ಮ್ಯಾಜಿಕ್ ತಾಣಗಳುವಂಡರ್ ಬಾಕ್ಸ್ವಿಂಗಡಿಸದಸ್ಮರಣೀಯ ಜಾಗ

ದಕ್ಷಿಣ ಭಾರತದ 20 ಪ್ರವಾಸಿ ತಾಣಗಳು

ದಕ್ಷಿಣ ಭಾರತದ ರಾಜ್ಯಗಳು ವಿವಿಧ ಕಲೆ-ಸಂಸ್ಕೃತಿ ಆಚಾರ-ವಿಚಾರ ಹಾಗೂ ಆಹಾರ ಸೇರಿದಂತೆ ಹಲವಾರು ವೈವಿಧ್ಯತೆಯನ್ನು ಹೊಂದಿದೆ. ಕರ್ನಾಟಕ, ತೆಲಂಗಾಣ, ಆಂಧ್ರಪ್ರದೇಶ ತಮಿಳುನಾಡು ಹಾಗೂ ಕೇರಳ ಈ ಐದೂ ರಾಜ್ಯಗಳು. ದಕ್ಷಿಣ ಭಾರತದಲ್ಲಿ ಹಲವು ಪ್ರಸಿದ್ದ ಪ್ರವಾಸಿ ತಾಣಗಳಿವೆ. ನೀವು ದಕ್ಷಿಣ ಭಾರತದ ರಾಜ್ಯಗಳ ಪ್ರವಾಸದ ಯೋಜನೆ ಹಾಕಿಕೊಂಡಿದಲ್ಲಿ, ದಕ್ಷಿಣ ಭಾರತದ ಪ್ರವಾಸಿ ತಾಣಗಳ ಮಾಹಿತಿ ಇಲ್ಲಿದೆ.

ಮಹಾಲಕ್ಷ್ಮಿ ದೇವಾಡಿಗ

ದಕ್ಷಿಣ ಭಾರತವೂ ಸಹ ದಟ್ಟವಾದ ಹಸಿರಿನಿಂದ ಕೂಡಿದ ಬೆಟ್ಟಗುಡ್ಡಗಳಿಂದ ಹಿಡಿದು ಬಯಲು ಸೀಮೆಯವರೆಗೆ ವಿವಿಧ ಪ್ರದೇಶಗಳನ್ನು ಹೊಂದಿದೆ. ಪ್ರವಾಸಿಗರನ್ನು ವರ್ಷದ ಎಲ್ಲ ಸಮಯದಲ್ಲೂ ಆಕರ್ಷಿಸುವ ಜಾಗಗಳು ಇಲ್ಲಿವೆ.

ದಕ್ಷಿಣ ಭಾರತದ ವಿಶೇಷ ಸ್ಥಳಗಳು:

ವಾರಂಗಲ್

ತೆಲಂಗಾಣ ರಾಜ್ಯದ ವಾರಂಗಲ್ ಪಟ್ಟಣದಲ್ಲಿರುವ ಈ ಕೋಟೆಯು ಒಂದು ಅದ್ಭುತ ಐತಿಹಾಸಿಕ ಪ್ರವಾಸಿ ತಾಣ. ಕಾಕತಿಯರ ಆಡಳಿತದಲ್ಲಿ ಸುಮಾರು 12 ನೇಯ ಶತಮಾನದಿಂದ ಅಸ್ತಿತ್ವದಲ್ಲಿದ್ದ ವಾರಂಗಲ್ ಕೋಟೆಯು ಇತಿಹಾಸಪ್ರಿಯ ಪ್ರವಾಸಿಗರ ಪಾಲಿಗೆ ಅತಿ ನೆಚ್ಚಿನ ಸ್ಥಳ. ಕಾಕತೀಯ ಸಾಮ್ರಾಜ್ಯವು ಪ್ರಸ್ತುತ ತೆಲಂಗಾಣ ರಾಜ್ಯದ ಅಧಿಕೃತ ಲಾಂಚನವಾಗಿದೆ.

warangal

ಅದಿಲಾಬಾದ್

ಅದಿಲಾಬಾದ್ ತೆಲಂಗಾಣ ರಾಜ್ಯದ ಒಂದು ಪ್ರಮುಖ ಜಿಲ್ಲೆ. ಪುರಾತನ ಬೌದ್ಧ ಹಾಗೂ ಜೈನ ಧರ್ಮದ ಹಲವು ಕುರುಹುಗಳನ್ನುರಾಜ್ಯದ ಉತ್ತರದ ತುದಿಯಲ್ಲಿರುವ ಈ ಜಿಲ್ಲೆಯಲ್ಲಿ ಕಾಣಬಹುದು. ಐತಿಹಾಸಿಕ ಪ್ರಖ್ಯಾತಿ ಪಡೆದಿರುವ ಅದಿಲಾಬಾದ್ ಕೋಟೆ.

ವೈಜಾಗ್

ವೈಜಾಗ್ ಎಂಬ ಹೆಸರಿನಿಂದಲೂ ಸಹ ಕರೆಯಲ್ಪಡುವ ವಿಶಾಖಾಪಟ್ಟಣಂ ಆಂಧ್ರಪ್ರದೇಶ ರಾಜ್ಯದ ಅತಿ ದೊಡ್ಡ ಪಟ್ಟಣವಾಗಿದ್ದು. ವೈಜಾಗ್ ಒಂದು ಸುಂದರಮಯ ಕಡಲ ತೀರಗಳುಳ್ಳ ಬಂದರು ಪಟ್ಟಣ. ಅಲ್ಲದೆ ಭಾರತ ಸೇನೆಯ ಒಂದು ಭಾಗವಾದ ನೌಕಾದಳದ ಪೂರ್ವ ನೌಕಾದಳ ವಿಭಾಗಕ್ಕೆ ಕೇಂದ್ರವಾಗಿದೆ. ಇಲ್ಲಿ ಶ್ರೀಮಂತಮಯ ಸಂಸ್ಕೃತಿ, ಸಂಪ್ರದಾಯಗಳು ತಳುಕು ಹಾಕಿಕೊಂಡಿದೆ.

vizag

ಪುಲಿಕಟ್

ಕೋರಮಂಡಲ ತೀರದಲ್ಲಿರುವ ತಮಿಳುನಾಡಿನ ಈ ಪ್ರದೇಶ ಬಹಳ ಉತ್ತಮವಾದ ಪ್ರಕೃತಿ ಸೊಬಗನ್ನು ಹೊಂದಿರುವ ಸ್ಥಳ. ಪ್ರವಾಸಿಗರ ವಲಯದಲ್ಲಿ ಪುಲಿಕಾಟ್ ಎರಡು ವಿಷಯಗಳಿಗೆ ಪ್ರಸಿದ್ಧವಾಗಿದೆ. ಅವುಗಳೆಂದರೆ ಪುಲಿಕಾಟ್ ಸರೋವರ ಮತ್ತು ಪುಲಿಕಾಟ್ ಪಕ್ಷಿಧಾಮ. ಇದು ಭಾರತದಲ್ಲಿ ಎರಡನೇಯ ಅತಿ ದೊಡ್ಡ ಉಪ್ಪುನೀರಿನ ಸರೋವರ ಎಂಬ ಹೆಗ್ಗಳಿಕೆ ಪಡೆದಿದೆ ಹಾಗು ಪ್ರತಿ ವರ್ಷ ಮಿಲಿಯಗಟ್ಟಲೆ ಜನರನ್ನು ಆಕರ್ಷಿಸುತ್ತದೆ.

Pulikat

ಗೋಕಾಕ್ ಜಲಪಾತ

ಈ ಪಟ್ಟಣ ಪ್ರಖ್ಯಾತವಾಗಿರುವುದು ಜಲಪಾತದಿಂದಾಗಿ. ಈ ಜಲಪಾತವು ಗೋಕಾಕ್ ಫಾಲ್ಸ್ ಎಂದೆ ಪ್ರಸಿದ್ಧವಾಗಿದೆ. ಘಟಪ್ರಭಾ ನದಿಯಿಂದುಂಟಾದ ಈ ಜಲಪಾತಕ್ಕೆ ಅಡ್ಡಲಾಗಿ ತೂಗು ಸೇತುವೆಯೊಂದಿದ್ದು ಅದರ ಮೇಲೆ ಸಾಗುತ್ತಿರುವಾಗ ಎಲ್ಲಿಲ್ಲದ ರೋಮಾಂಚನ ಉಂಟಾಗುತ್ತದೆ. ಇಲ್ಲಿಗೆ ತೆರಳಿದಾಗ ಇಲ್ಲಿನ ಮತ್ತೊಂದು ಜನಪ್ರಿಯ ಸಿಹಿ ಖಾದ್ಯವಾದ ‘ಗೋಕಾಕ್ ಕರದಂಟ್’ ಅನ್ನು ತಿನ್ನಲು ಮರೆಯಬೇಡಿ.

ಹಂಪಿ

ಉತ್ತರ ಕರ್ನಾಟಕದ ಬಳ್ಳಾರಿ ಜಿಲ್ಲೆಯಲ್ಲಿರುವ ಯುನೆಸ್ಕೊದಿಂದ ವಿಶ್ವ ಪಾರಂಪರಿಕ ತಾಣದ ಮಾನ್ಯತೆ ಪಡೆದಿದೆ. ಹಂಪಿಯು ಕರ್ನಾಟಕದ ಅತಿ ವೈಭವದ ವಿಜಯನಗರ ಸಾಮ್ರಾಜ್ಯದ ವೈಭೋಗವನ್ನು ಸಾರುವ ಒಂದು ಹೆಮ್ಮೆಯ ಪಟ್ಟಣವಾಗಿದೆ. ಪ್ರವಾಸೋದ್ಯಮದ ದೃಷ್ಟಿಯಿಂದಲೂ ಸಹ ಮಹತ್ವವಾಗಿರುವ ಈ ಪಟ್ಟಣವು ಅಸಂಖ್ಯಾತ ಸಂಖ್ಯೆಯಲ್ಲಿ ಕೇವಲ ಭಾರತೀಯರಿಂದ ಮಾತ್ರವಲ್ಲದೆ ವಿದೇಶಿ ಪ್ರವಾಸಿಗರಿಂದಲೂ ಸಹ ಭೇಟಿ ನೀಡಲ್ಪಡುತ್ತದೆ.

Hampi

ಕಾರವಾರ

ಕರ್ನಾಟಕದ ವಾಯವ್ಯ ದಿಕ್ಕಿನಲ್ಲಿರುವ ಉತ್ತರ ಕನ್ನಡ ಜಿಲ್ಲೆಯ ಕಾರವಾರವು ಒಂದು ಅದ್ಭುತ ಕಡಲ ತೀರದ ಪ್ರವಾಸಿ ಕೇಂದ್ರವಾಗಿದೆ. ವಿದೇಶಿ ಪ್ರವಾಸಿಗರೂ ಸಹ ಕಾರವಾರಕ್ಕೆ ಆಗಮಿಸುತ್ತಾರೆ. ಪ್ರಶಾಂತವಾದ ಕಡಲ ತೀರ, ಕಾಳಿ ನದಿಯ ಗಮ್ಯ ನೋಟ, ನಡುಗಡ್ಡೆಗಳು ಹೀಗೆ ಹಲವು ಆಸಕ್ತಿಕರ ಆಕರ್ಷಣೆಗಳನ್ನು ಕಾರವಾರದಲ್ಲಿ ನೋಡಬಹುದಾಗಿದೆ.

ಜೋಗ ಜಲಪಾತ

ಪ್ರಕೃತಿಯ ಸುಂದರ ಬೆಟ್ಟಗಳ ಸಾಲಿನಲ್ಲಿ ಶರಾವತಿ ನದಿ ನೀರಿನಿಂದ ನೈಸರ್ಗಿಕವಾಗಿ ಕಣಿವೆಯಲ್ಲಿ ಕಾಣುವ ಜೋಗ ಜಲಪಾತದ ಮಹಾವೈಭವವು ಮಳೆಗಾಲದಲ್ಲಿ ನೋಡುವುದೇ ಚಂದ. ರಾಜ, ರಾಣಿ, ರೋವರ್ ಮತ್ತು ರಾಕೆಟ್ ಎಂಬ ಅಕ್ಕಪಕ್ಕದ ಜಲಪಾತಗಳು ಸೇರಿ ಜೋಗ ಜಲಪಾತವೆಂದು ಹೆಸರಾಗಿದೆ. ಅಪ್ಪಟ ಸ್ಫಟಿಕದಂತೆ ಕಾಣುವ ಜಲಪಾತದ ನೋಟ ಮನದುಂಬಿಸುತ್ತದೆ.

jog falls

ಸೇಂಟ್ ಮೇರಿಸ್ ದ್ವೀಪ

ಸಂತ ಮೇರಿಯ ದ್ವೀಪವು ಕೊಕೊನಟ್ ದ್ವೀಪವೆಂದೆ ಹೆಸರುವಾಸಿಯಾಗಿದ್ದು, ಉಡುಪಿಯಲ್ಲಿರುವ ಮಲ್ಪೆ ಬೀಚಿನ ಸನಿಹದಲ್ಲಿದೆ. ಈ ದ್ವೀಪವು ಅನನ್ಯವಾದ ಕೊಲ್ಯುಮ್ನಾರ ಬ್ಯಾಸಾಲಿಟಿಕ್ ಲಾವಾ ರಚನೆಯನ್ನು ಹೊಂದಿದೆ. ಈ ದ್ವೀಪವು ಭಾರತದಲ್ಲಿರುವ 26 ಭೂಗರ್ಭ ಶಾಸ್ತ್ರದ ಸ್ಮಾರಕಗಳಲ್ಲಿ ಒಂದಾಗಿದೆ.

ಚಿಕ್ಕಮಗಳೂರು

ಎಲ್ಲೆಲ್ಲೂ ಕಾಫಿಯ ಸುಮಧುರ ಸುವಾಸನೆಯನ್ನು ಪಸರಿಸಿಕೊಂಡಿರುವ ಕರ್ನಾಟಕದ ಕಾಫಿ ನಗರವಿದು. ಬೆಂಗಳೂರಿನಿಂದ ವಾಯವ್ಯ ದಿಕ್ಕಿಗೆ ಸುಮಾರು 250 ಕಿ.ಮೀ ದೂರದಲ್ಲಿರುವ ಚಿಕ್ಕಮಗಳೂರನ್ನು ನೆಲಮಂಗಲ, ಕುಣಿಗಲ್, ಹಾಸನ ಮಾರ್ಗದ ಮೂಲಕ ಸುಲಭವಾಗಿ ತಲುಪಬಹುದು. ಚಿಕ್ಕಮಗಳೂರಿನ ಬೆರಗುಗೊಳಿಸುವ ಆಕರ್ಷಣೆಗಳು.

chikmangaluru

ಕೊಡಗು

ಕರ್ನಾಟಕದಲ್ಲಿ ಕೂರ್ಗ್‌ ಅಥವಾ ಕೊಡಗು ಒಂದು ಜನಪ್ರಿಯ ಪ್ರವಾಸಿ ತಾಣ. ಕರ್ನಾಟಕದ ಮಲೆನಾಡಿನ ಪಶ್ಚಿಮ ಘಟ್ಟದಲ್ಲಿನ ನೈಋತ್ಯ ಭಾಗದಲ್ಲಿರುವ ಕೊಡಗು, ಒಂದು ಗುಡ್ಡಗಳ ಜಿಲ್ಲೆ. ಕೊಡಗನ್ನು ಭಾರತದ ಸ್ಕಾಟ್‌ಲ್ಯಾಂಡ್‌ ಎಂದು ಕರೆಯಲಾಗುತ್ತದೆ ಹಾಗೂ ಕರ್ನಾಟಕದ ಕಾಶ್ಮೀರ ಎಂದು ಕರೆಯಲಾಗುತ್ತದೆ. ಈ ಪ್ರದೇಶವು ನಿತ್ಯಹರಿದ್ವರ್ಣ ಅರಣ್ಯ, ಸುಂದರ ಹಸಿರು ಕಣಿವೆಗಳು, ಮಂಜಿನ ಗುಡ್ಡಗಳು, ವಕ್ರವಕ್ರವಾಗಿರುವ ಕಾಫಿ ತೋಟಗಳು, ಟೀ ಎಸ್ಟೇಟ್‌ಗಳು, ಕಿತ್ತಳೆ ತೋಟಗಳು, ಅತ್ಯುತ್ತಮ ಇಳುವರಿ ಮತ್ತು ವೇಗವಾಗಿ ಹರಿಯುವ ಪ್ರವಾಹಗಳಿಂದಾಗಿ ತುಂಬಾ ಜನಪ್ರಿಯವಾಗಿದೆ.

Kodagu

ಬೆಂಗಳೂರು

ಭಾರತದ ಸಿಲಿಕಾನ್ ಕಣಿವೆ, ಉದ್ಯಾನ ನಗರ, ಐಟಿ ರಾಜಧಾನಿ ಎಂಬೆಲ್ಲ ಹೆಸರುಗಳಿಂದ ಖ್ಯಾತಿಗಳಿಸಿರುವ ಹಾಗೂ ಕರ್ನಾಟಕದ ರಾಜಧಾನಿ ನಗರವಾಗಿರುವ ಬೆಂಗಳೂರು ದಕ್ಷಿಣ ಭಾರತದಲ್ಲಿ ನಿಸ್ಸಂದೇಹವಾಗಿ ಭೇಟಿ ಮಾಡಲೇಬೇಕಾದ ಪ್ರವಾಸಿ ನಗರವಾಗಿದೆ. ಬೆಂಗಳೂರಿನಲ್ಲಿ ಬಹುತೇಕ ಪ್ರವಾಸಿ ತಾಣಗಳಿದೆ.

Bangalore

ಮುನ್ನಾರ್

ಕೇರಳವು ದಕ್ಷಿಣ ಭಾರತದಲ್ಲಿರುವ ಸುಂದರ ಪ್ರವಾಸಿ ರಾಜ್ಯವಾಗಿದೆ. ಇಲ್ಲಿರುವ ಹಸಿರಿನ ಮೈಸಿರಿ, ಹಿನ್ನೀರು, ಬೆಟ್ಟ ಗುಡ್ಡಗಳು ಸದಾ ಪ್ರವಾಸಿಗರನ್ನು ಆಕರ್ಷಿಸುತ್ತದೆ. ಮುನ್ನಾರ್ ಕೇರಳ ರಾಜ್ಯದ ಇಡುಕ್ಕಿ ಜಿಲ್ಲೆಯಲ್ಲಿರುವ ಒಂದು ಪ್ರಖ್ಯಾತ ಗಿರಿಧಾಮ ಪ್ರದೇಶವಾಗಿದೆ. ದಕ್ಷಿಣ ಭಾರತದಲ್ಲಿ ಭೇಟಿ ನೀಡಲೇಬೇಕಾದ ಸ್ಥಳಗಳ ಪೈಕಿ ಮುನ್ನಾರ್ ಗಿರಿಧಾಮವೂ ಸಹ ಒಂದು.

ನೀವುಇದನ್ನುಇಷ್ಟಪಡಬಹುದು: ಉತ್ತರ ಭಾರತದ 18 ಪ್ರಸಿದ್ಧ ಪ್ರವಾಸಿ ತಾಣಗಳು

Munnar

ವರ್ಕಲಾ

ಕೇರಳದ ರಾಜಧಾನಿ ನಗರ ತಿರುವನಂತಪುರಂಗೆ ಬಹು ಹತ್ತಿರದಲ್ಲಿರುವ, ಪ್ರಖ್ಯಾತ ಪ್ರವಾಸಿ ಆಕರ್ಷಣೆಯಾಗಿರುವ ವರ್ಕಲಾ ಒಂದು ಸುಂದರ ಕರಾವಳಿ ಗ್ರಾಮ. ಬಹು ಸಂಖ್ಯೆಯಲ್ಲಿ ಪ್ರವಾಸಿಗರು ಅದರಲ್ಲೂ ವಿಶೇಷವಾಗಿ ವಿದೇಶಿಯರು ಈ ಸುಂದರ ಕಡಲ ಕಿನಾರೆಯ ಗ್ರಾಮಕ್ಕೆ ಬರಲು ಇಷ್ಟಪಡುತ್ತಾರೆ.

ಕೊಚ್ಚಿ

ಜೀವಿತದಲ್ಲಿ ಒಮ್ಮೆಯಾದರೂ ನೋಡಲೇಬೇಕೆನ್ನಿಸುವಷ್ಟು ಸುಂದರವಾದ ಸ್ಥಳ ಕೇರಳದ ಕೊಚ್ಚಿ. ಇದು ಬಂದರು ನಗರ. ಅರಬ್ಬೀ ಸಮುದ್ರ ತಟದಲ್ಲಿರುವ ಈ ಪ್ರದೇಶ ಪ್ರಾಚೀನ ಮತ್ತು ಆಧುನಿಕತೆಯ ಸಮ್ಮಿಲನದಿಂದ ರೂಪುಗೊಂಡಂತಿದೆ. ಕೇರಳದ ಎರ್ನಾಕುಲಂ ಜಿಲ್ಲೆಯಲ್ಲಿರುವ ಕೊಚ್ಚಿ ಪೃಕೃತಿ ರಮ್ಯತೆಯೊಂದಿಗೆ, ಔದ್ಯೋಗಿಕ ಹಾಗೂ ವ್ಯಾಪಾರೀ ಕ್ಷೇತ್ರವಾಗಿಯೂ ತನ್ನನ್ನು ಗುರುತಿಸಿಕೊಂಡಿದೆ.

ತಿರುವನಂತಪುರಂ

ಆಂಗ್ಲ ಭಾಷೆಯಲ್ಲಿ ತ್ರಿವೇಂದ್ರಂ ಎಂದು ಕರೆಯಲ್ಪಡುತ್ತಿದ್ದ ತಿರುವನಂತಪುರಂ ಕೇರಳ ರಾಜ್ಯದ ರಾಜಧಾನಿ ನಗರ ಹಾಗೂ ಸುಂದರ ಪ್ರವಾಸಿ ತಾಣ. ತಿರುವನಂತಪುರಂ ಪ್ರಸಿದ್ಧ ಪ್ರವಾಸಿ ಕ್ಷೇತ್ರವಾಗಿ ಭಾರತ ಮಾತ್ರವಲ್ಲದೆ ವಿದೇಶಗಳಿಂದಲೂ ಸಹ ಅಪಾರ ಸಂಖ್ಯೆಯಲ್ಲಿ ಪ್ರವಾಸಿಗರನ್ನು ಆಕರ್ಷಿಸುತ್ತದೆ. ನೆರೆಯ ರಾಜ್ಯಗಳಾದ ತಮಿಳುನಾಡು, ಕರ್ನಾಟಕ ಹಾಗೂ ಆಂಧ್ರಪ್ರದೇಶಗಳಿಂದಲೂ ಸಹ ಸಾಕಷ್ಟು ಜನ ಪ್ರವಾಸಿಗರು ಕೇರಳದ ಈ ಧಾರ್ಮಿಕ ನಗರಕ್ಕೆ ಭೇಟಿ ನೀಡಲು ಇಷ್ಟಪಡುತ್ತಾರೆ.

ರಾಮೇಶ್ವರಂ

ದಕ್ಷಿಣ ಭಾರತದ ಪ್ರಖ್ಯಾತ ತೀರ್ಥ ಕ್ಷೇತ್ರ. ತಮಿಳುನಾಡು ರಾಜ್ಯದಲ್ಲಿದೆ. ದೇಶದ ನಾನಾ ಭಾಗಗಳಿಂದ ರಾಮೇಶ್ವರಂಗೆ ಭೇಟಿ ನೀಡಲು ಜನ ಬರುತ್ತಾರೆ. ಅಲ್ಲದೆ, ಶಿವನ ಹನ್ನೆರಡು ಪವಿತ್ರ ಜ್ಯೊತಿರ್ಲಿಂಗಗಳ ಪೈಕಿ ಒಂದಾಗಿದೆ ರಾಮೇಶ್ವರಂನಲ್ಲಿರುವ ಶಿವಲಿಂಗ. ಸ್ವತಃ ಶ್ರೀರಾಮಚಂದ್ರನೆ ಇಲ್ಲಿ ಶಿವಲಿಂಗವನ್ನು ಪ್ರತಿಷ್ಠಾಪಿಸಿ ಪೂಜಿಸಿದನೆಂಬ ಪ್ರತೀತಿಯಿದೆ.

rameshwaram

ಕನ್ಯಾಕುಮಾರಿ

ಭಾರತದ ದಕ್ಷಿಣದ ತುತ್ತ ತುದಿಯಲ್ಲಿರುವ ಕನ್ಯಾಕುಮಾರಿಯು ಹಿಂದೂ ಮಹಾಸಾಗರ, ಬಂಗಾಳ ಕೊಲ್ಲಿ ಮತ್ತು ಅರಬ್ಭಿ ಸಮುದ್ರ ಸೇರುವ ಸ್ಥಳದಲ್ಲಿ ನೆಲೆಸಿದೆ. ಕನ್ಯಕುಮಾರಿಯು ಹುಣ್ಣಿಮೆಯ ದಿನ ಕಣ್ಣು ಕೋರೈಸುವ ಸೂರ್ಯೋದಯ ಮತ್ತು ಸೂರ್ಯಾಸ್ತಕ್ಕೆ ಹೆಸರುವಾಸಿ. ಅಲ್ಲದೆ ಕನ್ಯಾಕುಮಾರಿಯ ದೇವಸ್ಥಾನ, ಅದ್ಭುತ ಕಡಲ ತೀರ, ತಮಿಳಿನ ಪ್ರಾಚೀನ ಕವಿ ತಿರುವಳ್ಳುವರ್ ಅವರ ಬೃಹತ್ ಪ್ರತಿಮೆ ಹಾಗೂ ವಿವೇಕಾನಂದ ಬಂಡೆಗಳು ಇಲ್ಲಿ ನೋಡಬಹುದಾದ ಪ್ರಸಿದ್ಧ ಆಕರ್ಷಣೆಗಳಾಗಿವೆ.

kanyakumari

ಊಟಿ

‘ಗಿರಿಧಾಮಗಳ ರಾಣಿ’ ಎಂದೆ ಪ್ರೀತಿಯಿಂದ ಕರೆಸಿಕೊಳ್ಳುವ ಊಟಿಯು ತಮಿಳುನಾಡಿನ ನೀಲ್ಗಿರಿ ಜಿಲ್ಲೆಯಲ್ಲಿದೆ. ಹಿತಕರವಾದ ವಾತಾವರಣ, ಶುಭ್ರ ಹಾಗೂ ಹಚ್ಚ ಹಸಿರಿನಿಂದ ಕೂಡಿದ ಪರಿಸರ, ತಾಜಾ ನೀರಿನ ಕೆರೆಗಳು ಹೀಗೆ ಹತ್ತು ಹಲವು ವಿಶೇಷಗಳನ್ನು ಉದಕಮಂಡಲ ಅರ್ಥಾತ್ ಊಟಿಯು ತನ್ನನ್ನು ಭೇಟಿ ಮಾಡುವ ಪ್ರವಾಸಿಗರಿಗೆ ಕರುಣಿಸುತ್ತದೆ. ದಕ್ಷಿಣ ಭಾರತದಲ್ಲಿ ಭೇಟಿ ನೀಡಲೇಬೇಕಾದ ಗಿರಿಧಾಮಗಳಲ್ಲಿ ಊಟಿಯು ಮಂಚೂಣಿಯಲ್ಲಿ ನಿಲ್ಲುತ್ತದೆ.

ಮದುರೈ

ದಕ್ಷಿಣದ ತಮಿಳುನಾಡಿನ ಪ್ರಖ್ಯಾತ ಧಾರ್ಮಿಕ ಕ್ಷೇತ್ರ. ಈ ಕ್ಷೇತ್ರವನ್ನು ‘ನಿದ್ರಿಸಲಾರದ ನಾಡು’ ಎಂದು ಕರೆಯುತ್ತಾರೆ. ವೈಗೈ ನದಿ ತೀರದಲ್ಲಿ ಸ್ಥಿತವಿರುವ ಈ ಕ್ಷೇತ್ರದಲ್ಲಿ ಸಾಕಷ್ಟು ದೇವಾಲಯಗಳಿದ್ದು, ಪ್ರಮುಖವಾಗಿ ಮೀನಾಕ್ಷಿ ಅಮ್ಮನವರ ದೇಗುಲದಿಂದಾಗಿ ಇದು ಸುಪ್ರಸಿದ್ಧ ಯಾತ್ರಾ ಕೇಂದ್ರವಾಗಿದೆ. ದಕ್ಷಿಣ ಭಾರತದಲ್ಲಿ ಭೇಟಿ ಮಾಡಲೇಬೇಕಾದ ತಾಣಗಳಲ್ಲಿ ಮದುರೈ ಸಹ ಒಂದು.

Madhurai

ನಾವೂ ಟೆಲಿಗ್ರಾಮ್ ನಲ್ಲೂ ಇದ್ದೀವಿ! ಕನ್ನಡ.ಟೆಲಿಗ್ರಾಮ್ ಗ್ರೂಪ್ ಜಾಯಿನ್ ಆಗಿ. 

ನೀವು ಪ್ರವಾಸ ಹೋಗುವ ತಾಣದ ಮಾಹಿತಿ, ಕನ್ನಡ.ಟ್ರಾವೆಲ್ (Kannada.Travel) ಜಾಲತಾಣದಲ್ಲಿ ಪ್ರಕಟವಾಗುವ ಬರಹಗಳ ವಿವರ, ಅಪರೂಪದ ಟ್ರಾವೆಲರ್ ಗಳ ಪರಿಚಯ, ಪ್ರವಾಸಿ ತಾಣಗಳ ಕುತೂಹಲಕರ ಚಿತ್ರ, ಬರಹ ಎಲ್ಲವೂ ಇಲ್ಲಿ ನಿಮಗೆ ಸಿಗುತ್ತದೆ. ಬನ್ನಿ ಜೊತೆಯಾಗಿ.

Related Articles

Leave a Reply

Your email address will not be published. Required fields are marked *

Back to top button