ಕಮಲಶಿಲೆಯಲ್ಲಿ ಲಿಂಗ ರೂಪದಲ್ಲಿ ನೆಲೆ ನಿಂತ ದೇವಿ
ಉಡುಪಿಯನ್ನು ಟೆಂಪಲ್ ಸಿಟಿ ಎಂದು ಕೆಲವರು ಹೇಳುತ್ತಾರೆ. ಕೃಷ್ಣನ ನಗರಿ ಉಡುಪಿ ಜಿಲ್ಲೆಯಲ್ಲಿ ಹಲವು ದೇವಾಲಯಗಳಿವೆ . ಇಲ್ಲಿನ ದೇವಾಲಯ ಒಂದು ರೀತಿ ಮನಸ್ಸಿಗೆ ಶಾಂತಿ ನೀಡುತ್ತದೆ. ಉಡುಪಿ ಜಿಲ್ಲೆಯ ದೇವಾಲಯ ಮನಸ್ಸು ,ಕಣ್ಣುಗಳಿಗೆ ಆಹ್ಲಾದಕರ ಅನುಭವ ನೀಡುತ್ತದೆ . ಐತಿಹಾಸಿಕ ಘಟನೆಗಳು ಇಲ್ಲಿನ ದೇವಾಲಯಾಗಳೊಂಡಿದಿಗೆ ಬೆಸೆದು ಕೊಂಡು ಬಂದಿದೆ. ಕೃಷ್ಣನ ಊರಿನ ದೇವಾಲಯವನ್ನು ನೋಡಲೆಂದು ಹಲವು ಪ್ರವಾಸಿಗರು ಹೊರ ರಾಜ್ಯಗಳಿಂದ ಕೂಡ ಇಲ್ಲಿಗೆ ಆಗಮಿಸುತ್ತಾರೆ. ಅಂತಹ ದೇವಾಲಯಗಳಲ್ಲಿ ಸುತ್ತಲೂ ಹಚ್ಚ ಹಸಿರಿನ ತುಂಬಿರುವ ಪ್ರಶಾಂತ ಊರಿನ ನಡುವೆ ಇರುವ ಕಮಲಶಿಲೆ ಕೂಡ ಒಂದು.
ನವ್ಯಶ್ರೀ ಶೆಟ್ಟಿ
ಕಮಲಶಿಲೆ , ಈ ಹೆಸರನ್ನು ಕೇಳದವರ ಸಂಖ್ಯೆ ಅತಿ ವಿರಳ. ಕಡಲ ನಗರಿ ಉಡುಪಿ ಜಿಲ್ಲೆಯ ಕುಂದಾಪುರ ತಾಲೂಕಿನ ಸಿದ್ದಾಪುರ ಸಮೀಪದಲ್ಲಿದೆ ಕಮಲ ಶಿಲೆ. ಅದೊಂದು ಹಚ್ಚ ಹಸಿರಿನ ಊರಿನ ನಡುವೆ ಪ್ರಶಾಂತ ವಾಗಿರುವ ತಾಣ. ಅಲ್ಲಿನ ಊರು ಪ್ರವಾಸಿಗರು ಮತ್ತೆ ಮತ್ತೆ ಬರುವಂತೆ ಆಕರ್ಷಿಸುವ ಸೆಳೆತ ಹೊಂದಿದೆ. ಕಮಲಶಿಲೆ ಕುಬ್ಜ ನದಿಯ ತಟದಲ್ಲಿ ನೆಲೆ ನಿಂತಿದೆ. ಕಮಲ ಶಿಲೆಯ ಅನತಿ ದೂರದಲ್ಲಿರುವ ಸುಪಾರ್ಶ್ವ ದೇವಾಲಯದ ಇನ್ನೊಂದು ಆಕರ್ಷಣೆ.
ಕಮಲ ಶಿಲೆಯ ಅಸುಪಾಸಿನಲ್ಲಿ ನಿತ್ಯ ಹರಿದ್ವರ್ಣ ಕಾಡುಗಳು ಕಾಣ ಸಿಗುತ್ತದೆ. ಇಲ್ಲಿಗೆ ಭೇಟಿ ನೀಡುವವರಿಗೆ ಪ್ರಕೃತಿ ಕೂಡ ಖುಷಿ ನೀಡುತ್ತದೆ. ಇಲ್ಲಿ ಬ್ರಾಹ್ಮಿ ದುರ್ಗಾಪರಮೇಶ್ವರಿ ದೇವಿ ನೆಲೆಸಿದ್ದಾಳೆ. ಕಮಲಶಿಲೆ ಕುಬ್ಜ ನದಿ ಹಾಗೂ ನಾಗತೀರ್ಥಗಳ ಸಂಗಮ ಸ್ಥಳ. ಕುಬ್ಜೆ ಮಳೆಗಾಲದ ಸಮಯದಲ್ಲಿ ತುಂಬಿ ಹರಿಯುತ್ತಾಳೆ . ಕುಬ್ಜೆಯ ದಡದಲ್ಲಿರುವ ಕಮಲಶಿಲೆ ದೇವಾಲಯದ ಒಳಗೆ ಮಳೆಗಾಲದ ಸಮಯದಲ್ಲಿ ನೀರು ಹರಿಯುತ್ತದೆ. ಇಲ್ಲಿ ಬ್ರಾಹ್ಮಿ ದುರ್ಗಾಪರಮೇಶ್ವರಿ ಪ್ರಧಾನ ದೇವತೆ . ಆದರೆ ದೇವಾಲಯದ ಸುತ್ತ ಗಣಪತಿ , ವೀರಭದ್ರ ,ಹೊಸಮ್ಮ ,ನವಗ್ರಹಗಳು ವಿಷ್ಣು ಮುಂತಾದ ದೇವತೆಗಳಿವೆ. ಇಲ್ಲಿ ಲಿಂಗ ರೂಪದಲ್ಲಿ ದೇವಿ ಪೂಜಿಸಲ್ಪಟ್ಟದ್ದಾಳೆ.
ನೀವು ಇದನ್ನು ಇಷ್ಟಪಡಬಹುದು;ಉಡುಪಿಯ ಗುಡ್ಡಟ್ಟುವಿನಲ್ಲಿದೆ ಕಲ್ಲು ಬಂಡೆಗಳ ನಡುವೆ ಮೂಡಿಬಂದ ಗಣಪ.
ಸುಪಾರ್ಶ್ವ ಗುಹೆ
ಕಮಲ ಶಿಲೆ ದೇವಾಲಯದಿಂದ 2ಕಿಮೀ ದೂರದಲ್ಲಿ ಆದಿ ಗುಹಾಲಯ ವಿದೆ. ಅದಕ್ಕೆ ಸುಪಾರ್ಶ್ವ ಎಂದು ಹೆಸರು. ಇಲ್ಲಿಗೆ ಹುಲಿಗೆ ಕೆಲವು ಸಂಧರ್ಭದಲ್ಲಿ ಆಗಮಿಸುತ್ತದೆ ಎನ್ನುವ ನಂಬಿಕೆಯಿದೆ. ಗುಹೆಯ ಎದುರಿಗೆ ಗುಹೆಯ ಬಾಯಿಯಂತೆ ಕೆಳಕ್ಕಿಳಿಯಲು ಮೆಟ್ಟಿಲುಗಳಿವೆ. ಈ ಗುಹೆಗೆ ಸುಪಾರ್ಶ್ವ ಗುಹೆಯೆಂದು ಹೆಸರು ಬರಲು ಪುರಾಣ ಕಥೆಯೊಂದಿದೆ.ಸುಪಾರ್ಶ್ವ ಅನ್ನುವ ರಾಜ ತಪಸ್ಸನ್ನು ಮಾಡಲು ಆರಿಸಿಕೊಂಡು ಸ್ಥಳವಂತೆ ಇದು. ಪ್ರಶಾಂತತೆಯನ್ನು ಆವರಿಸುವ ಈ ಜಾಗದಲ್ಲಿ ರಾಜ ತನ್ನ ತಪಸ್ಸನ್ನು ನಿರ್ವಿಘ್ನವಾಗಿ ಪೂರೈಸಲು ಸಹಾಯ ಮಾಡುವಂತೆ ಶಿವನನ್ನು ಕೇಳಿ ಕೊಳ್ಳುತ್ತಾನೆ . ಈ ವೇಳೆ ಶಿವ ಆಶೀರ್ವದಿಸುತ್ತಾನೆ. ಸುಪಾರ್ಶ್ವ ರಾಜನ ಕಾರಣದಿಂದ ಈ ಗುಹೆಗೆ ಸುಪಾರ್ಶ್ವ ಗುಹೆ ಎನ್ನುವ ಹೆಸರು ಬಂತು.
ಆದಿ ಗುಹಾಲಯದಲ್ಲಿ ಪೂಜೆ ಮಾಡುವವರು ಬಳೆಗಾರರು. ಗುಹೆಯ ಒಳಗೆ ಸಂಪೂರ್ಣ ಕತ್ತಲು ಅವರಿಸುವುದರಿಂದ ದೇವಾಲಯದಲ್ಲಿ ನೀವು ಗುಹೆಗೆ ಹೋಗಬೇಕು ಎಂದು ಹೇಳಿದರೆ ,ಗುಹೆಯ ಬಗ್ಗೆ ತಿಳಿದಿರುವವರನ್ನು ಅವರೇ ಕಳುಹಿಸಿ ಕೊಡುತ್ತಾರೆ. ಗುಹೆ ಅಪಾಯಕಾರಿ ಸ್ಥಳ ಅಲ್ಲದಿದ್ದರೂ ಮೊದಲ ಬಾರಿ ಹೋಗುವವರು ಎಚ್ಚರ ವಹಿಸುವುದು ಒಳ್ಳೆಯದು.
ನಿಮಗೆ ಕಮಲಶಿಲೆಯ ಪರಿಸರದಲ್ಲಿ ನಾಗತೀರ್ಥಗಳು ಕಾಣ ಸಿಗುತ್ತದೆ. ನಾಗತೀರ್ಥಗಳ ನೀರು ಹಾಗೆ ಸಾಗಿ ಕುಬ್ಜ ನದಿಯನ್ನು ಸೇರುತ್ತದೆ ಎನ್ನುವುದು ಕೆಲವರ ಮಾತು. ಮಳೆಗಾಲದ ಕಾಲದಲ್ಲಿ ತುಂಬಿ ಹರಿಯುವ ಕುಬ್ಜೆ , ದೇವಿಯ ಪಾದದ ತನಕ ಬಂದು ಲಿಂಗವನ್ನು ತೊಳೆಯುತ್ತದೆ ಎನ್ನುವುದು ನಂಬಿಕೆ. ಕಮಲ ಶಿಲೆ ದೇವಾಲಯ ಕುಂದಾಪುರದಿಂದ 35 ಕಿಮೀ ದೂರದಲ್ಲಿದೆ. ಸಿದ್ದಾಪುರದಿಂದ 6 ಕಿಮೀ ಅಂತರ. ನೀವು ಕೊಲ್ಲೂರು ಮಾರ್ಗವಾಗಿ ಕೂಡ ಕಮಲಶಿಲೆ ತಲುಪಬಹುದು. ಕೊಲ್ಲೂರಿನಿಂದ 40ಕಿಮೀ ದೂರ. ನೀವು ಉಡುಪಿ ಬಂದಾಗ ಒಮ್ಮೆ ಭೇಟಿ ನೀಡಿ.
ನಾವೂ ಟೆಲಿಗ್ರಾಮ್ ನಲ್ಲೂ ಇದ್ದೀವಿ! ಕನ್ನಡ.ಟೆಲಿಗ್ರಾಮ್ ಗ್ರೂಪ್ ಜಾಯಿನ್ ಆಗಿ.
ನೀವು ಪ್ರವಾಸ ಹೋಗುವ ತಾಣದ ಮಾಹಿತಿ, ಕನ್ನಡ.ಟ್ರಾವೆಲ್ (Kannada.Travel) ಜಾಲತಾಣದಲ್ಲಿ ಪ್ರಕಟವಾಗುವ ಬರಹಗಳ ವಿವರ, ಅಪರೂಪದ ಟ್ರಾವೆಲರ್ ಗಳ ಪರಿಚಯ, ಪ್ರವಾಸಿ ತಾಣಗಳ ಕುತೂಹಲಕರ ಚಿತ್ರ, ಬರಹ ಎಲ್ಲವೂ ಇಲ್ಲಿ ನಿಮಗೆ ಸಿಗುತ್ತದೆ. ಬನ್ನಿ ಜೊತೆಯಾಗಿ.