ಮ್ಯಾಜಿಕ್ ತಾಣಗಳುವಿಂಗಡಿಸದಸಂಸ್ಕೃತಿ, ಪರಂಪರೆ

ಉತ್ತರ ಭಾರತದ 18 ಪ್ರಸಿದ್ಧ ಪ್ರವಾಸಿ ತಾಣಗಳು

ಭಾರತ ವಿವಿಧತೆಯಲ್ಲಿಯೂ ಏಕತೆಯನ್ನು ಕಾಣುವ ದೇಶ. ಇಲ್ಲಿನ ಸಂಸ್ಕೃತಿ, ಆಚಾರ, ವಿಚಾರ ಎಲ್ಲವೂ ಭಿನ್ನ. ಇಲ್ಲಿನ ಸ್ಥಳಗಳು ಕೂಡಾ ವೈಶಿಷ್ಟ್ಯತೆಯನ್ನು ಹೊಂದಿದೆ. ಭಾರತದಲ್ಲಿನ ಪ್ರವಾಸಿ ಸ್ಥಳಗಳಲ್ಲಿ ಕೆಲವೊಂದು ದೇವಸ್ಥಾನವನ್ನು ಹೊಂದಿರುವ ಕಾರಣಕ್ಕಾಗಿ ಪ್ರಸಿದ್ದಿ ಹೊಂದಿದ್ದರೆ, ಇನ್ನೂ ಕೆಲವು ಸ್ಥಳಗಳು ಜಲಪಾತ, ಬೆಟ್ಟ, ಸಮುದ್ರ, ಸಾಗರ, ಹೀಗೆ ಒಂದೊಂದು ಕಾರಣಕ್ಕಾಗಿ ಪ್ರಸಿದ್ದಿಯನ್ನು ಹೊಂದಿದೆ. ಪ್ರವಾಸೋದ್ಯಮ ದಿನದ ವಿಶೇಷ ಲೇಖನ ಉತ್ತರ ಭಾರತದ ಪ್ರವಾಸಿ ತಾಣಗಳು .

ಮಧುರಾ ಎಲ್ ಭಟ್

ಭೌಗೋಳಿಕ ಪರಿಸರವನ್ನು ಆಧರಿಸಿ ಭಾರತವನ್ನು ಉತ್ತರ ಭಾರತ ಮತ್ತು ದಕ್ಷಿಣ ಭಾರತ ಎಂದು ಎರಡು ರೀತಿಯಾಗಿ ವಿಭಾಗಿಸಲಾಗಿದೆ. ಹಾಗಾದರೆ ಈ ಉತ್ತರ ಭಾರತದ ಪ್ರವಾಸಿ ತಾಣಗಳು ಯಾವವು? ಅದರ ವೈಶಿಷ್ಟ್ಯತೆ ಏನು ಅನ್ನುವುದರ ಮಾಹಿತಿ ಈ ಲೇಖನದಲ್ಲಿದೆ..

ಶಿಮ್ಲಾ

ಇದು ಹಿಮಾಚಲ ಪ್ರದೇಶದ ರಾಜಧಾನಿಯಾಗಿದೆ. ಮಾಲ್ ರಸ್ತೆ ಮತ್ತು ರಾಷ್ಟ್ರಪತಿ ನಿವಾಸ, ಇಲ್ಲಿನ ಅದ್ಭುತ ಪ್ರೇಕ್ಷಣೀಯ ಸ್ಥಳವಾಗಿದೆ. ಇಲ್ಲಿನ ದಿ ಮಾಲ್ ಎನ್ನುವುದು ಶಾಪಿಂಗ್ ಸ್ಥಳವಾಗಿದ್ದು ಶಿಮ್ಲಾದ ಪ್ರಮುಖ ಚಟುವಟಿಕೆಯುಕ್ತ ಸ್ಥಳವಾಗಿದೆ. ಅಲ್ಲದೇ ಇಲ್ಲಿ ನಾವು ಹಲವಾರು ಹಿಂದಿ ಸಿನೆಮಾಗಳ ಚಿತ್ರೀಕರಣ ಆಗಿರುವುದನ್ನು ಗಮನಿಸಬಹುದಾಗಿದೆ.

Shimla

ಡಾಲ್ ಹೌಸಿ:

ಇದು ಹಿಮಾಚಲ ಪ್ರದೇಶ ರಾಜ್ಯದ ಒಂದು ಸುಂದರ ಪ್ರವಾಸಿ ತಾಣವಾಗಿದೆ. ಅಲ್ಲದೇ ಈ ಪ್ರದೇಶವು ಅತ್ಯಂತ ಜನಪ್ರಿಯ ಛಂಬಲ್‌ ಅರಣ್ಯ ಪ್ರದೇಶದ ಪ್ರವೇಶದ್ವಾರವೂ ಆಗಿದೆ . ಕತ್ಲೋಗ್‌, ಪೋರ್ಟರೇಯನ್‌, ತೆಹ್ರಾ, ಬಕ್ರೋಟಾ ಹಾಗೂ ಬಾಲುನ್ ಎಂಬ ಐದು ಬೆಟ್ಟಗಳ ಮೇಲೆ ನೆಲೆಸಿರುವ ಅತಿ ಸುಂದರ ಗಿರಿಧಾಮ ಈ ಪ್ರದೇಶವಾಗಿ. ದೇಶದ ರಾಜಧಾನಿ ದಿಲ್ಲಿಯಿಂದ 563 ಕಿ.ಮೀ. ದೂರದಲ್ಲಿರುವ ಈ ಪ್ರವಾಸಿ ತಾಣದ ಸಮೀಪ ಧರ್ಮಶಾಲಾ, ತ್ರಿಯೂಂಡ್‌, ಖಾಜ್ಜೀರ್‌, ದೈನಕುಂಡಛಂಬಾ, ಬಿಜನಾಥ, ಪಾಲಂಪುರ್‌ಬೀರ್‌ ಹಾಗೂ ಬಿಲ್ಲಿಂಗ್‌ ಮುಂತಾದ ಪ್ರವಾಸಿ ತಾಣಗಳಿವೆ.

 Himachal Pradesh

ಮನಾಲಿ:

ಇದು ಹಿಮಾಚಲ ಪ್ರದೇಶ ರಾಜ್ಯದ ಕುಲ್ಲು ಜಿಲ್ಲೆಯಲ್ಲಿರುವ ಪ್ರವಾಸಿ ತಾಣವಾಗುದೆ. ನೈನಿತಾಲ್, ರಹೆಲ್ಲಾ ಜಲಪಾತ, ಸೋಲಂಗ್ ಕಣಿವೆ ಇಲ್ಲಿನ ಆಕರ್ಷಣೀಯ ಸ್ಥಳವಾಗಿದೆ. ಮನಾಲಿಯು ವರ್ಷದ ಎಲ್ಲಾ ದಿನಗಳಲ್ಲಿಯೂ ಹಿತಕರವಾದ ಹಾಗೂ ತಂಪಾದ ವಾತಾವರಣ ಹೊಂದಿದೆ ತಾಣವಾಗಿದೆ. ಅಲ್ಲದೇ ಇಲ್ಲಿರುವ ಪ್ರತಿಯೊಂದು ಬೆಟ್ಟ, ಸರೋವರ, ಪರ್ವತಗಳು ಪುರಾಣದ ಕಥೆಗಳನ್ನೂ ಮತ್ತು ಸಾಹಸದ ಕಥೆಗಳನ್ನು ನೆನಪಿಸುತ್ತದೆ.

 Manali

ಅಮೃತಸರ್:

ಇದು ಪಂಜಾಬ್ ರಾಜ್ಯದ ಆಕರ್ಷಣೀಯ ಪ್ರವಾಸಿತಾಣವಾಗಿದೆ. ಅಮೃತಸರ್ ಸ್ವರ್ಣ ಮಂದಿರ ಮತ್ತು ಭಾರತ-ಪಾಕಿಸ್ತಾನವನ್ನು ಪ್ರತ್ಯೇಕಿಸುವ ವಾಘಾ ಗಡಿಯಿಂದ ಪ್ರಸಿದ್ಧ ಪ್ರವಾಸಿ ತಾಣವಾಗಿ ಜನಪ್ರೀಯತೆ ಪಡೆದಿದೆ. ಅಲ್ಲದೇ ಜಲಿಯನ್ ವಾಲ ಬಾಗ್ ಇಲ್ಲಿನ ಮತ್ತೊಂದು ಪ್ರಸಿದ್ಧ ಇತಿಹಾಸ ಉಳ್ಳ ಪ್ರವಾಸಿ ತಾಣವಾಗಿದೆ.

Amritsar itinerary | 36 Hours In Amritsar | Times of India Travel

ದೆಹಲಿ:

ಇದು ಭಾರತದ ಹೃದಯ ಭಾಗದಲ್ಲಿರುವ ಅದ್ಭುತ ಪ್ರವಾಸಿ ತಾಣವಾಗಿದೆ. ಪುರಾತನ ಕಾಲದಿಂದ ಹಿಡಿದು ಇಲ್ಲಿಯವರೆಗೂ ಇಲ್ಲಿ ಹಲವಾರು ಪ್ರಸಿದ್ಧ ಪ್ರವಾಸಿ ತಾಣಗಳನ್ನು ನಿರ್ಮಿಸಲಾಗಿದೆ. ಆದರೂ ಇಲ್ಲಿನ ‘ಇಂಡಿಯಾ ಗೇಟ್’ ಎಲ್ಲರನ್ನೂ ವಿಶೇಷವಾಗಿ ಸೆಳೆದು ಕೊಂಡಿರುವ ಪ್ರವಾಸಿ ತಾಣವಾಗಿದೆ.

 India Gate

ಆಗ್ರಾ:

ಇದು ದೆಹಲಿಯಿಂದ 242 ಕಿ.ಮೀ ದೂರದಲ್ಲಿದೆ. ಯಮುನಾ ನದಿಯ ತಟದಲ್ಲಿ ಇರುವ ಆಗ್ರಾ ಪಟ್ಟಣ ಸುಪ್ರಸಿದ್ದ ಪ್ರವಾಸಿ ತಾಣಗಳಲ್ಲಿ ಒಂದಾಗಿದೆ. ಅದರಲ್ಲಿಯೂ ಇಲ್ಲಿನ ತಾಜ್ ಮಹಲ್ ಇದರ ವಿಶೇಷ ಪ್ರವಾಸಿ ತಾಣವಾಗಿದೆ. ಇಲ್ಲಿನ ಆಕರ್ಷಣೀಯ ತಾಣಗಳೆಂದರೆ ಆಗ್ರಾ ಕೋಟೆ, ಮಂಕಾಮೇಶ್ವರ ದೇವಾಲಯ, ಗುರು ಕಾ ತಾಲ್ ಆಗಿದೆ.

Agra

ವಾರಣಾಸಿ:

ಇದು ಭಾರತದ ಆಧ್ಯಾತ್ಮಿಕ ರಾಜಧಾನಿ ಎಂತಲೆ ಪ್ರಸಿದ್ಧವಾಗಿದೆ. ಶಿವನ ನೆಚ್ಚಿನ ತಾಣವಾದ ಇದು ಕಾಶಿ ಅಥವಾ ಬನಾರಸ್ ಎಂದೆ ಕರೆಯಲ್ಪಡುತ್ತಿದೆ. ಅಲ್ಲದೇ ಉತ್ತರ ಭಾರತದ ಸಾಂಸ್ಕೃತಿಕ ಕೇಂದ್ರ ಎಂಬ ಹೆಗ್ಗಳಿಕೆಯನ್ನೂ ಈ ನಗರ ಪಡೆದಿದೆ. ಪ್ರತಿ ವರ್ಷವೂ ದೇಶ ವಿದೇಶದಿಂದ ಈ ನಗರಕ್ಕೆ ಪ್ರವಾಸಿಗರ ದಂಡು ದಂಡೆ ಹರಿದು ಬರುತ್ತದೆ. ಇಲ್ಲಿರುವ ಘಾಟ್ (ದಂಡೆಗಳು) ಗಳು, ಜಂತರ್ ಮಂತರ್(ವಾರಣಾಸಿ), ರಾಮನಗರ್ ಕೋಟೆ, ಕಾಶಿ ವಿಶ್ವನಾಥ ದೇವಾಲಯ ಭೇಟಿ ನೀಡ ಬೇಕಾದ ಪ್ರಮುಖ ಆಕರ್ಷಣಿಯ ಸ್ಥಳವಾಗಿದೆ.

ರುದ್ರಪ್ರಯಾಗ್:

ಡೆಹ್ರಾಡೂನ್ ನಿಂದ 180 ಕಿ.ಮೀ ದೂರದಲ್ಲಿರುವುದೇ ರುದ್ರಪ್ರಯಾಗ್. ಉತ್ತರಾಖಂಡದ ಒಂದು ಸಣ್ಣ ಪಟ್ಟಣವಾಗಿರುವ ಇದು ಶಿವನ ನೆಲೆವೀಡು ಎಂದೇ ಪ್ರಸಿದ್ಧವಾಗಿದೆ. ಅಲ್ಲದೇ ಮಂದಾಕಿನಿ ಹಾಗೂ ಅಲಕನಂದಾ ನದಿಗಳು ಸಮಾಗಮಗೊಳ್ಳುವುದು ಇದೆ ಸ್ಥಳದಲ್ಲಾಗಿದೆ. ಕೇದಾರನಾಥ್ ದೇವಾಲಯ, ಸೋನ್ ಪ್ರಯಾಗ್, ಸಾಹಸಮಯ ಚಾರಣ ಮಾರ್ಗಗಳು ಇಲ್ಲಿನ ಆಕರ್ಷಣೀಯ ಪ್ರವಾಸಿ ತಾಣಗಳಾಗಿವೆ.

ಮಸ್ಸೂರಿ:

ಇದು ಉತ್ತರಾಖಂಡ ರಾಜ್ಯದ ಡೆಹ್ರಾಡೂನ್ ಜಿಲ್ಲೆಯಲ್ಲಿರುವ ಒಂದು ಪ್ರಸಿದ್ದವಾದ ಗಿರಿಧಾಮ ಪ್ರದೇಶವಾಗಿದೆ. ಪರ್ವತಗಳ ರಾಶಿಯನ್ನೇ ಹೊಂದಿರುವ ಇದನ್ನು ಪರ್ವತಗಳ ರಾಣಿ ಎಂದು ಕರೆಯಲಾಗುತ್ತದೆ. ಅಲ್ಲದೇ ಇದು ಮೋಹಕ ಮೋಡಗಳ ಮಾದಕ ನೃತ್ಯಗಳಿಗೆ ವಿಶೇಷತೆಯನ್ನು ಪಡೆದಿದೆ.

Massuri

ಹರಿದ್ವಾರ:

ಇದು ಉತ್ತರಾಖಂಡ ರಾಜ್ಯದಲ್ಲಿರುವ ಪ್ರಸಿದ್ಧ ಪ್ರವಾಸಿ ತಾಣದ ಜೊತೆ ಅತಿ ಪುಣ್ಯ ಕ್ಷೇತ್ರಗಳಲ್ಲಿ ಒಂದಾಗಿದೆ. ಗಂಗಾ ತಟದಲ್ಲಿ ನೆಲೆಸಿರುವ ಈ ತಾಣವು ಭಕ್ತರ ಪ್ರಿಯ ತಾಣವಾಗಿದೆ. ಇದು ದೆಹಲಿಯಿಂದ 212 ಕಿ.ಮೀ ಗಳಷ್ಟು ದೂರವಿದೆ. ಹರ್ ಕಿ ಪೌರ್ ನಲ್ಲಿ ನಡೆಯುವ ಗಂಗಾ ಆರತಿ, ಮಾನಸಾ ದೇವಿ ದೇವಾಲಯ, ಗಂಗಾ ನದಿಯ ಪುಣ್ಯ ಸ್ನಾನ ಇದರ ಆಕರ್ಷಣೀಯ ತಾಣವಾಗಿದೆ. ಅದರಲ್ಲೂ ಹರಿದ್ವಾರದ ಹರ್ ಕಿ ಪೌರಿಯ ಭೇಟಿಯು ವಿಶೇಷವಾದದ್ದು.

ನೀವು ಇದನ್ನು ಇಷ್ಟ ಪಡುಬಹುದು: ಈಶಾನ್ಯ ಭಾರತದ 9 ಪ್ರಸಿದ್ಧ ತಾಣಗಳಿವು

Haridwar

ರಿಷಿಕೇಶ್:

ಇದು ಉತ್ತರಾಖಂಡ ರಾಜ್ಯದ ಡೆಹ್ರಾಡೂನ್ ಜಿಲ್ಲೆಯಲ್ಲಿರುವ ಪ್ರಕೃತಿಯ ಸಂಪದ್ಭರಿತ ಪ್ರವಾಸಿ ತಾಣಗಳಲ್ಲಿ ಒಂದಾಗಿದೆ. ಇದು ಧ್ಯಾನ ಹಾಗೂ ಯೋಗ ಕೇಂದ್ರಗಳ ಕಾರಣಕ್ಕಾಗಿ ಜಗತ್ತಿನಲ್ಲಿಯೆ ಪ್ರಸಿದ್ಧಿ ಪಡೆದಿದೆ. ಲಕ್ಷ್ಮಣ ಝೂಲಾ, ಭರತ ಮಂದಿರ, ಆಶ್ರಮಗಳು, ದೇವಾಲಯಗಳು, ರಿಶಿಕುಂಡ ಇಲ್ಲಿನ ಪ್ರಸಿದ್ಧ ಆಕರ್ಷಣೀಯ ಪ್ರವಾಸಿ ತಾಣವಾಗಿದೆ.

Rushikesha

ಅಲಹಾಬಾದ್:

ಇದು ಉತ್ತರ ಪ್ರದೇಶದ ಪ್ರಮುಖ ಧಾರ್ಮಿಕ ಪ್ರವಾಸಿ ಆಕರ್ಷಣೆಯ ಸ್ಥಳದಲ್ಲಿ ಒಂದಾಗಿದೆ. ಇದನ್ನು ಪ್ರಯಾಗ ಅಥವಾ ಇಲಹಾಬಾದ್ ಎಂತಲೂ ಕರೆಯಲಾಗುತ್ತದೆ. ಇದರ ವಿಶೇಷತೆ ಎಂದರೆ ಮೂರು ಮಹತ್ವದ ಪವಿತ್ರ ನದಿಗಳಾದ ಗಂಗಾ ನದಿ , ಯಮುನಾ ನದಿ ಮತ್ತು ಸರಸ್ವತಿ ನದಿಗಳ ಸಂಗಮವಾಗಿದೆ. ಅಲ್ಲದೇ ಅಲ್ ಫ್ರೆಡ್ ಪಾರ್ಕ್, ಅಲಹಾಬಾದ್ ಕೋಟೆ ಇಲ್ಲಿನ ಆಕರ್ಷಣೀಯ ಪ್ರವಾಸಿ ತಾಣವಾಗಿದೆ.

ಮಥುರಾ:

ಇದು ಉತ್ತರ ಪ್ರದೇಶ ರಾಜ್ಯದಲ್ಲಿರುವ ಪ್ರವಾಸಿ ತಾಣವಾಗಿದೆ. ಧಾರ್ಮಿಕ ಮಹತ್ವವುಳ್ಳ ಮಥುರಾ ಪಟ್ಟಣವು ಶ್ರೀಕೃಷ್ಣ ಭಗವಂತನ ಜನ್ಮ ಭೂಮಿಯಾಗಿದೆ. ದ್ವಾರಕಾಧೀಶ ದೇವಾಲಯ, ಶ್ರೀ ಕೃಷ್ಣ ಜನ್ಮಭೂಮಿ ದೇವಾಲಯ, ವೃಂದಾವನ ಹಾಗೂ ಗೋವರ್ಧನ ಇಲ್ಲಿಯ ಆಕರ್ಷಣೀಯ ಸ್ಥಳವಾಗಿದೆ. ಅಲ್ಲದೇ ಬಾಯಲ್ಲಿ ನೀರೂರಿಸುವ ಮಥುರಾ ಪೇಡಾಗಳಿಗೂ ಇಲ್ಲಿ ಹೆಸರುವಾಸಿಯಾಗಿದೆ.

Mathura

ಲಖನೌ:

ಇದು ಉತ್ತರ ಪ್ರದೇಶ ರಾಜ್ಯದ ರಾಜಧಾನಿಯಾಗಿದೆ. ಶ್ರೀಮಂತ ನವಾಬ ಸಂಸ್ಕೃತಿ, ಐತಿಹಾಸಿಕ ರಚನೆಗಳು, ವೈವಿಧ್ಯಮಯ ಸಂಸ್ಕೃತಿ, ಉತ್ತಮ ಆದರಾತಿಥ್ಯ ಹಾಗೂ ಬಾಯಲ್ಲಿ ನೀರೂರಿಸುವಂತಹ ಖಾದ್ಯಗಳಿಗೆ ಈ ಪ್ರವಾಸಿ ತಾಣವು ಪ್ರಸಿದ್ದಿ ಪಡೆದಿದೆ. ಕಬಾಬ್ ಹಾಗೂ ಬಿರಿಯಾನಿ, ದಶೇರಿ ಮಾವಿನ ಹಣ್ಣು ಅಮೀನಾಬಾದ್ ಮಾರುಕಟ್ಟೆಯಲ್ಲಿ ದೊರೆಯುವ ಕುಲ್ಫಿ ಚಿತ್ರದಲ್ಲಿರುವುದು ರುಮಾಲಿ ರೋಟಿ ಇಲ್ಲಿನ ತಿನಿಸುಗಳಾಗಿವೆ.

ಮೌಂಟ್ ಅಬು:

ಇದು ರಾಜಸ್ಥಾನ ರಾಜ್ಯದ ಸಿರೋಹಿ ಜಿಲ್ಲೆಯ ಅರಾವಳಿ ಪರ್ವತ ಶ್ರೇಣಿಗಳಲ್ಲಿ ನೆಲೆಸಿರುವ ಏಕೈಕ ಗಿರಿಧಾಮ ಪ್ರದೇಶವಾಗಿದೆ. ಈ ಪ್ರವಾಸಿ ತಾಣವು ತಂಪಾದ ಹಿತಕರವಾದ ವಾತಾವರಣ ಹೊಂದಿದೆ. ಈ ಗಿರಿಧಾಮವು ತನ್ನಲ್ಲಿರುವ ನಕ್ಕಿ ಕೆರೆ ಹಾಗೂ ಕಪ್ಪೆಯಾಕಾರದ ದೊಡ್ಡ ಬಂಡೆ ಹೊಂದಿರುವ ಕಾರಣಕ್ಕಾಗಿ ಪ್ರಸಿದ್ದಿ ಪಡೆದಿದೆ.

Mount Abu

ಜೈಸಲ್ಮೇರ್:

ಇದು ರಾಜಸ್ಥಾನ ರಾಜ್ಯದಲ್ಲಿರುವ ವಿಶ್ವ ಪಾರಂಪರಿಕ ತಾಣವಾಗಿದೆ. ಅಲ್ಲದೇ ‘ಗೋಲ್ಡನ್ ಸಿಟಿ’ ಎಂದೆ ಜನಪ್ರೀಯತೆ ಪಡೆದಿದೆ. ಜೈಸಲ್ಮೇರ್ ಕೋಟೆ, ಜೈನ ದೇವಾಲಯಗಳು, ಸಂಗ್ರಹಾಲಯಗಳು, ಒಂಟೆ ಸಫಾರಿ ಇಲ್ಲಿನ ಪ್ರಮುಖ ಆಕರ್ಷಣೆ ಹಾಗೂ ವಿಶೇಷ ತಾಣಗಳಾಗಿವೆ. ಬಂಗಾರದಂತೆ ಜಗಮಗಿಸುವುದರಿಂದಲೆ ಈ ನಗರಕ್ಕೆ ಸುವರ್ಣ ನಗರ ಎಂದು ಕರೆಯಲಾಗುತ್ತದೆ.

ಉದಯಪುರ:

ಇದು ರಾಜಸ್ಥಾನದ ಮತ್ತೊಂದು ಸುಂದರ ಪ್ರವಾಸಿ ತಾಣವಾಗಿದೆ. ಉದಯಪುರವನ್ನು ಕೆರೆಗಳ ನಗರ ಎಂದೂ ಕರೆಯಲಾಗುತ್ತದೆ. ಈ ಸುಂದರವಾದ ನಗರವು ಪ್ಯಾಲೇಸ್, ಲೇಕ್ ಪ್ಯಾಲೇಸ್, ಜಗ್ ಮಂದಿರ್, ಮಾನ್ಸೂನ್ ಪ್ಯಾಲೇಸ್, ಜಗದೀಶ ದೇವಾಲಯ, ಕೋಟೆಗಳು, ಕೆರೆಗಳು, ಅರಮನೆಗಳು, ಮ್ಯೂಸಿಯಮ್‌, ವನ್ಯಧಾಮಗಳನ್ನು ಹೊಂದಿದೆ.

ಪುಷ್ಕರ್:

Ajmer Pushkar

ಇದು ರಾಜಸ್ಥಾನ ರಾಜ್ಯದ ಅಜ್ಮೇರ್ ಜಿಲ್ಲೆಯಲ್ಲಿದೆ. ಹಿಂದೂ ಧರ್ಮದ ಐದು ಪವಿತ್ರ ನಗರಗಳಲ್ಲಿ ಈ ಪುಷ್ಕರ್ ಪ್ರವಾಸಿ ತಾಣವು ಒಂದಾಗಿದೆ. ಈ ತಾಣವು ಒಂದು ದಂತಕಥೆಯನ್ನು ಹೊಂದುದ್ದು ಅದರ ಪ್ರಕಾರ, ಸ್ವತಃ ಬ್ರಹ್ಮ ದೇವರಿಂದಲೆ ಈ ಪಟ್ಟಣ ನಿರ್ಮಾಣವಾದುದು ಎನ್ನಲಾಗಿದೆ. ಪುಷ್ಕರ್ ಪಟ್ಟಣವು ಪುಷ್ಕರ್ ಕೆರೆಯ ತಟದಲ್ಲಿ ನೆಲೆಸಿದ್ದು ಈ ಕೆರೆಯ ನೀರು ಮಾನಸ ಸರೋವರದ ನೀರಿನಷ್ಟೆ ಪವಿತ್ರವಾದುದು ಎಂದು ನಂಬಿಕೆಯು ಜನರಲ್ಲಿದೆ. ಪ್ರತಿ ವರ್ಷವು ಇಲ್ಲಿನ ಪುಷ್ಕರ್ ಕೆರೆಯ ಪ್ರದೇಶದಲ್ಲಿ ಆಯೋಜನೆಗೊಳ್ಳುವ ಪುಷ್ಕರ್ ಮೇಳವು ಪ್ರವಾಸಿ ವಿಶೇಷವಾಗಿದೆ.

ನಾವೂ ಟೆಲಿಗ್ರಾಮ್ ನಲ್ಲೂ ಇದ್ದೀವಿ! ಕನ್ನಡ.ಟೆಲಿಗ್ರಾಮ್ ಗ್ರೂಪ್ ಜಾಯಿನ್ ಆಗಿ. 

ನೀವು ಪ್ರವಾಸ ಹೋಗುವ ತಾಣದ ಮಾಹಿತಿ, ಕನ್ನಡ.ಟ್ರಾವೆಲ್ (Kannada.Travel) ಜಾಲತಾಣದಲ್ಲಿ ಪ್ರಕಟವಾಗುವ ಬರಹಗಳ ವಿವರ, ಅಪರೂಪದ ಟ್ರಾವೆಲರ್ ಗಳ ಪರಿಚಯ, ಪ್ರವಾಸಿ ತಾಣಗಳ ಕುತೂಹಲಕರ ಚಿತ್ರ, ಬರಹ ಎಲ್ಲವೂ ಇಲ್ಲಿ ನಿಮಗೆ ಸಿಗುತ್ತದೆ. ಬನ್ನಿ ಜೊತೆಯಾಗಿ.

Related Articles

Leave a Reply

Your email address will not be published. Required fields are marked *

Back to top button