ಗಾಂಧಿಯ ಹೆಸರಿನಲ್ಲಿರುವ 9 ವಸ್ತು ಸಂಗ್ರಹಾಲಯಗಳು.
ಇಂದು ಅಕ್ಟೋಬರ್ 2, ಗಾಂಧಿ ಜಯಂತಿ. ರಾಷ್ಟ್ರಪಿತ ಗಾಂಧೀಜಿಯ ಹುಟ್ಟಿದ ದಿನ. ಇಂದು ಗಾಂಧಿ ನಮ್ಮೊಂದಿಗೆ ಇಲ್ಲ. ಆದರೆ ಗಾಂಧೀಜಿಯ ನೆನಪುಗಳನ್ನು ನಮಗೆ ಸೃಷ್ಟಿಸಿ ಕೊಡುವ ಹಲವು ಸ್ಮಾರಕಗಳು , ಮ್ಯೂಸಿಯಂ ಭಾರತದಲ್ಲಿದೆ. ಅವುಗಳನ್ನು ನಾವು ಇಂದಿಗೂ ಕೂಡ ನೋಡಬಹುದು. ಗಾಂಧಿಯ ಇರುವಿಕೆಯನ್ನು ನಮಗೆ ನೆನಪಿಸುವ ವಸ್ತು ಸಂಗ್ರಹಾಲಯಗಳಿವು.
ನವ್ಯಶ್ರೀ ಶೆಟ್ಟಿ
ರಾಷ್ಟ್ರಪಿತ ಗಾಂಧೀಜಿಯ ಜನ್ಮ ದಿನದ ವಿಶೇಷ , ಗಾಂಧೀಜಿಯ ನೆನಪುಗಳನ್ನು ಸಾರುವ ಮ್ಯೂಸಿಯಂಗಳ ಮಾಹಿತಿ ನಿಮಗಾಗಿ.
ಗಾಂಧಿಯ ನೆನಪುಗಳನ್ನು ಸಾರುವ ಈ ಜಾಗಗಳಿಗೆ ನೀವು ಕೂಡ ಭೇಟಿ ನೀಡಬಹುದು .
ಸಬರಮತಿ ಮ್ಯೂಸಿಯಂ ಮತ್ತು ಆಶ್ರಮ,ಗುಜರಾತ್. (Sabaramati Ashram and musem ,Gujarat)
ಸಬರಮತಿ ಆಶ್ರಮ ಮತ್ತು ಬಾಪುಗಿದ್ದ ನಂಟಿನ ಬಗ್ಗೆ ಎಲ್ಲರಿಗೂ ಗೊತ್ತಿರುವ ಸಂಗತಿ. ನಿಮಗೆ ಇಂದಿಗೂ ಕೂಡ ಸಬರಮತಿ ಆಶ್ರಮ ಗಾಂಧೀಜಿಯ ನೆನಪುಗಳನ್ನು ಸ್ಮರಿಸುವಂತೆ ಇದೆ. ಸಬರಮತಿ ಮ್ಯೂಸಿಯಂ ಹಾಗೂ ಆಶ್ರಮ ಇರುವುದು ಗುಜರಾತ್ ರಾಜ್ಯದಲ್ಲಿ. ಗುಜರಾತ್ ರಾಜ್ಯದ ಅಹಮದಬಾದ್ ನ ಸಬರಮತಿ ಪ್ರದೇಶದಲ್ಲಿ , ಸಬರಮತಿ ನದಿ ದಂಡೆಯ ಮೇಲೆ ಈ ಆಶ್ರಮವಿದೆ. ಸಬರಮತಿ ಆಶ್ರಮ ಗಾಂಧಿ ಮತ್ತು ಕಸ್ತೂರ್ಬಾ ಗಾಂಧಿ 12 ವರ್ಷಗಳ ಕಾಲ ವಾಸವಿದ್ದ ಜಾಗ. ಈ ಆಶ್ರಮದಲ್ಲಿ ಗಾಂಧಿ ಸ್ಮಾರಕ್ ಸಂಗ್ರಹಾಲಯ ಎನ್ನುವ ವಸ್ತು ಸಂಗ್ರಹಾಲಯ ಇದೆ.
ಕೀರ್ತಿ ಮಂದಿರ ಮತ್ತು ಮ್ಯೂಸಿಯಂ , ಗುಜರಾತ್ (kirti mandir and musem ,Gujarat)
ಗಾಂಧೀಜಿಯ ಮನೆ ಬಳಕೆಯ ವಸ್ತುಗಳು ಹಾಗೂ ಗಾಂಧಿಯ ಹಳೆಯ ಫೋಟೋಗಳ ಸಂಗ್ರಹ ಇಲ್ಲಿದೆ. ಗಾಂಧಿಯ ನೆನಪುಗಳನ್ನು ಮೆಲುಕು ಹಾಕುವ ಈ ಜಾಗ ಗಾಂಧಿಯ ಹುಟ್ಟೂರು ಗುಜರಾತ್ ರಾಜ್ಯದ ಪೊರಬಂದರಿನಲ್ಲಿದೆ. ಕಸ್ತೂರ್ಬಾ ಮತ್ತು ಗಾಂಧೀಜಿಯ ಫೋಟೋ ,ಗಾಂಧಿ ಸೇರಿದಂತೆ ಹಲವು ಲೇಖಕರು ಬರೆದ ಪುಸ್ತಕಗಳನ್ನು ನೀವು ಇಲ್ಲಿ ನೋಡಬಹುದು .
ಗಾಂಧಿ ಸ್ಮೃತಿ, ದೆಹಲಿ (gandhi smriti ,Dehli)
ಗಾಂಧಿಯ ಸಾಯುವ ಮುನ್ನ 144 ದಿನಗಳನ್ನು ತನ್ನ ಪತ್ನಿಯೊಂದಿಗೆ ಕಳೆದಿದ್ದ ಜಾಗವಿದು. ಈ ಗಾಂಧಿ ಸ್ಮೃತಿ ಇರುವುದು ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ. ಈ ಸಂಗ್ರಹಾಲಯ ಗಾಂಧಿ ನೆನಪಿನಲ್ಲಿ ಅವರಿಗೆ ಅರ್ಪಣೆಯಾಗಿದ್ದು. ಈ ಹಿಂದೆ ಗಾಂಧಿ ಸ್ಮೃತಿ ಬ್ಯುಸಿನೆಸ್ ಐಕಾನ್ ಬಿರ್ಲಾ ಹೌಸ್ ಎಂಬ ಹೆಸರಿನಲ್ಲಿತ್ತು. ಸೋಮವಾರ ಹಾಗೂ ರಾಷ್ಟ್ರೀಯ ರಜಾ ದಿನಗಳನ್ನು ಹೊರತುಪಡಿಸಿ ಉಳಿದ ಎಲ್ಲ ದಿನಗಳಲ್ಲಿ ಗಾಂಧಿ ಸ್ಮೃತಿ ಪ್ರವಾಸಿಗರಿಗೆ ತೆರೆದುಕೊಂಡು ಇರುತ್ತದೆ.
ಗಾಂಧಿ ಸ್ಮಾರಕ ಸಂಗ್ರಹಾಲಯ,ಬಿಹಾರ. ( Gandhi smarak sangrahalaya , Bihar)
ಸ್ವಾತಂತ್ರ್ಯ ಚಳುವಳಿಯ ಸಮಯದಲ್ಲಿ ಬಿಹಾರಕ್ಕೆ ಗಾಂಧಿಯ ಪಾತ್ರ ಹಾಗೂ ಗಾಂಧಿಯ ತತ್ವಗಳನ್ನು ಸಾರುವ ಗಾಂಧಿ ಸ್ಮಾರಕ ಸಂಗ್ರಹಾಲಯ ಬಿಹಾರ ರಾಜ್ಯದ ಪಾಟ್ನಾದಲ್ಲಿದೆ . ಈ ಗಾಂಧಿ ಸ್ಮಾರಕ ಸಂಗ್ರಹಾಲಯ ಪ್ರಾರಂಭವಾಗಿದ್ದು 1967 ರಲ್ಲಿ. ಗಾಂಧಿಯ ಫೋಟೋ,ಜೀವನ ತತ್ವ ,ಸಂದೇಶಗಳು ಸೇರಿದಂತೆ ಬಾಪುವಿನ ಜೀವನದ ಹಲವು ಘಟನೆಗಳ ನೆನಪುಗಳ ಸಂಗ್ರಹ ಇಲ್ಲಿದೆ.
ಗಾಂಧಿ ನ್ಯಾಷನಲ್ ಸೊಸೈಟಿ, ಮಹಾರಾಷ್ಟ್ರ ( Gandhi National society ,Maharashtra)
ಗಾಂಧಿಯ ವೈಯುಕ್ತಿಕ ವಸ್ತುಗಳು ಹಾಗೂ ಹಳೆಯ ಫೋಟೋಗಳು ಇಲ್ಲಿವೆ. ಗಾಂಧಿ ನ್ಯಾಷನಲ್ ಸೊಸೈಟಿ ಮಹಾರಾಷ್ಟ್ರ ರಾಜ್ಯದ ಪುಣೆಯಲ್ಲಿದೆ. ಸ್ವಾತಂತ್ರ್ಯ ಚಳುವಳಿಯ ಹೋರಾಟದಲ್ಲಿ ,ಹೋರಾಟದ ಪ್ರಮುಖ ಕೇಂದ್ರಗಳಲ್ಲಿ ಒಂದಾಗಿದ್ದ ಈ ಜಾಗದಲ್ಲಿ ನಿರ್ಮಾಣವಾಗಿರುವ ಗಾಂಧಿ ನ್ಯಾಷನಲ್ ಸೊಸೈಟಿ ಸಂಗ್ರಹಾಲಯ ಗಾಂಧೀಜಿಯ ವೈಯುಕ್ತಿಕ ಹಾಗೂ ಸ್ವಾತಂತ್ರ್ಯ ಹೋರಾಟದ ಹೆಜ್ಜೆ ಗುರುತಿನ ಹಲವು ವಸ್ತುಗಳ ಸಂಗ್ರಹ ಇಲ್ಲಿದೆ .
ನೀವು ಇದನ್ನು ಇಷ್ಟ ಪಡುಬಹುದು: ರವೀಂದ್ರನಾಥ ಟಾಗೋರರಿಗೂ ಕಾರವಾರಕ್ಕೂ ಹತ್ತಿರದ ನಂಟು: ಟಾಗೋರ್ ಹುಟ್ಟುಹಬ್ಬ ವಿಶೇಷ
ಗಾಂಧಿ ಮೆಮೋರಿಯಲ್ ಮ್ಯೂಸಿಯಂ, ಪಶ್ಚಿಮ ಬಂಗಾಳ (Gandhi Memorial musem ,west Bengal)
ಮಹಾತ್ಮ ಗಾಂಧೀಜಿಯ ನೆನಪಿಗಾಗಿ ಪಶ್ಚಿಮ ಬಂಗಾಳ ರಾಜ್ಯದ ಬಾರಕಪುರ್( barrackpore) ನಲ್ಲಿ ಗಾಂಧಿ ಮೆಮೋರಿಯಲ್ ಮ್ಯೂಸಿಯಂ ನಿರ್ಮಿಸಲಾಗಿದೆ. ಈ ಜಾಗಕ್ಕೆ ಗಾಂಧಿ ಸ್ಮಾರಕ ಸಂಗ್ರಹಾಲಯ ಎನ್ನುವ ಇನ್ನೊಂದು ಹೆಸರಿದೆ.
ಗಾಂಧಿ ಮೆಮೋರಿಯಲ್ ಮ್ಯೂಸಿಯಂ, ತಮಿಳುನಾಡು ( Gandhi Memorial Musem , Tamilnadu)
1959 ರಲ್ಲಿ ತಮಿಳುನಾಡಿನ ಮಧುರೈ ನಲ್ಲಿ ಗಾಂಧಿ ಮೆಮೋರಿಯಲ್ ಮ್ಯೂಸಿಯಂ ಸ್ಥಾಪಿಸಲಾಗಿದೆ. ಗಾಂಧಿಯ ನೆನಪುಗಳನ್ನು ಸ್ಮರಿಸುವ ಭಾರತದ ಐದು ಪ್ರಸಿದ್ದ ಮ್ಯೂಸಿಯಂಗಳಲ್ಲಿ ಇದು ಕೂಡ ಒಂದು .
ನ್ಯಾಷನಲ್ ಗಾಂಧಿ ಮ್ಯೂಸಿಯಂ ಹಾಗೂ ಗ್ರಂಥಾಲಯ ,ದೆಹಲಿ ( National Gandhi Musem and library Dehli)
ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ರುವ ಈ ಮ್ಯೂಸಿಯಂ ಗಾಂಧಿಯ ಮರಣದ ನಂತರ ಆರಂಭವಾಗಿದ್ದು. ಈ ಮ್ಯೂಸಿಯಂ ಗಾಂಧೀಜಿಯ ಗಾಂಧೀಜಿಯ ಜೀವನ ಶೈಲಿ ಹಾಗೂ ಗಾಂಧಿ ತತ್ವ ಸಾರುತ್ತದೆ.
ಮಣಿ ಭವನ ಗಾಂಧಿ ಸಂಗ್ರಹಾಲಯ ,ಮಹಾರಾಷ್ಟ್ರ ( Mani Bhavan Gandhi Sangrahalaya , Maharashtra)
ಈ ಐತಿಹಾಸಿಕ ಕಟ್ಟಡ ಮಹರಾಷ್ಟ್ರದ ಮುಂಬೈನಲ್ಲಿದೆ. 1917ರಿಂದ 1934ರ ತನಕದ ಗಾಂಧೀಜಿಯ ರಾಜಕೀಯ ಚಟುವಟಿಕೆಯ ಕೇಂದ್ರವಾಗಿತ್ತು ಈ ಜಾಗ. ಸುಮಾರು 17ವರ್ಷಗಳ ಕಾಲ ಈ ಐತಿಹಾಸಿಕ ಕಟ್ಟಡ ಗಾಂಧೀಜಿಗೆ ಸ್ವಾತಂತ್ರ್ಯ ಹೋರಾಟಕ್ಕೆ ಸಂಬಂಧಿಸಿದ ಚಟುವಟಿಕೆಗೆ ಜಾಗವಾಗಿತ್ತು . ಗಾಂಧೀಜಿ ಮಣಿ ಭವನದಲ್ಲಿ ನೆಲೆಸಿದ್ದ ಸಂದರ್ಭದಲ್ಲಿಯೇ ಗಾಂಧೀಜಿಯ ಚರಕ ಅಭಿಯಾನ ಆರಂಭವಾಗಿದ್ದು.
ನಾವೂ ಟೆಲಿಗ್ರಾಮ್ ನಲ್ಲೂ ಇದ್ದೀವಿ! ಕನ್ನಡ.ಟೆಲಿಗ್ರಾಮ್ ಗ್ರೂಪ್ ಜಾಯಿನ್ ಆಗಿ.
ನೀವು ಪ್ರವಾಸ ಹೋಗುವ ತಾಣದ ಮಾಹಿತಿ, ಕನ್ನಡ.ಟ್ರಾವೆಲ್ (Kannada.Travel) ಜಾಲತಾಣದಲ್ಲಿ ಪ್ರಕಟವಾಗುವ ಬರಹಗಳ ವಿವರ, ಅಪರೂಪದ ಟ್ರಾವೆಲರ್ ಗಳ ಪರಿಚಯ, ಪ್ರವಾಸಿ ತಾಣಗಳ ಕುತೂಹಲಕರ ಚಿತ್ರ, ಬರಹ ಎಲ್ಲವೂ ಇಲ್ಲಿ ನಿಮಗೆ ಸಿಗುತ್ತದೆ. ಬನ್ನಿ ಜೊತೆಯಾಗಿ.