ಚೆಟ್ಟಿನಾಡ್ ನ ಚೆಂದದ ಅರಮನೆ ಕನಡುಕಥನ್
ತಮಿಳುನಾಡಿನ ಒಂದು ಪುಟ್ಟಹಳ್ಳಿ ಚೆಟ್ಟಿನಾಡು ,ಶಿವಗಂಗಾ ಜಿಲ್ಲೆಯಲ್ಲಿದೆ. ಚೆಟ್ಟಿನಾಡ್ ಅರಮನೆ ಅಥವಾ ಕನಡುಕಥನ್ ಪ್ಯಾಲೇಸ್ ಇಲ್ಲಿನ ಭವ್ಯವಾದ ವಾಸ್ತುಶಿಲ್ಪಕ್ಕೆ ಉದಾಹರಣೆ. ಯುರೋಪಿಯನ್ ಶೈಲಿಯಲ್ಲಿ ಈ ಅರಮನೆಯನ್ನು ನಿರ್ಮಿಸಲಾಗಿದೆ. ತಮಿಳುನಾಡಿನ ‘ಚಿಟ್ಟಿನಾಡ್ ಕನಡುಕಥನ್ ಅರಮನೆ’ ಕುರಿತಾದ ಬರಹ
ರಿಯಾನ
ಚಿಟ್ಟಿನಾಡ್ ಕನಡುಕಥನ್ ಅರಮನೆಯನ್ನು ಚಿದಂಬರಂನಲ್ಲಿರುವ ಇಂಡಿಯನ್ ಬ್ಯಾಂಕ್ ಮತ್ತು ಅಣ್ಣಮಲೈ ವಿಶ್ವವಿದ್ಯಾನಿಲಯದ ಸಂಸ್ಥಾಪಕ ಡಾಕ್ಟರ್ ಅಣ್ಣಾಮಲೈ ಚೆಟ್ಟಿಯಾರ್ ನಿರ್ಮಿಸಿದರು.
ಜನಪ್ರಿಯ ಪ್ರವಾಸಿ ಆಕರ್ಷಣೆಯಾಗಿರುವ ಇದು ಚೆಟ್ಟಿಯಾರಿನ ಶ್ರೀಮಂತ ಸಂಸ್ಕೃತಿ ಮತ್ತು ಇತಿಹಾಸವನ್ನು ತಿಳಿಸುತ್ತದೆ. ಚೆಟ್ಟಿನಾಡ್ ಪ್ರದೇಶವು ವಾಸ್ತುಶಿಲ್ಪ, ಕಲೆ, ಕರಕುಶಲ ಹಾಗೂ ಆಹಾರಕ್ಕಾಗಿ ತುಂಬಾ ಪ್ರಸಿದ್ಧಿಯನ್ನು ಪಡೆದಿದೆ .ಇಲ್ಲಿನ ಎಲ್ಲಾ ಮಹಲುಗಳು ಸುಂದರವಾದ ಗ್ರಾನೈಟ್ ಅಥವಾ ಅಮೃತಶಿಲೆ ಕಂಬಗಳಿಂದ ಕೂಡಿದ್ದು ವಿಶಾಲವಾದ ಅಂಗಳವನ್ನು ಹೊಂದಿದೆ.
ಸಭಾಂಗಣದ ಮಧ್ಯಭಾಗದಲ್ಲಿನ ಪ್ರಾಂಗಣವನ್ನು ಹಿಂದೆ ಮದುವೆಗಳು ಮತ್ತು ಧಾರ್ಮಿಕ ಸಮಾರಂಭಗಳಿಗೆ ಬಳಸಲಾಗುತ್ತಿತ್ತು. ಇಲ್ಲಿ ಇಂದಿಗೂ ರಾಜನ ಬಳಸುತ್ತಿದ್ದ ಅನೇಕ ಪ್ರಾಚೀನ ವಸ್ತುಗಳನ್ನು ಸಂರಕ್ಷಿಸಿಡಲಾಗಿದೆ. ಉದ್ಯಾನ ಪ್ರದೇಶದ ಗಡಿಯೊಳಗೆ ನೆಲೆಗೊಂಡಿರುವ ಈ ಅರಮನೆಯ ದೃಶ್ಯ ಅದ್ಭುತವಾಗಿದೆ .
ನೀವು ಇದನ್ನು ಇಷ್ಟ ಪಡಬಹುದು:ಉಡುಪಿಯ ಸೂರಾಲಿನಲ್ಲಿದೆ ಕರ್ನಾಟಕದ ಏಕೈಕ ಮಣ್ಣಿನ ಅರಮನೆ
ಅರಮನೆಯೊಳಗಿನ ಹಲವಾರು ಪ್ರತಿಮೆಗಳು ಇಲ್ಲಿನ ಇತಿಹಾಸವನ್ನು ಹೇಳುವಂತಿದೆ. ಅರಮನೆಯಲ್ಲಿನ ಎತ್ತರದ ಛಾವಣಿಗಳು ಮತ್ತು ಅಮೃತಶಿಲೆಯ ನೆಲಹಾಸುಗಳನ್ನೊಳಗೊಂಡ ಸ್ವಾಗತ ಸಭಾಂಗಣವು ಮನಮೋಹಕವಾಗಿದೆ. ರಾಜ ಅಣ್ಣಾಮಲೈ ಸೇರಿದಂತೆ ಅನೇಕರ ಭಾವಚಿತ್ರಗಳನ್ನು ಅರಮನೆಯಲ್ಲಿ ಪ್ರದರ್ಶಿಸಲಾಗಿದೆ .ಅರಮನೆಯ ಒಳಗೆ ಆನೆಯ ದಂತ ಮತ್ತು ಪಾದದ ಆಕೃತಿಗಳನ್ನು ಪ್ರದರ್ಶಿಸಲಾಗಿದೆ. ದಂತಗಳು ಸಾಮಾನ್ಯವಲ್ಲದೆ ಕೆತ್ತನೆಗಳ ಮೂಲಕ ಕಲಾತ್ಮಕ ಸ್ಪರ್ಶವನ್ನು ಹೊಂದಿದೆ . ಸಭಾಂಗಣದಲ್ಲಿ ಅತ್ಯಂತ ಬೆರಗುಗೊಳಿಸುವ ಭಾಗವೆಂದರೆ ಇಟಾಲಿಯನ್ ಅಂಚುಗಳಿಂದ ರಚಿಸಲ್ಪಟ್ಟ ಮೇಲ್ಛಾವಣಿ .
ಆಕಾಶಕ್ಕೆ ತೆರೆದುಕೊಳ್ಳುವ ವಿಶಾಲ ಅಂಗಳ ಹಾಗೂ ವರ್ಣರಂಜಿತ ಕಂಬಗಳು ಅರಮನೆಯ ಸೊಬಗನ್ನು ಇನ್ನಷ್ಟು ಹೆಚ್ಚಿಸಿದೆ. ಇದು ಐತಿಹಾಸಿಕ ತಾಣದ ಜೊತೆಗೆ ನೈಸರ್ಗಿಕ ಸೌಂದರ್ಯದ ತಾಣವು ಕೂಡ ಆಗಿದೆ. ಕರಾವಳಿಯ ತಂಗಾಳಿಯಲ್ಲಿ ತೂಗಾಡುವ ಸೌಮ್ಯವಾದ ತಾಳೆ ಮರಗಳಿಂದ ಸುತ್ತುವರೆದಿರುವ ಈ ಪ್ರದೇಶವು ಜೀವವೈವಿಧ್ಯದ ಮೂಲವೂ ಆಗಿದೆ .ಇಲ್ಲಿನ ರಮಣೀಯ ಸೌಂದರ್ಯದಿಂದ ಪ್ರವಾಸಿಗರನ್ನು ಹೆಚ್ಚು ಆಕರ್ಷಿಸುತ್ತವೆ.
ಹಳೆಯ ಶೈಲಿ ವಾಸ್ತುಶಿಲ್ಪ ಬಿಂಬಿಸುವ ತಮಿಳುನಾಡಿನ ಈ ಪ್ರಸಿದ್ದ ಚೆಟ್ಟಿನಾಡ್ ಕನಡುಕಥನ್ ಅರಮನೆ ಒಮ್ಮೆ ಭೇಟಿ ನೀಡಿ .ಭಾರತದಲ್ಲಿ ಹಳೆಯ ತಲೆಮಾರಿನ ಪರಂಪರೆ ಬಿಂಬಿಸುವ ಹಲವು ತಾಣಗಳಿವೆ .ನೀವು ಅಂತಹ ತಾಣಗಳಿಗೆ ಭೇಟಿ ನೀಡಿ ಅಲ್ಲಿನ ಹಿಂದಿನ ತಲೆಮಾರಿನ ವಾಸ್ತು ಶಿಲ್ಪ ಸವಿಯನ್ನು ಕಣ್ತುಂಬಿಕೊಳ್ಳಿ.
ನಾವು ಟೆಲಿಗ್ರಾಮ್ ನಲ್ಲೂ ಇದ್ದೀವಿ! ಕನ್ನಡ.ಟೆಲಿಗ್ರಾಮ್ ಗ್ರೂಪ್ ಜಾಯಿನ್ ಆಗಿ.
ನೀವು ಪ್ರವಾಸ ಹೋಗುವ ತಾಣದ ಮಾಹಿತಿ, ಕನ್ನಡ.ಟ್ರಾವೆಲ್ (Kannada. Travel) ಜಾಲತಾಣದಲ್ಲಿ ಪ್ರಕಟವಾಗುವ ಬರಹಗಳ ವಿವರ, ಅಪರೂಪದ ಟ್ರಾವೆಲರ್ ಗಳ ಪರಿಚಯ, ಪ್ರವಾಸಿ ತಾಣಗಳ ಕುತೂಹಲಕರ ಚಿತ್ರ ಬರಹ ಎಲ್ಲವೂ ಇಲ್ಲಿ ನಿಮಗೆ ಸಿಗುತ್ತದೆ. ಬನ್ನಿ ಜೊತೆಯಾಗಿ