ಕಾಫಿನಾಡಿನಲ್ಲಿ ಸ್ನೇಹಿತರ ಜೊತೆಗಿನ ಸುತ್ತಾಟದ ಕಥೆ. ಲಿಖಿತ್ ಬಿ. ಎಸ್ ಬರೆದ ಬರಹ.

ನಿತ್ಯದ ವಾಹನ ಹಾರ್ನ್ ನಡುವೆ ಒಂದು ದಿನ ಹಚ್ಚ ಹಸಿರಿನ ಪ್ರಕೃತಿ ನಡುವೆ ಕಾಲಕಳೆದು ಬಂದ ಗೆಳೆಯರ ಗುಂಪು. ಕಾಲೇಜು ಆರಂಭದ ನಂತರ ಸ್ನೇಹಿತರ ಜೊತೆಗೆ ಹೋದ ಪ್ರವಾಸದ ಕಥೆ. ಪಿ. ಜಿ ಯ 5 ಜನ ಸ್ನೇಹಿತರು ಚಿಕ್ಕಮಂಗಳೂರು ಸುತ್ತಾಡಿ ಬಂದ ಪಯಣ. ಎಂಜಿಎಂ ಕಾಲೇಜಿನ ವಿದ್ಯಾರ್ಥಿ ಲಿಖಿತ್ ಬಿ. ಎಸ್ ಬರೆದ ಪ್ರವಾಸದ ಅನುಭವ.
ಲಿಖಿತ್ ಬಿ. ಎಸ್
ಲಾಕ್ಡೌನ್ ಮುಗಿಸಿ ಕಾಲೇಜು ಶುರುವಾಯಿತು ನಮ್ಮ ಗೆಳೆಯರ ಬಳಗದಲ್ಲಿ ವರ್ಷದಿಂದ ವರ್ಷಕ್ಕೆ ಸ್ನೇಹಿತರು ಕಮ್ಮಿಯಾಗುತ್ತ ಬರುತ್ತಿತ್ತು. ಆದರೂ ಪರವಾಗಿಲ್ಲ ಪಿ.ಜಿ ಅಂದ್ಮೇಲೆ 25ರಿಂದ 30 ಜನ ಇರುವುದು ಸರ್ವೇಸಾಮಾನ್ಯ ಅದರಲ್ಲಿ ನಮಗೆ ಸ್ನೇಹಿತರು ಆಗುವುದು ಬೆರಳೆಣಿಕೆಯಷ್ಟು.ಕೊನೆಗೆ ನಾವು ಐದು ಜನ ಸ್ನೇಹಿತರು ಉಳಿಯಬೇಕಾಯಿತು .

ಒಂದು ದಿನ ರಾತ್ರಿ ನಾವು ಐದು ಜನ ಸೇರಿ ಎಲ್ಲಿಯಾದರೂ ಹೋಗಿ ಬರುವ ಎಂದು ನಿರ್ಧಾರ ಮಾಡಿದೇವು. ಈ ವಿಷಯದ ಸಲುವಾಗಿ ನಾಲ್ಕೈದು ದಿನದಿಂದ ಚರ್ಚೆಯಾಗುತ್ತಿತ್ತು. ಕೊನೆಗೆ ರಾತ್ರಿ ಸರಿಸುಮಾರು 11.45 ನಾವು 5 ಜನ ಸೇರಿ ಕುದುರೆಮುಖ ಹೋಗುವ ಎನ್ನುವ ನಿರ್ಧಾರಕ್ಕೆ ಬಂದೆವು. ಬೆಳಿಗ್ಗೆ 6:00 ಗಂಟೆಗೆ ಉಡುಪಿಯಿಂದ ಹೊರಟು ಕಾರ್ಕಳದ ಗೊಮ್ಮಟ ಗುಡ್ಡ ಸಮೀಪಿಸುತ್ತಿದ್ದಂತೆ ಒಂದು ಬೋರ್ಡ್ ಕಣ್ಣಿಗೆ ಬಿತ್ತು. ಅದನ್ನು ನೋಡಿ ಕೊಂಚ ಬೇಸರ. ಕಾರಣ ವಾಹನದ ಸಂಚಾರದ ಸಮಯ ಬೆಳಿಗ್ಗೆ 9ರಿಂದ ಸಂಜೆ 5 ತನಕ ಎಂದು ಆ ಬೋರ್ಡಿನಲ್ಲಿ ಬರೆಯಲಾಗಿತ್ತು . ಬಜಗೋಳಿಯಲ್ಲಿ ಗಾಡಿ ನಿಲ್ಲಿಸಿ ತಿಂಡಿ ತಿಂದು ನಮ್ಮ ಪಯಣ ಹೊರಟಿದ್ದು ಸೀದಾ ಕುದುರೆಮುಖ ಕಡೆ. ಚಿಕ್ಕವನಿದ್ದಾಗ ಹೋಗಿದ ನೆನಪು ಅಷ್ಟೇ ಮತ್ತೆ ಆ ಕಡೆ ಹೋಗಲಿಲ್ಲ ತರ ಅದು ಸಾಧ್ಯವಾಗಿದ್ದು ನನ್ನ ಸ್ನೇಹಿತರಿಂದ..
ಮನಸ್ಸಿಗೆ ಮುದ ನೀಡುವ ಜಾಗ ಕುದುರೆಮುಖ
ಕಾಲೇಜು ಶುರುವಾಗಿನಿಂದ ಬರೀ ವಾಹನಗಳ ಶಬ್ದ ಹಾಗೂ ಮುಗಿಲೆತ್ತರಕೆ ಕಟ್ಟಿದ ಕಟ್ಟಡಗಳು ಕಣ್ಣಿಗೆ ಕಾಣಿಸುತ್ತಿತ್ತು. ಒಮ್ಮೆಲೆ ಸುತ್ತ ನೋಡಿದರೂ ಹಚ್ಚ ಹಸಿರಿನಿಂದ ಕಂಗೊಳಿಸುತ್ತಿರುವ ಪ್ರಕೃತಿ ..ನಿಶಬ್ದ ದಿಂದ ಹರಿಯುತ್ತಿರುವ ಭದ್ರನದಿ ಇದನ್ನೆಲ್ಲ ನೋಡಿದ ನನಗೆ ಮನಸ್ಸಿನಲ್ಲಿ ಸಂತೋಷ, ಸುತ್ತಲೂ ಬೆಟ್ಟ ಗುಡ್ಡಗಳಿಂದ ಕೂಡಿದ ಕುದುರೆಮುಖದ ಸೌಂದರ್ಯವನ್ನು ಸವಿಯುತ್ತಾ 42 ಕಿಲೋಮೀಟರ್ ಸಾಗಿದ್ದು ಗೊತ್ತಾಗಲಿಲ್ಲ. ಹಾಗೆಯೇ ದಿನ ಎದ್ದ ಕೂಡಲೇ ನಮ್ಮ ಕಿವಿಗೆ ಕೇಳುತಿದ್ದಿದೂ ವಾಹನಗಳ ಓಡಾಟದ ಶಬ್ದ .ನಾವು ಕೆರೆಕಟ್ಟೆ ಸಮೀಪಿಸುತ್ತಿದ್ದಂತೆ ನಾವು ನೋಡುವ ವಾತಾವರಣದ ಬೇರೆಯಾಗಿ ಹೋಯಿತು.
ನೀವು ಇದನ್ನುಇಷ್ಟಪಡಬಹುದು:ಕಾಫಿ ನಾಡಿನಲ್ಲಿ ಸ್ನೇಹಿತರ ಜೊತೆಗಿನ ಪಯಣದ ಕಥೆ

ಅಲ್ಲಿ ಕಿವಿಗೊಟ್ಟು ಕೇಳಿದರೆ ಹಕ್ಕಿಗಳ ಇಂಪಾದ ಧ್ವನಿ ಮನಸ್ಸಿಗೆ ಮುದ ನೀಡುತ್ತಿತ್ತು. ಕುದುರೆಮುಖ ನೋಡಿಕೊಂಡು ಸೀದಾ ಹೊರಟಿದ್ದು ಸಂಸೆ ಕಡೆ. ಅಲ್ಲಿನ ಟೀ ಎಸ್ಟೇಟ್ ಮಧ್ಯೆ ಇರುವ ಗಣಪತಿ ದೇವಸ್ಥಾನ. ಪ್ರವಾಸಿಗರನ್ನು ಸೆಳೆಯುತ್ತದೆ. ಈ ಕ್ಷೇತ್ರಕ್ಕೆ ಬಂದು ನಿಮ್ಮ ಎಲ್ಲಾ ಆಲೋಚನೆಯನ್ನು ಬಿಟ್ಟು ಐದು ನಿಮಿಷ ಧ್ಯಾನ ಮಾಡಿ ನಿಮ್ಮ ಎಲ್ಲಾ ಪ್ರಶ್ನೆಗಳಿಗೆ ಉತ್ತರ ಸಿಗುತ್ತದೆ . ನಂತರ ನಾವು ಹೊರಟಿದ್ದು ಹೊರನಾಡಿಗೆ. ಅಲ್ಲಿ ದೇವಿ ದರ್ಶನ ಮಾಡಿಕೊಂಡು ತಡ ಮಾಡದೆ ಹೊರಟಿದ್ದು ಕ್ಯಾತನಮಕ್ಕಿಕಡೆ.
ಬಹುದಿನದ ಕನಸು ಕ್ಯಾತನಾಮಕ್ಕಿ ನೋಡುವುದು
ನನ್ನ ಬಹು ದಿನದ ಕನಸು ನನಸಾಗುವ ಸಮಯ. ನಮಗೆ ಗಾಳಿಗುಡ್ಡದ ತುದಿಗೆ ಹೋಗಬೇಕೆಂಬುದು ಆಸೆ. ಅಲ್ಲಿನ ಸ್ಥಳೀಯರನ್ನು ವಿಚಾರಿಸಿದಾಗ ಅವರು ಹೇಳಿದರು ನಾಲ್ಕು ಕಿಲೋಮೀಟರ್ ಇದೆ ತುದಿಯವರೆಗೆ ಎಂದು ಹೇಳಿದರು. ನಾವು ಐದು ಜನ ಸೇರಿ ನಡೆದುಕೊಂಡು ಹೋಗುವುದೆಂದು ತೀರ್ಮಾನವಾಯಿತು ..ಸ್ವಲ್ಪ ದೂರ ನಡೆದು ಬಂದವನಿಗೆ ಒಂದು ಹೆಜ್ಜೆ ಇಡಲಾಗದ ಅಷ್ಟು ಸುಸ್ತು ನನ್ನನ್ನು ಆವರಿಸಿಕೊಂಡಿತು ..ಮುಂದೆ ಹೋಗುವುದು ಬೇಡ ವಾಪಸ್ಸು ಹೋಗುವ ಅಂತ ಅನಿಸುತ್ತಿತ್ತು ಆದರೂ ಛಲಬಿಡದೆ ಬೆಟ್ಟದ ತುದಿಯ ವರೆಗೂ ಹತ್ತಿ ನೆಡೆದೆ ನಂತರ ಅಲ್ಲಿ ಕಾಣುವ ಪ್ರಕೃತಿಯನ್ನು ವರ್ಣಿಸಲು ಅಸಾಧ್ಯ .

ಒಂದು ಗಂಟೆ ಸಮಯವನ್ನು ಬೆಟ್ಟದ ತುದಿಯಲ್ಲಿ ಕಳೆದನಂತರ ನಾವು ಹೊರಟಿದ್ದು ವಿದ್ಯಾದೇವತೆ ಕ್ಷೇತ್ರವಾದ ಶೃಂಗೇರಿಗೆ. ಅಲ್ಲಿ ನಮಗೆ ನಿರಾಸೆ ಉಂಟಾಯಿತು ಏಕೆಂದರೆ ದೇವಿಯ ದರ್ಶನ ಸಿಗಲಿಲ್ಲ ಆದರೂ ಪರವಾಗಿಲ್ಲ ನಾನು ಬೇಸರಗೊಳ್ಳಲಿಲ್ಲ ಪಿಯುಸಿ ಓದುತ್ತಿರುವಾಗ ವಾರವಾರ ಹೋಗಿ ದೇವಿ ದರ್ಶನ ಮಾಡಿಕೊಂಡು ಬರುತ್ತಿದೆ. ಹಾಗಂತ ಅಲ್ಲಿಯೇ ಸಮಯ ವ್ಯರ್ಥಮಾಡಲಿಲ್ಲ ಸೀದಾ ಹೊರಟಿದ್ದು ನಾವು ಆಗುಂಬೆಗೆ. ಅಲ್ಲಿ ಸೂರ್ಯಾಸ್ತ ನೋಡಿದ್ದಾಯ್ತ. ಬೆಳಗ್ಗೆ ಸೂರ್ಯ ಉದಯಿಸುವ ಮೊದಲು ಊರು ಬಿಟ್ಟಿದ್ವಿ ಈಗ ಸೂರ್ಯಸ್ಥ ಆದಮೇಲೆ.. ಊರು ಸೇರಬೇಕಲ್ಲ!! ಮನಸ್ಸಿನಲ್ಲಿ ಏನೋ ಒಂಥರಾ ಚಂಚಲತೆ ಆದರೂ ಮಲೆನಾಡನ್ನು ಬಿಟ್ಟುಬರಲು ಮನಸ್ಸಿರಲಿಲ್ಲ ಆದರೂ ಒಲ್ಲದ ಮನಸ್ಸಿನಿಂದ ಊರಿನ ದಾರಿ ಹಿಡಿಯಬೇಕಾಯಿತು.
ನಾವೂ ಟೆಲಿಗ್ರಾಮ್ ನಲ್ಲೂ ಇದ್ದೀವಿ! ಕನ್ನಡ.ಟೆಲಿಗ್ರಾಮ್ ಗ್ರೂಪ್ ಜಾಯಿನ್ ಆಗಿ.
ನೀವು ಪ್ರವಾಸ ಹೋಗುವ ತಾಣದ ಮಾಹಿತಿ, ಕನ್ನಡ.ಟ್ರಾವೆಲ್ (Kannada.Travel) ಜಾಲತಾಣದಲ್ಲಿ ಪ್ರಕಟವಾಗುವ ಬರಹಗಳ ವಿವರ, ಅಪರೂಪದ ಟ್ರಾವೆಲರ್ ಗಳ ಪರಿಚಯ, ಪ್ರವಾಸಿ ತಾಣಗಳ ಕುತೂಹಲಕರ ಚಿತ್ರ, ಬರಹ ಎಲ್ಲವೂ ಇಲ್ಲಿ ನಿಮಗೆ ಸಿಗುತ್ತದೆ. ಬನ್ನಿ ಜೊತೆಯಾಗಿ.