ದೂರ ತೀರ ಯಾನಮ್ಯಾಜಿಕ್ ತಾಣಗಳುವಿಂಗಡಿಸದಸ್ಮರಣೀಯ ಜಾಗ

ಕಾಸರಗೋಡಿನ ಬೇಕಲದಲ್ಲಿದೆ ಕೇರಳದ ಅತಿ ದೊಡ್ಡ ಕೋಟೆ

ಭಾರತದ ಹಲವೆಡೆಗಳಲ್ಲಿ ಕಾಣಸಿಗುವ ಪ್ರತಿಯೊಂದು ಕೋಟೆಗೂ ವಿಭಿನ್ನ ಕಥೆಯಿದೆ. ಇಂತಹ ಕೋಟೆಗಳು ಕೇವಲ ಪ್ರವಾಸೀ ತಾಣಗಳಾಗಿರದೆ, ಹಿಂದಿನ ವೈಭವವನ್ನು ತಿಳಿಸುತ್ತವೆ. ಇಂತಹ ಕೆಲವು ಕೋಟೆಗಳಲ್ಲಿ ‘ಬೇಕಲ ಕೋಟೆ’ ಯೂ ಒಂದು.

  • ತೇಜಸ್ವಿನಿ ಆರ್.ಕೆ

ಕೇರಳ ನಾಡಿನ ಬೇಕಲ ಕೋಟೆ ಗಡಿನಾಡು ಕಾಸರಗೋಡಿನಲ್ಲಿದೆ. ಇಲ್ಲಿನ ಇನ್ನೊಂದು ವಿಶೇಷತೆ ಎಂದರೆ, ಕೋಟೆಯ ಇನ್ನೊಂದು ಬದಿ ಅರಬ್ಬಿ ಸಮುದ್ರ ಮನೋಹರವಾಗಿ ಕಾಣುತ್ತದೆ.

ಇತಿಹಾಸ
ಈ ಕೋಟೆ ನಿರ್ಮಿಸಿದ್ದು, ಸುಮರು ೧೫ನೇ ಶತಮಾನದಲ್ಲಿ. ಆಗಿನ ಸ್ಥಳೀಯಾಡಳಿತಗಾರ ಶಿವಪ್ಪ ವೆಂಕಟಪ್ಪ ನಾಯಕ ಕೋಟೆಯ ನಿರ್ಮಣ ಪ್ರಾರಂಭಿಸಿದರು. ತದನಂತರ ಶಿವಪ್ಪ ನಾಯಕ ಪೂರ್ಣಗೊಳಿಸಿದರು. ಮುಂದೆ ಟಿಪ್ಪು ಸುಲ್ತಾನನ ಆಳ್ವಿಕೆಯಲ್ಲಿ, ಇದು ಮುಖ್ಯ ಸೇನಾ ಕೇಂದ್ರವಾಗಿ ಮಾರ್ಪಾಟಾಯಿತು. ಆತನ ಮರಣದ ಬಳಿಕ ಈಸ್ಟ್ ಇಂಡಿಯಾ ಕಂಪೆನಿ ಈ ಕೋಟೆಯನ್ನು ವಶ ಪಡಿಸಿಕೊಂಡಿತು.

ಹೋಗುವುದು ಹೇಗೆ ?
ಕೇರಳ ರಾಜ್ಯದ ಕಾಸರಗೋಡಿನಿಂದ ೯ ಕಿ.ಮಿ ದೂರದಲ್ಲಿದೆ. ಇದು ಮಂಗಳೂರಿನಿAದ ೬೩ ಕಿ.ಮಿ ದೂರವಿದೆ. ಕರ್ನಾಟಕದಿಂದ ಬರುವವರು ರೈಲಿನ ಮೂಲಕ ಬರಲು ಸಾಧ್ಯ. ಕಾಸರಗೋಡು ಸ್ಟೇಶನ್ ನಲ್ಲಿ ಇಳಿದು, ಟ್ಯಾಕ್ಸಿ ಮೂಲಕ ೨೦ ನಿಮಿಷದಲ್ಲಿ ತೆರಳಬಹುದು. ಇಲ್ಲವೇ ಬಸ್ ವ್ಯವಸ್ಥೆಯೂ ಇದೆ.

ನೀವುಇದನ್ನುಇಷ್ಟಪಡಬಹುದು: ಉಡುಪಿಯ ಸೂರಾಲಿನಲ್ಲಿದೆ ಕರ್ನಾಟಕದ ಏಕೈಕ ಮಣ್ಣಿನ ಅರಮನೆ

ಪ್ರಮುಖ ಆಕರ್ಷಣೆಗಳು
ಬೇಕಲ ಕೋಟೆ ಅಂತರಾಷ್ಟ್ರೀಯ ಪ್ರವಾಸೀ ತಾಣಗಳಲ್ಲೊಂದು. ಈ ಕೋಟೆಗೆ, ೩೯೦ ರಷ್ಟು ವರ್ಷಗಳ ಇತಿಹಾಸವಿದೆ. ಇಂತಹ ಚಾರಿತ್ರಿಕ ಕೋಟೆಯನ್ನು ಕಟ್ಟಿಸಿದವರು, ಬಿದನೂರಿನ ಅರಸ ಶಿವಪ್ಪ ನಾಯಕ.ಇದು ಒಟ್ಟು ೪೦ ಎಕರೆಯಷ್ಟು ವ್ಯಾಪಿಸಿದೆ. ಇಲ್ಲಿನ ಸೂರ್ಯಾಸ್ತಮಾನ ವೀಕ್ಷಿಸುವುದೇ ಒಂದು ರಮಣಿಯ ದೃಶ್ಯ. ಇದನ್ನು ಕಣ್ತುಂಬಿಕೊಳ್ಳಲೆಂದೇ ಸಾವಿರಾರು ಪ್ರವಾಸಿಗರು ಬರುತ್ತಾರೆ. ಇವರಲ್ಲಿ ವಿದೇಶಿಗರ ಸಂಖ್ಯೇಯೂ ಬಹುಪಾಲಿದೆ.

ಈ ಕೋಟೆಯು ಕೇರಳದಲ್ಲಿಯೇ ಅತಿದೊಡ್ಡ ಕೋಟೆಯೆಂಬ ಹೆಗ್ಗಳಿಕೆಗೂ ಪಾತ್ರವಾಗಿದೆ. ಇಲ್ಲಿನ ಕೋಟೆಯ ಕಗ್ಗಲ್ಲು ಹಾಗು ಅದರಲ್ಲಿನ ಕೆತ್ತನೆಗಳನ್ನು ನೋಡುವುದೇ ಚೆಂದ. ಇಲ್ಲಿನ ಪ್ರಮುಖ ಆಕರ್ಷಣೆಗಳೆಂದರೆ, ಅತ್ಯಂತ ಎತ್ತರದಲ್ಲಿ ಕಟ್ಟಲಾದ ಟವರ್. ಇಲ್ಲಿ ಸಣ್ಣ ಸಣ್ಣ ಕಿಂಡಿಗಳಿದ್ದು ಇದು ಹಿಂದಿನ ಕಾಲದಲ್ಲಿ ಸಮುದ್ರ ಮಾರ್ಗವಾಗಿ ಬರುವ ವಿದೇಶಿಗರನ್ನು ನೋಡಲು ಹಾಗು ಅಗತ್ಯವಿದ್ದರೆ, ಫೀರಂಗಿಗಳನ್ನು ಪ್ರಯೋಗಿಸಲೂ ಸಾಧ್ಯವಾಗುತ್ತಿತು

ಹಚ್ಚ ಹಸುರಿನ ಕೋಟೆ
ಮಳೆಗಾಲದಲ್ಲಿ ಇಲ್ಲಿಗೆ ಹೊಗುವುದು ಅತೀ ಉತ್ತಮ. ಒಂದೆಡೆ ಅರಬಿ ಸಮುದ್ರ, ಮತ್ತೊಂದೆಡೆ ಹಚ್ಚಹಸುರಿನ ಉದ್ಯಾನವನ ಇದೆಲ್ಲ ನೋಡಲು, ಮಳೆಗಾಲವೇ ಬೆಸ್ಟ್. ಬೇಸಗೆ ಕಾಲದಲ್ಲಿ ಹೋದರೆ, ಬಿಸಿಲಿನ ತಾಪದಿಂದಲೇ ಬೇಗ ಸುಸ್ತಾಗುವುದು ತಪ್ಪಿದ್ದಲ್ಲ. ಚಳಿಗಾಲವೂ ಸೂಕ್ತವಾಗಿದ್ದರೂ, ಮಳೆಗಾಲದಲ್ಲಿ ಕಾಣುವ ವಿಹಂಗಮ ನೋಟ ಬಾಕಿ ಸಮಯಗಳಲ್ಲಿ ಸಿಗಲಾರದು.

ಇಂತಹ ದೃಶ್ಯಗಳಿಂದಾಗಿಯೇ ಸಾಕಷ್ಟು ವಿದೇಶೀಗರನ್ನು ಕೂಡ ಆಕರ್ಷಿಸುವಲ್ಲಿ ಯಶಸ್ವಿಯಾಗಿದೆ. ಅಲ್ಲದೇ, ಕೆಲವು ಸಿನೆಮಾಗಳ ಚಿತ್ರೀಕರಣವೂ ಇಲ್ಲಿ ನಡೆದಿದೆ. ಅವುಗಳಲ್ಲಿ ಬಾಂಬೆ ಚಿತ್ರದ ‘ಉಯಿರೇ ಉಯಿರೇ’ ಹಾಡು ಕೂಡ ಒಂದು.

ಆಹಾರ-ವೈವಿಧ್ಯ
ಕೋಟೆಯ ಹೊರಗೆ ಸಣ್ಣ ತಟ್ಟುಕಡ (ಟೀ ಅಂಗಡಿ)ಗಳಲ್ಲಿ ಮಾರುವ ಬಿಸಿ ಬಿಸಿ ಸಮೋಸ, ಬಜಿ, ಬೋಂಡಾ, ಜೋಳ, ಚುರುಮುರಿ ಮುಂತಾದ ತಿಂಡಿಯನ್ನು ಸವಿಯದೆ ಹೋದವರಿಲ್ಲ. ಬೇಸಿಗೆಯಲ್ಲಿ ಬಂದರೆ, ತರಹೇವಾರಿ ಜೂಸ್, ಐಸ್ಕ್ರೀಮ್, ಫಲೂಡಾ, ಉಪ್ಪಿನಲ್ಲಿ ಹಾಕಿಟ್ಟ ಮಾವು, ಅನನಾಸು, ನೆಲ್ಲಿಕಾಯಿ ಕಾಣಸಿಗುತ್ತದೆ.

೪೦ ಎಕರೆಯನ್ನು ನಡೆದೆ ಕ್ರಮಿಸಬೇಕಾಗಿರುವುದರಿಂದ ಕೋಟೆಯ ಒಳಹೋಗುವ ಮುನ್ನವೇ ಬೇಕಾದಷ್ಟು ತಿಂಡಿ ಹಾಗೂ ಪಾನೀಯಗಳನ್ನು ತೆಗೆದುಕೊಂಡು ಹೋಗುವುದು ಜಾಣ್ಮೆ.ಇದರ ಜೊತೆಗೆ ವಿವಿಧ ರೀತಿಯ ಟೊಪ್ಪಿ, ಸ್ಕಾರ್ಫ, ಆಟಿಕೆಗಳದ್ದೂ ಹಾವಳಿ ತುಸು ಜೋರಾಗೇ ಇದೆ.

ನಾವೂ ಟೆಲಿಗ್ರಾಮ್ ನಲ್ಲೂ ಇದ್ದೀವಿ! ಕನ್ನಡ.ಟೆಲಿಗ್ರಾಮ್ ಗ್ರೂಪ್ ಜಾಯಿನ್ ಆಗಿ. 

ನೀವು ಪ್ರವಾಸ ಹೋಗುವ ತಾಣದ ಮಾಹಿತಿ, ಕನ್ನಡ.ಟ್ರಾವೆಲ್ (Kannada.Travel) ಜಾಲತಾಣದಲ್ಲಿ ಪ್ರಕಟವಾಗುವ ಬರಹಗಳ ವಿವರ, ಅಪರೂಪದ ಟ್ರಾವೆಲರ್ ಗಳ ಪರಿಚಯ, ಪ್ರವಾಸಿ ತಾಣಗಳ ಕುತೂಹಲಕರ ಚಿತ್ರ, ಬರಹ ಎಲ್ಲವೂ ಇಲ್ಲಿ ನಿಮಗೆ ಸಿಗುತ್ತದೆ. ಬನ್ನಿ ಜೊತೆಯಾಗಿ

Related Articles

Leave a Reply

Your email address will not be published. Required fields are marked *

Back to top button