ಭಾರತದ ಕೆಲವು ಪುಟ್ಟ ನಗರಗಳ ಸುಂದರ ತಾಣಗಳಿವು .

ಭಾರತದಲ್ಲಿ ಹಲವು ಸುಂದರ ತಾಣಗಳಿವೆ. ಅದರಲ್ಲಿ ಕೆಲವು ತಾಣಗಳು ಇರುವ ನಗರಗಳ ಹೆಸರನ್ನು ಕೂಡ ನೀವು ಹಲವು ಸಲ ಕೇಳಿರಬಹುದು. ಆದರೆ ಇನ್ನೂ ಒಂದಷ್ಟು ಸುಂದರ ತಾಣಗಳು ಪುಟ್ಟ ಊರಿನಲ್ಲಿ ಇರುವುದರಿಂದ ಕೆಲವರಿಗೆ ಆ ತಾಣಗಳ ಹೆಚ್ಚಿಗೆ ಗೊತ್ತಿರುವುದಿಲ್ಲ. ಆದರೆ ಈ ತಾಣಗಳು ಸುಂದರವಾಗಿರುತ್ತದೆ. ಅಂತಹ ಕೆಲವು ತಾಣಗಳ ಮಾಹಿತಿ ನಿಮಗಾಗಿ.
- ನವ್ಯಶ್ರೀ ಶೆಟ್ಟಿ
ಇದು ನೀವು ಪ್ರಯಾಣಿಸಬಹುದಾದ ಪುಟ್ಟ ಊರುಗಳಲ್ಲಿರುವ ಭಾರತದ ಕೆಲವು ನಗರಗಳ ಪಟ್ಟಿ. ಮುಂದೆ ನೀವು ಪ್ರವಾಸ ಹೋರಡಲು ಪ್ಲಾನ್ ಮಾಡುವ ಸಂದರ್ಭದಲ್ಲಿ ಈ ತಾಣಗಳ ಹೆಸರು ಕೂಡ ನಿಮ್ಮ ಮನಸ್ಸಿನಲ್ಲಿರಲಿ.
ಲಾಂಡರ್ , ಉತ್ತರಾಖಂಡ್ (Landour, uttarakhand)
ಹೆಚ್ಚಿಗೆ ಪ್ರಸಿದ್ಧಿ ಪಡೆಯದ ಈ ತಾಣ ಇರುವುದು ಉತ್ತರಾಖಂಡ್ ರಾಜ್ಯದಲ್ಲಿ. ಲಾಂಡರ್ ನಿಸರ್ಗದ ಸೌಂದರ್ಯತೆ ನೋಡುವುದೇ ಒಂದು ರೀತಿ ಕಣ್ಣಿಗೆ ಆನಂದ. ಹೆಚ್ಚಾಗಿ ಪ್ರಸಿದ್ದಿ ಹೊಂದಿಲ್ಲದ ಪುಟ್ಟ ಊರಿನಲ್ಲಿರುವ ಈ ತಾಣ ನಿಮಗೆ ಎಂದಿಗೂ ಆಯಾಸ ನೀಡುವುದಿಲ್ಲ. ನೀವು ಇಲ್ಲಿ ಕೆಲ ಸಮಯ ಕಳೆದರೆ, ನಿಮ್ಮಲ್ಲಿ ಸಕಾರಾತ್ಮಕ ಭಾವನೆಗಳು ನಿಮ್ಮಲ್ಲಿ ಉತ್ತಮ ಆಲೋಚನೆಗಳು ಮೂಡಿಸುತ್ತದೆ.

ಲಾಂಡರ್ ಪ್ರದೇಶ ಉತ್ತರಾಖಂಡ್ ಸಮೀಪದ ಮುಸ್ಸೋರಿ( mussoorie) ಸಮೀಪದಲ್ಲಿದೆ. ಸಾಮಾನ್ಯವಾಗಿ ಮುಸ್ಸೋರಿಯಲ್ಲಿ ಹೆಚ್ಚಿನ ಪ್ರವಾಸಿಗರು ಆಗಮಿಸುತ್ತಾರೆ . ಆದರೆ, ಲಾಂಡರ್ ಪ್ರದೇಶಕ್ಕೆ ಅದರ ಯಾವುದೇ ಪರಿಣಾಮ ಬೀರುವುದಿಲ್ಲ. ಈ ತಾಣ ಅಷ್ಟೇ ಸಹಜವಾಗಿ ,ಮೋಡಗಳಿಂದ ಆವೃತವಾಗಿ ,ಸುರಕ್ಷಿತವಾಗಿ ನಿಮ್ಮನ್ನು ಕಂಗೊಳಿಸುತ್ತದೆ .
ಒಸಿಯನ್ ,ರಾಜಸ್ತಾನ (osian,Rajasthan)
ಮರುಭೂಮಿಗಳನ್ನು ಹೊಂದಿರುವ ರಾಜಸ್ಥಾನ ರಾಜ್ಯದಲ್ಲಿ ಈ ಪ್ರದೇಶವಿದೆ. ನೀವು ಈ ಸ್ಥಳಕ್ಕೆ ಹೋದಾಗ ನಿಮಗೆ ಥಾರ್ ಮರುಭೂಮಿಯ ಪ್ರತಿ ರೂಪವನ್ನು ನೀವು ನೋಡಿದ ಅನುಭವ ಆಗಬಹುದು. ರಾಜಸ್ತಾನದ ಜೋಧ್ ಪುರ ಜಿಲ್ಲೆಯಲ್ಲಿರುವ ಒಸಿಯನ್ ಒಂದು ರೀತಿಯಲ್ಲಿ ಅಡ್ವೆಂಚರ್ ಮರುಭೂಮಿ ಇದ್ದಂತೆ.
ನೀವು ಇದನ್ನು ಇಷ್ಟಪಡಬಹುದು: ಕೇರಳ ರಾಜ್ಯದ ಸುಂದರ ದ್ವೀಪಗಳಿವು. ಕೇರಳಕ್ಕೆ ಹೋದಾಗ ಈ ದ್ವೀಪಗಳನ್ನು ನೋಡಿಕೊಂಡು ಬನ್ನಿ.

ಒಸಿಯನ್ ಪಟ್ಟಣವು ಹಿಂದೂ ಮತ್ತು ಜೈನ ದೇವಾಲಯಗಳಿಗೆ ಹೆಸರುವಾಸಿ. ನೀವು ಈ ಸ್ಥಳಕ್ಕೆ ಎಂದಾದರು ಭೇಟಿ ಕೊಟ್ಟರೆ ,ಇಲ್ಲಿ ನೀವು ರಾತ್ರಿ ಕಳೆಯಬಹುದು,ಬೆಳಗ್ಗಿನ ಸಮಯವನ್ನು ಆನಂದಿಸಬಹುದು,ಮರಳಿನಲ್ಲಿ ಆಟ ಆಡಬಹುದು ,ಒಂಟೆಗಳನ್ನು ನೋಡಿ ಖುಷಿ ಪಡಬಹುದು. ಒಟ್ಟಾರೆ ನೀವು ಪ್ರವಾಸ ಹೋದ ಕ್ಷಣವನ್ನು ಸಾರ್ಥಕ ಗೊಳಿಸುತ್ತದೆ ಈ ನಗರ.
ವೇಲಪರಿ , ತಮಿಳುನಾಡು(velapari,Tamil Nadu)
ನಿಮಗೆ ಪಶ್ಚಿಮ ಘಟ್ಟಗಳ ಶ್ರೇಣಿ ಇಷ್ಟ ವಾಗುವುದಾದರೆ , ಹೆಚ್ಚು ಪಶ್ಚಿಮ ಘಟ್ಟಗಳ ಸಾಲುಗಳನ್ನು ನೋಡುವ ಆಸೆ ನಿಮ್ಮದಾಗಿದ್ದರೆ, ನೀವು ನಿಮ್ಮ ಪಯಣವನ್ನು ವೇಲಪರಿಯಿಂದಲೇ ಆರಂಭಿಸಬಹುದು.

ಜನ ದಟ್ಟಣೆ ಯಿಂದ ದೂರ ಉಳಿದಿರುವ ಈ ಊರು ಸುಂದರ ಬೀದಿಗಳು , ನದಿ ,ಚೆಂದದ ಟೀ ತೋಟಗಳಿಂದ ಕಂಗೊಳಿಸುತ್ತಿದೆ. ತಮಿಳುನಾಡಿನ ಪ್ರಕೃತಿ ಸೌಂದರ್ಯ ಸವಿಯಲು ಇಷ್ಟ ಪಡುವ ಪರಿಸರ ಪ್ರೇಮಿಗಳಿಗೆ ವೇಲಪರಿ ಕೂಡ ಹಿಡಿಸುತ್ತದೆ.
ನಾಕೋ , ಹಿಮಾಚಲ ಪ್ರದೇಶ (Nako,himaachala pradesha)
ಹಿಮಾಚಲ ಪ್ರದೇಶ ಎಂದಾಗ ಆ ರಾಜ್ಯದ ಹಲವು ಸುಂದರ ತಾಣಗಳ ಚಿತ್ರ ನಮ್ಮ ಕಣ್ಮುಂದೆ ಹಾದು ಹೋಗುತ್ತದೆ. ಈ ರಾಜ್ಯದ ಪ್ರವಾಸಿ ತಾಣಗಳಿಗೆ ಮಾರು ಹೋಗದವರಿಲ್ಲ. ಈ ಹಿಮಾಚಲ ಪ್ರದೇಶದಲ್ಲಿ ನಾಕೋ ಎನ್ನುವ ತಾಣವಿದೆ.
Spity valley ಯಿಂದ ಸುತ್ತುವರೆದಿರುವ ಈ ಜಾಗ ಒಂದು ಅದ್ಬುತವಾದ ಪುಟ್ಟ ಹಳ್ಳಿ. ಪ್ರವಾಸ ಹೋಗುವ ನಿಮ್ಮ ಯೋಜನೆಗೆ ಈ ಸ್ಥಳ ಕೂಡ ಪೂರಕವಾಗಿರಬಹುದು. ನಾಕೋ ಕೆರೆ ಇಲ್ಲಿನ ಪ್ರಮುಖ ಆಕರ್ಷಣೆ.

ನೀವು ಇಲ್ಲಿ ತನಕ ಭೇಟಿ ನೀಡಿರದ ಅದ್ಭುತ ತಾಣಗಳಲ್ಲಿ ನಾಕೋ ಕೂಡ ಒಂದು. ನಾಕೋ ಸುತ್ತಮುತ್ತ ನೀವು ನೋಡಬಹುದಾದ ಹಲವು ತಾಣಗಳಿವೆ. ನೀವು ಕೂಡ ಹೊಸ ಜಾಗಗಳಿಗೆ ಪ್ರವಾಸ ಹೊರಡುವ ಯೋಚನೆಯಲ್ಲಿದ್ದಲ್ಲಿ ಈ ತಾಣಗಳನ್ನು ಕೂಡ ಆ ಪಟ್ಟಿಗೆ ಸೇರಿಸಿಕೊಳ್ಳಿ.
ನಾವೂ ಟೆಲಿಗ್ರಾಮ್ ನಲ್ಲೂ ಇದ್ದೀವಿ! ಕನ್ನಡ.ಟೆಲಿಗ್ರಾಮ್ ಗ್ರೂಪ್ ಜಾಯಿನ್ ಆಗಿ.
ನೀವು ಪ್ರವಾಸ ಹೋಗುವ ತಾಣದ ಮಾಹಿತಿ, ಕನ್ನಡ.ಟ್ರಾವೆಲ್ (Kannada.Travel) ಜಾಲತಾಣದಲ್ಲಿ ಪ್ರಕಟವಾಗುವ ಬರಹಗಳ ವಿವರ, ಅಪರೂಪದ ಟ್ರಾವೆಲರ್ ಗಳ ಪರಿಚಯ, ಪ್ರವಾಸಿ ತಾಣಗಳ ಕುತೂಹಲಕರ ಚಿತ್ರ, ಬರಹ ಎಲ್ಲವೂ ಇಲ್ಲಿ ನಿಮಗೆ ಸಿಗುತ್ತದೆ. ಬನ್ನಿ ಜೊತೆಯಾಗಿ