ವಿಂಗಡಿಸದ

ಡಿಜಿಟಲೀಕರಣಗೊಂಡ 3.5 ಕೋಟಿ ಹಸ್ತಪ್ರತಿಗಳು ಇನ್ನು ಮುಂದೆ ಒಂದೇ ಕ್ಲಿಕ್ ನಲ್ಲಿ ಲಭ್ಯ:

ದೇಶದ ಅತ್ಯಮೂಲ್ಯ ಹಸ್ತಪ್ರತಿಗಳು ಮತ್ತು ಐತಿಹಾಸಿಕ ದಾಖಲೆಗಳನ್ನು ರಕ್ಷಿಸುವ ನ್ಯಾಷನಲ್ ಆರ್ಕೈವ್ಸ್ ಆಫ್ ಇಂಡಿಯಾವು 3.5 ಕೋಟಿ ಐತಿಹಾಸಿಕ ಪ್ರತಿಗಳನ್ನು ಡಿಜಿಟಲೀಕರಣಗೊಳಿಸಿದೆ. ಇದು ರಾಷ್ಟ್ರದ ಮೊದಲ ರಾಷ್ಟ್ರಪತಿ ಡಾ ರಾಜೇಂದ್ರ ಪ್ರಸಾದ್ ಮತ್ತು ಸರ್ದಾರ್ ವಲ್ಲಭಭಾಯಿ ಪಟೇಲ್ ಅವರ ಖಾಸಗಿ ಪತ್ರಿಕೆಗಳನ್ನು ಸಹ ಒಳಗೊಂಡಿದೆ.

ಉಜ್ವಲಾ ವಿ.ಯು.

ದಾಖಲೆಯ ವಿಷಯವನ್ನು ಡಿಜಿಟಲೀಕರಣಗೊಳಿಸುವುದು ಮತ್ತು ಜಗತ್ತಿನಾದ್ಯಂತ ಅವುಗಳು ಆನ್‌ಲೈನ್‌ನಲ್ಲಿ ಲಭ್ಯವಾಗುವಂತೆ ಮಾಡುವುದು NAI (National Archives Of India) ಗುರಿಯಾಗಿದೆ ಎಂದು NAI ನ ಮಹಾನಿರ್ದೇಶಕ ಅರುಣ್ ಸಿಂಘಾಲ್ ಅವರು ಹೇಳಿದರು.

National Archives Of India digitalised over 3.5 crores of historical records

“70 ಲಕ್ಷ ದಾಖಲೆಗಳ ಡಿಜಿಟಲೀಕರಣ ಪ್ರಕ್ರಿಯೆಯು ಈಗಾಗಲೇ ನಡೆಯುತ್ತಿದೆ. ಮುಂದಿನ ಎರಡು ವರ್ಷಗಳಲ್ಲಿ 30.5 ಕೋಟಿ ಪುಟಗಳನ್ನು ನಿಭಾಯಿಸಲು ನಾವು ಆಶಿಸುತ್ತೇವೆ. ಈ ಐತಿಹಾಸಿಕ ದಾಖಲೆಗಳನ್ನು ಡೌನ್‌ಲೋಡ್ ಮಾಡಲು ಅತ್ಯಲ್ಪ ಶುಲ್ಕವನ್ನು ವಿಧಿಸಲಾಗುವುದು” ಎಂದು ಸಿಂಘಾಲ್ ಅವರು ತಿಳಿಸಿದ್ದಾರೆ.

ಆರ್ಕೈವ್ಸ್ ಪೋರ್ಟಲ್ ನ ಸುಲಭ ಪ್ರವೇಶಕ್ಕಾಗಿ ಪೋರ್ಟಲನ್ನು ನವೀಕರಣಗೊಳಿಸಲಾಗುತ್ತಿದೆ. ಸರ್ಚ್ ಇಂಜಿನ್ AI-ಆಧಾರಿತವಾಗಿರುತ್ತದೆ ಮತ್ತು ಇತರ ಸಂಶೋಧಕರೊಂದಿಗೆ ದಾಖಲೆಗಳನ್ನು ವಿನಿಮಯ ಮಾಡಲು ಸುಲಭವಾಗುವಂತೆ ಪ್ರೀಮಿಯಂ ಸೌಲಭ್ಯವನ್ನೂ ಸಹ ನೀಡಲಾಗುತ್ತದೆ.

NAI ನಲ್ಲಿರುವ ಖಾಸಗಿ ಪತ್ರಗಳ ಸಂಗ್ರಹದಲ್ಲಿ ಮಹಾತ್ಮಾ ಗಾಂಧಿ, ದಾದಾಭಾಯಿ ನೌರೋಜಿ, ಎಂ.ಆರ್ ಜಯಶಂಕರ್, ಅಬುಲ್ ಕಲಾಂ ಆಜಾದ್, ಗೋಪಾಲ ಕೃಷ್ಣ ಗೋಖಲೆ, ಮಿನೂ ಮಸಾನಿ ಹಾಗೂ ಕೆನಡಾ, ಜರ್ಮನಿ, ಮಲೇಷ್ಯಾ, ಮ್ಯಾನ್ಮಾರ್, ಯುನೈಟೆಡ್ ಕಿಂಗ್‌ಡಮ್, ಯುನೈಟೆಡ್ ಸ್ಟೇಟ್ಸ್, ಫ್ರಾನ್ಸ್, ರಷ್ಯಾ ಇತ್ಯಾದಿ ದೇಶಗಳಿಂದ ಸ್ವಾಧೀನಪಡಿಸಿಕೊಂಡಿರುವ ಭಾರತೀಯ ರಾಷ್ಟ್ರೀಯ ಸೇನೆಯ ದಾಖಲೆಗಳು ಮತ್ತು ಪತ್ರಗಳನ್ನು ಸಹ ಒಳಗೊಂಡಿದೆ.

ಸಿಂಘಾಲ್ NAI ನ ಕಾರ್ಯ ವೈಖರಿಯ ಬಗ್ಗೆ ಹೀಗೆ ವಿವರಿಸಿದ್ದಾರೆ. ಈ ಖಾಸಗಿ ಹಸ್ತಪ್ರತಿಗಳನ್ನು ಸಾಮಾನ್ಯವಾಗಿ ಆ ವ್ಯಕ್ತಿಗೆ ಸಂಬಂಧಿಸಿದ ಕುಟುಂಬದ ಸದಸ್ಯರು ನೀಡುತ್ತಾರೆ. ಆದ್ದರಿಂದ ಆ ವ್ಯಕ್ತಿಗಳ ಹೆಸರನ್ನು ಪತ್ರಕ್ಕೆ ನೀಡಲಾಗುತ್ತದೆ. ಇದನ್ನು ನಂತರ ಖಾಸಗಿ ದಾಖಲೆ ಎಂದು ಪರಿಗಣಿಸಲಾಗುತ್ತದೆ. ವಿವಿಧ ಸರ್ಕಾರಿ ಇಲಾಖೆಗಳು ಸಾರ್ವಜನಿಕ ದಾಖಲೆಗಳನ್ನು ಒದಗಿಸುತ್ತವೆ. ಈ ದಾಖಲೆಗಳಲ್ಲಿ ಗಿಲ್ಗಿಟ್ ಹಸ್ತಪ್ರತಿಗಳು ಎಂದು ಕರೆಯಲ್ಪಡುವ 6 ನೇ ಶತಮಾನದ ಬೌದ್ಧ ಗ್ರಂಥಗಳು ಅತ್ಯಂತ ಹಳೆಯ ದಾಖಲೆಗಳಾಗಿವೆ.

ಡಿಜಿಟಲೀಕರಣಗೊಂಡ ದಾಖಲೆಗಳಲ್ಲಿ ಭಾರತೀಯ ಸಮೀಕ್ಷೆಯಿಂದ ರಚಿಸಲಾದ ನಕ್ಷೆಗಳು, ಅರಣ್ಯ, ಭಾರತೀಯ, ವಿದೇಶಿ ಮೂಲದ ಅಟ್ಲಾಸ್‌ಗಳು ಸೇರಿದಂತೆ ಕಾರ್ಟೋಗ್ರಾಫಿಕ್ ದಾಖಲೆಗಳೂ ಇವೆ. ನೇತಾಜಿ ಸುಭಾಸ್ ಚಂದ್ರ ಬೋಸ್ ಅವರ ಐಎನ್‌ಎಗೆ ಸಂಬಂಧಿಸಿದ ಸಾಕಷ್ಟು ಪತ್ರಗಳು ಸಹ ಇವೆ.

ಮೊದಲು ವರ್ಷಕ್ಕೆ 1.5 ಕೋಟಿ ಪುಟಗಳನ್ನು ಡಿಜಿಟಲೀಕರಣ ಮಾಡಲಾಗುತ್ತಿತ್ತು ಮತ್ತು ಸಂಪೂರ್ಣ ಡಿಜಿಟಲೀಕರಣಕ್ಕೆ 20 ವರ್ಷಗಳು ಬೇಕಾಗುತ್ತಿತ್ತು. ಆದರೆ ತಂತ್ರಜ್ಞಾನಗಳ ಸಹಾಯದಿಂದ ಈಗ ವರ್ಷಕ್ಕೆ 15 ಕೋಟಿ ಪತ್ರಗಳು ಡಿಜಿಟಲೀಕರಣಗೊಳ್ಳುತ್ತವೆ. ದೊರೆತ ದಾಖಲೆಗಳು 15% ರಷ್ಟು ಸ್ಕ್ಯಾನ್ ಮಾಡಲು ಸಾಧ್ಯವಾಗದಷ್ಟು ದುರುಸ್ತಿಯಲ್ಲಿರುತ್ತವೆ. ಆಗ ಸಮಯ ಮತ್ತು ಹಣ ಹೆಚ್ಚು ಖರ್ಚಾಗುತ್ತವೆ. ಪ್ರಸ್ತುತ 50 ಮಂದಿ ಈ ಕಾರ್ಯದಲ್ಲಿ ತೊಡಗಿದ್ದಾರೆ. ಮುಂದಿನ ವರ್ಷಗಳಲ್ಲಿ ಹಳೆಯ ದಾಖಲೆಗಳ ರಿಪೇರಿ ಮತ್ತು ಡಿಜಿಟಲೀಕರಣದ ಕಾರ್ಯಕ್ಕಾಗಿ 1000 ಕೆಲಸಗಾರರ ಅಗತ್ಯವಿದೆ ಎಂಬುದು ಸಿಂಘಾಲ್ ಅವರ ಅಭಿಪ್ರಾಯ.

ಆರ್ಕೈವ್ ಮಾಡಲಾದ ವಿಷಯವು ಫೈಲ್‌ಗಳು, ವೃತ್ತಪತ್ರಿಕೆಗಳು, ರೆಜಿಸ್ಟರ್‌ಗಳು, ನಾಮಿನಲ್ ರೋಲ್‌ಗಳು, ಫೋಟೋ ಆಲ್ಬಮ್‌ಗಳು, ಟ್ರಯಲ್ ಪೇಪರ್‌ಗಳು ಸೇರಿದಂತೆ ಇತಿಹಾಸದ ಮೇಲೆ ಬೆಳಕು ಚೆಲ್ಲುವ ಹಲವು ಪ್ರಮುಖ ದಾಖಲೆಗಳ ಫೈಲ್‌ಗಳನ್ನು ಒಳಗೊಂಡಿದೆ. ಈ ಪತ್ರಿಕೆಗಳು ಸಂಶೋಧಕರಿಗೆ ಮಾಹಿತಿಯ ಪ್ರಮುಖ ಮತ್ತು ಅಧಿಕೃತ ಪ್ರಾಥಮಿಕ ದಾಖಲೆಗಳಾಗಿವೆ.

NAI ದಾಖಲಿಸುತ್ತಿರುವ ಈ ದಾಖಲೆಗಳು ಮತ್ತು ಹಸ್ತಪ್ರತಿಗಳು ದೇಶದ ಸಾಂಸ್ಕೃತಿಕ ಪರಂಪರೆಯ ಆಧಾರವಾಗಿದೆ. ಸಂಗ್ರಹವಾಗಿರುವ ದಾಖಲೆಗಳ ಸತ್ಯತೆಯನ್ನು ಪರಿಶೀಲಿಸುವ ಸಲುವಾಗಿ, ಹಾಗೂ ಈ ದಾಖಲೆಗಳ ಸಂರಕ್ಷಣೆಯನ್ನು ಖಚಿತಪಡಿಸಿಕೊಳ್ಳಲು ವಿವಿಧ ಸಂರಕ್ಷಣಾ ತಂತ್ರಗಳು ಮತ್ತು ವೈಜ್ಞಾನಿಕ ವಿಧಾನಗಳನ್ನು ಅಧಿಕಾರಿಗಳು ಬಳಸುತ್ತಿದ್ದಾರೆ.

ನಾವೂ ಇನ್ ಸ್ಟಾಗ್ರಾಮ್ ನಲ್ಲೂ ಇದ್ದೀವಿ! ನಮ್ಮ ಗ್ರೂಪ್ ಜಾಯಿನ್ ಆಗಿ.

ನೀವು ಪ್ರವಾಸ ಹೋಗುವ ತಾಣದ ಮಾಹಿತಿ, ಕನ್ನಡ.ಟ್ರಾವೆಲ್ (Kannada.Travel) ಜಾಲತಾಣದಲ್ಲಿ ಪ್ರಕಟವಾಗುವ ಬರಹಗಳ ವಿವರ, ಅಪರೂಪದ ಟ್ರಾವೆಲರ್ ಗಳ ಪರಿಚಯ, ಪ್ರವಾಸಿ ತಾಣಗಳ ಕುತೂಹಲಕರ ಚಿತ್ರ ಬರಹ ಎಲ್ಲವೂ ಇಲ್ಲಿ ನಿಮಗೆ ಸಿಗುತ್ತದೆ. ಬನ್ನಿ ಜೊತೆಯಾಗಿ.

Related Articles

Leave a Reply

Your email address will not be published. Required fields are marked *

Back to top button