ಟ್ರೀಯ ಚಾಲನಾ ಪರವಾನಿಗೆ ಅಗತ್ಯವಿರುತ್ತದೆ.

ನಿಮ್ಮ ಚಾಲನಾ ಪರವಾನಗಿ ಇಂಗ್ಲಿಷ್‌ನಲ್ಲಿರಬೇಕು. ಅದು ಇಲ್ಲದಿದ್ದರೆ, ನೀವು ನ್ಯೂಜಿಲೆಂಡ್ ಸಾರಿಗೆ ಸಂಸ್ಥೆಯಿಂದ ಅನುವಾದಿತ ಪ್ರತಿಯನ್ನು ಪಡೆಯಬಹುದು.

ಸ್ವಿಟ್ಜರ್ಲ್ಯಾಂಡ್, ಫ್ರಾನ್ಸ್, ಮಲೇಷ್ಯಾ, ಸಿಂಗಾಪುರ,ದಕ್ಷಿಣ ಆಫ್ರಿಕಾ, ಸ್ವೀಡನ್ ಸೇರಿದಂತೆ ಇನ್ನೂ ಕೆಲವು ದೇಶಗಳು ಭಾರತೀಯ ಚಾಲನಾ ಪರವಾನಗಿಯನ್ನು ಒಂದು ವರ್ಷದವರೆಗೆ ಮಾನ್ಯ ಮಾಡುತ್ತವೆ. ಆದರೆ ನೆನಪಿರಲಿ ನಿಮ್ಮ ಲೈಸೆನ್ಸ್ ಇಂಗ್ಲಿಷ್ ಅಥವಾ ಆ ದೇಶದ ಭಾಷೆಯಲ್ಲಿರುವುದು ಖಡ್ಡಾಯವಾಗಿರುತ್ತದೆ.

ನಾವೂ ಇನ್ ಸ್ಟಾಗ್ರಾಮ್ ನಲ್ಲೂ ಇದ್ದೀವಿ! ನಮ್ಮ ಗ್ರೂಪ್ ಜಾಯಿನ್ ಆಗಿ.

ನೀವು ಪ್ರವಾಸ ಹೋಗುವ ತಾಣದ ಮಾಹಿತಿ, ಕನ್ನಡ.ಟ್ರಾವೆಲ್ (Kannada.Travel) ಜಾಲತಾಣದಲ್ಲಿ ಪ್ರಕಟವಾಗುವ ಬರಹಗಳ ವಿವರ, ಅಪರೂಪದ ಟ್ರಾವೆಲರ್ ಗಳ ಪರಿಚಯ, ಪ್ರವಾಸಿ ತಾಣಗಳ ಕುತೂಹಲಕರ ಚಿತ್ರ ಬರಹ ಎಲ್ಲವೂ ಇಲ್ಲಿ ನಿಮಗೆ ಸಿಗುತ್ತದೆ. ಬನ್ನಿ ಜೊತೆಯಾಗಿ.

Related Articles

Leave a Reply

Your email address will not be published. Required fields are marked *

Back to top button