ವಿಂಗಡಿಸದಸ್ಮರಣೀಯ ಜಾಗ

ಕರ್ನಾಟಕದ 4 ನಯನ ಮನೋಹರ ಜಲಪಾತಗಳು

ಕರ್ನಾಟಕದ ಫಾಲ್ಸ್ ಗಳು ಎಂದಾಗ ನಮಗೆ ಜೋಗ ,ಅಬ್ಬಿ ,ಸಿರಿಮನೆ ಫಾಲ್ಸ್ ಗಳಂತಹ ಪ್ರಸಿದ್ದ ಫಾಲ್ಸ್ ಗಳು ತಟ್ಟನೆ ನೆನಪಾಗುತ್ತದೆ. ಅವುಗಳ ಜೊತೆಗೆ ಕರ್ನಾಟಕದಲ್ಲಿ ಹೆಚ್ಚಿಗೆ ಪ್ರಸಿದ್ದಿ ಹೊಂದದ ,ತನ್ನ ನಯನ ಮನೋಹರ ದೃಶ್ಯಗಳಿಂದ ಪ್ರವಾಸಿಗರನ್ನು ಆಕರ್ಷಿಸುವ ಫಾಲ್ಸ್ ಗಳಿವೆ. ಕರ್ನಾಟಕದಲ್ಲಿ ಅತಿ ಹೆಚ್ಚು ಅನ್ವೇಷಣೆಗೊಳ್ಳದ ,ಆದರೆ ಪ್ರವಾಸಿಗರನ್ನು ಸೆಳೆಯುವ ಕೆಲವು ಜಲಪಾತಗಳಿವು. ನೀವು ಒಮ್ಮೆ ಭೇಟಿ ನೀಡಿ.

ನವ್ಯಶ್ರೀ ಶೆಟ್ಟಿ

ಪ್ರವಾಸಿಗರನ್ನು ಆಕರ್ಷಿಸುತ್ತಿರುವ , ಕರ್ನಾಟಕದ ನಾಲ್ಕು ಜಲಪಾತಗಳಿವು.

ಕುಂಚಿಕಲ್ ಜಲಪಾತ

ಕುಂಚಿಕಲ್ ಜಲಪಾತ ಭಾರತದ ಅತಿ ಎತ್ತರದ ಜಲಪಾತಗಳಲ್ಲಿ ಒಂದು. ಸುಮಾರು 1500 ಅಡಿ ಎತ್ತರದಲ್ಲಿದೆ ಕುಂಚಿಕಲ್ ಜಲಪಾತ . ಶಿವಮೊಗ್ಗ ಮತ್ತು ಉಡುಪಿ ಜಿಲ್ಲೆಯ ಗಡಿಭಾಗದಲ್ಲಿರುವ ಹೊಸನಗರ ತಾಲೂಕಿನ ಮಾಸ್ತಿಕಟ್ಟೆಯ ಬಳಿ ನೀವು ಕುಂಚಿಕಲ್ ಜಲಪಾತ ನೋಡಬಹುದು. ಈ ಜಲಪಾತ ವಾರಾಹಿ ನದಿಯಿಂದ ಸೃಷ್ಟಿಯಾಗಿದ್ದು. ಮುಂಗಾರಿನ ಸಮಯದಲ್ಲಿ ಮಾತ್ರ ಹರಿಯುವ ಈ ಫಾಲ್ಸ್ ನೋಡುಗರಲ್ಲಿ ಬೆರಗು ಮೂಡಿಸುತ್ತದೆ. ಭೋರ್ಗರೆಯುತ್ತಾ ಧುಮುಕುವ ಜಲಪಾತಗಳು ಪ್ರವಾಸಿಗರನ್ನು ಆಕರ್ಷಿಸುತ್ತದೆ. ಮಳೆಗಾಲದ ಸಮಯದಲ್ಲಿ ನೀವು ಭೇಟಿ ನೀಡಬಹುದಾದ ಜಾಗಗಳ ಪಟ್ಟಿಯಲ್ಲಿ ಕುಂಚಿಕಲ್ ಜಲಪಾತ ಕೂಡ ಜೊತೆಯಾಗಲಿ.

Kunchikal Falls

ಬರ್ಕಾನ ಜಲಪಾತ

ಬರ್ಕಾನ ಜಲಪಾತವು ಅತಿ ಹೆಚ್ಚು ಅನ್ವೇಷಣೆಗೊಳ್ಳದ ಜಲಪಾತಗಳಲ್ಲಿ ಒಂದು. ಇದು ಸೀತಾ ನದಿಯಿಂದ ರೂಪುಗೊಂಡಿದ್ದು ,850 ಅಡಿ ಎತ್ತರದಲ್ಲಿದೆ. ದುಮುಕ್ಕಿ ಹರಿಯುವ ಈ ಜಲ ಪಾತವು ಪಶ್ಚಿಮ ಘಟ್ಟದ ದಟ್ಟ ಕಾಡುಗಳಿಂದ ಸುತ್ತುವರೆದಿದೆ. ಕಡಿದಾದ ಹಾದಿಯ ನಡುವೆ ಇರುವ ಈ ಜಲಪಾತವನ್ನು ನಡೆದುಕೊಂಡು ಹೋಗಿ ಆಥವಾ ದ್ವಿಚಕ್ರ ವಾಹನಗಳ ಮೂಲಕ ಹೋಗಿ ನೋಡಬಹುದು. ಬರ್ಕಾನ ಜಲಪಾತವು ಮಳೆಗಾಲದಲ್ಲಿ ಮಾತ್ರ ಹರಿಯುವ ಜಲಪಾತವಾಗಿದ್ದು, ಜೋರಾಗಿ ಮಳೆಯಾಗುವ ಸಮಯದಲ್ಲಿ ಮಾತ್ರ ಈ ಜಲಪಾತಕ್ಕೆ ಜೀವಂತಿಕೆ ಬರುತ್ತದೆ. ಬರ್ಕಾನ ಜಲಪಾತವು ಮಲೆನಾಡು ಶಿವಮೊಗ್ಗ ಜಿಲ್ಲೆಯಲ್ಲಿದೆ. ಆಗುಂಬೆಯಿಂದ ಕೇವಲ 7ಕಿಮೀ ದೂರದಲ್ಲಿದೆ.

ನೀವು ಇದನ್ನು ಇಷ್ಟ ಪಡುಬಹುದು: ಉಡುಪಿಯಲ್ಲಿ ನೀವು ಅಡ್ಡಾಡಬೇಕಾದ 4 ಕಡಲ ತೀರಗಳು

Barkana Falls

ಬಂಡಾಜೆ ಜಲಪಾತ

ಈ ಜಲಪಾತ ಪಶ್ಚಿಮ ಘಟ್ಟಗಳ ಸಾಲಿನಲ್ಲಿ ನೆಲೆಸಿದ್ದು , ನಿತ್ಯ ಹರಿದ್ವರ್ಣ ಕಾಡುಗಳಿಂದ ಸುತ್ತುವರೆದಿದೆ. ಈ ಜಲಪಾತ ನೇತ್ರಾವತಿ ನದಿಯಿಂದ ಉಗಮವಾಗಿದ್ದು. ಚಾರಣದ ಮೂಲಕ ಈ ಜಲಪಾತವನ್ನು ತಲುಪಬಹುದು. 200ಅಡಿ ಎತ್ತರದಿಂದ ಹರಿಯುವ ಈ ಫಾಲ್ಸ್ ಕರ್ನಾಟಕದಲ್ಲಿ ಹೆಚ್ಚು ಪ್ರವಾಸಿಗರನ್ನು ಆಕರ್ಷಿಸುವ ಜಲಪಾತಗಳಲ್ಲಿ ಒಂದು. ದಕ್ಷಿಣ ಕನ್ನಡ ಜಿಲ್ಲೆಯಲ್ಲಿರುವ ಈ ಜಲಪಾತವನ್ನು ಬಂಡಾಜೆ ಅರ್ಬಿ ಎಂದು ಕರೆಯುತ್ತಾರೆ. ನೀವು ಮಾರ್ಗದರ್ಶಕರ ಸಹಾಯದಿಂದ ಬಂಡಾಜೆ ಫಾಲ್ಸ್ ಗೆ ಚಾರಣ ಮಾಡಬಹುದು. ಆದರೆ , ಅನುಮತಿ ಅಗತ್ಯ. ಈ ಜಲಪಾತವನ್ನು ತಲುಪಲು ಚಾರ್ಮಾಡಿ ಮಾರ್ಗದಲ್ಲಿ ಹೋಗಿ , ಸೋಮಂತಡ್ಕ ಹಾದಿಯಲ್ಲಿ ಕದಿರುಡಿಯವರ ಎಂಬ ಹಳ್ಳಿಯನ್ನು ತಲುಪಬೇಕು. ಆ ಹಳ್ಳಿಯಿಂದ 10ಕಿಮೀ ಚಾರಣ ಮಾಡಿದರೆ ನೀವು ಬಂಡಾಜೆ ಜಲಪಾತ ನೋಡಬಹುದು.

 Bandaje Water Falls

ವಿಭೂತಿ ಜಲಪಾತ

ವಿಭೂತಿ ಜಲಪಾತ ಉತ್ತರಕನ್ನಡ ಜಿಲ್ಲೆಯ ಶಿರಸಿಯಿಂದ 50ಕಿಮೀ ದೂರದಲ್ಲಿದೆ. ಉತ್ತರಕನ್ನಡ ಜಿಲ್ಲೆಯಲ್ಲಿರುವ ಹಲವು ಪ್ರವಾಸಿ ತಾಣಗಳಲ್ಲಿ ವಿಭೂತಿ ಫಾಲ್ಸ್ ಕೂಡ ಒಂದು. ದೊಡ್ಡ ಬಂಡೆಗಳು ಮತ್ತು ಸುಣ್ಣದ ಕಲ್ಲಿನ ನಿಕ್ಷೇಪಗಳಿಂದ ಆವೃತವಾದ ಈ ಜಲಪಾತದ ಪ್ರವಾಸಿಗರನ್ನು ಸೆಳೆಯುತ್ತಿದೆ. ಗ್ರಾಮೀಣ ಭಾಗದಲ್ಲಿರುವ ಈ ಜಲಪಾತ ರಜೆಯ ದಿನಗಳಲ್ಲಿ ಅತಿ ಹೆಚ್ಚು ಪ್ರವಾಸಿಗರನ್ನು ಆಕರ್ಷಿಸುತ್ತದೆ. ಈ ಫಾಲ್ಸ್ ಸುಮಾರು 150 ಅಡಿ ಎತ್ತರದಲ್ಲಿದೆ. ಮಾಬಗೆ ಎನ್ನುವ ಪುಟ್ಟ ಊರಿನಲ್ಲಿರುವ ಈ ಜಲಪಾತ ತಲುಪಲು ನೀವು ಕಾಡು ಹಾದಿಯ ಮೂಲಕ 1ಕಿಮೀ ಚಾರಣ ಮಾಡಿ ಸಾಗಬೇಕು

Vibhuti Falls

ಇವುಗಳು ಮಾತ್ರವಲ್ಲ ಕರ್ನಾಟಕದ ಹೆಚ್ಚು ಅನ್ವೇಷಿಸಿದ ಹಲವು ಫಾಲ್ಸ್ ಗಳಿವೆ. ಆ ಜಲಪಾತಗಳು ಧುಮ್ಮಿಕ್ಕಿ ಹರಿಯುವ ತನ್ನ ಸೌಂದರ್ಯದಿಂದ ಹಲವು ಪ್ರವಾಸಿಗರನ್ನು ಸದ್ದಿಲ್ಲದೆ ಆಕರ್ಷಿಸುತ್ತಿದೆ.

ನಾವೂ ಟೆಲಿಗ್ರಾಮ್ ನಲ್ಲೂ ಇದ್ದೀವಿ! ಕನ್ನಡ.ಟೆಲಿಗ್ರಾಮ್ ಗ್ರೂಪ್ ಜಾಯಿನ್ ಆಗಿ. 

ನೀವು ಪ್ರವಾಸ ಹೋಗುವ ತಾಣದ ಮಾಹಿತಿ, ಕನ್ನಡ.ಟ್ರಾವೆಲ್ (Kannada.Travel) ಜಾಲತಾಣದಲ್ಲಿ ಪ್ರಕಟವಾಗುವ ಬರಹಗಳ ವಿವರ, ಅಪರೂಪದ ಟ್ರಾವೆಲರ್ ಗಳ ಪರಿಚಯ, ಪ್ರವಾಸಿ ತಾಣಗಳ ಕುತೂಹಲಕರ ಚಿತ್ರ, ಬರಹ ಎಲ್ಲವೂ ಇಲ್ಲಿ ನಿಮಗೆ ಸಿಗುತ್ತದೆ. ಬನ್ನಿ ಜೊತೆಯಾಗಿ.

Related Articles

Leave a Reply

Your email address will not be published. Required fields are marked *

Back to top button