ಮ್ಯಾಜಿಕ್ ತಾಣಗಳುವಂಡರ್ ಬಾಕ್ಸ್ವಿಂಗಡಿಸದಸ್ಮರಣೀಯ ಜಾಗ

ಭಾರತದ ಕೇಂದ್ರಾಡಳಿತ ಪ್ರದೇಶಗಳ ಏಳು ಪ್ರವಾಸಿ ತಾಣಗಳು

ಇಂದು ವಿಶ್ವ ಪ್ರವಾಸೋದ್ಯಮ ದಿನ. ಭಾರತದಲ್ಲಿ ಹಲವು ಪ್ರವಾಸಿ ತಾಣಗಳಿವೆ .ಭಾರತದ ಹಲವು ತಾಣಗಳು ವಿದೇಶಿಯರನ್ನು ಕೂಡ ಆಕರ್ಷಿಸುತ್ತದೆ. ಭಾರತ 28 ರಾಜ್ಯ ಹಾಗೂ 9 ಕೇಂದ್ರಾಡಳಿತ ಪ್ರದೇಶಗಳನ್ನು ಹೊಂದಿದೆ. ಭಾರತದ ಕೇಂದ್ರಾಡಳಿತ ಪ್ರದೇಶಗಳ ತಾಣಗಳು ಹೆಚ್ಚಿನ ಪ್ರವಾಸಿಗರನ್ನು ಆಕರ್ಷಿಸುತ್ತದೆ. ಆ ತಾಣಗಳ ಮಾಹಿತಿ ಇಲ್ಲಿದೆ.

ಮಧುರಾ ಎಲ್ ಭಟ್

ಭಾರತವು ಅಂಡಮಾನ್ ಮತ್ತು ನಿಕೋಬಾರ್ ದ್ವೀಪಗಳು , ದಾದ್ರ ಮತ್ತು ನಗರ ಹವೇಲಿ, ಚಂಡೀಗಡ್, ದಮನ್ ಮತ್ತು ದಿಯು ,ಲಕ್ಷದ್ವೀಪ , ಲಡಾಕ್ ,ದೆಹಲಿ ,ಪುದುಚೇರಿ ಮತ್ತು ಜಮ್ಮು ಕಾಶ್ಮೀರ ಸೇರಿದಂತೆ ಒಟ್ಟು 9 ಕೇಂದ್ರಾಡಳಿತ ಪ್ರದೇಶಗಳನ್ನು ಹೊಂದಿದೆ.

ಪ್ರವಾಸೋದ್ಯಮ ದಿನದ ವಿಶೇಷ, ಭಾರತದ ಕೇಂದ್ರಾಡಳಿತ ಪ್ರದೇಶಗಳ ಪ್ರವಾಸಿ ತಾಣಗಳು ಮಾಹಿತಿ ಇಲ್ಲಿದೆ.

ಚಂಡೀಗಡ್

ಇದು ಹರ್ಯಾಣ ಹಾಗೂ ಪಂಜಾಬ್ ರಾಜ್ಯಗಳ ರಾಜಧಾನಿ ಹಾಗೂ ಕೇಂದ್ರಾಡಳಿತವಿರುವ ಪ್ರದೇಶವಾಗಿದೆ. ಇಲ್ಲಿರುವ ಕಲ್ಲಿನ ವಿಶಿಷ್ಟ ಶಿಲ್ಪಗಳ ಉದ್ಯಾನಗಳು ಎಲ್ಲರ ಮನಸ್ಸನ್ನು ತನ್ನತ್ತ ಸೆಳೆಯುತ್ತದೆ. ಅಲ್ಲದೇ ಇಲ್ಲಿರುವ ಸುಖನಾ ಕೆರೆಗೆ ಎಲ್ಲರನ್ನೂ ಆಕರ್ಷಿಸುವ ಪ್ರವಾಸಿ ತಾಣವಾಗಿದೆ.

 Chandigarh

ಅಂಡಮಾನ್ ಮತ್ತು ನಿಕೋಬಾರ್

ಇದು ಬಂಗಾಳ ಕೊಲ್ಲಿಯಲ್ಲಿರುವ ಪ್ರವಸಿ ತಾಣವಾಗಿದೆ. ಶುದ್ಧ ಬಿಳಿ ಮರಳಿನ ಕಡಲ ತೀರಗಳ ಸಮೂಹ ಎಲ್ಲರನ್ನು ಆಕರ್ಷಣೆಗೆ ಒಳಪಡಿಸುತ್ತದೆ. ಎಲ್ಲಿ ನೋಡಿದರಲ್ಲಿ ಹೆಚ್ಚ ಹಸಿರಿನಿಂದ ಕಂಗೊಳಿಸುವ ಈ ದ್ವೀಪವು ವಿವಿಧ ಪ್ರಾಣಿ, ಪಕ್ಷಿ ಸಂಕುಲನಗಳನ್ನು ಒಳಗೊಂಡ ಅದ್ಭುತ ತಾಣವಾಗಿದೆ. ಅಲ್ಲದೇ ಇಲ್ಲಿ ಸ್ಕೂಬಾ ಡೈವಿಂಗ್ ಹಾಗೂ ಸಾಗರದ ಆಳದಲ್ಲಿ ಅನ್ವೇಷಣೆ ನಡೆಸಬಹುದಾಗಿದೆ.

Andaman Nicobar

ದಮನ್ ಮತ್ತು ದಿಯು

ಇವು ಭಾರತದ ಕೇಂದ್ರಾಡಳಿತ ಪ್ರದೇಶಗಳಾಗಿವೆ. ಇಲ್ಲಿ ಅತ್ಯಾಕರ್ಷಕ ಪ್ರವಾಸಿ ತಾಣಗಳಿವೆ. ಸಾರ್ವಜನಿಕ ಉದ್ಯಾನವನ, ಪರ್ಗೊಲ ತೋಟಗಳು, ಮೋತಿ ದಮನ್ ವಿಹಾರ ಉದ್ಯಾನವನ, ಮೋತಿ ದಮನ್ ಜೆಟ್ಟಿ,ಬಾಮ್ ಜೇಸಸ್ ಚರ್ಚ್, ಆವರ್ ಲೇಡಿ ಆಫ್ ಸೀ ಚರ್ಚ್, ಮಿರಸಾಲ್ ಉದ್ಯಾನ, ಮತ್ತು ಜಲಕ್ರೀಡಾ ಪಾರ್ಕ್‍ಗಳು ,ದೀವ್‍ನ ಕೋಟೆ ಮತ್ತು ಪನಿ ಕೊಟ ಕೋಟೆ, ನಗೋವ ಮತ್ತು ಚಕ್ರತೀರ್ಥ ಹೀಗೆ ಹಲವಾರು ಸುಪ್ರಸಿದ್ದ ಪ್ರವಾಸಿ ತಾಣಗಳನ್ನು ಇದು ಹೊಂದಿದೆ.

ನೀವು ಇದನ್ನು ಇಷ್ಟ ಪಡುಬಹುದು :ದಕ್ಷಿಣ ಭಾರತದ 20 ಪ್ರವಾಸಿ ತಾಣಗಳು

Daman and Diu

ಲಕ್ಷ ದ್ವೀಪ

ಇದು ಅರಬ್ಬೀ ಸಮುದ್ರದ ನಡುವೆ ಇರುವ ಒಂದು ದ್ವೀಪ ಸಮೂಹವಾಗಿದೆ. ಮತ್ತು ಭಾರತದ ಅತಿ ಚಿಕ್ಕ ಕೇಂದ್ರಾಡಳಿತ ಪ್ರದೇಶವಾಗಿದೆ. ಈ ಲಕ್ಷ ದ್ವೀಪವನ್ನು ಲಖದೀವ್’, ‘ಮಿನಿಕೋಯ್’ ಮತ್ತು ‘ಅಮಿನ್ ದಿವಿ’ ದ್ವೀಪಗಳು ಎಂದು ಕರೆಯಲಾಗುತ್ತದೆ. ಅಮಿನಿ, ಅಗಟ್ಟಿ, ಅನ್ಡ್ರೊಟ್, ಬಿತ್ರ, ಚೆತ್ಲಾತ್, ಬಂಗಾರಂ, ಕಲ್ಪೇನಿ, ಕದ್ಮತ್, ಕವರತ್ತಿ, ಮಿನಿಕಾಯ್ ಕಿಲ್ತಾನ್, ದ್ವೀಪಗಳು ಲಕ್ಷ ದ್ವೀಪದ ಪ್ರವಾಸಿ ತಾಣಗಳು ಆಗಿವೆ.

 Lakshadweep

ಪಾಂಡಿಚೆರಿ

ಇದು ಭಾರತದ ಕೇಂದ್ರಾಡಳಿತ ಪ್ರದೇಶವಾಗಿದೆ. ಇದಕ್ಕೂ ಮೊದಲು ಪಾಂಡಿಚೆರಿಯನ್ನು ಪುದುಚೆರಿ ಎಂದು ಕರೆಯಲಾಗುತಿತ್ತು. ಪ್ರೊಮೆಂಡೇಡ್, ಪಾರಾಡೈಸ್ ಸೆರೆನಿಟಿ ಹಾಗೂ ಔರೊವಿಲ್ಲೆಯಂತಹ ಸುಪ್ರಸಿದ್ದ ಕಡಲ ಕಿನಾರೆಗಳನ್ನು ಇದು ಹೊಂದಿದೆ. ಗಾಂಧಿ ಪ್ರತಿಮೆ, ಮಾತ್ರಿಮಂದಿರ, ಫ್ರೆಂಚ್ ಯುದ್ಧದ ಸ್ಮರಣಾರ್ಥ ಇರುವ ಕಟ್ಟಡ, ಜೋಸೆಫ್ ಫ್ರಾನ್ಕೋಯಿಸ್ನಂತಹ ಮೂರ್ತಿ ಮತ್ತು ಪ್ರತಿಮೆಗಳನ್ನು ಇದು ಹೊಂದಿದೆ. ವಸ್ತು ಸಂಗ್ರಹಾಲಯ, ರಾಷ್ಟ್ರಿಯ ಉದ್ಯಾನವನ, ರಾಜ್ ನಿವಾಸ್ ಇಲ್ಲಿನ ಆಕರ್ಷಣೀಯ ತಾಣಗಳಾಗಿವೆ.

paandicheri

ಶ್ರೀನಗರ

ಜಮ್ಮು ಕಾಶ್ಮೀರ ಈ ಹಿಂದೆ ರಾಜ್ಯವಾಗಿತ್ತು. 2019ರ ನಂತರ ಜಮ್ಮು ಕಾಶ್ಮೀರ ಕೇಂದ್ರಾಡಳಿತ ಪ್ರದೇಶವಾಗಿತ್ತು. ಶ್ರೀನಗರ ಜಮ್ಮು ಕಾಶ್ಮೀರದ ರಾಜಧಾನಿ. ಇದೊಂದು ಸುಂದರವಾದ ಹಿಮಚ್ಛಾದಿತ ಪ್ರವಾಸಿ ತಾಣವಾಗಿದೆ. ಇಲ್ಲಿನ ಸೂರ್ಯಾಸ್ತವಂತೂ ಎಲ್ಲರನ್ನು ಒಮ್ಮೆ ತನ್ನತ್ತ ಸೆಳೆದುಕೊಳ್ಳುವ ಮನಮೋಹಕ ಸೌಂದರ್ಯವನ್ನು ಹೊಂದಿದೆ. ಇಲ್ಲಿನ ಆಕರ್ಷಣಿಯ ಸ್ಥಳಗಳು ಎಂದರೆ ಮುಘಲ್ ಉದ್ಯಾನ, ದಾಲ್ ಸರೋವರ, ಸೋನ್ಮಾರ್ಗ್, ಮತ್ತು ಗುಲ್ಮಾರ್ಗ್ ನಲ್ಲಿ ಜರುಗುವ ಚಳಿಗಾಲದ ಕ್ರೀಡೆಗಳು.

Shrinagar

ಅಮರನಾಥ

ಇದು ಜಮ್ಮು-ಕಾಶ್ಮೀರ ರಾಜ್ಯದಲ್ಲಿರುವ ಪ್ರಸಿದ್ಧ ತೀರ್ಥ ಯಾತ್ರಾ ಕ್ಷೇತ್ರವಾಗಿದೆ. ಮಂಜುಗಡ್ಡೆಯಿಂದ ರೂಪುಗೊಳ್ಳುವ ಶಿವಲಿಂಗ, ಈ ಗುಹಾ ದೇವಾಲಯದ ವಿಶೇಷತೆಯಾಗಿದೆ. ಪ್ರತಿ ವರ್ಷವೂ ಸಾವಿರ ಸಾವಿರ ಸಂಖ್ಯೆಯಲ್ಲಿ ಹಿಂದೂ ಭಕ್ತರು ಈ ಕ್ಷೇತ್ರಕ್ಕೆ ಭೇಟಿ ನೀಡುತ್ತಾರೆ. ಶ್ರೀನಗರದಿಂದ 145 ಕಿಲೋಮೀಟರ್ ದೂರದಲ್ಲಿದೆ ಮತ್ತು ಸಮುದ್ರಮಟ್ಟದಿಂದ 4175 ಮೀಟರ್ ಎತ್ತರದಲ್ಲಿ ಈ ಹಿಮಲಿಂಗ ಸ್ಥಾಪನೆಯಾಗಿದೆ.

ನಾವೂ ಟೆಲಿಗ್ರಾಮ್ ನಲ್ಲೂ ಇದ್ದೀವಿ! ಕನ್ನಡ.ಟೆಲಿಗ್ರಾಮ್ ಗ್ರೂಪ್ ಜಾಯಿನ್ ಆಗಿ. 

ನೀವು ಪ್ರವಾಸ ಹೋಗುವ ತಾಣದ ಮಾಹಿತಿ, ಕನ್ನಡ.ಟ್ರಾವೆಲ್ (Kannada.Travel) ಜಾಲತಾಣದಲ್ಲಿ ಪ್ರಕಟವಾಗುವ ಬರಹಗಳ ವಿವರ, ಅಪರೂಪದ ಟ್ರಾವೆಲರ್ ಗಳ ಪರಿಚಯ, ಪ್ರವಾಸಿ ತಾಣಗಳ ಕುತೂಹಲಕರ ಚಿತ್ರ, ಬರಹ ಎಲ್ಲವೂ ಇಲ್ಲಿ ನಿಮಗೆ ಸಿಗುತ್ತದೆ. ಬನ್ನಿ ಜೊತೆಯಾಗಿ.

Related Articles

Leave a Reply

Your email address will not be published. Required fields are marked *

Back to top button