ಟ್ರೆಕ್ಕಿಂಗ್ ಪ್ರಿಯರ ನೆಚ್ಚಿನ ತಾಣ ದೇವರಾಯನ ದುರ್ಗ ಬೆಟ್ಟ
ದೇವರಾಯನ ದುರ್ಗ ಟ್ರೆಕ್ಕಿಂಗ್ ಪ್ರಿಯರಿಗೆ ಉತ್ತಮ ಜಾಗ. ಬಂಡೆಗಳೇ ಇಲ್ಲಿನ ಮುಖ್ಯ ಆಕರ್ಷಣೆ .ಟ್ರಕ್ಕಿಂಗ್ ಸಾಹಸಕ್ಕೆ ಕಾಲಿಡುವವರಿಗೆ ದೇವರಾಯನ ದುರ್ಗ ಒಂದು ಸವಾಲಿದ್ದಂತೆ. ಚಾರಣ ಪ್ರಿಯರ ಇಷ್ಟದ ಜಾಗ ದೇವರಾಯನ ದುರ್ಗದ ಕುರಿತಾದ ಬರಹ.
ರಾಹುಲ್ ಆರ್ ಸುವರ್ಣ
ನಾವು ಸಾಮನ್ಯವಾಗಿ ಒಂದು ಪ್ರದೇಶದಲ್ಲಿ ಅಥವಾ ಅದರ ಸುತ್ತಲೂ ಒಂದೆರಡು ವಿಶೇಷತೆಗಳನ್ನು ನೋಡಬಹುದು, ಆದರೆ ದೇವರಾಯನ ದುರ್ಗದಲ್ಲಿ ಹಲವಾರು ಪ್ರೇಕ್ಷಣೀಯ ಸ್ಥಳಗಳಿವೆ. ಹಲವು ವಿಶೇಷತೆಗಳನ್ನು ನೀವು ಇಲ್ಲಿ ನೋಡಬಹುದು. ಬಂಡೆಗಳು ಇಲ್ಲಿನ ಮುಖ್ಯ ಆಕರ್ಷಣೆ. ಇದು ಟ್ರಕ್ಕಿಂಗ್ ಸಾಹಸ ಮಾಡುವವರಿಗೆ ಬಹಳ ಬೇಗನೆ ಆಕರ್ಷಿಸುವ ಜಾಗ.
ಈ ಬೆಟ್ಟವನ್ನು ಕೆಲವರು ಯೋಗ ನರಸಿಂಹ ಮತ್ತು ಭೋಗ ನರಸಿಂಹ ದೇವರ ದರ್ಶನಕ್ಕೆ ಹತ್ತಿದರೆ ಇನ್ನು ಕೆಲವರು ಸೂರ್ಯಸ್ತ ನೋಡಲು,ಪ್ರವಾಸಿ ಬಂಗಲೆ ಕಂಡು ಫೋಟೊ ತೆಗೆಯಲು ಬೆಟ್ಟ ಹತ್ತುತ್ತಾರೆ. ದೇವರಾಯನ ದುರ್ಗದ ಹತ್ತಿರದಲ್ಲೇ ದುರ್ಗದ ಹಳ್ಳಿ ಎಂಬಲ್ಲಿ ಶಂಕರಾಚಾರ್ಯರು ನಿರ್ಮಿಸಿದ ದೇವಾಲಯವು ಕಂಡುಬರುತ್ತದೆ.
ಭೋಗ ನರಸಿಂಹ ಮೊದಲನೆಯದಾಗಿ ಕಂಡುಬರುವ ದೇವಾಲಯವಾದರೆ ಯೋಗ ನರಸಿಂಹ ದೇವಾಲಯ ಎರಡನೆಯದು.ಇದು ದ್ರಾವಿಡ ಶೈಲಿಯ ವಾಸ್ತು ಶಿಲ್ಪದ್ದಾಗಿದ್ದು,ಭೋಗ ನರಸಿಂಹ ದೇವಾಲಯಕ್ಕಿಂತ ಎತ್ತರದಾಗಿದ್ದು ಸ್ವಲ್ಪ ಅಂತರದಲ್ಲಿದೆ.
ನೀವು ಇದನ್ನು ಇಷ್ಟ ಪಡಬಹುದು:ಬೆಂಗಳೂರನ್ನು ಮೊದಲ ಬಾರಿ ನೋಡಿದ ಕುಂದಾಪುರದ ಹುಡುಗಿಯ ಪಯಣದ ಕಥೆ
ಪುರಾಣದ ಪ್ರಕಾರ ರಾಮನು ತನ್ನ ಬಿಲ್ಲಿನಿಂದ ಚಿಮ್ಮಿಸಿದ ಚಿಲುಮೆ ಇಲ್ಲಿನ ನಾಮದ ಚಿಲುಮೆ ಎಂದು ಹೇಳುತ್ತಾರೆ. ಭಕ್ತಾಧಿಗಳ ಪ್ರಕಾರ ಚಿಲುಮೆಯ ಹತ್ತಿರ ಶ್ರೀರಾಮನ ಹೆಜ್ಜೆ ಗುರುತಿದೆ ಎಂದು ಹೇಳುತ್ತಾರೆ. ಈ ಕಾಡಿನಲ್ಲಿ ಅಪರೂಪದ ಆಯುರ್ವೇದದ ಸಸ್ಯಗಳನ್ನು ಬೆಳೆಸಲಾಗಿದೆ. ಪ್ರತಿ ವರ್ಷ ಶ್ರೀನರಸಿಂಹ ಜಯಂತಿ ಮತ್ತು ರಥೋತ್ಸವವನ್ನು ಅತ್ಯಂತ ವಿಜೃಂಭಣೆಯಿಂದ ಆಚರಿಸುತ್ತಾರೆ.
10 ಸಾವಿರ ಹೆಕ್ಟೆರ್ ವಿಸ್ತೀರ್ಣ ಹೊಂದಿರುವ ಈ ಜಾಗದಲ್ಲಿ, ಸುಮಾರು 250 ಪ್ರಭೆದದ ಗಿಡ ಮರಗಳು ಹಾಗೂ 250 ಕ್ಕೂ ಹೆಚ್ಚು ಪ್ರಾಣಿ ಪಕ್ಷಿ ಸಂಕುಲಗಳು ಪ್ರಮುಖವಾಗಿ 100ಕ್ಕಿಂತ ಹೆಚ್ಚಿನ ಜಿಂಕೆಗಳ ಸಂತತಿ ಹೊಂದಿದೆ.ಈ ಅರಣ್ಯದಲ್ಲಿ ಕತ್ತಿನ ಬುಲ್ ಬುಲ್ ಹಕ್ಕಿ,ಮರ ಕುಟುಕ,ಕೋಗಿಲೆಗಳು ರೆಕ್ಕೆ ಬಿಚ್ಚಿ ಹಾರುತ್ತಿದ್ದಾರೆ,ವನ್ಯ ಪ್ರಾಣಿಗಳಾದ ಮುಂಗುಸಿ, ಮೊಲ,ಕರಡಿ,ಹುಲಿ, ಚಿರತೆ ಕಂಡು ಬರುತ್ತದೆ
ತಲುಪುವುದು ಹೇಗೆ ?
ಬೆಂಗಳೂರು ನಗರದಿಂದ ದೇವರಾಯನ ದುರ್ಗ 73 ಕಿಮಿ ದೂರದಲ್ಲಿದೆ. ಬೆಂಗಳೂರು ವಿಮಾನ ನಿಲ್ದಾಣವು 83 ಕಿಮಿ ಅಂತರದಲ್ಲಿದೆ. ತುಮಕೂರಿನವರೆಗೆ (ದೇವರಾಯನದುರ್ಗದಿಂದ 17 ಕಿಮಿ) ಬಸ್‌ಗಳು ಮತ್ತು ಟ್ರೈನ್‌ಗಳು ಲಭ್ಯವಿದೆ.
ದೇವರಾಯನ ದುರ್ಗವನ್ನು ತಲುಪಲು ತುಮಕೂರು ನಗರದಿಂದ ಟ್ಯಾಕ್ಸಿ ,ಇತರ ವಾಹನಗಳ ಮೂಲಕ ನೀವು ತೆರಳಬಹುದು.ದೇವರಾಯನ ದುರ್ಗದಲ್ಲಿ ಪೂಜೆ ಮುಗಿಸಿ ಬರುವ ಪೂಜಾರ್ತಿಗಳಿಗೆ ಸಾಕಷ್ಟು ವರ್ಷಗಳಿಂದ ಒಬ್ಬ ವ್ಯಕ್ತಿ ಅಲ್ಲೇ ನಿಂತು ಬಂದವರ ಹಣೆಗೆ ನಾಮ ಹಾಕುತ್ತಾರೆ,ಹಾಗೂ ನಾಮ ಹಾಕಿಸಿಕೊಂಡವರು ಬಂದಷ್ಟು ಹಣ ನೀಡಬಹುದು, ಈ ಅವಕಾಶ ಎಲ್ಲರಿಗೂ ಸಿಗುವುದಿಲ್ಲ.
ನಾವೂ ಟೆಲಿಗ್ರಾಮ್ ನಲ್ಲೂ ಇದ್ದೀವಿ! ಕನ್ನಡ.ಟೆಲಿಗ್ರಾಮ್ ಗ್ರೂಪ್ ಜಾಯಿನ್ ಆಗಿ.
ನೀವು ಪ್ರವಾಸ ಹೋಗುವ ತಾಣದ ಮಾಹಿತಿ, ಕನ್ನಡ.ಟ್ರಾವೆಲ್ (Kannada. Travel) ಜಾಲತಾಣದಲ್ಲಿ ಪ್ರಕಟವಾಗುವ ಬರಹಗಳ ವಿವರ, ಅಪರೂಪದ ಟ್ರಾವೆಲರ್ ಗಳ ಪರಿಚಯ, ಪ್ರವಾಸಿ ತಾಣಗಳ ಕುತೂಹಲಕರ ಚಿತ್ರ ಬರಹ ಎಲ್ಲವೂ ಇಲ್ಲಿ ನಿಮಗೆ ಸಿಗುತ್ತದೆ. ಬನ್ನಿ ಜೊತೆಯಾಗಿ