ಹೊಸ ವರ್ಷಕ್ಕೆ 108 ಸ್ಥಳಗಳಲ್ಲಿ 4,000 ಜನರಿಂದ ಸೂರ್ಯ ನಮಸ್ಕಾರ – ಗಿನ್ನಿಸ್ ದಾಖಲೆ
2024 ರ ಮೊದಲ ದಿನವನ್ನು (ಜ.1.2024) ಗುಜರಾತ್ ವಿಶಿಷ್ಟವಾಗಿ ಸ್ವಾಗತಿಸಿದೆ. ಇಂದು ಬೆಳಗ್ಗೆ ಒಂದೇ ಕಾಲದಲ್ಲಿ 108 ಸ್ಥಳಗಳಲ್ಲಿ ಸೂರ್ಯ ನಮಸ್ಕಾರ ಮಾಡುವ ಮೂಲಕ ಹೊಸ ವರ್ಷವನ್ನು ಸ್ವಾಗತಿಸುವ ಜೊತೆಗೆ ಗಿನ್ನಿಸ್ ದಾಖಲೆಯನ್ನೂ ಸೃಷ್ಟಿಸಿದೆ.
ಈ ಸೂರ್ಯ ನಮಸ್ಕಾರವನ್ನು ಗುಜರಾತಿನ (Gujarat) 108 ಪ್ರದೇಶಗಳಲ್ಲಿ ನಾಲ್ಕು ಸಾವಿರಕ್ಕೂ ಹೆಚ್ಚು ಮಂದಿ ಭಾಗವಹಿಸುವ ಮೂಲಕ 51 ಪ್ರಕಾರಗಳಲ್ಲಿ ಪ್ರದರ್ಶಿಸಿದ್ದಾರೆ.
ಈ ಕುರಿತು ಸಾಮಾಜಿಕ ಜಾಲತಾಣ X ಖಾತೆಯಲ್ಲಿ ಫೋಟೋಗಳನ್ನು ಹಂಚಿಕೊಂಡಿರುವ ಪ್ರಧಾನಿ ಮೋದಿಯವರು ಹೀಗೆ ಬರೆದಿದ್ದಾರೆ.
“108 ಸ್ಥಳಗಳಲ್ಲಿ ಏಕಕಾಲದಲ್ಲಿ ಅತಿ ಹೆಚ್ಚು ಜನರು ಸೂರ್ಯ ನಮಸ್ಕಾರ ಮಾಡಿ, ಗಿನ್ನಿಸ್ ಬುಕ್ ಆಫ್ ವರ್ಲ್ಡ್ ರೆಕಾರ್ಡ್ ನಲ್ಲಿ (Guinness Book Of World Records) ಹೆಸರನ್ನು ದಾಖಲಿಸುವ ಮೂಲಕ ಗುಜರಾತ್ ಗಮನಾರ್ಹ ಸಾಧನೆಯೊಂದಿಗೆ ಹೊಸ ವರ್ಷವನ್ನು ಸ್ವಾಗತಿಸಿದೆ. ನಮಗೆಲ್ಲರಿಗೂ ತಿಳಿದಂತೆ, ನಮ್ಮ ಸಂಸ್ಕೃತಿಯಲ್ಲಿ 108 ಸಂಖ್ಯೆಗೆ ವಿಶಿಷ್ಟವಾದ ಮಹತ್ವವಿದೆ. ಅಂತೆಯೇ ಈ ಸೂರ್ಯ ನಮಸ್ಕಾರವನ್ನು ಭಾರತೀಯರ ಮಹತ್ವದ ಸ್ಥಳವಾದ ಮೊಧೆರಾ ಸೂರ್ಯ ದೇವಾಲಯದಲ್ಲಿ ಮಾಡಲಾಗಿದೆ. ಈ ಮೂಲಕ ನಮ್ಮ ಸಂಸ್ಕೃತಿ, ಪರಂಪರೆಯ ಬದ್ಧತೆಯ ಸಾಕ್ಷಿಯಾಗಿದೆ.”
ಸೂರ್ಯ ನಮಸ್ಕಾರವನ್ನು (Surya Namaskar) ನಿಮ್ಮ ದಿನಚರಿಯ ಭಾಗವಾಗಿಸಿಕೊಳ್ಳಿ. ಇದರಿಂದ ಹಲವು ಪ್ರಯೋಜನಗಳಿವೆ ಎಂದೂ ಅವರು ಹೇಳಿದರು.
ಭವ್ಯವಾದ ಮೊಧೇರಾ ಸೂರ್ಯ ದೇವಾಲಯವು (Modhera Sun Temple) ಕುಟುಂಬದ ಸದಸ್ಯರು, ವಿದ್ಯಾರ್ಥಿಗಳು, ಯೋಗಾಸಕ್ತರು ಮತ್ತು ಹಿರಿಯ ನಾಗರಿಕರು ಸೇರಿದಂತೆ ವಿವಿಧ ಗುಂಪುಗಳ ಉತ್ಸಾಹಿಗಳು ಭಾಗವಹಿಸಿದ್ದರು.
ಈ ಕಾರ್ಯಕ್ರಮದಲ್ಲಿ ಮುಖ್ಯಮಂತ್ರಿ ಭೂಪೇಂದ್ರ ಪಟೇಲ್ ಮತ್ತು ಗೃಹ ಸಚಿವ ಹರ್ಷ ಸಾಂಘವಿ ಅವರು ಪಾಲ್ಗೊಂಡಿದ್ದರು.
ಗಿನ್ನೆಸ್ ವಿಶ್ವ ದಾಖಲೆಯ ತೀರ್ಪುಗಾರ ಸ್ವಪ್ನಿಲ್ ದಂಗಾರಿಕರ್ ಅವರು ವಿವಿಧ ಸ್ಥಳಗಳಲ್ಲಿ ಪರಿಶೀಲಿಸಿ ಈ ಹೊಸ ರೀತಿಯ ಪ್ರಯತ್ನವನ್ನು ಶ್ಲಾಘಿಸುವುದರು.
ನಾವೂ ಇನ್ ಸ್ಟಾಗ್ರಾಮ್ ನಲ್ಲೂ ಇದ್ದೀವಿ! ನಮ್ಮ ಗ್ರೂಪ್ ಜಾಯಿನ್ ಆಗಿ.
ನೀವು ಪ್ರವಾಸ ಹೋಗುವ ತಾಣದ ಮಾಹಿತಿ, ಕನ್ನಡ.ಟ್ರಾವೆಲ್ (Kannada.Travel) ಜಾಲತಾಣದಲ್ಲಿ ಪ್ರಕಟವಾಗುವ ಬರಹಗಳ ವಿವರ, ಅಪರೂಪದ ಟ್ರಾವೆಲರ್ ಗಳ ಪರಿಚಯ, ಪ್ರವಾಸಿ ತಾಣಗಳ ಕುತೂಹಲಕರ ಚಿತ್ರ ಬರಹ ಎಲ್ಲವೂ ಇಲ್ಲಿ ನಿಮಗೆ ಸಿಗುತ್ತದೆ. ಬನ್ನಿ ಜೊತೆಯಾಗಿ.