ಲಕ್ಷದೀಪೋತ್ಸವದಲ್ಲಿ ಕಲರ್ಫುಲ್ ಬಳೆಗಳು
ಉತ್ಸವ ಅಂದರೆ ಸಂಭ್ರಮ ನಿಜ. ಆದ್ರೆ ಲಕ್ಷದೀಪೋತ್ಸವ ಮಾತ್ರ ಎಲ್ಲಾ ಉತ್ಸವಗಳಿಗಿಂತ ಕೊಂಚ ಸ್ಪೆಷಲ್ . ಧರ್ಮಸ್ಥಳ ಮಂಜುನಾಥ ಸ್ವಾಮಿಯ ಲಕ್ಷದೀಪೋತ್ಸವ ಭಕ್ತರ ಸಂಭ್ರಮದ ಗಳಿಗೆ. ಎಲ್ಲೆಡೆ ದೀಪಗಳ ಸಾಲು, ಅವುಗಳ ನಡುವೆ ಶ್ರೀ ಮಂಜುನಾಥ ಸ್ವಾಮಿಯ ಉತ್ಸವ ಮೂರ್ತಿಯನ್ನು ಕಣ್ಣು ತುಂಬಿಕೊಳ್ಳುವ ಭಕ್ತಾದಿಗಳು. ಇವುಗಳ ಜೊತೆಗೆ ಕಲರ್ಫುಲ್ ಬಳೆಗಳು ಲಕ್ಷದೀಪೋತ್ಸವ ಕ್ಕೆ ಮತ್ತೊಂದು ಮೆರುಗು
ಆಕರ್ಷ ಅರಿಗ,ಎಸ್.ಡಿ ಎಂ.ಕಾಲೇಜು ಉಜಿರೆ
ಶ್ರೀ ಕ್ಷೇತ್ರ ಧರ್ಮಸ್ಥಳ ಲಕ್ಷ ದೀಪೋತ್ಸವದ ಮೂರನೇ ದಿನದ ಬೆಳ್ಳಿರಥ ಉತ್ಸವ ನೋಡುವುದೇ ಚಂದ. ಸ್ವರ್ಣ ಪಲ್ಲಕ್ಕಿಯಲ್ಲಿ ದೇವರನ್ನು ಕೂರಿಸಿ ಮೆರವಣಿಗೆ , ವಾದ್ಯವೃಂದ, ದೀವಟಿಕೆ, ನಿಶಾನೆ, ಆನೆ ಹಾಗೂ ಬಸವ ನೇತೃತ್ವದಲ್ಲಿ ಸಾಗಿಬಂದ ಉತ್ಸವ ವಿಜ್ರಂಭಣೆಯಿಂದ ಕೂಡಿರುತ್ತದೆ.
ಬಳೆಯ ಮೆರುಗು
ನಮ್ಮ ಭಾರತೀಯ ಸಂಸ್ಕೃತಿಯಲ್ಲಿ ಬಳೆ ಅನ್ನುವುದು, ಕೇವಲ ಒಂದು ಆಭರಣವಲ್ಲ. ಅದು ಸಾಂಸ್ಕೃತಿಕ, ಧಾರ್ಮಿಕ ಪರಂಪರೆಯೊಂದಿಗೆ ಬೆರೆತು ಹೋಗಿರುವ ಒಂದು ಅಂಶ. ಗಾಜಿನ ಬಳೆ ಭಾರತೀಯ ನಾರಿಯರ ಸಾಂಪ್ರದಾಯಿಕ ಆಭರಣ. ನಮ್ಮ ಸಂಸ್ಕೃತಿಯಲ್ಲಿ ಇದಕ್ಕೆ ಮಹತ್ವದ ಸ್ಥಾನವಿದೆ. ಇಂದಿನ ಫ್ಯಾಷನ್ ಯುಗದಲ್ಲೂ ಈ ಬಳೆ ಬೇಡಿಕೆ ಕಳೆದುಕೊಳ್ಳದೆ ಮಹಿಳೆಯರ ಮನ ಗೆದ್ದಿದೆ.
ದಕ್ಷಿಣ ಭಾರತದಲ್ಲಿ ಹಸಿರು ಗಾಜಿನ ಹಾಗೂ ಬಂಗಾರದ ಬಳೆಗಳನ್ನು ಮಂಗಳಕರವೆಂದರೆ, ಉತ್ತರ ಭಾರತದಲ್ಲಿ ಕೆಂಪು ಮತ್ತು ಹಸಿರು ಬಳೆಗಳನ್ನು ಶುಭವೆಂದು ಧರಿಸುತ್ತಾರೆ. ಅದ್ರಲ್ಲೂ ಜಾತ್ರೆ ಅಂದ್ರೆ ಹೆಣ್ಮಕ್ಕಳಿಗೆ ಒಂಥರಾ ಖುಷಿ. ಯಾಕಂದ್ರೆ ಕೂದಲಿಗೆ ಹಾಕೋ ಕ್ಲಿಪ್ಯಿಂದ ಹಿಡ್ದು ಬಳೆಗಳವರೆಗೂ ಕಲೆಕ್ಷನ್ಸ್ ಸಿಗುತ್ತೆ. ಈ ಜಾತ್ರೆಯೂ ಅಷ್ಟೇ. ಜಾತ್ರೆಗೆ ಬರೋ ಮಹಿಳೆಯರು ಬರಿಗೈನಲ್ಲಿ ಬಂದ್ರೂ ಹೋಗೋವಾಗ ಕೈತುಂಬಾ ಬಳೆ ತೊಟ್ಟು ಹೋಗ್ತಾರೆ.
ಕಂಡೊಡನೆ ಕಣ್ಣರಳಿಸುವಷ್ಟು ಸುಂದರ.. ಘಲ್ ಘಲ್ ನಾದದ ಜೊತೆ ಕಲರವದ ಝೇಂಕಾರ. ಕಾಮನಬಿಲ್ಲಿನ ರಂಗನ್ನೇ ಮೀರಿಸುವಷ್ಟು ಚಿತ್ತಾರ. ನೋಡಿದಷ್ಟೂ ಮನಸೆಳೆಯುವಷ್ಟು ಮನೋಹರ. ಅಬ್ಬಾ.. ಬಣ್ಣ ಬಣ್ಣದ ಬಳೆ ಧರಿಸಿ ಹೆಣ್ಮಕ್ಕಳದ್ದು ವಯ್ಯಾರವೋ ವಯ್ಯಾರ.
ನೀವು ಇದನ್ನು ಇಷ್ಟ ಪಡುಬಹುದು: ಧರ್ಮಸ್ಥಳದಲ್ಲಿ ಲಕ್ಷದೀಪೋತ್ಸವದ ಮೆರುಗು
ಆಯ್ಕೆಯಲ್ಲಿ ಕಾಂಪ್ರಮೈಸ್ ಆಗ್ಬೇಕಿಲ್ಲ. ಕಲರ್ ಸೆಲೆಕ್ಷನ್ನಲ್ಲಿ ಟೆನ್ಷನ್ ಪಡ್ಬೇಕಾಗಿಲ್ಲ. ಯಾಕಂದ್ರೆ ಡಿಸೈನ್ನಿಂದ ಹಿಡ್ದು ಇಲ್ಲಿ ಎಲ್ಲವೂ ನಿಮ್ಮ ಮನಸೆಳೆಯೋದ್ರಲ್ಲಿ ಅನುಮಾನ ಇಲ್ಲ. ಎತ್ತ ನೋಡಿದರೂ ಘಲ್ ಘಲ್ ಬಳೆಗಳದ್ದೇ ಸದ್ದು. ಧರ್ಮಸ್ಥಳ ಲಕ್ಷದೀಪೋತ್ಸವಯಲ್ಲಿ ಕಲರ್ಫುಲ್ ಬಳೆಗಳು ಹೆಣ್ಮಕ್ಕಳನ್ನ ಸೆಳೀತಿವೆ. ನೂರಾರು ಬಳೆಗಳ ಅಂಗಡಿಗಳು ಓಪನ್ ಆಗಿವೆ. ಸಾಲು ಸಾಲಾಗಿ ಜೋಡಿಸಿಟ್ಟ ವೆರೈಟಿ ಕಲರ್ಸ್, ಥರಹೇವಾರಿ ಡಿಸೈನ್ ಬಳೆ ಕಮಾಲ್ ಮಾಡ್ತಿವೆ. ಹೀಗಾಗಿ ಕೈಗೆ ಚೆಂದದ ಬಳೆ ತೊಡಲು ಹೆಣ್ಮಕ್ಕಳು ಮುಗಿ ಬೀಳ್ತಾರೆ.
ಇನ್ನು ಲಕ್ಷದೀಪೋತ್ಸವ ಬಳೆಗಳಂದ್ರೆ ಬಾರಿ ಫೇಮಸ್. ಯಾಕಂದ್ರೆ ಯಾವ್ದೇ ಹೊಸ ಡಿಸೈನ್ ಬಳೆ ಬಂದ್ರೂ ಲಕ್ಷದೀಪೋತ್ಸವ ಲಗ್ಗೆ ಇಡುತ್ವೆ. ನಂತ್ರ ಪ್ಲೇನ್ ಬಳೆ, ಚುಕ್ಕೆ ಬಳೆ, ಡಿಜೈನ್ ಬಳೆ, ಮುತ್ತಿನ ಬಳೆ, ಹರಳಿನ ಬಳೆ, ಮೆಟಲ್ ಬಳೆ, ಗಾಜಿನ ಬಳೆ ಸೇರಿದಂತೆ ವಿವಿಧ ಬಗೆಯ ಬಳೆಗಳನ್ನ ಕೊಂಡುಕೊಳ್ತಾರೆ. ವ್ಯಾಪಾರಸ್ಥರ ಕೈಗೆ ಕೈಕೊಟ್ಟು ಕೈತುಂಬಾ ಘಲ್ ಘಲ್ ಬಳೆ ತೊಡ್ತಾರೆ. ಇತ್ತ ಮಹಿಳೆಯರ ರೆಸ್ಪಾನ್ಸ್ಗೆ ವ್ಯಾಪಾರಸ್ಥರು ಫುಲ್ ಹ್ಯಾಪಿ .
ಕಳೆದ ವರ್ಷಕ್ಕಿಂತ ಈ ವರ್ಷ ಅಷ್ಟೇನೂ ಲಾಭದಾಯಕವಾಗಿಲ್ಲ, ಮಂಜುನಾಥ ದೇವರನ್ನು ನೆನೆಸಿಕೊಂಡು ನಾವು ವ್ಯಾಪಾರ ಮಾಡುತ್ತಿದ್ದೇವೆ. ಇಲ್ಲಿಯವರೆಗೂ ಅವರು ನಮ್ಮ ಕೈ ಬಿಟ್ಟಿಲ್ಲ ಆ ಕಾರಣಕ್ಕೆ ಇನ್ನೂ ನಾವು ವ್ಯಾಪಾರ ಮಾಡುತ್ತಿದ್ದೇವೆ.”
- ದಿನೇಶ್, ಶಿವಮೊಗ್ಗ
ಬಳೆಗಾರರು
ಅದೇನೇ ಇರಲಿ, ಜಗದಲ್ಲಿ ಅದೆಷ್ಟೇ ಆಧುನಿಕತೆ ಬಂದರೂ ಹೆಣ್ಣು ಮಕ್ಕಳು ತೊಡುವ ಬಳೆಗಳು ಅವರಿಗೆ ಇಷ್ಟವೇ. ಬಳೆಯ ವಿನ್ಯಾಸಗಳಲ್ಲಿ ನವೀನತೆ ಬರಬಹುದು. ಆದರೆ ಬಳೆಯ ಮೇಲೆ ಹೆಣ್ಣು ಮಕ್ಕಳ ಪ್ರೀತಿ , ಬಾಂಧವ್ಯಗಳಲ್ಲಿ ಬದಲಾವಣೆ ಇಲ್ಲ.
ನಾವೂ ಟೆಲಿಗ್ರಾಮ್ ನಲ್ಲೂ ಇದ್ದೀವಿ! ಕನ್ನಡ.ಟೆಲಿಗ್ರಾಮ್ ಗ್ರೂಪ್ ಜಾಯಿನ್ ಆಗಿ.
ನೀವು ಪ್ರವಾಸ ಹೋಗುವ ತಾಣದ ಮಾಹಿತಿ, ಕನ್ನಡ.ಟ್ರಾವೆಲ್ (Kannada.Travel) ಜಾಲತಾಣದಲ್ಲಿ ಪ್ರಕಟವಾಗುವ ಬರಹಗಳ ವಿವರ, ಅಪರೂಪದ ಟ್ರಾವೆಲರ್ ಗಳ ಪರಿಚಯ, ಪ್ರವಾಸಿ ತಾಣಗಳ ಕುತೂಹಲಕರ ಚಿತ್ರ, ಬರಹ ಎಲ್ಲವೂ ಇಲ್ಲಿ ನಿಮಗೆ ಸಿಗುತ್ತದೆ. ಬನ್ನಿ ಜೊತೆಯಾಗಿ.