ಮ್ಯಾಜಿಕ್ ತಾಣಗಳುವಿಂಗಡಿಸದ

ಕರ್ನಾಟಕದ ಚಿರಾಪುಂಜಿ ಆಗುಂಬೆಯ ಸೊಬಗು

ಕರ್ನಾಟಕದ ಚಿರಾಪುಂಜಿ ಆಗುಂಬೆ . ಇಲ್ಲಿ ಸೂರ್ಯಾಸ್ತ ನೋಡುವುದೇ ಸೊಗಸು. ಸುತ್ತಲಿನ ಹಸಿರಿನ ಕಾನನಗಳ ನಡುವೆ ಸಾಕಷ್ಟು ಆಕರ್ಷಣೀಯ ಸ್ಥಳಗಳನ್ನು ಹೊಂದಿದೆ ಆಗುಂಬೆ. ವರುಣ ,ಹಸಿರು , ಕಾನನಗಳ ಸೊಬಗನ್ನು ನಿಸರ್ಗ ಪ್ರಿಯರಿಗೆ ಉಣಬಡಿಸುವ ಆಗುಂಬೆ ಕುರಿತಾದ ಬರಹ

ರಾಹುಲ್ ಆರ್ ಸುವರ್ಣ

ಆಗುಂಬೆ ಶಿವಮೊಗ್ಗ ಜಿಲ್ಲೆಯಲ್ಲಿದೆ. ಉಡುಪಿ ಶಿವಮೊಗ್ಗ ಜಿಲ್ಲೆಯನ್ನು ಬೆಸೆಯುವ ಪ್ರದೇಶ ಆಗುಂಬೆ. ಇಲ್ಲಿ ಸೂರ್ಯೋದಯ ನೋಡುವುದೇ ಸೊಗಸು. ಸೂರ್ಯೋದಯ, ಸೂರ್ಯಸ್ತಕ್ಕೆ ಹೆಸರುವಾಸಿ ಈ ಜಾಗ. ವಾರಂತ್ಯ ದಿನಗಳಲ್ಲಿ ಇಲ್ಲಿಗೆ ಹೊರ ಜಿಲ್ಲೆ, ರಾಜ್ಯಗಳಿಂದ ಜನರು ಸಾವಿರಾರು ಸಂಖ್ಯೆಯಲ್ಲಿ ಬಂದು, ಆ ದಿನದ ತಮ್ಮ ಜಂಜಾಟಗಳ ಕೆಲಸಕ್ಕೆ ಪೂರ್ಣ ವಿರಾಮ ಇಟ್ಟು ಮರೆಯಾಗುತ್ತಿರುವ ಸೂರ್ಯನನ್ನು ಕಂಡು ಕಣ್ತುಂಬಿಕೊಳ್ಳುತ್ತಾರೆ. ಅಕ್ಟೋಬರ್ ತಿಂಗಳಿನಲ್ಲಿ ಸೂರ್ಯಾಸ್ತ ನೋಡಲೆಂದೆ ದೂರದೂರಿನಿಂದ ಪ್ರವಾಸಿಗರು ಆಗುಂಬೆ ಕಡೆಗೆ ಪ್ರಯಾಣ ಬೆಳೆಸುತ್ತಾರೆ.

ಸನ್ ಸೆಟ್ ಪಾಯಿಂಟ್

Sunset point

ಆಗುಂಬೆಯ ತುತ್ತ ತುದಿಯಲ್ಲಿ ಸನ್ ಸೆಟ್ ಪಾಯಿಂಟ್ ಕೂಡ ನಿರ್ಮಿಸಿ ಪ್ರವಾಸಿಗರ ಸೆಲ್ಫಿ ಮತ್ತು ಫೋಟೋಗ್ರಫಿಗೆ ಅವಕಾಶ ಮಾಡಿಕೊಡಲಾಗಿದೆ. ಆಗುಂಬೆ ಘಾಟಿ ಕೂಡ ಇಲ್ಲಿನ ಪ್ರಮುಖ ಆಕರ್ಷಣೆಗಳಲ್ಲಿ ಒಂದಾಗಿದೆ. ವಾಹನಗಳಲ್ಲಿ ಚಲಿಸುವಾಗ ಬೀಸುವ ತಂಪು ಗಾಳಿ ನಗರದ ಜಂಜಾಟದ ಜೀವನದಿಂದ ದೂರಕ್ಕೆ ಸೆಳೆಯುತ್ತದೆ. ಅಲ್ಲಲ್ಲಿ ಕಾಣುವ ಮಂಗಗಳು ಪ್ರವಾಸಿಗರಿಗೆ ಇನ್ನಷ್ಟು ಮಜಾ ನೀಡುತ್ತವೆ. ಆದರೆ ಅಲ್ಲಿ ಅವುಗಳಿಗೆ ಆಹಾರ ನೀಡಲು ಅನುಮತಿ ಇಲ್ಲದಿದ್ದರೂ ಪ್ರವಾಸಿಗರು ಅವುಗಳಿಗೆ ವಾಹನ ಚಲಿಸುವ ಸಮಯದಲ್ಲೇ ಅನಾಗರಿಕರಂತೆ ತಂದ ಸಣ್ಣ ಪುಟ್ಟ ತಿನಿಸುಗಳನ್ನು ಎಸೆದು ಬಿಡುತ್ತಿದ್ದಾರೆ. ಇದಕ್ಕೆ ಅಲ್ಲಿನ ಅರಣ್ಯ ಇಲಾಖೆಯ ಸಿಬ್ಬಂದಿಗಳು ಎಷ್ಟೇ ಕ್ರಮ ಕೈಗೊಂಡರು, ಪ್ರವಾಸಿಗರು ಎಚ್ಚರ ಗೊಳ್ಳದಿದ್ದರೆ, ನಮ್ಮ ಮುಂದಿನ ಪೀಳಿಗೆಯವರು,ನಾವು ಕಣ್ಣಲ್ಲಿ ಕಂಡದ್ದನ್ನು ಅವರು ಫೋಟೋಗಳಲ್ಲಿ ಕಾಣುವ ಪರಿಸ್ಥಿತಿಗೆ ನಾವೆ ಕಾರಣರಾಗುತ್ತೇವೆ.

ನೀವು ಇದನ್ನು ಇಷ್ಟ ಪಡಬಹುದು:ಟ್ರೆಕ್ಕಿಂಗ್ ಪ್ರಿಯರ ನೆಚ್ಚಿನ ತಾಣ ದೇವರಾಯನ ದುರ್ಗ ಬೆಟ್ಟ

Agumbe ghati

ಆಗುಂಬೆಯಲ್ಲಿ ಚಾರಣಕ್ಕೂ ಅವಕಾಶವಿದೆ. ಕೆಲ ಹೊರ ರಾಜ್ಯಗಳ ಗುಂಪು ಚಾರಣದಲ್ಲಿ ಭಾಗವಹಿಸಿ ಅಲ್ಲಿನ ಕಾಡಿನ ಸೌಂದರ್ಯಕ್ಕೆ ಸಾಕ್ಷಿಯಾಗಿ, ಹಾವು, ಕಪ್ಪೆ, ಮುಂಗುಸಿ, ಹಲವಾರು ಪ್ರಾಣಿಗಳ ಪರಿಚಯ ಮಾಡಿಕೊಂಡು ಆಯ್ದ ಸಸ್ಯ ವರ್ಗಗಳ ಬಗ್ಗೆ ಮಾಹಿತಿ ಪಡೆದುಕೊಳ್ಳುತ್ತವೆ. ಆಗುಂಬೆಯ ಚೆಕ್ ಪೋಸ್ಟ್ ಬಳಿ ಸರೋವರದಲ್ಲಿ ದೋಣಿ ವಿಹಾರಕ್ಕೂ ವ್ಯವಸ್ಥೆಯಿದ್ದು, ದೋಣಿ ವಿಹಾರದಲ್ಲಿಯೂ ಸಾಕಷ್ಟು ಜನರು ಆಸಕ್ತಿ ತೋರುತ್ತಾರೆ.

ಕೋಬ್ರಾ ಕ್ಯಾಪಿಟಲ್

ಆಗುಂಬೆಯನ್ನು ಕೋಬ್ರಾ ಕ್ಯಾಪಿಟಲ್ ಎಂದೂ ಕರೆಯುತ್ತಾರೆ.ಇಲ್ಲಿ ಅಳಿದು ಉಳಿದಿರುವ ಹಾವುಗಳಲ್ಲಿ ಕೋಬ್ರಾ ಕೂಡ ಒಂದು. ವಿಶ್ವದ ಅತಿ ಉದ್ದದ ವಿಷ ಪೂರಿತ ಹಾವುಗಳಲ್ಲಿ ಒಂದಾದ ಇದು ಅಳಿವಿಂಚಿನಲ್ಲಿರುವ ಹಾವುಗಳ ಪಟ್ಟಿಯಲ್ಲಿ ಸೇರಿಲ್ಲದಿದ್ದರು ಇತ್ತೀಚಿನ ದಿನಗಳಲ್ಲಿ ಬಹಳ ವಿರಳವಾಗಿ ಕಾಣಲು ಸಿಗುತ್ತಿದೆ.

ಆಗುಂಬೆಯು ಜಲಪಾತಗಳಿಗೂ ಹೆಸರುವಾಸಿಯಾಗಿದೆ.ಇಲ್ಲಿನ ಜಲಪಾತ ಒಂದೊಂದು, ಒಂದೊಂದು ರೀತಿಯಿಂದ ಆಕರ್ಷಣೀಯವಾಗಿವೆ.

ಕುಂಚಿಕಲ್ ಜಲಪಾತ,ಬರ್ಕನಾ ಜಲಪಾತ,ಜೋಗುಗುಂಡಿ ಜಲಪಾತ ಶಿವಮೊಗ್ಗ ಜಿಲ್ಲೆಯಲ್ಲಿ ಬಹು ಪ್ರಸಿದ್ದಿ ಇಲ್ಲಿ ಪ್ರವಾಸಿಗರ ಮೈ ಮನಸ್ಸನ್ನು ತಂಪು ಮಾಡುತ್ತವೆ.

ಬರ್ಕಾನ ಜಲಪಾತ

Barkana falls

ಬರ್ಕಾನ ಜಲಪಾತ ಆಗುಂಬೆಯ ಸನ್ ಸೆಟ್ ಪಾಯಿಂಟ್ ಸ್ಥಳದಿಂದ ಕೆಲವೇ ದೂರದಲ್ಲಿದೆ. ಸೀತಾ ನದಿಯ ದಟ್ಟ ಕಾನನದ ನಡುವೆ 260ಮೀ ಎತ್ತರದಿಂದ ಧುಮ್ಮುಕ್ಕಿ ಹರಿಯುತ್ತದೆ. ಈ ಜಲಪಾತ ಆಗುಂಬೆಯಿಂದ 7ಕಿಮೀ ದೂರದಲ್ಲಿದೆ. ಸೆಪ್ಟೆಂಬರ್ , ಡಿಸೆಂಬರ್,ಜನವರಿ ಈ ಜಾಗಕ್ಕೆ ಭೇಟಿ ನೀಡಲು ಉತ್ತಮ ಸಮಯ. ಬೇರೆ ಸಮಯದಲ್ಲಿ ಅತಿಯಾದ ಮಳೆ , ಇಂಬಳ ,ಜಾರುವ ಬಂಡೆಗಳಿಂದ ಎಚ್ಚರವಾಗಿರಬೇಕು.

ನಾವೂ ಟೆಲಿಗ್ರಾಮ್ ನಲ್ಲೂ ಇದ್ದೀವಿ! ಕನ್ನಡ.ಟೆಲಿಗ್ರಾಮ್ ಗ್ರೂಪ್ ಜಾಯಿನ್ ಆಗಿ.

ನೀವು ಪ್ರವಾಸ ಹೋಗುವ ತಾಣದ ಮಾಹಿತಿ, ಕನ್ನಡ.ಟ್ರಾವೆಲ್ (Kannada. Travel) ಜಾಲತಾಣದಲ್ಲಿ ಪ್ರಕಟವಾಗುವ ಬರಹಗಳ ವಿವರ, ಅಪರೂಪದ ಟ್ರಾವೆಲರ್ ಗಳ ಪರಿಚಯ, ಪ್ರವಾಸಿ ತಾಣಗಳ ಕುತೂಹಲಕರ ಚಿತ್ರ ಬರಹ ಎಲ್ಲವೂ ಇಲ್ಲಿ ನಿಮಗೆ ಸಿಗುತ್ತದೆ. ಬನ್ನಿ ಜೊತೆಯಾಗಿ

Related Articles

Leave a Reply

Your email address will not be published. Required fields are marked *

Back to top button