ವಿಂಗಡಿಸದಸಂಸ್ಕೃತಿ, ಪರಂಪರೆ

ಅಯೋಧ್ಯೆಗೆ ಕನ್ನಡಿಗ ಕೆತ್ತಿದ ವಿಗ್ರಹ ಆಯ್ಕೆ. ವಿಶೇಷತೆಗಳೇನು ಗೊತ್ತಾ..?

ರಾಮ ಮಂದಿರದ ತಯಾರಿ ಭರದಿಂದ ಸಾಗುತ್ತಿವೆ. ರಾಮಮಂದಿರದಲ್ಲಿ (Ram Mandir) ಜನವರಿ 22ರಂದು ರಾಮ ಲಲ್ಲಾನ (Ram Lalla Idol) ಪ್ರತಿಷ್ಠಾಪನೆಯೂ ಆಗಲಿದೆ.

ಇದಕ್ಕಾಗಿ ಈಗಾಗಲೇ ಮೂವರು ಶಿಲ್ಪಿಗಳು ಪ್ರತ್ಯೇಕವಾಗಿ 3 ಬಾಲರಾಮನ ಮೂರ್ತಿಯನ್ನು ರೆಡಿಮಾಡಿದ್ದರು. ಕೊನೆಗೆ ಒಬ್ಬರನ್ನು ಆಯ್ಕೆ ಮಾಡಲಾಗಿದ್ದು, ಈ ವಿಚಾರದಲ್ಲಿ ಕನ್ನಡಿಗರಿಗೆ ಗುಡ್ ನ್ಯೂಸ್ ಸಿಕ್ಕಿದೆ..

Ram lalla Idol

ರಾಮಲಲ್ಲಾ ಪ್ರತಿಷ್ಠಾಪನೆಗಾಗಿ ಕೆತ್ತಲಾಗಿದ್ದು ಮೂರ್ತಿಯಲ್ಲಿ ಇಬ್ಬರು ಕನ್ನಡಿಗರು ಕೂಡ ಇದ್ದರು. ಇದರಲ್ಲಿ ಮೈಸೂರಿನ ಶಿಲ್ಪಿ ಅರುಣ್ ಯೋಗಿರಾಜ್ ರವರ ಕೆತ್ತನೆ ಮೂರ್ತಿ ಕಳೆದ ಶುಕ್ರವಾರ ಮತದಾನದ ಮೂಲಕ ಆಯ್ಕೆಯಾಗಿದೆ. ಅಯೋಧ್ಯೆ ರಾಮಮಂದಿರದ ಗರ್ಭಗುಡಿಯೊಳಗೆ ಕನ್ನಡಿಗ ಕೆತ್ತಿದ್ದ ವಿಗ್ರಹದ ಪ್ರಾಣ ಪ್ರತಿಷ್ಟಾಪನೆ ಆಗಲಿದೆ.

ಅಯೋಧ್ಯೆಯು ಶ್ರೀರಾಮನ ಜನ್ಮಸ್ಥಳವಾಗಿರುವುದರಿಂದ ಅಲ್ಲಿ ಪ್ರತಿಷ್ಠಾಪನೆಯಾಗುವ ರಾಮನ ವಿಗ್ರಹವು ಬಾಲರಾಮನದ ಆಕೃತಿಯಲ್ಲೇ ಇರಬೇಕು ಎಂಬುದು ರಾಮಜನ್ಮಭೂಮಿ ಟ್ರಸ್ಟ್ ನವರ ಇಚ್ಛೆಯಾಗಿತ್ತು.

ಅವರ ಪರಿಕಲ್ಪನೆಯಂತೆಯೇ, 51 ಇಂಚು ಉದ್ದ, 3 ಅಡಿ ಅಗಲವಿರುವ ಕಲ್ಲಿನ ವಿಗ್ರಹ ಕೆತ್ತಲಾಗಿದೆ. ಮಗುವಿನ ಕಣ್ಣುಗಳ ಮುಗ್ಧತೆ, ತುಂಟತನದ ನೋಟ, ತುಟಿಗಳಲ್ಲಿ ಮುಗುಳ್ನಗೆ ಹಾಗೂ ಮುಖದಲ್ಲೊಂದು ಗಾಂಭೀರ್ಯತೆ ಇದೆಲ್ಲಾ ಭಾವಗಳೂ ಶಿಲ್ಪದಲ್ಲಿ ಬರಬೇಕು ಎಂದು ಹೇಳಲಾಗಿದ್ದರಿಂದ ಶಿಲ್ಪಿ ಯೋಗಿರಾಜ್ ಅವರಿಗೆ ಇದು ಅತ್ಯಂತ ಸವಾಲಿನ ಕೆಲಸವಾಗಿತ್ತು.

ನೀವು ಇದನ್ನು ಇಷ್ಟ ಪಡಬಹುದು:ರಾಮ ಮಂದಿರ ಉದ್ಘಾಟನೆಗೆ ಹೋಗುವವರಿಗೆ ಸಿಹಿ ಸುದ್ದಿ

Arun Yogiraj

ಜೊತೆಗೆ, ಶ್ರೀರಾಮನ ಯಾವುದೇ ಮೂರ್ತಿಗಳು ಹಾಗೂ ಕ್ಯಾಲೆಂಡರ್ ಗಳಲ್ಲಿ ಬಾಲರಾಮನ ಚಿತ್ರ ಇಲ್ಲವಾದ್ದರಿಂದ ಅವರ ಮನಸ್ಸಿನಲ್ಲಿ ಶಿಲ್ಪ ಕಟೆಯುವುದಕ್ಕೂ ಮುಂಚೆ ಒಂದು ಸ್ಪಷ್ಟ ಚಿತ್ರಣ ಕಂಡುಕೊಳ್ಳಲು ಕೆಲವು ದಿನಗಳೇ ಬೇಕಾದವು. ಹಾಗಾಗಿ, ಅವರು ಮಕ್ಕಳನ್ನು ಅಧ್ಯನ ಮಾಡಿ ಅಂತಿಮವಾಗಿ ಒಂದು ಚಿತ್ರಣವನ್ನು ಕಂಡುಕೊಂಡು ಅದನ್ನೇ ಶಿಲ್ಪಕ್ಕೆ ಧಾರೆಯೆರೆದಿದ್ದಾರೆ.

RAM MANDIR

ಕೇವಲ ಮೂರ್ತಿ ಗೆ ಮಾತ್ರ ಕರುನಾಡಿನ ನಂಟಿಲ್ಲ. ಅದಕ್ಕೆ ಬಳಕೆಯಾಗಿರುವ ಕಪ್ಪು ಶಿಲೆಗೂ ಕೂಡ ರಾಜ್ಯದ ನಂಟಿದೆ. ಆರಂಭದಲ್ಲಿ ರಾಮನ ಮೂರ್ತಿಗೆ ಬೇಕಾಗುವ ಕಪ್ಪು ಶಿಲೆಗಳನ್ನು ಕಾರ್ಕಳದಿಂದ ತರಿಸಲಾಗಿತ್ತು. ಆ ಬಳಿಕ ಕೆಲ ಕಾರಣಗಳಿಂದ ಹೆಚ್. ಡಿ.ಕೋಟೆಯ ಕಲ್ಲುಗಳನ್ನು ಬಳಕೆ ಮಾಡಲಾಗಿದೆ.

ಕನ್ನಡಿಗರ ಹೆಮ್ಮೆಗೆ ಕಾರಣವಾಗಿರುವ ಈ ಅರುಣ್ ಯೋಗಿರಾಜ್ ದೇಶದ ಪ್ರಸಿದ್ಧ ಶಿಲ್ಪಿಗಳಲ್ಲಿ ಒಬ್ಬರು. ಉತ್ತರಖಂಡ ಕೇದಾರನಾಥಕ್ಕೆ 12 ಅಡಿ ಆದಿ ಶಂಕರಾಚಾರ್ಯರ ವಿಗ್ರಹ ಹಾಗೂ ಭಾರತ ಸರ್ಕಾರ ದೆಹಲಿ ಇಂಡಿಯಾ ಗೇಟ್ ನಲ್ಲಿ ಸ್ಥಾಪಿಸಿರುವ ಸುಭಾಷ್ ಚಂದ್ರ ಬೋಸ್ ಅವರ 28 ಅಡಿ ಏಕಶಿಲೆಯ ಕಪ್ಪು ಗ್ರಾನೈಟ್ ಕಲ್ಲಿನ ಶಿಲ್ಪ ಕೂಡ ಅರುಣ್‌ ಯೋಗಿರಾಜ್‌ ನಿರ್ಮಿಸಿದ್ದರು.

ನಾವೂ ಇನ್ ಸ್ಟಾಗ್ರಾಮ್ ನಲ್ಲೂ ಇದ್ದೀವಿ! ನಮ್ಮ ಗ್ರೂಪ್ ಜಾಯಿನ್ ಆಗಿ.

ನೀವು ಪ್ರವಾಸ ಹೋಗುವ ತಾಣದ ಮಾಹಿತಿ, ಕನ್ನಡ.ಟ್ರಾವೆಲ್ (Kannada.Travel) ಜಾಲತಾಣದಲ್ಲಿ ಪ್ರಕಟವಾಗುವ ಬರಹಗಳ ವಿವರ, ಅಪರೂಪದ ಟ್ರಾವೆಲರ್ ಗಳ ಪರಿಚಯ, ಪ್ರವಾಸಿ ತಾಣಗಳ ಕುತೂಹಲಕರ ಚಿತ್ರ ಬರಹ ಎಲ್ಲವೂ ಇಲ್ಲಿ ನಿಮಗೆ ಸಿಗುತ್ತದೆ. ಬನ್ನಿ ಜೊತೆಯಾಗಿ.

Related Articles

Leave a Reply

Your email address will not be published. Required fields are marked *

Back to top button