ವಿಂಗಡಿಸದ

“ಮೂಲಿಕೆಪುರ ” ಎಂದು ಹೆಸರಾದ ಮುಲ್ಕಿಯ ಕಥೆ

ಮುಲ್ಕಿ , ದಕ್ಷಿಣ ಕನ್ನಡ ಜಿಲ್ಲೆಯಲ್ಲಿದೆ. ಬಪ್ಪನಾಡು , ಶಾಂಭವಿ ನದಿ ಸೇರಿದಂತೆ ಹಲವು ತಾಣಗಳಿಂದ ಮುಲ್ಕಿ ಪ್ರವಾಸಿಗರನ್ನು ಆಕರ್ಷಿಸುತ್ತದೆ. ಈ ಊರಿಗೂ ಒಂದು ಇತಿಹಾಸವಿದೆ. ದಕ್ಷಿಣ ಕನ್ನಡ ಜಿಲ್ಲೆಯ ಮುಲ್ಕಿ ,ಅಲ್ಲಿನ ಇತಿಹಾಸದ ಕುರಿತಾದ ಬರಹ

.ಸುಮಾ

ದಕ್ಷಿಣಕನ್ನಡ ಜಿಲ್ಲೆಯ ಮಂಗಳೂರು ತಾಲೂಕಿನ ಒಂದು ಪಟ್ಟಣವೇ ಮುಲ್ಕಿ . ಒಂಬತ್ತು ಮಾಗಣೆಯ ಊರು ಮುಲ್ಕಿ . ಉತ್ತರದಲ್ಲಿ ಶಾಂಭವಿ , ದಕ್ಷಿಣದಲ್ಲಿ ನಂದಿನಿ ನದಿಯು ಮುಲ್ಕಿಯ ಗಡಿ. ಪಶ್ಚಿಮದಲ್ಲಿ ಕಡಲು ಮತ್ತು ಪೂರ್ವದಲ್ಲಿ ಮುಂಡ್ಕೂರು ಗಡಿಯಾಗಿದೆ .

Mulki

ಇತಿಹಾಸದ ಕಾಲದಲ್ಲಿ ಬಹಳ ಹೆಸರುವಾಸಿಯಾದ ಊರಿದು. ಮುಲ್ಕಿಯ ಸಾವಂತ ಅರಸರು ಆಳ್ವಿಕೆ ಮಾಡಿದ ಸ್ಥಳವು ಹೌದು .. ಇಲ್ಲಿ ಬಪ್ಪನಾಡು ಶ್ರೀ ದುರ್ಗಾಪರಮೇಶ್ವರಿ ದೇವಿಯು ನೆಲೆಸಿದ್ದಾರೆ. ಈ ಊರನ್ನು ಇತ್ತೀಚಿಗೆ ಮುಲ್ಕಿ, ಮುಲ್ಕೆ ಎಂದು ಕರೆಯುತ್ತಾರೆ. ಇದು ಮಂಗಳೂರಿನಿಂದ ಸುಮಾರು 28 ಕಿಲೋಮೀಟರ್ ದೂರದಲ್ಲಿದೆ.

Shambhavi

ಮೂಲತಃ ” ಮೂಲಿಕೆ” ಎಂಬ ಶಬ್ಧದಿಂದ ಮುಲ್ಕಿ ಎಂಬ ಹೆಸರು ಬಂದಿದೆ . ” ಮೂಲಿಕೆ ” ಎಂದರೆ ಔಷಧಿ ಗಿಡ ” ಮೂಲಿಕೆ ” ಶಬ್ಧ ಕನ್ನಡ ಹಾಗೂ ತುಳು ಎರಡು ಭಾಷೆಯಲ್ಲಿದೆ . ಈ ಊರಿನಲ್ಲಿ ತುಂಬಾ ಮೂಲಿಕೆ ಗಿಡಗಳು ಇದ್ದುದರಿಂದ ಇಲ್ಲಿಗೆ “ಮೂಲಿಕೆ” ಎಂಬ ಹೆಸರು ಬಂದಿರಬಹುದು. ಅದೇ ಹೆಸರು “ಮುಲ್ಕೆ” ಆಗಿ ಕ್ರಮೇಣ ” ಮುಲ್ಕಿ ” ಆಯಿತು .

ನೀವು ಇದನ್ನೂ ಇಷ್ಟ ಪಡಬಹುದು:ಕಾಸರಗೋಡಿನ ಬೇಕಲದಲ್ಲಿದೆ ಕೇರಳದ ಅತಿ ದೊಡ್ಡ ಕೋಟೆ

River

ತುಂಬಾ ವಿಶೇಷವಾದ ವಿಷಯವೇನೆಂದರೆ ಈಗ ಪಟ್ಟಣದ ರೂಪದಲ್ಲಿ ಕಾಣುವ ಈ ಮುಲ್ಕಿ ಪ್ರದೇಶವು 400 ವರ್ಷಗಳ ಹಿಂದೆ ಇರಲಿಲ್ಲ. ಶಾಂಭವಿ ನದಿ ಈ ಭಾಗದಲ್ಲಿ ಹರಿಯುತಿತ್ತು.
ಈಗಿನ ಕಾರ್ನಾಡ್( ಕಾರನಾಡು) ಆ ಕಾಲದಲ್ಲಿ. ನದಿಯ ಬದಿಯ ಊರು ಆಗಿತ್ತು.

Karnad

ಕ್ರಿ. ಶ 1623 ನೇ ಇಸವಿಯ ಹೊತ್ತಿಗೆ ಕಾರ್ನಾಡು ನದಿ ಬದಿ ವ್ಯಾಪಾರಿ ಕೇಂದ್ರವಾಗಿತ್ತು. ವಿದೇಶಿ ಪ್ರವಾಸಿಗರು ಇಲ್ಲಿಗೆ ಬರುತ್ತಾರೆ. ಬರ್ಬ್ಹೊಸ್ ಕ್ರಿ. ಶ 1516 ರಲ್ಲಿ ಮತ್ತು ಡೆಲ್ಲವೆಲ್ಲಿ ಕ್ರಿ.ಶ 1623 ರಲ್ಲಿ ಬರೆದ ಪ್ರಕಾರ ಆ ಕಾಲದಲ್ಲಿ ಈಗಿನ ಮುಲ್ಕಿ ನದಿ ನೀರಿನಲ್ಲಿ ಮುಳುಗಿತ್ತು. ಆದರೆ ಕಾಲಕ್ರಮೇಣ ನದಿ ತನ್ನ ದಾರಿ ತಿರುಗಿಸಿಹೋಯಿತು. ಆಗ ನೀರು ಇಳಿದು ಉಂಟಾದ ಸ್ಥಳವೇ ಮುಲ್ಕಿ.

Mulikepura

14 ನೇ ಶತಮಾನದಿಂದ 18 ನೇ ಶತಮಾನದವರೆಗೆ ಆಳ್ವಿಕೆ ಮಾಡಿದ ಸಾವಂತ ಅರಸು ಮನೆತನ ಮೊದಲು ಏಳಿಂಜೆಯನ್ನು ರಾಜಧಾನಿ ಮಾಡಿತ್ತು . ಅದು ಮತ್ತೆ ಶಿಮಂತೂರುಗೆ ವರ್ಗಾವಣೆ ಆಯಿತು. ಅಲ್ಲಿಂದ ಅದು ಪಡುಪಣಂಬೂರಿಗೆ ವರ್ಗಾವಣೆ ಆಯಿತು. ಈಗಲೂ ಪಡುಪಣಂಬೂರುವಿನಲ್ಲಿ ಅರಸು ಮನೆತನವಿದೆ.

ಪ್ರವಾಸಿ ತಾಣಗಳು

ಮುಲ್ಕಿಯಲ್ಲಿ ಬಹಳ ಪ್ರಸಿದ್ಧವಾದ ಪ್ರವಾಸಿತಾಣಗಳಿವೆ. ಅವುಗಳು ಶ್ರೀ ವೆಂಕಟರಮಣ ದೇವಸ್ಥಾನ, ಕಾಯ್ಕಿಂಗ್ ಸರ್ಫಿಂಗ್ ಮತ್ತು ವಾಟರ್ ಸ್ಪೋರ್ಟ್ಸ್, ಸುಖಾನಂಧ ಪಾರ್ಕ್, ಸಸಿಹಿತ್ತು ಬೀಚ್, ಕೋಟಿಕೆರೆ ಬಸದಿ ಮತ್ತು ಮಹಾಸ್ತಂಬ, ಸಾವಂತ ಅರಸರ ಪುರಾತನ ಅರಮನೆ ಇತ್ಯಾದಿ.

Bappanadu Temple

ಇವುಗಳಲ್ಲಿ ಅತ್ಯಂತ ಜನಪ್ರಿಯ ಸ್ಥಳ ಎಂದರೆ ಬಪ್ಪನಾಡು ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನ 900 ವರ್ಷಗಳ ಇತಿಹಾಸವಿರುವ ಬಪ್ಪನಾಡು ಈ ದೇವಾಲಯವನ್ನು ಮುಸ್ಲಿಂ ವ್ಯಾಪಾರಿ ನಿರ್ಮಿಸಿದ್ದಾನೆ ಹೇಳಲಾಗುತ್ತದೆ. ಮುಸ್ಲಿಮರು ಪ್ರಸಾದವನ್ನು ( ದೇವತೆಯ ಆಶೀರ್ವಾದ ) ಸ್ವೀಕರಿಸಲು ಅವಕಾಶ ನೀಡುವ ಅಪರೂಪದ ಆಚರಣೆಗೆ ಹೆರುವಾಸಿಯಾಗಿದೆ. ಇಲ್ಲಿ ಲಿಂಗ ದ ರೂಪದಲ್ಲಿ ದೇವತೆಯನ್ನು ಪೂಜಿಸುತ್ತಾರೆ. ತುಳುವರಿಂದ “ಉಳ್ಳಾಲ್ತಿ ಎಂದು ಆರಾಧಿಸಲ್ಪಟ್ಟಿದೆ. ಈ ದೇವತೆ ಎಲ್ಲಾ ಜನಾಂಗ ಮತ್ತು ಜಾತಿಗಳಿಂದ ಆರಾಧಿಸಲ್ಪಟ್ಟಿದೆ. ದೇವಸ್ಥಾನದಲ್ಲಿ ಕಂಡುಬರುವ ಶಾಸನಗಳಲ್ಲಿ II41 ರಲ್ಲಿ ಹಿಂದೂ-ಅಲ್ಲದವರು ದೀರ್ಘಕಾಲದವರೆಗೆ ದೇವಾಲಯದ ಚಟುವಟಿಕೆಗಳಲ್ಲಿ ಪಾಲ್ಗೊಂಡಿದ್ದರು ಎಂಬುದು ಸ್ಪಷ್ಟ. ಕೋಮು ಸಾಮರಸ್ಯದ ಸಂದೇಶದೊಂದಿಗೆ ಈ ದೇವಾಲಯವು ನಂಬಿಕೆಗಳ ನಡುವೆ ಶಾಂತಿ ಮತ್ತು ಸಹೋದರತ್ವವನ್ನು ಮುಂದುವರೆಸಿಕೊಂಡು ಬಂದಿದೆ.

ನಾವೂ ಟೆಲಿಗ್ರಾಮ್ ನಲ್ಲೂ ಇದ್ದೀವಿ! ಕನ್ನಡ.ಟೆಲಿಗ್ರಾಮ್ ಗ್ರೂಪ್ ಜಾಯಿನ್ ಆಗಿ.

ನೀವು ಪ್ರವಾಸ ಹೋಗುವ ತಾಣದ ಮಾಹಿತಿ, ಕನ್ನಡ.ಟ್ರಾವೆಲ್ (Kannada. Travel) ಜಾಲತಾಣದಲ್ಲಿ ಪ್ರಕಟವಾಗುವ ಬರಹಗಳ ವಿವರ, ಅಪರೂಪದ ಟ್ರಾವೆಲರ್ ಗಳ ಪರಿಚಯ, ಪ್ರವಾಸಿ ತಾಣಗಳ ಕುತೂಹಲಕರ ಚಿತ್ರ ಬರಹ ಎಲ್ಲವೂ ಇಲ್ಲಿ ನಿಮಗೆ ಸಿಗುತ್ತದೆ. ಬನ್ನಿ ಜೊತೆಯಾಗಿ

Related Articles

Leave a Reply

Your email address will not be published. Required fields are marked *

Back to top button