ಉತ್ತರಪ್ರದೇಶದಲ್ಲಿ ನೋಡಬಹುದಾದ ತಾಣಗಳು
ಉತ್ತರ ಪ್ರದೇಶ(Uttar Pradesh), ಭಾರತದ ಅತಿ ದೊಡ್ಡ ರಾಜ್ಯಗಳಲ್ಲಿ ಒಂದು. ಅಯೋಧ್ಯೆಯಲ್ಲಿ (Ayodhya)ಬಾಲಕ ರಾಮ(Rama Lalla)ವಿರಾಜಮಾನನಾದ ಬಳಿಕ ದೇಶದ ಗಮನ ಸೆಳೆದ ನಗರ.
ಇದೊಂದೇ ಅಲ್ಲ ಈ ರಾಜ್ಯದಲ್ಲಿ ನೋಡಲು ಇನ್ನು ಹಲವು ತಾಣಗಳಿವೆ. ಈ ಕುರಿತಾದ ಮಾಹಿತಿ ಇಲ್ಲಿದೆ.
ಅಯೋಧ್ಯೆ (Ayodhya)
ಸದ್ಯ ದೇಶದ ಗಮನ ಸೆಳೆಯುತ್ತಿರುವ ಧಾರ್ಮಿಕ ಕ್ಷೇತ್ರ. ದೇಶದ ಸಾಂಸ್ಕೃತಿಕ ರಾಜಧಾನಿ ಅಂತಲೇ ಪರಿಚಿತ. ಜನವರಿ 22 ರಂದು ರಾಮ ಭೂಮಿ ಅಯೋಧ್ಯೆಯಲ್ಲಿ ಬಾಲಕ ರಾಮ ವಿರಾಜಮಾನನಾಗಿದ್ದಾನೆ. ಅಂದಿನಿಂದ ಅಯೋಧ್ಯೆಗೆ ರಾಮನ ದರ್ಶನ ಪಡೆಯಲು ಭಕ್ತ ಸಾಗರವೇ ಹರಿದು ಬರುತ್ತಿದೆ.
ಕಾಶಿ ವಿಶ್ವನಾಥ (Kashi Vishwanath)
ಪವಿತ್ರ 12 ಜ್ಯೋತಿರ್ಲಿಂಗಗಳಲ್ಲಿ(Jyotirlinga )ಒಂದಾದ ಈ ಕಾಶಿವಿಶ್ವನಾಥ ದೇವಾಲಯ ಹಿಂದೂಗಳ ಪುಣ್ಯಕ್ಷೇತ್ರ. ವಾರಾಣಸಿ(Varanasi )ಯಲ್ಲಿದೆ. ಬನಾರಸ್(Banaras), ಕಾಶಿ(Kashi)ಎಂದು ಕೂಡ ಕರೆಯುತ್ತಾರೆ.
ಗಂಗಾನದಿಯು(Ganga) ಸನಿಹದಲ್ಲಿದೆ. ಹಿಂದೂ ದೇವತಾ ಮೂರ್ತಿಗಳಿವೆ. ಒಟ್ಟಾರೆ ಉತ್ತರ ಪ್ರದೇಶದ ಅದ್ಭುತಗಳ ಪಟ್ಟಿಯಲ್ಲಿ ಕಾಶಿವಿಶ್ವನಾಥ ಸ್ವಾಮಿ ದೇವಾಲಯವು ಅಗ್ರಸ್ಥಾನದಲ್ಲಿದೆ.
ಆಗ್ರಾ(Agra)
ಉತ್ತರ ಪ್ರದೇಶ(Uttar Pradesh)ರಾಜ್ಯದ ಆಗ್ರಾದಲ್ಲಿ ಅದ್ಭುತ ಸ್ಮಾರಕವಿದೆ. ತನ್ನ ಬಿಳಿ ಅಮೃತಶಿಲೆಯಿಂದ(White Marble)ಕಂಗೊಳಿಸುತ್ತಿದ್ದು, ದೇಶದ ನಾನಾ ಭಾಗಗಳಿಂದಲೇ ಅಲ್ಲದೆ ವಿದೇಶಿ ಪ್ರವಾಸಿಗರನ್ನು ತನ್ನತ್ತ ಸೆಳೆಯುತ್ತಿದೆ.
ಪ್ರೀತಿಯ ಪ್ರತೀಕವಾದ ತಾಜ್ ಮಹಲ್ (Taj Mahal)ಉತ್ತರ ಪ್ರದೇಶದ ಹೆಗ್ಗುರುತು ಎಂದೇ ಹೇಳಬಹುದು.
ನೀವು ಇದನ್ನೂ ಇಷ್ಟ ಪಡಬಹುದು : ರಾಜಸ್ಥಾನದಲ್ಲಿ ನೋಡಬಹುದಾದ ತಾಣಗಳು
ಇದು ದೆಹಲಿಯಿಂದ(Delhi) 242 ಕಿ.ಮೀ ದೂರದಲ್ಲಿದೆ. ಯಮುನಾ ನದಿಯ(Yamuna River )ತಟದಲ್ಲಿ ಇರುವ ಆಗ್ರಾ ಪಟ್ಟಣ ಸುಪ್ರಸಿದ್ದ ಪ್ರವಾಸಿ ತಾಣಗಳಲ್ಲಿ ಒಂದಾಗಿದೆ.
ಇಲ್ಲಿನ ಆಕರ್ಷಣೀಯ ತಾಣಗಳೆಂದರೆ ಆಗ್ರಾ ಕೋಟೆ,(Agra Fort)ಮಂಕಾಮೇಶ್ವರ ದೇವಾಲಯ(Mankameshwara Fort), ಗುರು ಕಾ ತಾಲ್(Guru Ka Tal)ಆಗಿದೆ.
ಮಥುರಾ(Mathura)
ಉತ್ತರ ಪ್ರದೇಶ ರಾಜ್ಯದ ಮಥುರಾ ಶ್ರೀಕೃಷ್ಣನ (Shree Krishna)ಜೊತೆಗೆ ನಂಟಿದೆ. ಹಿಂದೂಗಳ(Hindu)ಯಾತ್ರಾ ಸ್ಥಳವು ಹೌದು. ಆಗ್ರಾದಿಂದ ಸುಮಾರು 50 ಕಿ.ಮೀ ದೂರದಲ್ಲಿ ಈ ಪವಿತ್ರವಾದ ನಗರವಿದೆ.
ಶ್ರೀಕೃಷ್ಣನ ಜನ್ಮಸ್ಥಳವಾಗಿರುವ ಮಥುರಾದಲ್ಲಿ ಅನೇಕ ಸುಂದರವಾದ ದೇವಾಲಯಗಳನ್ನು ನೋಡಬಹುದು.
ಇಲ್ಲಿ ಕೇದಾರೇಶ್ವರ(Kedareshwara), ದ್ವಾರಕಾಧೀಶ(Dwarkadhish), ಮದನಮೋಹನ(Madan Mohan), ಕಾಲಭೈರವ(Kalabhairava) ಸೇರಿದಂತೆ ಇನ್ನು ಅನೇಕ ಆಲಯಗಳಿವೆ. ಅಲ್ಲದೇ ಬಾಯಲ್ಲಿ ನೀರೂರಿಸುವ ಮಥುರಾ ಪೇಡಾಗಳಿಗೂ ಇಲ್ಲಿ ಹೆಸರುವಾಸಿಯಾಗಿದೆ.
ಅಲಹಾಬಾದ್ (Allahabad)
ಇದು ಉತ್ತರ ಪ್ರದೇಶದ ಪ್ರಮುಖ ಧಾರ್ಮಿಕ ಪ್ರವಾಸಿ ಆಕರ್ಷಣೆಯ ಸ್ಥಳ. ಪ್ರಯಾಗ ರಾಜ್ (Prayagaraj), ಇಲಹಾಬಾದ್(Allahabad) ಎಂತಲೂ ಕರೆಯಲಾಗುತ್ತದೆ.
ಇದರ ವಿಶೇಷತೆ ಎಂದರೆ ಮೂರು ಮಹತ್ವದ ಪವಿತ್ರ ನದಿಗಳಾದ ಗಂಗಾ(Ganga) ನದಿ , ಯಮುನಾ(Yamuna )ನದಿ ಮತ್ತು ಸರಸ್ವತಿ(Saraswati)ನದಿಗಳ ಸಂಗಮವಾಗಿದೆ. ಉತ್ತರ ಪ್ರದೇಶದ ಅಲಹಾಬಾದ್‌ನಲ್ಲಿ ಐತಿಹಾಸಿಕ ಅಲಹಾಬಾದ್ ಕೋಟೆ(Fort) ಇದೆ. ಇದು ಈ ಪಟ್ಟಣದ ಪ್ರಮುಖ ಪ್ರವಾಸಿ ಆಕರ್ಷಣೆ.
1583 ರಲ್ಲಿ ಮೊಘಲ್ (Mughal)ಚಕ್ರವರ್ತಿ ಅಕ್ಬರ್ (Akbar)ಈ ಕೋಟೆಯನ್ನು ನಿರ್ಮಿಸಿದನು. ಯುಮುನಾ ನದಿಯ ದಡದಲ್ಲಿ ಗಂಗಾ ನದಿಯ ಸಂಗಮದ ಸಮೀಪದಲ್ಲಿ ಈ ಕೋಟೆ ನೆಲೆ ನಿಂತಿದೆ.
ನಾವೂ ಇನ್ ಸ್ಟಾಗ್ರಾಮ್ ನಲ್ಲೂ ಇದ್ದೀವಿ! ನಮ್ಮ ಗ್ರೂಪ್ ಜಾಯಿನ್ ಆಗಿ.
ನೀವು ಪ್ರವಾಸ ಹೋಗುವ ತಾಣದ ಮಾಹಿತಿ, ಕನ್ನಡ.ಟ್ರಾವೆಲ್ (Kannada.Travel) ಜಾಲತಾಣದಲ್ಲಿ ಪ್ರಕಟವಾಗುವ ಬರಹಗಳ ವಿವರ, ಅಪರೂಪದ ಟ್ರಾವೆಲರ್ ಗಳ ಪರಿಚಯ, ಪ್ರವಾಸಿ ತಾಣಗಳ ಕುತೂಹಲಕರ ಚಿತ್ರ ಬರಹ ಎಲ್ಲವೂ ಇಲ್ಲಿ ನಿಮಗೆ ಸಿಗುತ್ತದೆ. ಬನ್ನಿ ಜೊತೆಯಾಗಿ.