ದೂರ ತೀರ ಯಾನವಿಂಗಡಿಸದಸಂಸ್ಕೃತಿ, ಪರಂಪರೆ

ಗೋಕುಲಕ್ಕಿರುವ ಈ ಕ್ರೂಸ್ ಹಡಗಿನ ಬಗ್ಗೆ ಗೊತ್ತಾ?

ಮಥುರಾ (Mathura), ವೃಂದಾವನ(Vrindavan)ದೇಶದ ಪವಿತ್ರ ಧಾರ್ಮಿಕ ನಗರಗಳು. ದೇಶದ ಸಾಂಸ್ಕೃತಿಕ ರಾಜಧಾನಿ ಎಂದೇ ಕರೆಯಲ್ಪಡುವ, ಉತ್ತರ ಪ್ರದೇಶದಲ್ಲಿದೆ(Uttar Pradesh)

ಈ ನಗರವನ್ನು ‘ಟೆಂಪಲ್ ಸಿಟಿ’(Temple City)ಎಂದೂ ಸಹ ಕರೆಯುತ್ತಾರೆ.

ಶ್ರೀಕೃಷ್ಣನ (Krishna)ಭಕ್ತರು(Devotee)ಹೆಚ್ಚಿನ ಸಂಖ್ಯೆಯಲ್ಲಿ ಇಲ್ಲಿಗೆ ಬರುತ್ತಾರೆ. ಹಾಗೆ ಮಥುರಾಗೆ ಬಂದವರು ಗೋಕುಲಕ್ಕೆ(Gokula)ಹೋಗುವುದು ಮರೆಯುವುದಿಲ್ಲ.

CRUISE IN YAMUNA RIVER FROM GOKUL TO VRINDAVAN

ಸಾಮಾನ್ಯವಾಗಿ ಇಲ್ಲಿಗೆ ತಲುಪಲು ಕೆಲವರು ಟ್ಯಾಕ್ಸಿ (Taxi)ಅಥವಾ ಕಾಲ್ನಡಿಗೆಯ(By Walk)ಮೂಲಕ ಪ್ರಯಾಣಿಸಿ ಹೋಗುತ್ತಾರೆ. ಆದರೆ ಇದರ ಜೊತೆಗೆ ನೀವು ಕ್ರೂಸ್(Cruise)ಮೂಲಕ ಸಹ ಹೋಗಬಹುದು.

ಗೋಕುಲದ ಯಮುನಾ ನದಿಯಲ್ಲಿ(Yamuna River)ಇಳಿಯುವ ಈ ಹಡಗಿಗೆ ಗರುಡ(Garuda) ಎಂದು ಹೆಸರು. ಪುರಾಣಗಳ ಪ್ರಕಾರ ಗರುಡ ವಿಷ್ಣುವಿನ ವಾಹನ. ಅತ್ಯಂತ ವೇಗವಾಗಿ ಹಾರುವ ಪಕ್ಷಿ. ಹೀಗಾಗಿ ಇದಕ್ಕೂ ಕೂಡ ಅದೇ ಹೆಸರನ್ನೇ ಇಡಲಾಗಿದೆ.

ನೀವು ಇದನ್ನೂ ಇಷ್ಟ ಪಡಬಹುದು:ಮೊದಲ ಪ್ರಯಾಣ ಆರಂಭಿಸಿದ ವಿಶ್ವದ ಅತಿ ದೊಡ್ಡ ಕ್ರೂಸ್ ಹಡಗು

ಮಥುರಾದಿಂದ ಗೋಕುಲಕ್ಕೆ ಹೋಗಲು ಸುಮಾರು 45 ರಿಂದ ಒಂದು ಗಂಟೆಯ ಸಮಯ ಬೇಕು. ಈ ಕ್ರೂಸ್ ನಲ್ಲಿ ನೀವು ಸಂಚರಿಸಬೇಕು ಅಂತಾದರೆ ಪ್ರತಿ ವ್ಯಕ್ತಿಗೆ 450 ರೂಪಾಯಿ ದರವನ್ನು(Ticket) ನಿಗದಿ ಮಾಡಲಾಗಿದೆ.

ಈ ಹಡಗು ಹೈಟೆಕ್ ಆಗಿದ್ದು, ಟೀವಿ,(TV) ಹವಾ ನಿಯಂತ್ರಕ(AC) , ಫ್ಯಾನ್(Fan) ಗಳನ್ನ ಹೊಂದಿರಲಿದ್ದು ,ಪಾರದರ್ಶಕ ಗಾಜನ್ನು ಕೂಡ ಒಳಗೊಂಡಿರುತ್ತದೆ.

CRUISE IN YAMUNA RIVER FROM GOKUL TO VRINDAVAN

ಸುಮಾರು 4 ಕೋಟಿ ವೆಚ್ಚದಲ್ಲಿ ಈ ಗರುಡ ಹಡಗನ್ನು ನಿರ್ಮಿಸಲಾಗಿದೆ. ಐಷಾರಾಮಿ ಸೌಲಭ್ಯ(Hitech Facility)ಹೊಂದಿರುವ ಈ ಕ್ರೂಸ್ ನಲ್ಲಿ 50 ಮಂದಿ ಒಟ್ಟಿಗೆ ಪ್ರಯಾಣಿಸಬಹುದು. ಅಲ್ಲದೆ ಹಡಗಿನಲ್ಲಿ ಹೋಗುವಾಗ ನೀವು ಆಹಾರ(Food), ಪಾನೀಯಗಳನ್ನು ಕೂಡ ಸೇವಿಸಬಹುದು .

ಕಾಶಿಯಲ್ಲಿದೆ ಇದೇ ರೀತಿ ಸರ್ವಿಸ್

ಕ್ರೂಸ್ ಸೇವೆಯನ್ನು ಮೊದಲು ಕಾಶಿಯಲ್ಲಿ(Kashi) ಪ್ರಾರಂಭಿಸಲಾಯಿತು. ಸರಯೂ ನದಿಯಲ್ಲಿ ದೇಶದ ಮೊದಲ ಸೋಲಾರ್ ಬೋಟ್ (Solar Boar)ಸಂಚಾರಕ್ಕೆ ಚಾಲನೆ ನೀಡಲಾಗಿತ್ತು.

ಈ ಸೋಲಾರ್ ಬೋಟ್ 30 ಪ್ರಯಾಣಿಕರನ್ನು ಕರೆದೊಯ್ಯಲಿದೆ. ನಯಾ ಘಾಟ್ ನಿಂದ(Naya Ghat)ಕಾರ್ಯ ನಿರ್ವಹಿಸುತ್ತದೆ.

CRUISE IN YAMUNA RIVER FROM GOKUL TO VRINDAVAN

ನಂತರದ ದಿನಗಳಲ್ಲಿ ,ವೃಂದಾವನದ ಎಲ್ಲಾ ಯಾತ್ರಾ ಸ್ಥಳಗಳು ಮತ್ತು ಪ್ರವಾಸಿ ಸ್ಥಳಗಳಿಗೆ ಭೇಟಿ ನೀಡಲು ಯಮುನಾದಲ್ಲಿ (Yamuna) ಪ್ರಾರಂಭಿಸಲಾಗಿದೆ. ಇದು ಧಾರ್ಮಿಕ ಪ್ರವಾಸೋದ್ಯಮಕ್ಕೆ ಉತ್ತೇಜನ ನೀಡುತ್ತದೆ.

ನಾವೂ ಇನ್ ಸ್ಟಾಗ್ರಾಮ್ ನಲ್ಲೂ ಇದ್ದೀವಿ! ನಮ್ಮ ಗ್ರೂಪ್ ಜಾಯಿನ್ ಆಗಿ.

ನೀವು ಪ್ರವಾಸ ಹೋಗುವ ತಾಣದ ಮಾಹಿತಿ, ಕನ್ನಡ.ಟ್ರಾವೆಲ್ (Kannada.Travel) ಜಾಲತಾಣದಲ್ಲಿ ಪ್ರಕಟವಾಗುವ ಬರಹಗಳ ವಿವರ, ಅಪರೂಪದ ಟ್ರಾವೆಲರ್ ಗಳ ಪರಿಚಯ, ಪ್ರವಾಸಿ ತಾಣಗಳ ಕುತೂಹಲಕರ ಚಿತ್ರ ಬರಹ ಎಲ್ಲವೂ ಇಲ್ಲಿ ನಿಮಗೆ ಸಿಗುತ್ತದೆ. ಬನ್ನಿ ಜೊತೆಯಾಗಿ.

Related Articles

Leave a Reply

Your email address will not be published. Required fields are marked *

Back to top button