ಬೆರಗಿನ ಪಯಣಿಗರುವಿಂಗಡಿಸದ

ಪರ್ವತಾರೋಹಿಗಳಿಗೆ ಸ್ಫೂರ್ತಿ ಈ ಸಾಧಕರು

ಸಾಧಿಸಬೇಕು (Achievers) ಎನ್ನುವ ಛಲ ಇದ್ದರೆ ವಯಸ್ಸು, ದೈಹಿಕ ನ್ಯೂನತೆಗಳು ಎಂದಿಗೂ ಅಡ್ಡಿಯಾಗುವುದಿಲ್ಲ ಎನ್ನುತ್ತಾರೆ. ಇವತ್ತು ನಾವು ನಿಮಗೆ ಅಂತಹದ್ದೇ ಅಪರೂಪದ ಸಾಧಕರ ಈ ಲೇಖನದಲ್ಲಿದೆ(Everyone can achieve if you have the motivation)

ಒಬ್ಬರು ಕಿರಿ ವಯಸ್ಸಿನಲ್ಲಿ ಎವರೆಸ್ಟ್(Mt.Everest) ಏರಿದರೆ ಮತ್ತೊಬ್ಬರು 2 ಕಾಲು, ಒಂದು ಕೈ ಇಲ್ಲದಿದ್ದರೂ ಮೌಂಟ್ ಎವರೆಸ್ಟ್ ಬೇಸ್ ಕ್ಯಾಂಪ್ ತಲುಪಿದ್ದಾರೆ. ಒಬ್ಬರು ವೇಗವಾಗಿ ಶಿಖರ ಹತ್ತಿದ್ದಾರೆ ಮತ್ತೊಬ್ಬರು 30ನೇ ಬಾರಿ ತುದಿ ತಲುಪಿದ್ದಾರೆ. ಇವರೆಲ್ಲರೂ ಈ ಸಾಧನೆ ಮಾಡಿದ್ದು ಇದೇ ತಿಂಗಳು.

16ರ ಬಾಲಕಿ ಭಾರತದ ಕಿರಿಯ ಎವರೆಸ್ಟ್ ಶಿಖರ ಗಾರ್ತಿ

ವಯಸ್ಸು ಕೇವಲ ಸಂಖ್ಯೆ ಅನ್ನುವುದಕ್ಕೆ ದೇಶದ ಈ ಕಿರಿಯ ಎವರೆಸ್ಟ್ ಶಿಖರಗಾರ್ತಿ ಕೂಡ ಕಾರಣ. ಮುಂಬೈನ ನೇವಿ ಮಕ್ಕಳ ಶಾಲೆಯಲ್ಲಿ(Mumbai Navy Children School)ಓದುತ್ತಿರುವ ಕಾಮ್ಯ ಕಾರ್ತಿಕೇಯನ್(Kaamya Karthikeyan)ಎನ್ನುವ ಬಾಲಕಿ ವಿಶ್ವದ ಅತ್ಯುನ್ನತ ಶಿಖರ್ ಮೌಂಟ್(Mt.Everest) ಎವರೆಸ್ಟ್ ನ್ನ ಮೇ.20 ರಂದು ಏರುವ ಮೂಲಕ 8,848 ಅಡಿ ಎತ್ತರದ ಶಿಖರವೇರಿದ ದೇಶದ ಕಿರಿಯ ವಯಸ್ಸಿನ ಬಾಲಕಿ(Youngest Indian Girl)ಎನ್ನುವ ಸಾಧನೆ ಮಾಡಿದ್ದಾಳೆ.

Climbers To Summit Mt Everest - Kaamya Karthikeyan

ತನ್ನ ಏಳನೇ ವಯಸ್ಸಿನಲ್ಲಿ ಪರ್ವತರೋಹಣ ಆರಂಭಿಸಿದ ಬಾಲಕಿ ಇದುವರೆಗೆ ಆರು ಖಂಡಗಳ(Continent )ಅತ್ಯಂತ ಎತ್ತರದ ಶಿಖರವನ್ನು ಏರಿದ್ದಳು. ಡಿಸೆಂಬರ್ ನಲ್ಲಿ (December)ಅಂಟಾರ್ಟಿಕಾದ(Antartica )ವಿನ್ಸನ್ ಮ್ಯಾಸಿಪ್(Vinson Masot) ಪರ್ವತ ಏರುವ ಮೂಲಕ ಅತ್ಯಂತ ಎತ್ತರದ ಶಿಖರಗಳನ್ನು ಏರಿದ ಕಿರಿಯ ವ್ಯಕ್ತಿ ಎಂದು ದಾಖಲೆ ಬರೆಯುವ ಗುರಿ ಹೊಂದಿದ್ದಾಳೆ.

ನೀವು ಇದನ್ನೂ ಇಷ್ಟ ಪಡಬಹುದು:29ನೇ ಬಾರಿಗೆ ಮೌಂಟ್ ಎವರೆಸ್ಟ್ ಏರಿದ ಪರ್ವತಾರೋಹಿ

30ನೇ ಬಾರಿ ಶಿಖವೇರಿದ ಶೇರ್ಪಾ

54 ವರ್ಷದ ಪರ್ವತಾರೋಹಿ ಕಾಮಿ ರೀಟಾ ಶೇರ್ಪಾ(Kami Rita Sherpa)ಸ್ಥಳೀಯ ಕಾಲಮಾನ ಬೆಳಿಗ್ಗೆ 7.49ರ ಹೊತ್ತಿಗೆ 8,849 ಅಡಿ ಎತ್ತರದ ಶಿಖರವನ್ನೇರಿದ್ದಾರೆ. ಕೇವಲ 10 ದಿನಗಳ ಹಿಂದೆ ಅಂದರೆ ಮೇ.12 ರಂದು(May) ಕಾಮಿ 29ನೇ ಬಾರಿಗೆ ಜಗತ್ತಿನ ಅತ್ಯುನ್ನತ ಶಿಖರವನ್ನೇರುವ ಮೂಲಕ ಅತಿ ಹೆಚ್ಚು ಬಾರಿ ಮೌಂಟ್ ಎವರೆಸ್ಟ್ ಏರಿದ ಸಾಧನೆ ಮಾಡಿ ದಾಖಲೆ ಬರೆದಿದ್ದರು. ಇದೀಗ ಅವರೇ ತಮ್ಮ ಈ ಹಿಂದಿನ ದಾಖಲೆ ಮುರಿದಿದ್ದಾರೆ.

Climbers To Summit Mt Everest - Kami Rita Sherpa

ಹಿರಿಯ ಪರ್ವತಾರೋಹಿ ಕಾಮಿ 1992ರಲ್ಲಿ ಮೊದಲ ಬಾರಿಗೆ ಮೌಂಟ್ ಎವರೆಸ್ಟ್‌ ಶಿಖರವನ್ನೇರಿದ್ದರು. ಕಳೆದ ವರ್ಷ ಇದೇ ಋತುವಿನಲ್ಲಿ 27 ಹಾಗೂ 28ನೇ ಸಲ ಎವರೆಸ್ಟ್‌ ತುತ್ತ ತುದಿ ತಲುಪಿದ್ದರು.

15 ಗಂಟೆಯಲ್ಲಿ ಎವರೆಸ್ಟ್ ಏರಿ ಮಹಿಳೆ ದಾಖಲೆ

ಮಹಿಳಾ ಆರೋಹಿಯೊಬ್ಬರು(Women Climber)15 ಗಂಟೆಯೊಳಗೆ ಮೌಂಟ್ ಎವರೆಸ್ಟ್ ಶಿಖರವನ್ನೇರಿ ಅತಿ ವೇಗದ ಮಹಿಳಾ ಆರೋಹಿ ಎಂಬ ವಿಶ್ವದಾಖಲೆ ಮಾಡಿದ್ದಾರೆ. ಗೂರ್ಖಾದ ಫುಂಜೋ ಲಾಮಾ(Phunjo Lama of Gurkha) ಅವರು ಗುರುವಾರ ಬೆಳಗ್ಗೆ 6.23ಕ್ಕೆ 8, 848 ಮೀಟ‌ರ್ ಎತ್ತರದ ಶಿಖರವನ್ನು ಏರಿ ಹೊಸ ವಿಶ್ವ ದಾಖಲೆಯನ್ನು ಸೃಷ್ಟಿಸಿದ್ದಾರೆ.

Climbers To Summit Mt Everest - Phunjo Lama

ಅಂಗವೈಕಲ್ಯ ಮೀರಿ 30 ವರ್ಷದ ವ್ಯಕ್ತಿಯ ಸಾಧನೆ

ಗೋವಾ(Goa) ಮೂಲದ 30 ವರ್ಷದ ತಿಂಕೇಶ್ ಕೌಶಿಕ್(Tinkesh Kaushik) ಎನ್ನುವ ವ್ಯಕ್ತಿ ಸಮುದ್ರ ಮಟ್ಟದಿಂದ 17.598 ಅಡಿ ಎತ್ತರದಲ್ಲಿರುವ ಮೌಂಟ್ ಎವರೆಸ್ಟ್ ಬೇಸ್ ಕ್ಯಾಂಪ್(Mt.Everest Base Camp)ತುದಿಯನ್ನು ತಲುಪಿದ್ದಾರೆ.

Climbers To Summit Mt Everest  - Tinkesh Kaushik

ಈ ಸಾಧನೆ ಮಾಡಿದ ವಿಶ್ವದ ಮೊದಲ ಟ್ರಿಪಲ್ ಅಂಗವಿಕಲ ವ್ಯಕ್ತಿ (Triple Amputee)ಎನಿಸಿಕೊಂಡಿದ್ದಾರೆ.9 ವರ್ಷದವರಿದ್ದಾಗ ಹರಿಯಾಣದಲ್ಲಿ ನಡೆದ ವಿದ್ಯುತ್ ಅಪಘಾತವೊಂದರಲ್ಲಿ ತನ್ನ ಕಾಲು(Leg), ಕೈ(Hand) ಮತ್ತು ಮಂಡಿಯನ್ನು(Knee )ಕಳೆದುಕೊಂಡಿದ್ದರು. ಆ ಬಳಿಕ ಕೃತಕ ಅಂಗಗಳನ್ನು ಬಳಸುತ್ತಿದ್ದಾರೆ. ಸದ್ಯ ಗೋವಾದಲ್ಲಿ ಫಿಟ್ನೆಸ್ ಕೋಚ್(Fitness Coach)ಆಗಿಯೂ ಕೆಲಸ ಮಾಡುತ್ತಿದ್ದಾರೆ.

ನಾವೂ ಇನ್ ಸ್ಟಾಗ್ರಾಮ್ ನಲ್ಲೂ ಇದ್ದೀವಿ! ನಮ್ಮ ಗ್ರೂಪ್ ಜಾಯಿನ್ ಆಗಿ.

ನೀವು ಪ್ರವಾಸ ಹೋಗುವ ತಾಣದ ಮಾಹಿತಿ, ಕನ್ನಡ.ಟ್ರಾವೆಲ್ (Kannada.Travel) ಜಾಲತಾಣದಲ್ಲಿ ಪ್ರಕಟವಾಗುವ ಬರಹಗಳ ವಿವರ, ಅಪರೂಪದ ಟ್ರಾವೆಲರ್ ಗಳ ಪರಿಚಯ, ಪ್ರವಾಸಿ ತಾಣಗಳ ಕುತೂಹಲಕರ ಚಿತ್ರ ಬರಹ ಎಲ್ಲವೂ ಇಲ್ಲಿ ನಿಮಗೆ ಸಿಗುತ್ತದೆ. ಬನ್ನಿ ಜೊತೆಯಾಗಿ.

Related Articles

Leave a Reply

Your email address will not be published. Required fields are marked *

Back to top button