ದೂರ ತೀರ ಯಾನವಿಂಗಡಿಸದ

ಗೋವಾ ಪ್ರವಾಸದ ವೇಳೆ ವಾಹನ ಬಾಡಿಗೆ ಪಡಿತೀರಾ ಹಾಗಿದ್ರೆ ಈ ಲೇಖನ ಓದಿ.

ಗೋವಾ ಪೊಲೀಸರು(Goa Police) ವಾಹನ ಬಾಡಿಗೆಗೆ ಪಡೆಯುವ ಪ್ರವಾಸಿಗರಿಗಾಗಿ ಹೊಸ ನಿಯಮ (New Traffic Rules)ರೂಪಿಸಿದ್ದಾರೆ. ಪ್ರವಾಸಿಗರು( Tourist) ಇನ್ಮುಂದೆ ಗೋವಾದಲ್ಲಿ ವಾಹನ ಬಾಡಿಗೆಗೆ ಪಡೆಯುವ ಮುನ್ನ ಗೋವಾ ರಾಜ್ಯದ ಸಂಚಾರ ನಿಯಮಗಳಿಗೆ ಬದ್ಧರಾಗಿ ಇರುವುದಾಗಿ ಪತ್ರಕ್ಕೆ ಸಹಿ ಹಾಕಿ ಕೊಡಬೇಕಿದೆ.

ಕಾರುಗಳನ್ನು ಬಾಡಿಗೆಗೆ (Car Rent)ಪಡೆಯುವವರು ಹಾಗೂ ಬೈಕ್‌ ಅಥವಾ ಸ್ಕೂಟರ್‌ಗಳನ್ನು ಬಾಡಿಗೆಗೆ ಪಡೆಯುವವರಿಗಾಗಿ ಪ್ರತ್ಯೇಕ ಪತ್ರಗಳನ್ನು ಸಿದ್ದಪಡಿಸಲಾಗಿದೆ.

goa

10 ರಸ್ತೆ ಸಂಚಾರ ನಿಯಮಗಳನ್ನು ನಮೂದಿಸಲಾಗಿದೆ. ಸಂಚಾರ ನಿಯಮ ಉಲ್ಲಂಘನೆ ಮಾಡುವವರಿಗೆ ವಿಧಿಸಲಾಗುವ ದಂಡ ಸೇರಿದಂತೆ ಇನ್ನಿತರ ಮಾಹಿತಿಗಳನ್ನೂ ನಮೂದಿಸಲಾಗಿದೆ.

ವಾಹನ ಬಾಡಿಗೆ ಪಡೆಯಲು ಇಚ್ಛಿಸುವವರು ಈ ತಮ್ಮ ವೈಯಕ್ತಿಕ ಮಾಹಿತಿಗಳನ್ನು ನಮೂದು ಮಾಡಬೇಕು. ಡಾಕ್ಯುಮೆಂಟ್‌ನಲ್ಲಿ ವಾಹನವನ್ನು ಬಾಡಿಗೆಗೆ ಪಡೆದ ವ್ಯಕ್ತಿಯ ಹೆಸರು ಮತ್ತು ಅವರ ಡ್ರೈವಿಂಗ್ ಲೈಸೆನ್ಸ್ ಮತ್ತು ಆಧಾರ್ ಸಂಖ್ಯೆ ಸೇರಿದಂತೆ ಅವರ ವೈಯಕ್ತಿಕ ವಿವರಗಳನ್ನು ಸಹ ಒಳಗೊಂಡಿರುತ್ತದೆಗೋವಾದಲ್ಲಿ ಇರವವರೆಗೂ ಈ ಪತ್ರದ ಒಂದು ಪ್ರತಿಯನ್ನು ಕಡ್ಡಾಯವಾಗಿ ತಮ್ಮ ಬಳಿ ಇಟ್ಟುಕೊಂಡಿರಬೇ ಕು. ಈ ಪತ್ರದ ಮತ್ತೊಂದು ಪ್ರತಿ ಪ್ರವಾಸಿಗರಿಗೆ ವಾಹನ ಬಾಡಿಗೆ ಕೊಟ್ಟ ಏಜೆಂಟ್ ಬಳಿ ಇರುತ್ತದೆ .

ಮದ್ಯ ಸೇವನೆ ಮಾಡಿ ವಾಹನ ಚಲಾಯಿಸೋದಿಲ್ಲ(Drink and Drive), ತ್ರಿಬಲ್ ರೈಡಿಂಗ್ ಮಾಡೋದಿಲ್ಲ, ಹೆಲ್ಮೆಟ್ ರಹಿತವಾಗಿ ವಾಹನ ಚಾಲನೆ ಮಾಡೋದಿಲ್ಲ, ಫೋನ್‌ನಲ್ಲಿ ಮಾತನಾಡುತ್ತಾ ವಾಹನ ಚಲಾಯಿಸೋದಿಲ್ಲ, ಬೈಕ್ ಸ್ಟಂಟ್ ಮಾಡೋದಿಲ್ಲ.. ಹೀಗೆ ಹಲವು ನಿಬಂಧನೆಗಳಿಗೆ ಸಹಿ ಮಾಡಬೇಕಿದೆ.

rented vechile

ಫೆಬ್ರವರಿ 27 ರಂದು, ಬಾಡಿಗೆ ಕಾರುಗಳಿಗೆ ಸ್ಪೀಡ್ ಗವರ್ನರ್ ಅಳವಡಿಕೆಯನ್ನು ಕಡ್ಡಾಯಗೊಳಿಸುವ ಮೂಲಕ ಬಾಡಿಗೆ ವಾಹನಗಳ ಸುತ್ತ ಸ್ಕ್ರೂಗಳನ್ನು ಬಿಗಿಗೊಳಿಸಲು ರಾಜ್ಯ ಸರ್ಕಾರ ಈಗಾಗಲೇ ಪ್ರಾರಂಭಿಸಿದೆ.

_ಗೋವಾ ಪೊಲೀಸ್ ಟ್ರಾಫಿಕ್ ಸೆಲ್ ಪ್ರಕಾರ, 2023 ರಲ್ಲಿ ಗೋವಾದಲ್ಲಿ 2,832 ರಸ್ತೆ ಅಪಘಾತಗಳು ವರದಿಯಾಗಿವೆ, ಇದರ ಪರಿಣಾಮವಾಗಿ 276 ಸಾವುಗಳು ಸಂಭವಿಸಿವೆ. 2022 ರಲ್ಲಿ, 3,011 ರಸ್ತೆ ಅಪಘಾತಗಳು ಸಂಭವಿಸಿವೆ ಮತ್ತು 271 ಜನರು ಸಾವನ್ನಪ್ಪಿದ್ದಾರೆ, ಆದರೆ 2021 ರಲ್ಲಿ ಅಪಘಾತಗಳ ಸಂಖ್ಯೆ 2,849 ಮತ್ತು ಸಾವಿನ ಸಂಖ್ಯೆ 226 ಆಗಿದೆ.

traffic rules

ಗೋವಾ ರಾಜ್ಯಕ್ಕೆ ಬರುವ ದೇಶ, ವಿದೇಶಗಳ ಪ್ರವಾಸಿಗರು ಬೈಕ್, ಸ್ಕೂಟರ್ ಹಾಗೂ ಕಾರುಗಳನ್ನು ಬಾಡಿಗೆಗೆ ಪಡೆಯುತ್ತಾರೆ. ಈ ವಾಹನಗಳಿಂದ ಆಗುವ ಅಪಘಾತ ಪ್ರಮಾಣದಲ್ಲಿ ಭಾರೀ ಏರಿಕೆ ಕಂಡು ಬಂದಿರುವ ಹಿನ್ನೆಲೆಯಲ್ಲಿ ಗೋವಾ ಪೊಲೀಸರು ಈ ಹೊಸ ನಿಯಮ ರೂಪಿಸಿದ್ದಾರೆ.

ನಾವೂ ಇನ್ ಸ್ಟಾಗ್ರಾಮ್ ನಲ್ಲೂ ಇದ್ದೀವಿ! ನಮ್ಮ ಗ್ರೂಪ್ ಜಾಯಿನ್ ಆಗಿ.

ನೀವು ಪ್ರವಾಸ ಹೋಗುವ ತಾಣದ ಮಾಹಿತಿ, ಕನ್ನಡ.ಟ್ರಾವೆಲ್ (Kannada.Travel) ಜಾಲತಾಣದಲ್ಲಿ ಪ್ರಕಟವಾಗುವ ಬರಹಗಳ ವಿವರ, ಅಪರೂಪದ ಟ್ರಾವೆಲರ್ ಗಳ ಪರಿಚಯ, ಪ್ರವಾಸಿ ತಾಣಗಳ ಕುತೂಹಲಕರ ಚಿತ್ರ ಬರಹ ಎಲ್ಲವೂ ಇಲ್ಲಿ ನಿಮಗೆ ಸಿಗುತ್ತದೆ. ಬನ್ನಿ ಜೊತೆಯಾಗಿ.

Related Articles

Leave a Reply

Your email address will not be published. Required fields are marked *

Back to top button