ದೂರ ತೀರ ಯಾನವಂಡರ್ ಬಾಕ್ಸ್ವಿಂಗಡಿಸದವಿಸ್ಮಯ ವಿಶ್ವಸಂಸ್ಕೃತಿ, ಪರಂಪರೆಸ್ಮರಣೀಯ ಜಾಗ

ಈಶಾನ್ಯ ಭಾರತದ 9 ಪ್ರಸಿದ್ಧ ತಾಣಗಳಿವು

ಈಶಾನ್ಯ ಭಾರತದ ಪ್ರತಿಯೊಂದು ಜಾಗವು ಚೆಂದ. ನೀವೊಮ್ಮೆ ಹೋದರೆ ಈಶಾನ್ಯ ಭಾರತದ ಜಾಗಗಳು ನಿಮಗೆ ಬಹು ಹತ್ತಿರವಾಗುತ್ತದೆ. ಏಳು ಸಹೋದರಿಯರ ನಾಡು ಎಂದು ಕರೆಯಲ್ಪಡುವ ರಾಜ್ಯಗಳು ಜೊತೆಗೆ ಸಿಕ್ಕಿಂ, ಪಶ್ಚಿಮ ಬಂಗಾಳದ ಈಶಾನ್ಯ ಪ್ರದೇಶಗಳನ್ನು ಒಳಗೊಂಡಿದೆ. ಈಶಾನ್ಯ ರಾಜ್ಯಗಳ ಅದ್ಭುತ ತಾಣಗಳ ಮಾಹಿತಿ ನಿಮಗಾಗಿ.
ಪ್ರವಾಸೋದ್ಯಮ ದಿನದ ವಿಶೇಷ
.

ನವ್ಯಶ್ರೀ ಶೆಟ್ಟಿ

ಈಶಾನ್ಯ ಭಾರತವು ಏಳು ಸಹೋದರಿಯರ ರಾಜ್ಯಗಳನ್ನು ಒಳಗೊಂಡಿದೆ, ಅಂದರೆ, ಅರುಣಾಚಲ ಪ್ರದೇಶ, ಅಸ್ಸಾಂ, ಮಣಿಪುರ, ಮೇಘಾಲಯ, ಮಿಜೋರಾಂ, ನಾಗಾಲ್ಯಾಂಡ್, ತ್ರಿಪುರಾ ರಾಜ್ಯಗಳನ್ನು ಒಳಗೊಂಡಿದೆ. ಇವುಗಳ ಜೊತೆಗೆ ಸಿಕ್ಕಿಂ ,ಪಶ್ಚಿಮ ಬಂಗಾಳದ ಈಶಾನ್ಯ ಪ್ರದೇಶಗಳು ಕೂಡ ಈಶಾನ್ಯ ರಾಜ್ಯಗಳ ಪಟ್ಟಿಗೆ ಸೇರುತ್ತದೆ. ಈ ಈಶಾನ್ಯ ರಾಜ್ಯಗಳ ಪ್ರಸಿದ್ದ ಸ್ಥಳಗಳ ಕುರಿತಾದ ಮಾಹಿತಿ ಇಲ್ಲಿದೆ.

ಡಾರ್ಜಿಲಿಂಗ್

ಹಿಮಾಲಯದ ತಪ್ಪಲಿನಲ್ಲಿರುವ ಡಾರ್ಜಿಲಿಂಗ್ ಭಾರತದ ಪ್ರಸಿದ್ಧ ಗಿರಿಧಾಮಗಳಲ್ಲಿ ಒಂದು. ಡಾರ್ಜಿಲಿಂಗ್ ಚಹಾ ತೋಟಗಳಿಗೆ ಹೆಸರುವಾಸಿ. ಪ್ರಸಿದ್ಧ ಆಟಿಕೆ ರೈಲು, ಮತ್ತು ಕಾಂಚನಜುಂಗಾ ಪರ್ವತದೊಂದಿಗೆ ಅದ್ಭುತ ನೋಟಗಳನ್ನು ನೀಡುತ್ತದೆ ಡಾರ್ಜಿಲಿಂಗ್.

Darjeeling

ಸಿಕ್ಕಿಂ

ಸಿಕ್ಕಿಂ ಪ್ರಸಿದ್ಧ ಪೆಮಯಾಂಗ್ತ್ಸೆ ಮಠವನ್ನು ಹೊಂದಿದೆ. ಸಿಕ್ಕಿಂ ಪ್ರತಿಯೊಬ್ಬ ಪ್ರವಾಸಿಗರಿಗೂ ಶಾಂತಿಯುತ ತಾಣವಾಗಿದೆ. ನಿಮ್ಮ ಈಶಾನ್ಯ ಪ್ರವಾಸದ ಒಂದು ಭಾಗವಾಗಿರಬೇಕಾದ ಸ್ಥಳವಿದು. 4,310 ಮೀಟರ್ ಎತ್ತರದಲ್ಲಿ ಅತಿ ಎತ್ತರದ ಮೋಟರೇಬಲ್ ರಸ್ತೆಯನ್ನು ಹೊಂದಿದೆ ಸಿಕ್ಕಿಂ ರಾಜ್ಯ. ನೀವು ಸಿಕ್ಕಿಂನಲ್ಲಿ ತ್ಸೊಮ್ಗೊ ಸರೋವರ, ರುಮ್ಟೆಕ್ ಮಠ, ಗುರುದೊಂಗ್ಮಾರ್ ಸರೋವರ, ಹಿಮನದಿ, ಪೆಮಯಂಗ್ತ್ಸೆ ಮಠಗಳನ್ನು ನೋಡಬಹುದು.

Sikkim

ಅರುಣಾಚಲ ಪ್ರದೇಶ

“ಡಾನ್-ಲೈಟ್ ಪರ್ವತಗಳ ಭೂಮಿ” ಎಂದು ಕರೆಯಲ್ಪಡುವ ಅರುಣಾಚಲ ಪ್ರದೇಶವು ಈಶಾನ್ಯ ಭಾರತದ ರಾಜ್ಯಗಳಲ್ಲಿ ಒಂದು. ಭಾರತದ ಈಶಾನ್ಯ ಭಾಗದ ಅತ್ಯಂತ ತುದಿಯಲ್ಲಿದೆ. ಅರುಣಾಚಲ ಪ್ರದೇಶವು ಎಲ್ಲಾ ಏಳು ಸಹೋದರಿಯರಲ್ಲಿ ಅತಿದೊಡ್ಡ ರಾಜ್ಯವಾಗಿದೆ.

Arunachala pradesh

ಭಾರತದ ಅತಿದೊಡ್ಡ ಮಠ, ಟಿಬೆಟ್ ನ ವಿಶ್ವದ ಅತಿದೊಡ್ಡ ಲಾಸಾ ಮಠ, ಮತ್ತು ದಲೈ ಲಾಮಾ ಅವರ ಜನ್ಮ ಸ್ಥಳ ಇಲ್ಲಿದೆ. ಇದರ ಜೊತೆಗೆ ಪಖುಯಿ ವನ್ಯಜೀವಿ ಅಭಯಾರಣ್ಯ, ನಮ್ದಾಫಾ ರಾಷ್ಟ್ರೀಯ ಉದ್ಯಾನವನ, ದಿರಾಂಗ್, ಪರಶುರಾಮ ಕುಂಡ್, ಡಪೊರಿಜೊ ನೀವು ನೋಡಲೇ ಬೇಕಾದ ತಾಣಗಳು. ನುರಾನಂಗ್ ಫಾಲ್ಸ್ ಮತ್ತು ಭಾಲುಕ್‌ಪಾಂಗ್ ಇಲ್ಲಿನ ಇತರ ಆಕರ್ಷಣೆ.

ಅಸ್ಸಾಂ

ಸಸ್ಯ ಮತ್ತು ಪ್ರಾಣಿ ಸಂಕುಲದಿಂದ ಸಮೃದ್ಧವಾಗಿರುವ ಅಸ್ಸಾಂ ಅತ್ಯಂತ ಪ್ರಸಿದ್ಧವಾದ ಈಶಾನ್ಯ ರಾಜ್ಯಗಳಲ್ಲಿ ಒಂದು. ವಿಶಾಲವಾದ ಚಹಾ ತೋಟಗಳು ಮತ್ತು ಪುರಾತತ್ತ್ವ ಶಾಸ್ತ್ರದ ತಾಣಗಳಿಗೆ ಹೆಸರುವಾಸಿ ಅಸ್ಸಾಂ. ಅಸ್ಸಾಂ ರಾಜ್ಯದಲ್ಲಿರುವ ಪ್ರಸಿದ್ದ ಕಾಜಿರಂಗ ರಾಷ್ಟ್ರೀಯ ಉದ್ಯಾನವನದ ಅತ್ಯುತ್ತಮ ಯುನೆಸ್ಕೋ ವಿಶ್ವ ಪರಂಪರೆಯ ತಾಣವಾಗಿದೆ. ಒಂದು ಕೊಂಬಿನ ಖಡ್ಗಮೃಗ ಈ ಉದ್ಯಾನವನದ ವಿಶೇಷ . ಕಾಮಾಖ್ಯ ದೇವಸ್ಥಾನ, ಮಾನಸ್ ರಾಷ್ಟ್ರೀಯ ಉದ್ಯಾನವನ ನೀವು ನೋಡಬೇಕಾದ ಇತರ ತಾಣಗಳು.

Assam

ಮಣಿಪುರ

ಹಬ್ಬಗಳ ನಾಡು ಎಂದು ಜನಪ್ರಿಯವಾಗಿ ಕರೆಯಲ್ಪಡುವ ಮಣಿಪುರವು ತನ್ನ ಭವ್ಯವಾದ ಬೆಟ್ಟಗಳು, ಸ್ಥಳೀಯ ಆಟಗಳು, ಶ್ರೀಮಂತ ಸಂಸ್ಕೃತಿ, ಕರಕುಶಲ ವಸ್ತುಗಳು ಮತ್ತು ಕೈಮಗ್ಗಗಳು ಮತ್ತು ಸಮರ ಕಲೆಗಳಿಗೆ ಹೆಸರುವಾಸಿ. ಯುದ್ಧ ಸ್ಮಶಾನ, ಶ್ರೀ ಗೋವಿಂದಜೀ ದೇವಸ್ಥಾನ, ಸೆಂದ್ರ ದ್ವೀಪ, ಕೀಬುಲ್ ಲಮ್ಜಾವೊ ರಾಷ್ಟ್ರೀಯ ಉದ್ಯಾನವನಗಳು ಮಣಿಪುರದ ಇತರ ಆಕರ್ಷಣೆ.

Manipura

ಮೇಘಾಲಯ

ಏಷ್ಯಾದ ಅತ್ಯಂತ ಸ್ವಚ್ಛವಾದ ಹಳ್ಳಿ ಮಾವ್ಲಿನ್ನೊಂಗ್‌ಗೆ ಮೇಘಾಲಯದಲ್ಲಿದೆ. ಬ್ರಿಟಿಷ್ ಆಳ್ವಿಕೆಯ ಕಾಲದಿಂದಲೂ ಮೇಘಾಲಯವು ಪೂರ್ವದ ಸ್ಕಾಟ್ಲೆಂಡ್ ಎಂದು ಕರೆಯುತ್ತಿದ್ದರು. ಮೇಘಾಲಯವು ಜಲಪಾತಗಳು ಮತ್ತು ಏಷ್ಯಾದ ಕೆಲವು ಉದ್ದದ ಗುಹೆಗಳಂತಹ ನೈಸರ್ಗಿಕ ಆಕರ್ಷಣೆಗಳಿಂದ ಪ್ರಸಿದ್ದಿ.

ನೀವುಇದನ್ನುಇಷ್ಟಪಡಬಹುದು: ಭಾರತದ ಕೆಲವು ಪುಟ್ಟ ನಗರಗಳ ಸುಂದರ ತಾಣಗಳಿವು .

Meghalaya

ಲೈಟ್ಲಮ್ ಕಣಿವೆ, ಚಿರಾಪುಂಜೆಯಲ್ಲಿ ಡಬಲ್ ಡೆಕ್ಕರ್ ಲಿವಿಂಗ್ ರೂಟ್ ಸೇತುವೆ, ಬಲಪಕ್ರಮ್ ರಾಷ್ಟ್ರೀಯ ಉದ್ಯಾನ, ಉಮಿಯಮ್ ಸರೋವರ ಮೇಘಾಲಯದ ಪ್ರಸಿದ್ಧ ತಾಣಗಳು.

ಮಿಜೋರಾಂ

“ಗುಡ್ಡಗಾಡು ಜನರ ಭೂಮಿ” ಎಂದು ಖ್ಯಾತಿ ಮಿಜೋರಾಂ ಖ್ಯಾತಿ ಪಡೆದಿದೆ. ಉತ್ತರ-ದಕ್ಷಿಣ ಮಾರ್ಗಗಳಲ್ಲಿ ನೆಲೆಗೊಂಡಿರುವ ಪ್ರಬಲ ಪರ್ವತಗಳು ಮತ್ತು ಹಲವಾರು ಕಿರಿದಾದ ನದಿಗಳನ್ನು ಹೊಂದಿರುವ ಮಿಜೋರಾಂ ಸಾಹಸ, ಉತ್ಸಾಹಿಗಳಿಗೆ ಇಷ್ಟವಾಗುವ ತಾಣ .

mizoram

ಮುರ್ಲೆನ್ ರಾಷ್ಟ್ರೀಯ ಉದ್ಯಾನವನ, ದಂಪಾ ಹುಲಿ ಸಂರಕ್ಷಿತ ಪ್ರದೇಶ, ಬೆಟ್ಟಗಳು, ವಂಟಾವ್ಂಗ್ ಜಲಪಾತ, ಲುವಾಂಗ್‌ಮುವಲ್ ಕರಕುಶಲ ಕೇಂದ್ರ ಈ ರಾಜ್ಯದ ಆಕರ್ಷಣೆ.

ನಾಗಾಲ್ಯಾಂಡ್

ಆಕರ್ಷಕ ಸೌಂದರ್ಯ, ಹಚ್ಚ ಹಸಿರು, ಬೃಹತ್ ಪರ್ವತಗಳು ಮತ್ತು ಕ್ವಿಕ್ಸೋಟಿಕ್ ಕಣಿವೆಗಳನ್ನು ಒಳಗೊಂಡ ನಾಗಾಲ್ಯಾಂಡ್ ಈಶಾನ್ಯ ರಾಜ್ಯ. ಮೂಲನಿವಾಸಿ ನಾಗಾ ಬುಡಕಟ್ಟುಗಳನ್ನು ಹೊಂದಿರುವ ನಾಗಾಲ್ಯಾಂಡ್ ಭಾರತದ ಅತ್ಯಂತ ಉತ್ಸಾಹಭರಿತ, ರೋಮಾಂಚಕ ಮತ್ತು ವರ್ಣರಂಜಿತ ಹಬ್ಬಗಳಿಗೆ ಹೆಸರುವಾಸಿಯಾಗಿದೆ, ಬುಡಕಟ್ಟುಗಳ ವೈವಿಧ್ಯಮಯ ಸಂಸ್ಕೃತಿ ಮತ್ತು ಸಂಪ್ರದಾಯಗಳನ್ನು ಆಚರಿಸುತ್ತದೆ.

Nagalyand

ನಾಗಾಲ್ಯಾಂಡ್‌ನಲ್ಲಿ ಹಾರ್ನ್‌ಬಿಲ್ ಉತ್ಸವದ ಸಂತೋಷ ಮತ್ತು ಬಣ್ಣಗಳನ್ನು ಪ್ರತಿಯೊಬ್ಬರೂ ಕಣ್ತುಂಬಿ ಕೊಳ್ಳಬಹುದು. ಯುದ್ಧ ಸ್ಮಶಾನ, ಕೊಹಿಮಾ ಮ್ಯೂಸಿಯಂ, ತುಫೆಮಾ ಗ್ರಾಮ, ಕಚಾರಿ ಅವಶೇಷಗಳು, ಟ್ರಿಪಲ್ ಫಾಲ್ಸ್, ವೇದ ಶಿಖರ ಇಲ್ಲಿನ ಆಕರ್ಷಣೆ.

ತ್ರಿಪುರಾ

Tripura

ತ್ರಿಪುರಾ ಏಳು ಸಹೋದರಿಯರ ರಾಜ್ಯಗಳಲ್ಲಿ ಒಂದು. ತ್ರಿಪುರಾ ಕಲೆ, ವಾಸ್ತುಶಿಲ್ಪ ಮತ್ತು ಇತಿಹಾಸ ಪ್ರಿಯರಿಗೆ ಹೇಳಿ ಮಾಡಿಸಿದ ಜಾಗ. ನೀರಮಹಲ್, ಉನಕೋಟಿ, ಗುಮ್ಟಿ ವನ್ಯಜೀವಿ ಅಭಯಾರಣ್ಯ, ಜಗನ್ನಾಥ ಬ್ಯಾರಿ, ರೋವಾ ವನ್ಯಜೀವಿ ಅಭಯಾರಣ್ಯ, ತ್ರಿಪುರ ಸರ್ಕಾರಿ ವಸ್ತುಸಂಗ್ರಹಾಲಯಗಳು ತ್ರಿಪುರಾದ ಆಕರ್ಷಣೆ.

ನಾವೂ ಟೆಲಿಗ್ರಾಮ್ ನಲ್ಲೂ ಇದ್ದೀವಿ! ಕನ್ನಡ.ಟೆಲಿಗ್ರಾಮ್ ಗ್ರೂಪ್ ಜಾಯಿನ್ ಆಗಿ. 

ನೀವು ಪ್ರವಾಸ ಹೋಗುವ ತಾಣದ ಮಾಹಿತಿ, ಕನ್ನಡ.ಟ್ರಾವೆಲ್ (Kannada.Travel) ಜಾಲತಾಣದಲ್ಲಿ ಪ್ರಕಟವಾಗುವ ಬರಹಗಳ ವಿವರ, ಅಪರೂಪದ ಟ್ರಾವೆಲರ್ ಗಳ ಪರಿಚಯ, ಪ್ರವಾಸಿ ತಾಣಗಳ ಕುತೂಹಲಕರ ಚಿತ್ರ, ಬರಹ ಎಲ್ಲವೂ ಇಲ್ಲಿ ನಿಮಗೆ ಸಿಗುತ್ತದೆ. ಬನ್ನಿ ಜೊತೆಯಾಗಿ.

Related Articles

Leave a Reply

Your email address will not be published. Required fields are marked *

Back to top button