ವಿಂಗಡಿಸದ

ಐಸ್ ಕ್ರೀಮ್ ಮ್ಯಾನ್ ಆಫ್ ಇಂಡಿಯಾ ಖ್ಯಾತಿಯ ರಘುನಂದನ್ ಇನ್ನಿಲ್ಲ

ನ್ಯಾಚುರಲ್ ಐಸ್ ಕ್ರೀಮ್(Natural Ice cream) ಮೂಲಕ ಭಾರತದಾದ್ಯಂತ(India) ಹೆಸರುವಾಸಿಯಾಗಿ, ಐಸ್ ಕ್ರೀಮ್ ಮ್ಯಾನ್ ಆಫ್ ಇಂಡಿಯಾ(Ice cream man Of India) ಎಂದೇ ಪ್ರಸಿದ್ಧಿಯಾಗಿದ್ದ ಸ್ಥಾಪಕ ರಘುನಂದನ್ ಕಾಮತ್ (Raghunandan S Kamath) ಮುಂಬಯಿಯಲ್ಲಿ(Mumbai) ನಿಧನರಾಗಿದ್ದಾರೆ(Passed Away). 

1984ರಲ್ಲಿ ಮುಂಬೈನಲ್ಲಿ(Mumbai) ನ್ಯಾಚುರಲ್ಸ್ ಐಸ್ ಕ್ರೀಂ ಪ್ರಾರಂಭ ಮಾಡಿದರು. ಈ ಐಸ್ ಕ್ರೀಂ ಈಗ ದೇಶದಾದ್ಯಂತ ಜನಪ್ರಿಯವಾಗಿ ದೊಡ್ಡ ಉದ್ಯಮವಾಗಿ ಬೆಳೆದಿದೆ. 40ಕ್ಕೂ ಅಧಿಕ ನಗರಗಳಲ್ಲಿ ಮಳಿಗೆಗಳನ್ನು ಹೊಂದಿದೆ. ವಾರ್ಷಿಕ ಸರಿಸುಮಾರು 400 ಕೋಟಿ ರೂ.ಗಳಿಗೂ ಅಧಿಕ ವ್ಯವಹಾರ ನಡೆಸುತ್ತಿದೆ. ಐಸ್ ಕ್ರೀಂಗಳಲ್ಲಿ ಕೃತಕ ಸಾಮಗ್ರಿಗಳು ಇಲ್ಲದ ಸ್ಥಳೀಯ ಸ್ವಾದದ ಬ್ರಾಂಡ್‌ಗಳನ್ನು ಸೃಷ್ಟಿಸಿ ಅಪಾರ ಜನಪ್ರಿಯತೆಯನ್ನು ಗಳಿಸಿದ್ದರು.

Raghunandhan Kamath

ನ್ಯಾಚುರಲ್‌ ಐಸ್‌ಕ್ರೀಂ 4 ಸಿಬ್ಬಂದಿಯಿಂದ ಆರಂಭಗೊಂಡು ಇದೀಗ ದೊಡ್ಡ ಬ್ರ್ಯಾಂಡ್ ಆಗಿ ಬೆಳೆದಿದೆ. ಸುಮಾರು 140 ಮಳಿಗೆಗಳನ್ನು(Outlet) ಹೊಂದಿದೆ. ಕಾಮತ್, ಹಲಸು(Jackfruit), ಸೀಯಾಳ, ಗೇರುಹಣ್ಣುಗಳಿಂದಲೂ ಐಸ್ ಕ್ರೀಮ್ ಮಾಡಿ ವಿತರಿಸಿದ ಖ್ಯಾತಿ ಹೊಂದಿದವರು.ಪೇರಳೆ, ಸೀಯಾಳ, ಹಲಸಿನ ಹಣ್ಣು, ಮಸ್ಕ್ ಮೇಲನ್, ಕಲ್ಲಂಗಡಿ, ಮಾವಿನ ಹಣ್ಣು, ಲಿಚ್ಚಿ, ಫಿಗ್, ಸೀತಾ ಫಲ, ಜಾಮೂನ್, ತಾಳೆ ಹಣ್ಣು, ನೇರಳೆ ಹಣ್ಣುಗಳ ಐಸ್ ಕ್ರೀಂಗಳು ಭಾರೀ ಜನಪ್ರಿಯವಾದವು.. ಒಮ್ಮೆ 2009ರಲ್ಲಿ 3000 ಕಿಲೋಗ್ರಾಂ ತೂಗುವ ಒಂದೇ ಫ್ಲೇವರ್(FALVOU ಇರುವ ಕ್ರೀಮ್ ಸ್ಲಾಬ್ ರೆಡಿ ಮಾಡಿ ಲಿಮ್ಕಾ ದಾಖಲೆ ಕೂಡ ಬರೆಯಿತು. ಅವರ ಸೌತೆಕಾಯೀ ತಿರುಳಿನ ಐಸ್ ಕ್ರೀಂ ರಾಷ್ಟ್ರೀಯ ಸ್ಪರ್ಧೆಯಲ್ಲಿ ಚಿನ್ನದ ಪದಕ ಪಡೆಯಿತು.

Ice cream Man Of India

ನೀವು ಇದನ್ನು ಓದಬಹುದು ಮುಂಬೈನಲ್ಲಿ ಹುಟ್ಟಿದ ವಡಾಪಾವ್ ಗೆ ಜಗತ್ತಿನ ಟಾಪ್ 20 ಸ್ಯಾಂಡ್ ವಿಚ್ ಗಳಲ್ಲಿ ಸ್ಥಾನ

ಗ್ರಾಹಕರನ್ನು ತಮ್ಮತ್ತ ಸೆಳೆಯಲು ಪಾವ್ ಭಾಜಿ(Pav Baji) ಜೊತೆ ಐಸ್‌ಕ್ರೀಂ ಕೊಡಲು ಆರಂಭಿಸಿದರು. ಇದಾದ ಕೆಲವೇ ದಿನಗಳಲ್ಲಿ ಇವರ ಐಸ್‌ಕ್ರೀಂ ಜನಪ್ರಿಯತೆ ಹೆಚ್ಚಾಗಿ, ಮಾರುಕಟ್ಟೆಯಲ್ಲಿ ನ್ಯಾಚುರಲ್‌ ಐಸ್ಕ್ರೀಂ ರಾರಾಜಿಸಲು ಆರಂಭಿಸಿತು. ಇದಾದ ಮೊದಲ ವಾರದಲ್ಲಿಯೇ ಮುಂಬಯಿಯ ಜುಹೂದಲ್ಲಿದ್ದ ಅಂಗಡಿ ಒಂದೇ ವರ್ಷದಲ್ಲಿ 5 ಲಕ್ಷ ರೂ. ವಹಿವಾಟು ದಾಖಲಿಸಿತು. ಕಂಪನಿ ದೇಶದ ಟಾಪ್ 10 ಐಸ್ಕ್ರೀಂ ಕಂಪನಿಗಳಲ್ಲಿ ಒಂದಾಗಿದೆ.

Natural Ice Cream

ರಘುನಂದನ್‌ ಅವರು 1954ರಲ್ಲಿ ಮೂಲ್ಕಿಯಲ್ಲಿ(Mulki) ಬಡ ಕುಟಂಬವೊಂದರಲ್ಲಿ ಜನಿಸಿದ್ದರು. ಕಾಮತ್‌ ಅವರ ತಂದೆ ಹಣ್ಣಿನ ವ್ಯಾಪಾರಿಯಾಗಿದ್ದರು. ತಂದೆಯೊಂದಿಗೆ ವ್ಯಾಪಾರದಲ್ಲಿ ಕೈ ಜೋಡಿಸಿದ ಅವರು ಬಳಿಕ ಮಂಗಳೂರಿನಿಂದ ತನ್ನ 14ನೇ ವಯಸ್ಸಿನಲ್ಲೇ ಬಾಂಬೆಗೆ ತೆರಳಿದರು. ಅಣ್ಣನ ಹೋಟೆಲ್ನಲ್ಲಿ ಕೆಲ ಕಾಲ ಕೆಲಸ ಮಾಡಿ ಬಳಿಕ 1984 ರಲ್ಲಿ ಕಾಮತ್ ಅವರು ತಮ್ಮ ಮೊದಲ ನ್ಯಾಚುರಲ್ಸ್ ಐಸ್ ಕ್ರೀಮ್ ಮುಂಬೈನ ಜುಹುದಲ್ಲಿ(Juhu) ಸ್ಥಾಪಿಸಿದರು. ಅದು ದೇಶಾದ್ಯಂತ ಜನಪ್ರಿಯವಾಗಿ ದೊಡ್ಡ ಉದ್ಯಮವಾಗಿ ಬೆಳೆದಿದೆ.

ನಾವೂ ಇನ್ ಸ್ಟಾಗ್ರಾಮ್ ನಲ್ಲೂ ಇದ್ದೀವಿ! ನಮ್ಮ ಗ್ರೂಪ್ ಜಾಯಿನ್ ಆಗಿ.

ನೀವು ಪ್ರವಾಸ ಹೋಗುವ ತಾಣದ ಮಾಹಿತಿ, ಕನ್ನಡ.ಟ್ರಾವೆಲ್ (Kannada.Travel) ಜಾಲತಾಣದಲ್ಲಿ ಪ್ರಕಟವಾಗುವ ಬರಹಗಳ ವಿವರ, ಅಪರೂಪದ ಟ್ರಾವೆಲರ್ ಗಳ ಪರಿಚಯ, ಪ್ರವಾಸಿ ತಾಣಗಳ ಕುತೂಹಲಕರ ಚಿತ್ರ ಬರಹ ಎಲ್ಲವೂ ಇಲ್ಲಿ ನಿಮಗೆ ಸಿಗುತ್ತದೆ. ಬನ್ನಿ ಜೊತೆಯಾಗಿ.

Related Articles

Leave a Reply

Your email address will not be published. Required fields are marked *

Back to top button